ಸಾಮಾನ್ಯವಾಗಿ ಮೆಹಂದಿ ಹಚ್ಚೋರು. ಮೆಹಂದಿ ಪುಡಿಗೆ ನೀರು ಬೇರಸಿ ನೆನಸಿಟ್ಟು ಕೊದಲಗೆ ಹಚ್ಚುತ್ತಾರೆ.ಆದರೆ ಇದರ ಜೊತೆಗೆ ಹಲವಾರು ಇನ್ನಿತರ ಆರೋಗ್ಯಕರ ವಸ್ತುಗಳನ್ನು ಬಳಸಿ ಹಚ್ಚಿದರೆ ಕೂದಲು ಸಂಮೃದ್ಥವಾಗಿ ಬೆಳೆಯಲು ಹಾಗೂ ನೈಸರ್ಗಿಕ ಬಣ್ಣ ಪಡೆಯಲು ಸಹಾಯಕ.ಇದರ ಬಗ್ಗೆ ತಿಳಿಯೋಣ. ನೀವು ಬಳಸುವ ಮೆಹಂದಿ ಹರ್ಬಲ್ ಮೆಹಂದಿ ಆಗಿದ್ದರೆ ತುಂಬಾನೆ ಒಳ್ಳೆಯದು. ಇದರಿಂದ ಅತ್ಯುತ್ತಮ ಮೆಹಂದಿ ಪೇಸ್ಟ್ ಮಾಡಿಕೊಳ್ಳಬಹುದು ಅದು ಹೇಗೆ ಅಂತಾ ನೋಡೋಣ.
ಮೆಹಂದಿ ಪೇಸ್ಟ್ ಗೆ ಬೇಕಾದ ಸಾಮಾಗ್ರಿಗಳು
ಒಂದು ಲೋಟ ಕುದಿಸಿದ ಕಾಫಿ ಪೌಡರ್, ಅರ್ಧ ಕಪ್ ಮೊಸರು, ನಿಂಬೆಹಣ್ಣು, ಕೊಬ್ಬರಿ ಎಣ್ಣೆ, ಒಂದುಲೋಟ ಬಿಟ್ರೋಟ್ ಜ್ಯೂಸ್, ಮೆಹಂದಿ
ಮೆಹಂದಿ ಪೇಸ್ಟ್ ಮಾಡುವ ವಿಧಾನ: 4 ರಿಂದ ಐದು ಚಮಚ ಕಾಫಿ ಪೌಡರ್ ಅನ್ನು ಒಂದು ಲೋಕದ ನೀರಿನ್ನು ಪಾತ್ರೆ ಹಾಕಿ ಕುದಿಸಿ, ಈ ಕುದಿಸಿದ ನೀರಿನಲ್ಲಿ ಅರ್ಧ ಕಪ್ ಮೊಸರು, ಬಿಟ್ರೋಟ್ ತುರಿದು ಕುದಿಸಿದ ಜ್ಯೂಸ್ , ಎರಡು ಚಮಚ ನಿಂಬೆರಸ, ಎರಡು ಚಮಚ ಕೊಬ್ಬರಿ ಎಣ್ಣೆ, ಮೆಹಂದಿ ಹಾಕಿ ಚೆನ್ನಾಗಿ ಕಲಸಿ ರಾತ್ರಿಯಲ್ಲ ನೆನೆಸಿಡಿ, ಬೆಳಗ್ಗೆ ನಿಮ್ಮ ಕೂದಲಿಗೆ ಈ ಪೇಸ್ಟ್ ಹಚ್ಚಿ ಎರಡು ಗಂಟೆ ನಂತರ ಸ್ನಾನ ಮಾಡಿ ನಿಮ್ಮ ಕೂದಲು ನೈಸರ್ಗಿಕ ಕಲರ್ ನೊಂದಿಗೆ ಹೆಚ್ಚು ಶೈನಿಯಾಗಿರುತ್ತದೆ. ಇದನ್ನು ಎರಡೂ ವಾರಕ್ಕೆ ಒಮ್ಮೆ ಮಾಡಿ ತಲೆಗೆ ಹಚ್ಚಿಕೊಳ್ಳಬಹುದು.
ಮೆಹಂದಿ ಪೇಸ್ಟ್ ನ ಉಪಯೋಗ: ಕೂದಲಿಗೆ ಬೇಕಾದ ಪೋಷಕಾಂಶ, ನೈಸರ್ಗಿಕ ಬಣ್ಣ, ಹೊಟ್ಟು ನಿವಾರಣೆ, ಕೂದಲು ಉದುರುವಿಕೆ ನಿಲ್ಲುತ್ತದೆ,ಕೂದಲುಗಳನ್ನ ಗಟ್ಟಿಗೊಳಿ ಸುತ್ತದೆ. ಇಷ್ಟೆಲ್ಲಾ ಆರೋಗ್ಯಕರ ಪ್ರಯೋಜನ ಹೊಂದಿದೆ ಈ ಮೆಹಂದಿ ಪೇಸ್ಟ್.