ಸೆಲೆಬ್ರಿಟಿಗಳ ಲೈಫ್ ಸ್ಟೈಲ್ ತುಂಬಾನೇ ವಿಭಿನ್ನವಾಗಿರುತ್ತೆ. ಅವರು ಐಷಾರಾಮಿ ಮತ್ತು ಕಂಫರ್ಟ್ ಜೀವನವನ್ನು ಇಷ್ಟಪಡುತ್ತಾರೆ. ಆಕ್ಟರ್ ಗಳು ತಮ್ಮ ಮಕ್ಕಳಿಗೆ ಕೂಡ ಯಾವುದೇ ಕಷ್ಟಗಳು ಬರದಂತೆ ತುಂಬಾ ಸುಖಕರವಾದ ಮತ್ತು ಲಕ್ಸೂರಿಯಸ್ ಬದುಕನ್ನು ಕಟ್ಟಿಕೊಡುತ್ತಾರೆ. ಕೆಲವು ಸೆಲೆಬ್ರಿಟಿಗಳ ಮಕ್ಕಳಿಗಂತೂ ಬಡತನ ಅಂದರೆ ಏನು ಅಂತಲೇ ಗೊತ್ತಿಲ್ಲ. ಅಷ್ಟರ ಮಟ್ಟಿಗೆ ಅವರು ತಮ್ಮ ಶ್ರೀಮಂತಿಕೆಯ ಅಮಲಿನಲ್ಲಿ ಮುಳುಗಿರುತ್ತಾರೆ.
ದೊಡ್ಡ ದೊಡ್ಡ ನಟರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೋಸ್ಕರ ವಿದೇಶಕ್ಕೆ ಕಳಿಸಲು ತುಂಬಾ ಸಾಮಾನ್ಯ. ಸಾಮಾನ್ಯವಾಗಿ ಭಾರತದ ದೊಡ್ಡ ದೊಡ್ಡ ಸ್ಟಾರ್ ನಟರ ಮಕ್ಕಳು ವಿದ್ಯಾಭ್ಯಾಸಕ್ಕೋಸ್ಕರ ವಿದೇಶಕ್ಕೆ ಹೋಗ್ತಾರೆ ವಿದೇಶದಲ್ಲಿ ಡಿಗ್ರಿ ಪಡೆದು ಮತ್ತೆ ಭಾರತಕ್ಕೆ ಬಂದು ಬಿಸಿನೆಸ್ ಮಾಡುವುದು ಅಥವಾ ಸಿನಿಮಾಗಳಲ್ಲಿ ನಟನೆ ಮಾಡೋದು ಮಾಡುತ್ತಾರೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ವಿದೇಶಕ್ಕೆ ವಿದ್ಯಾಭ್ಯಾಸ ಕ್ಕೋಸ್ಕರ ಕಳಿಸೋದು ಯಾಕೆಂದರೆ ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತೆ ಅನ್ನೋ ಕಾರಣ ಅಲ್ಲ ಒಳ್ಳೆಯ ಲೈಫ್ ಟೈಮ್ ಸಿಗುತ್ತೆ ಅನ್ನೋ ಕಾರಣಕ್ಕೆ.
ಇದೀಗ ಮಹೇಶ್ ಬಾಬು ಅವರು ತಮ್ಮ ಮಗನನ್ನು ಲಂಡನ್ಗೆ ವಿದ್ಯಾಭ್ಯಾಸಕ್ಕಂತ ಕಳಿಸೋಕ್ಕೆ ಸಿದ್ಧರಾಗಿದ್ದಾರೆ. ಮಹೇಶ್ ಬಾಬು ನಮ್ಮ ಮಗನ ಹೆಸರು ಗೌತಮ್ ಈತನಿಗೆ ಹದಿನೈದು ವರ್ಷ. ಈಗಷ್ಟೆ ಹೈಸ್ಕೂಲ್ ಮುಗಿಸಿದ್ದಾನೆ. ಇದೀಗ ಕಾಲೇಜು ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೊರಡೋಕೆ ಗೌತಮ್ ಸಿದ್ಧನಾಗಿದ್ದಾನೆ. ಮಹೇಶ್ ಬಾಬು ಇದೀಗ ಲಂಡನ್ ಗೆ ಹೋಗಿ ತನ್ನ ಮಗನಿಗೆ ಒಳ್ಳೆಯ ಕಾಲೇಜನ್ನು ಹುಡುಕುತ್ತಿದ್ದಾರೆ. ಲಂಡನ್ ನ ಪ್ರಖ್ಯಾತ ಕಾಲೇಜ್ ಒಂದರಲ್ಲಿ ತನ್ನ ಮಗನಿಗೆ ಈಗಾಗಲೇ ಅಡ್ಮಿಷನ್ ಕೂಡ ಮಾಡಿಸಿದ್ದಾರೆ.
