ಕೊಲ್ಲಾಪುರ ಮಹಾಲಕ್ಷ್ಮಿ ದೇವಿಯ ಮಹಿಮೆಯನ್ನೊಮ್ಮೆ ಓದಿ..

ನಮ್ಮ ಭಾರತ ದೇಗುಲಗಳ ಬೀಡಾಗಿದೆ. ವಿಶಿಷ್ಟ ದೇವಾಲಯಗಳ ನಾಡಾಗಿದೆ. ಇಂತಹ ವಿಶಿಷ್ಟ, ವಿಶೇಷವಾದ ದೇವಾಲಯವೆ ಕೊಲ್ಲಾಪುರದ ಮಹಾಲಕ್ಷ್ಮಿ. ಇವತ್ತು ಈ ಲೇಖನದಲ್ಲಿ ಕೊಳ್ಳಪ್ರ ಎಲ್ಲಿದೆ ಅಲ್ಲಿಗೆ ಹೋಗೋದು ಹೇಗೆ, ಕೊಲ್ಲಾಪುರದಲ್ಲಿ ಇರುವಂತಹ ಪ್ರವಾಸಿ ಸ್ಥಳಗಳು ಯಾವುದು ಕೊಲ್ಲಾಪುರದಲ್ಲಿ ಉಳಿಯೋಕೆ ಏನೇನು ವ್ಯವಸ್ಥೆ ಇದೆ ಏನೇನು ಸಿಗತ್ತೆ? ಎನ್ನುವುದರ ಬಗ್ಗೆ ಸಂಪೂರ್ಣ ಸಮಗ್ರ ಮಾಹಿತಿ ಈ ಲೇಖನದಲ್ಲಿ.

ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನ ಇದು ಮಹಾ ವಿಷ್ಣುವಿನ ಪತ್ನಿ ಮಹಾಲಕ್ಷ್ಮಿ ನೆಲೆಸಿರುವ ಶಾಶ್ವತ ನಿಲಯ ಆಗಿದೆ. ಈ ದೇವಸ್ಥಾನ ಪುರಾತನ ಹಾಗೂ ಸನಾತನ ಹಿಂದೂ ದೇವಾಲಯ ಆಗಿದೆ. ಈ ಅದ್ಭುತ ಆಲಯವು ೧೦೮ ಶಕ್ತಿ ಪೀಠಗಳಲ್ಲಿ ಅದ್ಭುತವಾದ ಶಕ್ತಿ ಪೀಠ ಆಗಿದೆ. ದಕ್ಷ ಯಜ್ಞ ಮಾಡುವ ಸಮಯದಲ್ಲಿ ಸತಿ ದೇವಿಯ ದೇಹವನ್ನು ಮಹಾ ವಿಷ್ಣುವು ೧೦೮ ಭಾಗಗಳನ್ನಾಗಿ ಮಾಡಿ ಭೂಮಿಗೆ ಎಸೆದಾಗ ನಯನವು ಬಿದ್ದ ಈ ಸ್ಥಳವೇ ಕೊಲ್ಹಾಪುರದ ಮಹಾಲಕ್ಷ್ಮಿಯ ಶಕ್ತಿ ಪೀಠವಾಯಿತು. ಈ ಅದ್ಭುತ ಆಲಯವು ಕೊಲ್ಹಾಪುರ ನಗರದ ಹೃದಯ ಭಾಗವಾದ ಪಂಚಗಂಗಾ ನದಿಯ ತೀರದಲ್ಲಿದೆ.

