ಮಾಸ್ಟರ್ ಆನಂದ್ ಮದುವೆಯಾಗಿ ಇಬ್ಬರು ಮಕ್ಕಳಾದರೂ ಇನ್ನೂ ಮಾಸ್ಟರ್ ಆಗಿಯೇ ಇದ್ದಾರೆ. ಅದಕ್ಕೆ ಕಾರಣ ಅವರು ಮಾಸ್ಟರ್ ಆಗಿದ್ದಾಗ ಮಾಡಿದ ಸೀನ್‌ಗಳು ಪಡೆದ ಜನಪ್ರಿಯತೆ. ಇದೀಗ ಅವರ ಮಗಳು ವನ್ಶಿಕಾ ಅಂಜನಿ ಕಶ್ಯಪ್ ಅಪ್ಪನ ಹಾದಿಯಲ್ಲೇ ಜನಪ್ರಿಯತೆ ಪಡೆಯುತ್ತಿದ್ದಾಳೆ. ಈ ಪುಟ್ಟ ಮಗು ಕಿರುತೆರೆ ಮೇಲೆ ಮಾಡುತ್ತಿರುವ ಕಾಮಿಡಿ ಶೋಗಳನ್ನು ನೋಡಿ ಪ್ರೇಕ್ಷಕರು ಥರಾವರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆಗೆ ವಂಶಿಕ ಇಂದ ನಮಗೆ ಹಣದ ಅಪೇಕ್ಷೆ ಇಲ್ಲ ಎಂದು ಲೈವ್ ಬಂದು ಭಾವುಕರಾಗಿ ತಂದೆ ಮಾಸ್ಟರ್ ಆನಂದ್ ಹೇಳಿದ ಮನದಾಳದ ಮಾತುಗಳೇನು? ನೋಡೋಣ.
ಮಾಸ್ಟರ್ ಆನಂದ್ ಅವರ ಪುತ್ರಿ ವಂಶಿಕ ಅಂಜಲಿ ಕಶ್ಯಪ್ ಅವರು ಸದ್ಯಕ್ಕೆ ಸೆನ್ಸೇಷನ್ ಕ್ರಿಯೇಟ್ ಮಾಡಿದ ಪುಟ್ಟ ಬಾಲಕಿ ಅಂತ ಹೇಳಿದರೂ ತಪ್ಪಾಗಲಾರದು. ಏಕೆಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದಂತಹ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ಅವರ ಅದ್ಭುತವಾದಂತಹ ನಟನೆಯನ್ನು ನೋಡಿ ಎಲ್ಲರೂ ಮೆಚ್ಚಿಕೊಂಡರು. ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಹೆಸರನ್ನು ಪಡೆದಂತಹ ಖ್ಯಾತಿ ವಂಶಿಕ ಅವರಿಗೆ ಸಲ್ಲುತ್ತದೆ ತಂದೆಯಂತೆ ನಟನೆಯಲ್ಲಿ ಕರಗತ ಪಡೆದಿದ್ದಾರೆ.
ಅಷ್ಟೇ ಅಲ್ಲದೆ ಸ್ಟೇಜ್ ಮೇಲೆ ಬಂದರೆ ತಮ್ಮ ಚಟಪಟ ಮಾತಿನ ಮೂಲಕ ಸ್ಟೇಜ್ ಮೇಲೆ ನೆರೆದಿರುವಂತಹ ಜಡ್ಜಸ್ಗಳನ್ನು ಮತ್ತು ಕಂಟೆಸ್ಟೆಂಟ್ ಗಳನ್ನು ನಕ್ಕುನಗಿಸುವಂತೆ ಮಾಡುತ್ತಾರೆ. ನಟಿ ವಂಶಿಕ ಅವರ ಅಮೋಘ ಅಭಿನಯಕ್ಕೆ ಎಲ್ಲರೂ ಕೂಡ ಮನಸೋತಿದ್ದಾರೆ ಅಷ್ಟೇ ಅಲ್ಲದೆ ವಂಶಿಕ ಅವರಿಗೆ ಕರ್ನಾಟಕದಲ್ಲಿ ಇದೀಗ ಅಪಾರ ಸಂಖ್ಯೆಯ ಅಭಿಮಾನಿ ಬಳಗವು ಕೂಡ ಇದೆ. ಈಗಾಗಲೇ ಗಿಚ್ಚಿ ಗಿಲಿ ಕಾರ್ಯಕ್ರಮ ಮುಕ್ತಾಯವಾಗಿದ್ದು ಸೀಸನ್-2 ಕೂಡಾ ಪ್ರಾರಂಭವಾಗಿದೆ. ಇಲ್ಲಿಯೂ ಕೂಡ ವಂಶಿಕ ಎಂಟ್ರಿ ಪಡೆದಿದ್ದಾರೆ. ಕಳೆದ ವಾರ ವಶಿಂಕಾ ಅವರು ಮಾಡಿದಂತಹ ಆಕ್ಟ್ ನೋಡಿ ಇದೀಗ ಮಾಸ್ಟರ್ ಆನಂದ್ ಅವರು ಭಾವುಕರಾಗಿದ್ದಾರೆ. ವಂಶಿಕ ಆಕ್ಟಿಂಗ್ ನೋಡಿ ಕೆಲವು ಅಭಿಮಾನಿಗಳು ಮೆಚ್ಚಿಗೆಯನ್ನು ವ್ಯಕ್ತ ಪಡಿಸಿದರೆ ಇನ್ನು ಕೆಲವು ಅಭಿಮಾನಿಗಳು ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅದರಲ್ಲಿ ಮುಖ್ಯವಾದದ್ದು ವನ್ಶಿಕಾಳಂಥಾ ಪುಟ್ಟ ಹುಡುಗಿ ದೊಡ್ಡೋರ ಥರ ಕಾಮಿಡಿ ಮಾಡ್ತಾಳೆ, ಈ ಥರ ಮಾಡೋದು ಮಕ್ಕಳ ಮೇಲೆ ಪ್ರಭಾವ ಬೀರುತ್ತೆ. ಇದು ಮಕ್ಕಳ ಮಾನಸಿಕ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದಲ್ಲ ಅನ್ನೋದು. ಜೊತೆಗೆ ಇನ್ನೂ ನಾಲ್ಕೈದು ವರ್ಷದ ಪುಟ್ಟ ಮಗುವಿಗೆ ಈ ಥರ ಜನಪ್ರಿಯತೆ ಸಿಕ್ಕರೆ ಅವಳ ಓದಿನ ಮೇಲೆ, ಭವಿಷ್ಯದ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ ಅನ್ನೋದರ ಬಗ್ಗೆ ಪ್ರೇಕ್ಷಕರು ಕಾಮೆಂಟ್ ಮಾಡಿದ್ದರು. ಈ ಕಮೆಂಟ್‌ಗಳಿಗೆಲ್ಲ ಮಾಸ್ಟರ್ ಆನಂದ್ ಉತ್ತರ ನೀಡಿದ್ದಾರೆ. ಅದಕ್ಕವರು ತನ್ನನ್ನೇ ಉದಾಹರಣೆಯಾಗಿ ತಗೊಂಡಿದ್ದಾರೆ.
ಹೌದು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಕಲೆಯು ಕೂಡ ಮುಖ್ಯ ಆದರೆ ವಂಶಿಕ ಕಳೆದ ಒಂದು ವರ್ಷದಿಂದಲೂ ಕೂಡ ಹೆಚ್ಚಾಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ, ಅವರ ವಿದ್ಯಾಭ್ಯಾಸದ ಕಡೆ ನೀವು ಹೆಚ್ಚಿನ ಗಮನ ನೀಡುತ್ತಿಲ್ಲ, ಪ್ರತಿ ಎಪಿಸೋಡ್ ಗೂ ಕೂಡ ಹಣವನ್ನು ಪಡೆಯುತ್ತಿದ್ದಾರೆ ಎಂಬ ಆರೋಪವನ್ನು ಹೊರಿಸಿದ್ದಾರೆ. ಆನಂದ್ ಮಗಳು ವನ್ಶಿಕಾ ಹಾಗೂ ಅವಳ ತಾಯಿ ಯಶಸ್ವಿನಿ ಕಿರುತೆರೆಯ ಜನಪ್ರಿಯ ಶೋ ‘ನಮ್ಮಮ್ಮ ಸೂಪರ್‌ಸ್ಟಾರ್’ ಮೂಲಕ ಜನಪ್ರಿಯರಾದವರು. ಅಲ್ಲಿ ವನ್ಶಿಕಾ ಮ್ಯಾನರಿಸಂ, ಕಾಮಿಡಿ ಮಾಡ್ತಿದ್ದ ರೀತಿ ಕಂಡು ಎಲ್ಲರೂ ಚೋಟು ಪಟಾಕಿ ಅಂತ ಕರೀತಿದ್ರು. ಈಕೆಯ ಜನಪ್ರಿಯತೆ ಯಾವ ಮಟ್ಟಿಗೆ ಬೆಳೆಯಿತು ಅಂದರೆ ಇದೀಗ ದೊಡ್ಡವರ ಶೋ ಗೂ ಎಂಟ್ರಿ ಕೊಟ್ಟಿದ್ದಾಳೆ. ‘ಗಿಜ್ಜಿ ಗಿಲಿಗಿಲಿ’ ರಿಯಾಲಿಟಿ ಶೋದಲ್ಲಿ ಅವಳೇ ಆಕರ್ಷಣೆಯ ಕೇಂದ್ರಬಿಂದು ಆಗಿದ್ದಾಳೆ.