ಮುಂದಿನ ತಿಂಗಳು ಆಗಸ್ಟ್ ನಲ್ಲಿ ಮಹೇಶ್ ಬಾಬು ಮಗ ಗೌತಮ್ ಲಂಡನ್ ಗೆ ಹಾರಲಿದ್ದಾನೆ. ಮಹೇಶ್ ಬಾಬು ತನ್ನ ಕುಟುಂಬದ ಜೊತೆ ಲಂಡನ್ ಗೆ ಹೋಗಿ ಮಗನ ಕಾಲೇಜ್ ಅಡ್ಮಿಷನ್ ಮಾಡಿ ಇದೀಗ ಭಾರತಕ್ಕೆ ಹಿಂದಿರುಗಿದ್ದಾರೆ. ಆಗಸ್ಟ್ ಮೊದಲನೇ ವಾರದಲ್ಲಿ ಮಹೇಶ್ ಬಾಬು ಹುಟ್ಟುಹಬ್ಬವಿರುವುದರಿಂದ ಮಹೇಶ್ ಬಾಬು ಅವರ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಮತ್ತೆ ಮಹೇಶ್ ಬಾಬು ತನ್ನ ಮಗನನ್ನು ಲಂಡನ್ ಗೆ ಕಳುಹಿಸಲಿದ್ದಾರೆ. ಲಂಡನ್ ನಲ್ಲಿ ಕಾಲೇಜ್ ವಿದ್ಯಾಭ್ಯಾಸ ಮಾಡುವುದೆಂದರೆ ತಮಾಷೆ ವಿಷಯವಲ್ಲ ಇಲ್ಲಿ ಸಾವಿರಾರು ಡಾಲರ್ಗ ಟ್ಟಲೆ ಹಣವನ್ನು ವರ್ಷಕ್ಕೆ ಕೊಡಬೇಕಾಗುತ್ತೆ.
ಪ್ರಖ್ಯಾತ ಮತ್ತು ಪ್ರಸಿದ್ಧ ಲಂಡನ್ ಕಾಲೇಜಿನಲ್ಲಿ ಅಡ್ಮಿಷನ್ ಬೇಕೆಂದರೆ ವರ್ಷಕ್ಕೆ ಹತ್ತರಿಂದ ಇಪ್ಪತ್ತು ಸಾವಿರ ಡಾಲರ್ ಗಳ ವರೆಗೂ ಖರ್ಚಾಗುತ್ತದೆ ಅಂದರೆ ಮಹೇಶ್ ಬಾಬು ಅವರು ಪ್ರತಿ ವರ್ಷಕ್ಕೆ ತನ್ನ ಮಗನಿಗೆ ಹತ್ತರಿಂದ ಇಪ್ಪತ್ತು ಲಕ್ಷ ರೂಪಾಯಿಗಳನ್ನು ಕೇವಲ ಕಾಲೇಜ್ ಅಡ್ಮಿಷನ್ ಗೆ ಕೊಡಬೇಕಾಗುತ್ತದೆ. ಇನ್ನು ಹಾಸ್ಟೆಲ್ ತಿಂಡಿ ಇತ್ಯಾದಿಗಳ ಖರ್ಚು ಎಲ್ಲವನ್ನೂ ಸೇರಿಸಿದರೆ ವರ್ಷಕ್ಕೆ 25 ಲಕ್ಷ ರೂಪಾಯಿಗಳು ಬೇಕೇ ಬೇಕು. 250 ಕೋಟಿ ಆಸ್ತಿ ಮೌಲ್ಯ ಇರುವ ಮಹೇಶ್ ಬಾಬುಗೆ ಇಪ್ಪತ್ತು ಲಕ್ಷ ರೂಪಾಯಿಗಳು ವರ್ಷಕ್ಕೆ ಯಾವ ಲೆಕ್ಕ ಹೇಳಿ.
ಅಲ್ಲದೆ ಮಹೇಶ್ ಬಾಬು ಅವರು ಹುಟ್ಟಿನಿಂದಲೇ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದವರು. ಮಹೇಶ್ ಬಾಬು ಅವರ ತಂದೆ ಕೃಷ್ಣ ಅವರು ಸಿನಿಮಾ ರಂಗದಲ್ಲಿ ಹೆಸರು ಮಾಡಿ ಒಳ್ಳೆಯ ಆಸ್ತಿಯನ್ನು ಕೂಡ ಮಾಡಿದ್ದರು. ಒಟ್ಟಿನಲ್ಲಿ ಮಹೇಶ್ ಬಾಬು ಅವರ ಮನೆತನವು ತುಂಬಾ ಹಳೆಯ ಕಾಲದಿಂದಲೂ ಸಿರಿವಂತರೇ. ಮಹೇಶ್ ಬಾಬು ಅವರ ಅಣ್ಣ ನರೇಶ್ ಬಾಬು ಅವರ ಬಗ್ಗೆ ನೀವೆಲ್ಲಾ ಇತ್ತೀಚೆಗೆ ಕೇಳಿದ್ದೀರಿ. ಮಹೇಶ್ ಬಾಬು ಅವರ ಅಣ್ಣ ನರೇಶ್ ಅವರ ಬಳಿಯೇ 6 ಸಾವಿರ ಕೋಟಿ ರೂಪಾಯಿಗಳ ಆಸ್ತಿ ಇದೆ.