ಭಾರತದಲ್ಲಿ ಐಶ್ವರ್ಯ ಮತ್ತು ಸಂಪತ್ತಿನ ದೇವತೆಯಾಗಿ ಆರಾಧಿಸಲ್ಪಡುವ ದೇವತೆಯೇ ಕೊಲ್ಹಾಪುರದ ಮಹಾಲಕ್ಷ್ಮಿ ದೇವಿ. ಕೊಲ್ಲಾಪುರ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿ ಭಾಗದಲ್ಲಿ ಇರುವ ಒಂದು ಅದ್ಭುತವಾದ ಪಟ್ಟಣವಾಗಿದೆ. ಹಾಗಾಗಿ ಕರ್ನಾಟಕದಲ್ಲಿಯೂ ಕೂಡ ಅನೇಕ ಭಕ್ತರು ಕೊಲ್ಲಾಪುರದ ಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ ಮತ್ತು ಆರಾಧಿಸುತ್ತಾರೆ. ಕರ್ನಾಟಕದ ಅನೆಗ ಜಾಗಗಳಿಂದ ಕೊಲ್ಲಾಪುರಕ್ಕೆ ಹಲವಾರು ಮಾರ್ಗಗಳು ಇವೆ. ರೈಲು, ವಿಮಾನ ಹಾಗೂ ಬಸ್ಸುಗಳ ಮೂಲಕವೂ ನೀವು ಕೊಲ್ಲಾಪುರವನ್ನು ತಲುಪಬಹುದು. ಕೊಲ್ಲಾಪುರ ಕರ್ನಾಟಕದ ರಾಜದಾನಿ ಬೆಂಗಳೂರಿನಿಂದ ಸುಮಾರು ೬೧೬km ದೂರದಲ್ಲಿದ್ದರೇ, ಕಲಬುರ್ಗಿ ಇಂದ ೩೨೩ km ದೂರದಲ್ಲಿದೆ. ಹುಬ್ಬಳ್ಳಿ ಧಾರವಾಡದಿಂದ ೨೦೧ km ದೂರದಲ್ಲಿದೆ. ವಿಮಾನ ಮಾರ್ಗದಲ್ಲಿ ಕೂಡ ನೀವು ಕೊಲ್ಲಾಪುರ ತಲುಪಬಹುದು. ಪ್ರತೀ ವರ್ಷ ಇಲ್ಲಿ ಮಾತೆಯ ಆಶೀರ್ವಾದ ಪಡೆಯಲು ಲಕ್ಷಾಂತರ ಜನರು ಸಾಗರೋಪಾದಿಯಲ್ಲಿ ಕೊಲ್ಲಾಪುರಕ್ಕೆ ಬರುತ್ತಾರೆ. ಭಕ್ತಾದಿಗಳಿಗೆ ಮಹಾಲಕ್ಷ್ಮಿ ದೇವಿಯು ಭಕ್ತಾದಿಗಳಿಗೆ ಅಂಬಾ ಬಾಯಿ ಎಂದೇ ಜನಪ್ರಿಯ ಆಗಿದ್ದಾಳೆ. ಈ ಮಹಾಲಕ್ಷ್ಮಿಯ ದೇವಸ್ಥಾನದಿಂದಾಗಿ ಕೊಲ್ಲಾಪುರವು ಭಾರತದಲ್ಲಿಯ ಕೆಲವೇ ಕೆಲವು ಉಚ್ಚ ಮಟ್ಟದ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ.

ಈ ಆಕರ್ಷಕ ದೇವಾಲಯವು ಏಳನೇ ಶತಮಾನದ್ದಾಗಿದ್ದು ಚಾಲುಕ್ಯ ವಂಶದ ಕರ್ಣ ದೇವ ರಾಜನಿಂದ ನಿರ್ಮಿಸಲ್ಪಟ್ಟಿದೆ. ಈ ದೇವಾಲಯದ ಒಂದು ವಿಸ್ಮಯ ಎಂದರೆ, ಪ್ರತೀ ದಿನವೂ ಇಲ್ಲಿ ಸೂರ್ಯನ ಕಿರಣ ದೇವಿಯ ಮೇಲೆ ಬಿದ್ದು ದೇವಿಯ ಮೂರ್ತಿ ಹೊಳೆಯುವಂತೆ ಮಾಡುತ್ತದೆ. ನವರಾತ್ರಿ ಅಂತಹ ಹಬ್ಬಗಳಲ್ಲಿ ಸ್ಥಳೀಯರು ಅಲ್ಲದೇ ವಿದೇಶಗಳಿಂದಲೂ ಸಹ ಅಸಂಖ್ಯಾತ ಭಕ್ತರು ಮುಗಿ ಬಿದ್ದು ಅಂಬಾ ದೇವಿಯ ದರ್ಶನ ಪಡೆಯಲು ಬರುತ್ತಾರೆ. ಈ ಸಮಯದಲ್ಲಿ ದೇವಸ್ಥಾನವು ಎದ್ದು ಕಾಣುವ ಬಣ್ಣಗಳಿಂದ ಅಲಂಕೃತಗೊಂಡು ಸಂಗೀತಮಯ ವಾತಾವರಣದಿಂದ ಕೂಡಿರುತ್ತದೆ. ಪುರಾಣಗಳ ಪ್ರಕಾರ ದೇವಿ ಮಹಾಲಕ್ಷ್ಮಿಯ ಕೊಲ್ಲಾಸುರ ಎಂಬ ರಾಕ್ಷಸನನ್ನು ಕೊಂದು ಅಲ್ಲಿಯೇ ನೆಲೆ ನಿಂತಳು ಎಂದು ಪ್ರತೀತಿ ಇದೆ. ಪ್ರಳಯದ ಕಾಲದಲ್ಲಿ ಶಿವನು ಕಾಶಿ ಕ್ಷೇತ್ರವನ್ನು ಕಾಪಾಡಿದ ಹಾಗೆ ತಾಯಿ ಮಹಾಲಕ್ಷ್ಮಿಯು ತನ್ನ ಕರಗಳಿಂದ ಕೊಲ್ಲಾಪುರವನ್ನು ಎತ್ತಿ ಹಿಡಿದು ಕಾಪಡಿದ್ದಳಂತೆ. ಆದ್ದರಿಂದ ಈ ಕ್ಷೇತ್ರವನ್ನು ಕರವೀರ ಕ್ಷೇತ್ರ ಎಂದು ಸಹ ಕರೆಯುತ್ತಾರೆ.

ಶಿವ ಭಕ್ತರಾದ ಅಗಸ್ತ್ಯರು ಕಾಶಿ ಕ್ಷೇತ್ರಕ್ಕೆ ಸಮವಾದ ಇನ್ನೊಂದು ಸ್ಥಳವನ್ನು ಸೂಚಿಸಲು ಪರಶಿವನು ಹೇಳಿದಾಗ ಪರಶಿವನು ಕೊಲ್ಲಾಪುರ ವನ್ನು ಸುಚಿಸಿದನಂತೆ. ಕೊಲ್ಲಾಪುರ ಮಹಾಲಕ್ಷ್ಮಿಯ ದರ್ಶನವು ಕಾಶಿ ಕ್ಷೇತ್ರದ ಮಹಾಶಿವನ ದರ್ಶನಕ್ಕೆ ಸಮವಾಗಿದೆ. ಕೊಲ್ಲಾಪುರ ದೇವಿಗೆ ದಿನಕ್ಕೆ ಐದು ಬಾರಿ ಪೂಜೆ ನಡೆಯುತ್ತದೆ. ಹಾಗೆ ಹುಣ್ಣಿಮೆ ಮತ್ತು ಶುಕ್ರವಾರ ಹಾಗೂ ವಿಶೇಷ ದಿನಗಳಂದು ದೇವಿಯ ವಿಶೇಷ ಪೂಜೆಗಳು ಹಾಗೂ ದೇವಿಯ ಉತ್ಸವ ಕೂಡ ನಡೆಯುತ್ತದೆ. ಐದು ಬಾರಿ ಆರತಿ ಮಾಡುವ ದೇಗುಲ ಇದಾಗಿದೆ. ಜೊತೆಗೆ ಮಟ್ಟ ಮಧ್ಯಾಹ್ನದ ೧೨ ಗಂಟೆ ಸಮಯದಲ್ಲಿ ಮಂಗಳಾರತಿ ನಡೆಯುವುದು ಈ ಒಂದು ವಿಶೇಷ ದೇವಸ್ಥಾನದಲ್ಲಿ ಮಾತ್ರ ಆಗಿದೆ. ದೇವಾಲಯದ ಮುಖ್ಯ ದ್ವಾರ ಪಶ್ಚಿಮ ದಿಕ್ಕಿನಲ್ಲಿ ಇದೆ ಎದುರಿಗೆ ಮರದ ಕಂಬಗಳ ಗರುಡ ಮಂಟಪವಿದೆ ಹಾಗೂ ನಂತರದ ಕಲ್ಲಿನ ಮಂಟಪದಲ್ಲಿ ಗಣೇಶ ಕೂಡ ಇದ್ದಾನೆ. ನಂತರ ವಿಶಾಲವಾದ ಪ್ರಾಂಗಣ, ಅದರ ನಂತರ ಗರ್ಭ ಗುಡಿಯಲ್ಲಿ ಮಹಾಲಕ್ಷ್ಮಿ ಅಮ್ಮನವರು. ಪಶ್ಚಿಮಾಭಿ ಮುಖವಾಗಿ ಕುಳಿತು ಅಮ್ಮ ದರ್ಶನ ನೀಡುತ್ತಾಳೆ. ಗರ್ಭ ಗುಡಿಯಲ್ಲಿ ಸುಮಾರು ೬ ಅಡಿ ಎತ್ತರದ ವೇದಿಕೆ, ವೇದಿಕೆಯ ಮೇಲೆ ಎರಡು ಅಡಿ ಎತ್ತರದ ಪೀಠ ಹಾಗೂ ಆ ಪೀಠದ ಮೇಲೆ ಮೂರು ಅಡಿ ಎತ್ತರದ ಮಹಾಲಕ್ಷ್ಮಿ ಅಮ್ಮನವರ ವಿಗ್ರಹ ತುಂಬಾ ಅಂದವಾಗಿಯು ಆಕರ್ಷಕವಾಗಿಯು ಇದೆ. ಈ ವಿಗ್ರಹ ೫ ರಿಂದ ಆರು ಸಾವಿರ ಹಳೆಯ ಪುರಾತನ ವಿಗ್ರಹ ಆಗಿದ್ದು ೪೦ ಕೆಜಿ ತೂಕವನ್ನು ಹೊಂದಿದೆ. ಇವಿಷ್ಟು ಕೊಲ್ಲಾಪುರದ ಮಹಾಲಕ್ಷ್ಮಿ ದೇವಿಯ ಬಗ್ಗೆ ಪುಟ್ಟದಾದ ವಿವರಣೆ.

Leave a Comment