ಇದನ್ನು ಕೇಳಿದಂತಹ ಮಾಸ್ಟರ್ ಆನಂದ್ ಅವರು ಭಾವುಕರಾಗಿದ್ದಾರೆ. ಆದರೆ ಮಾಸ್ಟರ್ ಆನಂದ್ ತನ್ನ ಅನುಭವದ ಹಿನ್ನೆಲೆಯಲ್ಲಿ ಇದನ್ನೆಲ್ಲ ಸಾರಾಗಸಟಾಗಿ ನಿರಾಕರಿಸಿದ್ದಾರೆ. ‘ಮಕ್ಕಳು ದೊಡ್ಡೋರ ಕಾಮಿಡಿ ಸೀನ್‌ಗಳಲ್ಲಿ, ಡ್ರಾಮಾಗಳಲ್ಲಿ ಕಾಣಿಸಿಕೊಳ್ಳೋದು ಅವರ ಮೇಲೆ ದುಷ್ಪರಿಣಾಮ ಬೀರುತ್ತೆ ಅನ್ನೋದಾದ್ರೆ ನಾನು ಅಂಥ ಪಾತ್ರಗಳನ್ನು ಮಾಡಿಕೊಂಡೇ ಬಂದವನು. ದೊಡ್ಡಣ್ಣ -ರೇಖಾ ದಾಸ್ ಜೊತೆಗೆ ಮಡಿಕೆ ಸೀನ್‌ನಲ್ಲಿ ಕಾಣಿಸಿಕೊಂಡಾಗ ಅದರಲ್ಲಿ ದೊಡ್ಡವರ ತಮಾಷೆ ಇತ್ತು. ಅಷ್ಟೇ ಅಲ್ಲದೆ ನಾವು ನಟಿ ವಂಶಿಕ ಅವರಿಂದ ಯಾವುದೇ ರೀತಿಯಾದಂತಹ ಹಣಕಾಸಿನ ಅಪೇಕ್ಷೆಯನ್ನು ಪಡೆಯುತ್ತಿಲ್ಲ.
ಅವಳ ಟ್ಯಾಲೆಂಟ್ ಅನ್ನು ಪ್ರದರ್ಶನ ಮಾಡುವುದಷ್ಟೇ ನಮ್ಮ ಉದ್ದೇಶವಾಗಿದೆ ನಮಗೆ ನಮ್ಮ ಮಗಳ ಬಗ್ಗೆ ಬಹಳಷ್ಟು ಕಾಳಜಿ ಇದೆ ವಿದ್ಯಾಭ್ಯಾಸದ ಕಡೆ ನಾವು ಗಮನ ವಹಿಸುತ್ತಿದ್ದೇವೆ. ನಾನು ಕೂಡ ಬಾಲನಟ ಬಾಲನಟನಾಗಿ ಇರುವಂತಹ ಸಂದರ್ಭದಲ್ಲಿ ನನ್ನ ಸಮಯವನ್ನು ಯಾವ ರೀತಿ ಮೀಸಲಿಟ್ಟಿದೆ ಎಂಬುದರ ಬಗ್ಗೆ ನನಗೆ ಅರಿವು ಇದೆ ವಿದ್ಯಾಭ್ಯಾಸ ನಟನೆ ಇವೆರಡರಲ್ಲೂ ಕೂಡ ವಂಶಿಕಾ ಅವರು ಮುಂದೆ ಇದ್ದಾರೆ ಹಾಗಾಗಿ ಅಭಿಮಾನಿಗಳು ಆತಂಕ ಪಡುವ ಅಗತ್ಯ ಇಲ್ಲ ಎಂದು ಲೈವ್ ಬಂದು ಹೇಳಿದ್ದಾರೆ.
ವಂಶಿಕ ಅವರ ಆಕ್ಟಿಂಗ್ ನೋಡಿದಂತಹ ಸಾಧುಕೋಕಿಲ ಶೃತಿ ಎಲ್ಲರೂ ಕೂಡ ಮೆಚ್ಚಿಕೊಂಡಿದ್ದಾರೆ ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ವಂಶಿಕ ಅವರ ನಟನೆ ಮಾಡಿದಂತಹ ವಿಡಿಯೋಗಳು ವೈರಲ್ ಆಗುತ್ತಿದೆ. ಈಕೆಗೆ ಇರುವಂತಹ ಪ್ರತಿಭೆ ನೋಡಿದರೆ ಮುಂದೊಂದು ದಿನ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಕಲಾವಿದೆಯಾಗಿ ಬೆಳೆಯುತ್ತಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ಒಂದು ಕಡೆಯಲ್ಲಿ ವಂಶಿಕ ಇಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ ಇದನ್ನು ನೋಡಿದಂತಹ ವಂಶಿಕ ತಂದೆ ಮಾಸ್ಟರ್ ಆನಂದ ಮತ್ತು ತಾಯಿ ಯಶಸ್ವಿನಿಯವರು ಹೆಮ್ಮೆಪಡುತ್ತಿದ್ದಾರೆ.