ಗಂಡ ಕಟ್ಟಿದ ತಾಳಿ ಹೆಂಡ್ತಿಗೆ ರಕ್ಷಾ ಕವಚ ಇದ್ದಂತೆ, ಈ ತಾಳಿಯ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು

ತಾಳಿಯು ಮದುವೆ ಯಲ್ಲಿ ಮದುಮಗನು ಮದುಮಗಳ ಕತ್ತಿಗೆ ಕಟ್ಟುವ ಪವಿತ್ರ ಕಂಠಹಾರ. ಅವಳ ವೈವಾಹಿಕ ಸ್ಥಿತಿಯ ಸಂಕೇತವಾಗಿ ಮಹಿಳೆಯು ಮಂಗಳ ಸೂತ್ರವನ್ನು ಧರಿಸುವುದನ್ನು ಮುಂದುವರಿಸುತ್ತಾಳೆ. ಈ ರೂಢಿಯ ಆಚರಣೆ ಭಾರತದ ದಕ್ಷಿಣ ಭಾಗದಲ್ಲಿ ಹುಟ್ಟಿಕೊಂಡಿತು. ತಾಳಿಯನ್ನು ಮಂಗಳ ಸೂತ್ರ ಎಂದೂ ಕರೆಯುತ್ತಾರೆ. ಮಂಗಳ ಸೂತ್ರ (ಸಂಸ್ಕೃತದಲ್ಲಿ ಮಂಗಳ ಅಂದರೆ ‘ಪವಿತ್ರ, ಶುಭ’, ಮತ್ತು ಸೂತ್ರ ಅಂದರೆ ‘ದಾರ’).ಇದರ ಮೂಲವು ಕ್ರಿ.ಶ ೬ ನೇ ಶತಮಾನಕ್ಕೆ ಹಿಂದಿನದು. ಏಕೆಂದರೆ ಇತರ ಪುರುಷರು ಮತ್ತು ದುಷ್ಟಶಕ್ತಿಗಳಿಂದ ರಕ್ಷಣೆಗಾಗಿ ವಧುವಿನ ಸುತ್ತ ಒಂದೇ ಹಳದಿ ದಾರವನ್ನು ಕಟ್ಟಲಾಗಿತ್ತು. ಮಂಗಳ ಸೂತ್ರವನ್ನು ಧರಿಸುವುದು ಭಾರತ, ಶ್ರೀಲಂಕಾ ಮತ್ತು ನೇಪಾಳದಲ್ಲಿ ವ್ಯಾಪಕವಾದ ಸಾಮಾಜಿಕ ಅಭ್ಯಾಸವಾಗಿದೆ. ಮನುಸ್ಮೃತಿ ಸೂಚಿಸಿದಂತೆ ಈ ಅಭ್ಯಾಸವು ವಿವಾಹ ಸಮಾರಂಭದ ಅವಿಭಾಜ್ಯ ಅಂಗವಾಗಿದೆ. ಮಂಗಳ ಸೂತ್ರದ ಬಗ್ಗೆ ತಿಳಿಯಬೇಕಾದ ಮಾಹಿತಿ

ಮಂಗಳ ಸೂತ್ರದ ಬಗ್ಗೆ ಪ್ರತಿ ಹೆಣ್ಣು ಕೂಡಾ ತಿಳಿದಿರಲೇ ಬೇಕು. ಈಗಿನ ಯಾಂತ್ರಿಕ ಯುವ ಪೀಳಿಗೆಗೆ ತಾಳಿಯ ಬಗ್ಗೆ ಅಂದರೆ ಮಂಗಳ ಸೂತ್ರದ ಮಹತ್ವ ಏನು ಎಂದು ತಿಳಿದಿರುವುದಿಲ್ಲ ಈ ವಿಶೇಷವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಭಾರತೀಯ ಹಿಂದೂಗಳ ಸಂಪ್ರದಾಯದ ಪ್ರಕಾರ ವಿವಾಹದಲ್ಲಿ ನಡೆಯುವ ಶಾಸ್ತ್ರ ಹಾಗೂ ಒಂದೊಂದು ಮಂತ್ರಕ್ಕೆ ಸಹ ನಮ್ಮ ವೇದ ಉಪನಿಷತ್ತು ಪುರಾಣ ನೀತಿಗಳಲ್ಲಿ ವಿವಾಹಕ್ಕೆ ಒಂದು ಮಹತ್ವದ ಸ್ಥಾನವಿದೆ. ವೈದ್ಯಕೀಯ ಪದ್ಧತಿಯ ವಿವಾಹವು ಜೀವನದ ಅವಿಭಾಜ್ಯ ಅಂಗ ಆಗಿದೆ. ಧರ್ಮದ ಹಲವು ಮೂಲಭೂತ ಅಂಶಗಳು ಅದು ಸಮೀಕರಣಿಸಿಕೊಂಡಿದೆ. ವೈದ್ಯಕೀಯ ಪದ್ಧತಿಯ ವಿಭವು ಜೀವನದ ಅವಿಭಾಜ್ಯ ಅಂಗ ಆಗಿದೆ. ಮಂಗಳ ಸೂತ್ರದ ಮಹತ್ವವನ್ನು ಆದಿಶಂಕರಾಚಾರ್ಯರು ತಮ್ಮ ಪ್ರಸಿದ್ಧ ಪುಸ್ತಕ ಸೌಂದರ್ಯ ಲಹರಿಯಲ್ಲಿ ಪುನಃ ಪುನರಾವರ್ತಿಸಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ, ಗಂಡನ ದೀರ್ಘಾಯುಷ್ಯಕ್ಕಾಗಿ ಮಂಗಳಸೂತ್ರವನ್ನು ಧರಿಸಲಾಗುತ್ತದೆ. ಧಾರ್ಮಿಕ ಪದ್ಧತಿಗಳು ಮತ್ತು ಸಾಮಾಜಿಕ ನಿರೀಕ್ಷೆಗಳಿಂದ ಹೇಳಲ್ಪಟ್ಟಂತೆ, ವಿವಾಹಿತ ಮಹಿಳೆಯರು ತಮ್ಮ ಜೀವನದುದ್ದಕ್ಕೂ ಮಂಗಳ ಸೂತ್ರವನ್ನು ಧರಿಸಬೇಕು. ಏಕೆಂದರೆ ಈ ಅಭ್ಯಾಸವು ತನ್ನ ಗಂಡನ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಆದರೆ ಇಂದಿನ ಯಾಂತ್ರಿಕ ಆಧುನಿಕ ಯುಗದಲ್ಲಿ ವಿವಾಹ ಸಂಸ್ಕಾರವಾಗಿ ಉಳಿಯದೆ ಅದೊಂದು ಪ್ರತಿಷ್ಠೆಯನ್ನು ತೋರುವ ಕುಟುಂಬದ ಸಂಭ್ರಮ ಆಗಿ ಮಾರ್ಪಟ್ಟಿದೆ. ಹಿಂದೂ ಧರ್ಮದಲ್ಲಿ ಮದುವೆಗೆ ತುಂಬಾ ಮಹತ್ವ ಇದೆ. ಅದೇ ರೀತಿ ವರ ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೆ ಪ್ರಾಮುಖ್ಯತೆ ಇದೆ ಇದಕ್ಕೆ ಮಂಗಳ ಸೂತ್ರ ತಾಳಿ ಕಂಠಿ ಕರಿಮಣಿ ತಾಳಿ ಇತ್ಯಾದಿ ವಿವಿಧ ಹೆಸರುಗಳು ಇರುವ ಅತಿ ಪವಿತ್ರ ಮತ್ತು ಅತ್ಯಂತ ಭಾವನಾತ್ಮಕವಾದ ಆಭರಣ ಇದು. ವೈವಾಹಿಕ ಸ್ಥಿತಿಯ ಸಾಂಕೇತಿಕವಾಗಿ ಮಹಿಳೆಯರು ಮಂಗಳ ಸೂತ್ರವನ್ನು ಧರಿಸುತ್ತಾರೆ ಹಾಗೆಯೇ ವೈವಾಹಿಕ ಜೀವನದ ಶ್ರೇಷ್ಟ ಸಂಕೇತ ಮಂಗಳ ಸೂತ್ರ ಇದು ಕಪ್ಪು ಮಣಿಗಳ ಸರ ಸುಮಂಗಲಿಯರು ಇದನ್ನು ಕುತ್ತಿಗೆಗೆ ಹಾಕಿ ಕೊಳ್ಳುತ್ತಾರೆ ಮಂಗಳ ಸೂತ್ರ ಧಾರಣೆ ಮಾಡುವುದರಿಂದ ಯುವತಿಯ ರಕ್ಷಣೆ ಆಗುತ್ತದೆ ಪತಿಯ ಎಲ್ಲಾ ಸಂಕಷ್ಟ ದೂರ ಆಗುತ್ತದೆ ಎಂದು ನಂಬಲಾಗಿದೆ

ಇದು ಮಹಿಳೆಯರಿಗೆ ರಕ್ಷಾ ಕವಚ ಹಾಗೂ ಸಮೃದ್ಧಿಯ ಶಾಸ್ತ್ರದಲ್ಲಿ ಹೇಳಲಾಗಿದೆ.ಮಂಗಳ ಸೂತ್ರದಲ್ಲಿ ಹಳದಿ ಅಥವಾ ಕೆಂಪು ದಾರ ಇರುತ್ತದೆ. ಕಪ್ಪು ಮಣಿ ಅಥವಾ ಕರಿಮಣಿ ಇರಲೇಬೇಕು ಇದರ ಜೊತೆಗೆ ಬಂಗಾರ ಪದಕ ಇರುತ್ತದೆ ಮಂಗಳ ಸೂತ್ರದಲ್ಲಿ ಬಂಗಾರ ಇರಲಿ ಬಿಡಲಿ ಹಳದಿ ದಾರ ಹಾಗೂ ಕರಿ ಮಣಿ ಇರಲೇಬೇಕು. ಮಂಗಳ ಸೂತ್ರದ ಹಳದಿ ದಾರದ ಹಾಗೂ ಪದಕ ಗುರು ಗ್ರಹದ ಸಂಕೇತ ಮಹಿಳೆಯರು ಜಾತಕದಲ್ಲಿ ಗುರು ಗ್ರಹವನ್ನು ಇದು ಬಲ ಪಡಿಸುತ್ತದೆ ಇದರಲ್ಲಿ ಇರುವ ಕರಿಮಣಿ ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ರಕ್ಷಣೆ ನೀಡುತ್ತದೆ ಮಂಗಳ ಸೂತ್ರದ ಹಳದಿ ದಾರ ತಾಯಿ ಪಾರ್ವತಿ ಹಾಗೂ ಕರಿ ಮಣಿ ಭಗವಂತ ಶಿವ ಎಂದು ನಂಬಲಾಗಿದೆ. ಶಿವನ ಕೃಪೆಯಿಂದ ಮಹಿಳೆ ಹಾಗೂ ಆಕೆ ಪತಿಯ ರಕ್ಷಣೆ ಆಗುತ್ತದೆ ತಾಯಿ ಪಾರ್ವತಿ ಕೃಪೆಯಿಂದ ವೈವಾಹಿಕ ಜೀವನ ಸುಖವಾಗಿ ಇರುತ್ತದೆ. ಮಂಗಳ ಸೂತ್ರವನ್ನು ಸ್ವತಃ ಖರೀದಿ ಮಾಡಿ ಇಲ್ಲವೇ ಪತಿಯಿಂದ ಸ್ವೀಕರಿಸಿ. ಬೇರೆಯವರ ಅಥವಾ ಬೇರೆಯವರು ನೋಡಿದ ಮಂಗಳ ಸೂತ್ರವನ್ನು ಧರಿಸಬೇಡಿ ಮಂಗಳ ಸೂತ್ರವನ್ನು ಮಂಗಳವಾರ ಖರೀದಿ ಮಾಡಬೇಡಿ.

Leave a Comment