ಮನೆಯಲ್ಲಿಯೇ ಸಾಮಾನ್ಯವಾಗಿ ಕಾಡುವಂತ ಸಾವಿರಾರು ದೈಹಿಕ ಸಮಸ್ಯೆಗಳಿಗೆ ಸಾವಿರಾರು ಮನೆಮದ್ದುಗಳಿವೆ ಆದ್ರೆ ಅವುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಂಡು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ, ಅದೇ ನಿಟ್ಟಿನಲ್ಲಿ ಚೇಳು ಕುಟುಕಿದರೆ ತಕ್ಷಣ ಏನು ಮಾಡಬೇಕು ಅನ್ನೋದನ್ನ ಈ ಮೂಲಕ ತಿಳಿಯುವದಾದರೆ ಹೆಚ್ಚು ಭಯಪಡುವ ಅವಶ್ಯಕತೆ ಏನು ಇಲ್ಲ ಮನೆಯಲ್ಲಿಯೇ ಇರುವಂತ ಇವುಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು. ನಿಂಬೆರಸದಲ್ಲಿ ಒಂದೆರಡು ಕರಿಮೆಣಸಿನ ಕಾಳನ್ನು ಅರೆದು, ಚೇಳು ಕಚ್ಚಿದ ಭಾಗಕ್ಕೆ ಲೇಪಿಸುವುದರಿಂದ ಚೇಳಿನ ವಿಷ ಪರಿಹಾರವಾಗುತ್ತದೆ.
ಮೂಗಿನ ರಕ್ತಸ್ರಾವ ನಿವಾರಿಸುವ ಮನೆಮದ್ದು: ೧೦ ಗ್ರಾಂ ನಷ್ಟು ನಿಂಬೆ ಗಿಡದ ಬೇರು ಹಾಗೂ ೧೦ ಗ್ರಾಂ ನಷ್ಟು ನಿಂಬೆ ಹೂವನ್ನು ಅಕ್ಕಿ ತೊಳೆದ ಎರಡನೆಯ ನೀರಿನಲ್ಲಿ ಅರೆದು, ಸೋಸಿ ಕುಡಿದರೆ ಮೂಗಿನಲ್ಲಿ ರಕ್ತ ಸ್ರಾವ ಆಗುತ್ತಿರುವುದು ನಿಲ್ಲುತ್ತದೆ ಇದನ್ನು ಒಂದರಿಂದ ಎರಡು ವಾರಗಳ ಕಾಲ ಮಾಡಿದರೆ ಪರಿಹಾರವಿದೆ. ಇನ್ನು ಬಾಯಿಯ ಒಸಡುಗಳು ಗಟ್ಟಿಯಾಗಲು ಆಗಾಗ ಬಿಸಿನೀರಲ್ಲಿ ನಿಂಬೆ ರಸ ಬೆರಸಿ ಕುಡಿಯಬೇಕು ಹಾಗೂ ಸ್ವಲ್ಪ ಹೊತ್ತು ಬಾಯಲ್ಲಿಟ್ಟು ಮುಕ್ಕಳಿಸಬೇಕು, ಇದರಿಂದ ಒಸಡುಗಳು ಗಟ್ಟಿಯಾಗುತ್ತದೆ.
ಕಣ್ಣಿನ ಉರಿ ನಿವಾರಿಸುವ ಮನೆಮದ್ದು: ನಿಂಬೆ ಹೂವು ಹಾಗೂ ದಾಳಿಂಬೆಯ ಚಿಗರನ್ನು ಒಟ್ಟಿಗೆ ನೀರಿನಲ್ಲಿ ಅರೆದು ಕಣ್ಣಿಗೆ ಕಾಡಿಗೆಯಂತೆ ಅಂಜನ ಹಾಕಿದರೆ ಕಣ್ಣಿನ ಉರಿ ನೋವು ಶಮವಾಗುತ್ತದೆ. ಇನ್ನು ಅಜೀರ್ಣತೆ ಸಮಸ್ಯೆ ನಿವಾರಿಸುವ ನಿಂಬೆ ಮನೆಮದ್ದು ಆರು ಚಮಚದಷ್ಟು ನಿಂಬೆ ರಸ, ಮೂರೂ ಚಮಚದಷ್ಟು ಶುಂಠಿ ರಸ ಮೂರೂ ಚಮಚದಷ್ಟು ಜೇನು ಇವನ್ನು ಬೆರಸಿ ಪ್ರತಿನಿತ್ಯ ಬೆಳಗ್ಗೆ ಒಂದು ವಾರ ಕಾಲ ಸೇವಿಸಿದರೆ ಅಜೀರ್ಣದ ತೊಂದರೆ ಶಮನ ವಾಗುವುದು ಇದನ್ನು ಸೇವಿಸಿದ ನಂತರ ಒಂದು ಗಂಟೆ ಆಹಾರ ತಗೆದುಕೊಳ್ಳಬೇಕು.