ಪರೀಕ್ಷೆ ಎಂದಾಕ್ಷಣ ಎಲ್ಲರಲ್ಲೂ ಹೇಗೆ ಪರೀಕ್ಷೆ ಬರಿಯೋದು ಹೇಗೆ ಪಾಸ್ ಆಗೋದು ಒಡ್ಕೊಂಡಿದ್ದು ನೆನಪಲ್ಲಿ ಇಟ್ಕೊಳೊದ್ ಹೇಗೆ ಅಂತ ಒಂದೇ ಭಯ. ಇಂಥ ಸಮಯದಲ್ಲಿ ಮಕ್ಕಳಿಗೆ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಮತ್ತು ಆರೋಗ್ಯವಾಗಿ ಇರಲು ನಾವು ತಿಳಿಸುವ ಈ ಔಷಧಿಗಳನ್ನು ರಾಮಬಾಣ. ಇವುಗಳನ್ನ ಒಮ್ಮೆ ಮಾಡಿ ನೋಡಿ ಹಾಗೂ ನಿಮ್ಮ ಮಕ್ಕಳು ಪರೀಕ್ಷೆಯಲ್ಲಿ ಹೇಗೆ ಉತ್ತೀರ್ಣರಾಗುತ್ತಾರೆ ನೀವೇ ನೋಡಿ.
ಈ ಒಂದು ರೆಸಿಪಿ ಇಂದ ಚಿಕ್ಕ ಮಕ್ಕಳಿಗೆ ಮಾತ್ರ ಅಲ್ಲ ಯಾವುದೇ ರೀತಿಯ ಪರೀಕ್ಷೆ ಬರೆಯುವವರಿಗೆ ಸಹ ಇದು ನೆನಪಿನ ಶಕ್ತಿ ಹೆಚ್ಚಿಸಲು ಉಪಯೋಗ. ಹಾಗಿದ್ರೆ ಈ ರೆಸಿಪಿ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.
ಮೊದಲು ಒಂದು ಬಾಣಲೆಗೆ ಒಂದು ಸ್ಪೂನ್ ತುಪ್ಪ ಹಾಕಿ ಕರಗಿದ ಮೇಲೆ ಒಂದು ಕಪ್ ಬಾದಾಮಿ ಹಾಕಿ ಫ್ರೈ ಮಾಡಿ. ಬಾದಾಮಿಯಲ್ಲಿ ವಿಟಮಿನ್ ಇ ಇರೋದ್ರಿಂದ ಇದು ನೆನಪಿನ ಶಕ್ತಿ ಹೆಚ್ಚಿಸತ್ತೆ, ಬ್ಲಡ್ ಶುಗರ್ ಲೆವೆಲ್ ಕಡಿಮೆ ಮಾಡತ್ತೆ ದೇಹಕ್ಕೂ ಒಳ್ಳೇದು ಹಾಗೂ ಜೀರ್ಣ ಕ್ರಿಯೆಗೆ ಕೂಡ ತುಂಬಾ ಒಳ್ಳೆಯದು. ಬಾದಾಮಿ ಸ್ವಲ್ಪ ಫ್ರೈ ಆದಮೇಲೆ ಅದಕ್ಕೆ ಕಾಲು ಕಪ್ ಅಷ್ಟು ಗೋಡಂಬಿ ಹಾಕಬೇಕು. ಇದರಲ್ಲಿ ಕಬ್ಬಿಣದ ಅಂಶ, ಜಿಂಕ್, ಕಾಪ್ಪರ್ ಎಲ್ಲ ಅಂಶಗಳು ಇರೋದರಿಂದ ಇದು ನಮ್ಮ ದೇಹಕ್ಕೆ ಹಾಗೂ ಮೆದುಳಿಗೆ ಒಳ್ಳೆಯದು. ಗೋಡಂಬಿಯನ್ನು ಕ್ಯಾಲ್ಸಿಯಂ ಇರೋದ್ರಿಂದ ಸ್ನಾಯುಗಳು ಹಾಗೂ ಮೂಳೆಗೆ ಚಿಕ್ಕ ಮಕ್ಕಳಿಗೆ ತುಂಬಾ ಒಳ್ಳೆಯದು. ಈ ಗೋಡಂಬಿ ಹಾಗೂ ಬಾದಾಮಿಯನ್ನು ಸ್ವಲ್ಪ ಕೆಪಾಗುವವರೆಗು ಹೋರೆದುಕೊಂದು ತೆಗೆದಿಟ್ಟುಕೊಳ್ಳಿ. ನಂತರ ಅದೇ ಪಾತ್ರೆಯಲ್ಲಿ ಕಾಲು ಕಪ್ಪಿನಷ್ಟು ಒಣ ದ್ರಾಕ್ಷಿ ಹಾಕಿ ಸೀದು ಹೋಗದಂತೆ ಹುರಿದುಕೊಳ್ಳಬೇಕು. ನಂತರ ಅದಕ್ಕೆ ಪೊಪ್ಪಿ ಸೀಡ್ಸ್, ಗಸಗಸೆ ಹಾಗೂ ಅಗಸೆ ಬೀಜ ಇವನ್ನು ಸೇರಿಸಿ ಹುರಿದುಕೊಳ್ಳಬೇಕು. ಇದನ್ನು ಸಹ ತೆಗೆದಿಟ್ಟುಕೊಳ್ಳಿ ನಂತರ ಅದೇ ಪಾತ್ರೆಗೆ ಒಂದು ಕಪ್ ಒಣ ಕೊಬ್ಬರಿ ಪುಡಿ ಹಾಕಿ ಹುರಿದುಕೊಳ್ಳಿ.
ನಂತರ ಸ್ವಲ್ಪ ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರ್ ಗೆ ಹಾಕಿ ತರಿ ತರಿಯಾಗಿ ಪೌಡರ್ ಮಾಡಿಕೊಳ್ಳಬೇಕು. ನಂತರ ಈ ಪೌಡರ್ ಗೆ ಅಯೋಡಿನ್ ಅಂಶ ಬೇಕಾಗಿರುವುದರಿಂದ ಅರ್ಧ ಚಮಚ ಉಪ್ಪು, ಕಾಲು ಚಮಚ ಏಲಕ್ಕಿ ಪುಡಿ ಹಾಗೂ ಕಾಲು ಚಮಚ ಕಾಳು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ದಪ್ಪ ತಳದ ಪಾತ್ರೆಗೆ ಕಾಲು ಕಪ್ ಬೆಲ್ಲ ಎರಡು ಸ್ಪೂನ್ ನೀರು ಹಾಕಿ ಅದು ಕರಗಿದ ನಂತರ ಎಲ್ಲ ಪೌಡರ್ ಹಾಕಿಕೊಂಡು ಚೆನ್ನಾಗಿ ಕೈ ಆಡಿಸುತ್ತಾ ಇರಬೇಕು.
ನಂತರ ಒಂದು ತಟ್ಟೆಗೆ ಹಾಕಿಕೊಂಡು ತಣ್ಣಗಾಗಲು ಬಿಟ್ಟು ಸ್ವಲ್ಪ ತಣಿದ ನಂತರ ಉಂಡೆ ಕಟ್ಟಬೇಕು ಪೂರ್ತಿ ತಣ್ಣಗಾದ ಮೇಲೆ ಉಂಡೆ ಕಟ್ಟೋಕೆ ಬರಲ್ಲ ಗಟ್ಟಿ ಆಗತ್ತೆ ಹಾಗಾಗಿ ಸ್ವಲ್ಪ ಬಿಸಿ ಇರುವಾಗಲೇ ಉಂಡೆ ಕಟ್ಟಬೇಕು. ಈ ಉಂಡೆಗಳನ್ನು ಒಮ್ಮೆ ಮಾಡಿದರೆ ನೀವು ಎರಡು ವಾರ ಬೇಕಾದ್ರೂ ಇಡಬಹುದು ಹಾಗೂ ಇವುಗಳನ್ನ ನಿಮ್ಮ ಮಕ್ಕಳಿಗೆ ತಿನ್ನೋಕೆ ಕೋಡೋದ್ರಿಂದ ಅವರ ನೆನಪಿನ ಶಕ್ತಿ ಹೆಚ್ಚು ಆಗಿದ್ರಲ್ಲಿ ಯಾವುದೇ ಅನುಮಾನ ಇಲ್ಲ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಕೂಡ ಬರತ್ತೆ ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.