ತಾಳಿ ಕಟ್ಟೋ ಕೊನೆ ಘಳಿಗೆಯಲ್ಲಿ ವರನಿಗೆ ಕೈಕೊಟ್ಟ ವಧು, ಪ್ರಿಯಕರನೊಂದಿಗೆ ಪರಾರಿ, ವರ ಕಂಗಾಲು

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಅಂತಾರೆ. ಆದ್ರೆ ಭೂಮಿಯಲ್ಲಿ ನಿಶ್ಚಯವಾದ ಅದೆಷ್ಟೋ ಮದುವೆಗಳು ಮುರಿದು ಬೀಳುತ್ತವೆ. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ಅದೆಷ್ಟೋ ಮದುವೆಗಳು ಮುರಿದು ಬಿದ್ದ ಉದಾಹರಣೆಗಳಿವೆ. ಎರಡು ದಿನಗಳ ಹಿಂದೆಯಷ್ಟೆ ಮೈಸೂರಿನಲ್ಲಿ ತಾಳಿ ಕಟ್ಟೋ ಕೊನೆ ಘಳಿಗೆಯಲ್ಲಿ, ವಧು ತಲೆ ಸುತ್ತಿ ಬಿದ್ದು ನಾಟಕ ಮಾಡುವ ಮೂಲಕ ಮದುವೆ ಮುರಿದಿದ್ದಳು. ಇದೀಗ ಇಂತಹುದೇ ಘಟನೆ ಈಗ ಚಿಕ್ಕಬಳ್ಳಾಪುರದಲ್ಲಿ ಕಂಡುಬಂದಿದೆ. ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲೂ ರಾತ್ರಿ ಆರತಕ್ಷತೆಯಲ್ಲಿ ಭಾಗಿಯಾದ ವಧು ಬೆಳಿಗ್ಗೆ ಮುಹೂರ್ತಕ್ಕೆ ಇರದೇ ರಾತ್ರೋ ರಾತ್ರಿ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದು, ಮದುವೆ ಮುರಿದುಬಿದ್ದಿದೆ.

ಗೌರಿಬಿದನೂರಿನ ನಾಗರೆಡ್ಡಿ ಬಡಾವಣೆಯ ವಧು ವೆನ್ನಲ ಹಾಗೂ ಕರೇಕಲ್ಲಹಳ್ಳಿಯ ವರ ಸುರೇಶ್ ಎಂಬಾತನಿಗೆ ಮದುವೆ ನಿಶ್ಚಯವಾಗಿತ್ತು. ವಿದುರಾಶ್ವತ್ಥ ಗ್ರಾಮದ ಚನ್ನರಾಯಸ್ವಾಮಿ ಕಲ್ಯಾಣ ಮಂಟಪದಲ್ಲಿ ರಾತ್ರಿ ಆರತಕ್ಷತೆಯೂ ನಡೆದಿತ್ತು. ಆದ್ರೆ ರಾತ್ರೋರಾತ್ರಿ ವಧು ವೆನ್ನಲ ತನ್ನ ಪ್ರಿಯಕರ ಸೋದರ ಮಾವ ಪ್ರವೀಣ್ ಜೊತೆ ಎಸ್ಕೇಪ್ ಆಗಿದ್ದಾಳೆ. ವಧು ಈ ರೀತಿ ಮಾಡಿದ್ದು ಸರಿಯಲ್ಲ ಮನೆಯಲ್ಲಿ ತಮ್ಮ ಪ್ರೇಮದ ಬಗ್ಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು ಎಂದು ಸಾರ್ವಜನಿಕರು ಹೇಳಿದ್ದಾರೆ.

