ಖರ್ಜುರವನ್ನು ಹಾಲಿನಲ್ಲಿ ಹಾಕಿ ತಿನ್ನೋದ್ರಿಂದ ಶರೀರಕ್ಕೆ ಸಿಗುವ ಲಾಭಗಳಿವು

ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಲು ನಾವು ದಿನನಿತ್ಯ ಒಂದಲ್ಲ ಒಂದು ರೀತಿಯ ಆಹಾರವನ್ನು ಸೇವಿಸುತ್ತಲೇ ಇರುತ್ತೇವೆ. ಆದರೆ ಕೆಲವು ಸುಲಭ ವಿಧಾನಗಳನ್ನ ಬಳಸಿ, ಮನೆಯಲ್ಲಿಯೇ ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳುವುದು ಹೇಗೆ ಅಂತ ಕೆಲವೊಬ್ಬರಿಗೆ ಗೊತ್ತೇ ಇರಲ್ಲ. ಸರಳವಾದ ಮನೆ ಮದ್ದನ್ನು ಬಳಸಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಅದು ಹಾಲು ಮತ್ತು ಖರ್ಜೂರದಿಂದ ಹೇಗೆ ನಾವು ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳೋದು ಅಂತ ನೋಡೋಣ.

ಖರ್ಜೂರದಲ್ಲಿ ಅಧಿಕವಾದ ಕಬ್ಬಿಣದ ಅಂಶ ಇರತ್ತೆ ಹಾಲಿನಲ್ಲಿ ಹಲವಾರು ಪೋಶಕಾಂಶಗಳು ಇರತ್ತೆ.ಆದರೆ, ಹಾಲಿನಲ್ಲಿ ಕಬ್ಬಿಣದ ಅಂಶದ ಕೊರತೆ ಇರುವುದರಿಂದ ಅದರ ಜೊತೆ ಖರ್ಜೂರವನ್ನು ಸೇರಿಸಿ ತೆಗೆದುಕೊಳ್ಳಬೇಕು. ನಮ್ಳ ದೇಹದಲ್ಲಿ ಇರುವ ಕೆಟ್ಟ ಕೊಬ್ಬನ್ನ ಹೊರಹಾಕಲು ಖರ್ಜೂರದಲ್ಲಿ ಇರುವ ಮೆಟೀನ್ ಎಂಬ ಅಂಶ ಸಹಾಯ ಮಾಡತ್ತೆ. ಇದರ ಜೊತೆಗೇ ರಕ್ತನಾಳ, ಜಠರ, ಯಕ್ರತ್ ಇವುಗಳ ಕ್ಷಮತೆ ಹೆಚ್ಚಾಗಲೂ ಸಹಾಯ ಮಾಡತ್ತೆ. ಖರ್ಜೂರದಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಬಿ ಹೆಚ್ಚಾಗಿ ಇರುವುದರಿಂದ ಇದು ನಮ್ಮ ದೇಹದಲ್ಲಿ ಇರುವ ವಿಶಕಾರಿ ಅಂಶಗಳನ್ನ ತೆಗೆದುಹಾಕಲು ಸಹಾಯಕಾರಿಯಾಗಿದೆ.

ಖರ್ಜೂರದಲ್ಲಿ ನಾರಿನ ಅಂಶ ಹೆಚ್ಚಾಗಿ ಇರುವುದರಿಂದ ಇದು ನಮ್ಮ ದೇಹದಲ್ಲಿ ಕರಗದ ನಾರಿನ ಅಂಶ ಇದ್ದರೆ ಅದನ್ನ ಕರಗಿಸೋಕೆ ಸಹಾಯ ಮಾಡತ್ತೆ. ಮತ್ತು ಕರುಳಿನಲ್ಲಿ ಸುಲಭವಾಗಿ ಆಹಾರ ಚಲಿಸುವಂತೆ ಮಾಡಿ ಜೀರ್ಣ ಕ್ರಿಯೆಗೆ ಕೂಡಾ ಸಹಾಯ ಮಾಡತ್ತೆ. ಮತ್ತೂ ನಮ್ಮ ದೇಹದಲ್ಲಿ ಯಾವುದೇ ಆಹಾರ ಜೀರ್ಣ ಆಗದೇ ಇದ್ದಲ್ಲಿ ಖರ್ಜೂರವನ್ನ ತಿನ್ನುವುದರಿಂದ ಜೀರ್ಣ ಕ್ರಿಯೆಗೆ ಕೂಡಾ ಸಹಾಯ ಮಾಡತ್ತೆ. ಮೂತ್ರ ವಿಸರ್ಜನೆಗೆ ಸಹಾಯ ಮಾಡತ್ತೆ. ಮೂತ್ರ ಕಟ್ಟಿದ್ದರೆ ಖರ್ಜೂರವನ್ನ ತಿನ್ನುವುದರಿಂದ ಕಡಿಮೆ ಆಗತ್ತೆ. ಆಂಟಿ ಆಕ್ಸಿಡೆಂಟ್ ಅಂಶ ಹಾಲು ಮತ್ತು ಖರ್ಜೂರದಲ್ಲಿ ಹೇರಳವಾಗಿ ಇರತ್ತೆ ಇದರಿಂದಾಗಿ ಇವು ನಮ್ಮ ದೇಹಕ್ಕೆ ತುಂಬಾ ಉತ್ತಮ. ಜೊತೆಗೆ ಮೆಗ್ನೀಶಿಯಂ ಹಾಗೂ ಗಂಧಕದ ಅಂಶಗಳು ನಮ್ಮ ದೇಹದಲ್ಲಿ ಉತ್ತಮವಾಗಿ ಇರುವುದರಿಂದ ನಮ್ಮ ದೇಹಕ್ಕೆ ಹೆಚ್ಚು ಪೋಶಕಾಂಶಗಳನ್ನ ನೀಡತ್ತೆ. ಮನುಷ್ಯನಿಗೆ ಅತೀ ಹೆಚ್ಚಾಗಿ ಕಾಡುವ ಮಾನಸಿಕ ಒತ್ತಡಕ್ಕೆ ಕೂಡ ಖರ್ಜೂರ ಒಳ್ಳೆಯ ಔಷಧ ಮಾನಸಿಕ ಒತ್ತಡವನ್ನ ನಿವಾರಿಸಲು ಸಹಾಯ ಮಾಡತ್ತೆ. ಹಾಲು ಮತ್ತು ಖರ್ಜೂರದಲ್ಲಿ ವಿಟಾಮಿನ್ ಗಳು ಹೇರಳವಾಗಿ ಇರುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳನ್ನ ಪಡೆಯಬಹುದು.

ಇದನ್ನ ಸೇವಿಸುವುದು ಹೇಗೆ? ಅನ್ನೋದನ್ನ ನೋಡುವುದಾದರೆ ಒಂದು ದಿನಕ್ಕೆ ೭ ಖರ್ಜೂರವನ್ನ ತೆಗೆದುಕೊಂಡು ಸಣ್ಣ ಸಣ್ಣ ಚೂರು ಮಾಡಿ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಹಾಲಿನ ಜೊತೆ ಸೇರಿಸಿ ಬೆಳಿಗ್ಗೆ ಎದ್ದ ಕೂಡಲೇ ಕುಡಿಯಬೇಕು. ಇದು ನಮ್ಮ ದೇ‌ಹಕ್ಕೆ ಉತ್ತಮ ಫಲಿತಾಂಶವನ್ನ ನೀಡುತ್ತದೆ.

Leave a Comment