ದೇಹಕ್ಕೆ ಬಿಳಿ ರಕ್ತಕಣಗಳನ್ನು ಹೆಚ್ಚಿಸುವ ಜೊತೆಗೆ ಹತ್ತಾರು ಲಾಭ ನೀಡುವ ಕಿವಿಹಣ್ಣು

ಕಿವಿಹಣ್ಣು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕಿವಿ ಹಣ್ಣು ತಿನ್ನಲು ಎಷ್ಟು ರುಚಿಯೋ ಅದರಿಂದ ನಮ್ಮ ದೇಹಕ್ಕೆ ಕೂಡ ಅಷ್ಟೆ ಪ್ರಯೋಜನ ಕಾರಿಯಾದ ಅಂಶಗಳು ಅದರಲ್ಲಿ ಅಡಗಿವೆ. ಹಾಗಿದ್ರೆ ನಮ್ಮ ದೇಹಕ್ಕೆ ಉಪಯೋಗ ಆಗಿರುವಂತಹ ಈ ಕಿವಿ ಹಣ್ಣಿನಿಂದ ನಮಗೆ ಏನೆಲ್ಲಾ ಉಪಯೋಗ ಇದೆ ಅನ್ನೋದನ್ನ ನೋಡೋಣ ಬನ್ನಿ.

ಕಿವಿ ಹಣ್ಣು ಸುಮಾರು ಚಿಕ್ಕುಹಣ್ಣಿನ ಹೋಲಿಕೆಯಲ್ಲೇ ಇರುತ್ತದೆ. ಇದು ಬಹಳ ದುಬಾರಿ ಆದರೆ ಇದರ ಪ್ರಯೋಜನ ಬಹಳ. ಇದು ಸ್ವಲ್ಪ ಸಿಹಿ ಸ್ವಲ್ಪ ಹುಳಿಯಾಗಿರುತ್ತೆ. ಇದರಲ್ಲಿ ಸಿ ವಿಟಮಿನ್ ಹೇರಳವಾಗಿರುತ್ತದೆ . ಹಾಗೆಯೇ ವಿಟಮಿನ್ ಎ, ಎಫ್, ಜಿ ಕೂಡ ಇರುತ್ತದೆ.

ಇದನ್ನ ದಿನ ತಿನ್ನೋದ್ರಿಂದ ದೇಹದಲ್ಲಿ ಎಚ್.ಡಿ.ಎಲ್ ಕೊಲೆಸ್ಟ್ರಾಲ್ ಹೆಚ್ಚು ಆಗುತ್ತದೆ. ಎಲ್ ಡಿ ಎಲ್ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ಹ್ರದಯ ಸಂಬಂಧಿತ ಕಾಯಿಲೆಗಳನ್ನು ದೂರವಿಡಬಹುದಾಗಿದೆ. ಬಿಪಿ,ಶುಗರ್ ಸಹ ನಿಯಂತ್ರಣದಲ್ಲಿರುತ್ತದೆ. ಆರ್ಥ ರೈಟಿಸನ್ನು ದೂರವಿಡುತ್ತದೆ. ನಿದ್ರೆ ಸಮಸ್ಯೆಯಿಂದ ಕೂಡಾ ಮುಕ್ತಿ ಹೊಂದಬಹುದು. ಕಣ್ಣಿನ ದ್ರಷ್ಟಿಯನ್ನು ಚುರುಕುಗೊಳಿಸುತ್ತದೆ.

ದಿನಾಲೂ ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಡೆಂಗ್ಯೂ, ಚಿಕನ್ ಗುನ್ಯ ಆದಾಗ ಇದು ಬಿಳಿ ರಕ್ತಕಣಗಳು ಹೆಚ್ಚಿಸಲು ಸಹಾಯಕಾರಿ. ಹಾಗಾಗಿ ವಾರಕ್ಕೆ ಒಂದು ಬಾರಿಯಾದರೂ ಈ ಕಿವಿ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು.

Leave a Comment