ಗೌರಿಬಿದನೂರು ನಗರದ ನಾಗಿರೆಡ್ಡಿ ಬಡಾವಣೆಯಲ್ಲಿ ವಾಸವಾಗಿದ್ದ ವೆನ್ನೆಲಾ ಕಳೆದ ಕೆಲವು ವರ್ಷಗಳಿಂದ ಸೋದರ ಮಾವ ಗುಡಿಬಂಡೆ ತಾಲೂಕಿನ ಪ್ರವೀಣ್ ಜೊತೆ ಪ್ರೇಮಾಂಕುರವಾಗಿತ್ತು. ಕೆಲ ದಿನಗಳಿಂದ ಇಬ್ಬರು ಕುಟುಂಬದವರಿಗೆ ಇವರಿಬ್ಬರು ಲವ್ ಕಹಾನಿ ಗೊತ್ತಿತ್ತು. ಆದ್ರೆ ವೆನ್ನೆಲಾ ತಾಯಿಗೆ ಪ್ರವೀಣ್ ಜೊತೆ ಮದುವೆ ಮಾಡಲು ಇಷ್ಟವಿರಲಿಲ್ಲ. ಹೀಗಾಗಿ ಎರಡು ಕುಟುಂಬಗಳ ನಡೆಸಿದ ಪ್ರಯತ್ನ ವಿಫಲವಾಗಿತ್ತು. ಗೌರಿಬಿದನೂರಿನ ನಾಗರೆಡ್ಡಿ ಬಡಾವಣೆಯ ವಧು ವೆನ್ನಲ ಹಾಗೂ ಕರೇಕಲ್ಲಹಳ್ಳಿಯ ವರ ಸುರೇಶ್ ಎಂಬುವರಿಗೆ ಮದುವೆ ನಿಶ್ಚಯವಾಗಿದ್ದು, ವಿದುರಾಶ್ವತ್ಥ ಗ್ರಾಮದ ಚನ್ನರಾಯಸ್ವಾಮಿಕಲ್ಯಾಣ ಮಂಟಪದಲ್ಲಿ ರಾತ್ರಿ ಆರತಕ್ಷತೆಯೂ ನಡೆದಿತ್ತು.

ಎಲ್ಲ ಬಂಧು ಬಳಗದವರು ಈ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿ ಆಶೀರ್ವಾದ ಕೂಡ ಮಾಡಿದ್ರು. ಇನ್ನೇನು ಬೆಳಿಗ್ಗೆ ತಾಳಿ ಕಟ್ಟಿಸಿಕೊಳ್ಳಬೇಕಿತ್ತು. ಅಷ್ಟರಲ್ಲಿ ರಾತ್ರೋರಾತ್ರಿ ವಧು ವೆನ್ನಲ ತನ್ನ ಪ್ರಿಯಕರ ಸೋದರ ಮಾವ ಪ್ರವೀಣ್ ಜೊತೆ ಕಲ್ಯಾಣ ಮಂಟಪದಿಂದಲೇ ಎಲ್ಲರ ಕಣ್ಣು ತಪ್ಪಿಸಿ ಎಸ್ಕೇಪ್ ಆಗಿದ್ದಾಳೆ. ಮದುವೆ ಮನೆಯಿಂದ ಕಾಲ್ಕಿತ್ತಿದ ವಧು ವೆನ್ನೆಲಾ ಹಾಗೂ ಕುಟುಂಬದವರ ವಿರುದ್ಧ ವರ ಸುರೇಶ್ ಕಡೆಯವರು ಪೊಲೀಸ್ ಠಾಣೆಗೆ ದೂರು ನೀಡಿದ್ರು. ನಮಗೆ ಮರ್ಯಾದೆ ಹೋಗಿದ್ದು, ವಧು ಪ್ರೇಮದ ವಿಚಾರ ನಮಗೆ ತಿಳಿಸದೇ ಮೋಸ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಸದ್ಯ ಎರಡು ಕುಟುಂಬಗಳನ್ನು ಕರೆಸಿ ಪೊಲೀಸರು ಮಾತುಕತೆ ಸಮಾಧಾನ ಮಾಡುತ್ತಿದ್ದಾರೆ.

Leave a Comment