ಬೆಟ್ಟದಿಂದ ಜಿಗಿದು ಸಾ’ಯು’ತ್ತೇನೆ ಎಂದು ಹೊರಟ ಹುಡುಗಿಯ ಮನ: ಪರಿವರ್ತಿಸಿದ ಪೊಲೀಸ್ ಅಧಿಕಾರಿ! ಹೇಗೆ ಗೊತ್ತಾ ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ

ಜೀವನದಲ್ಲಿ ಏನನ್ನೋ ಕಳೆದುಕೊಂಡ ಹುಡುಗಿಯೊಬ್ಬಳು ಸಾಯಲು ಹೊರಟು ಮತ್ತೆ ಅವಳನ್ನು ಮನ:ಪರಿವರ್ತಿಸಿ ಪೊಲೀಸ್ ಇನ್ಸೆಕ್ಟರ್ ಹಿಂತಿರುಗಿ ಕರೆದುಕೊಂಡ ಬಂದ ಘಟನೆ ಕೇರಳದಲ್ಲಿ ನಡೆದಿದೆ. ಸಿನಿಮಾ ಶೈಲಿಯಲ್ಲಿ ಘಟನೆ ಸುಖಾಂತ್ಯವಾಗಿದೆ. ಇಲ್ಲಿದೆ ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ.

ಇಂದು ಸಾಕಷ್ಟು ಯುವಜನತೆ ತಪ್ಪುದಾರಿಯನ್ನ ಹಿಡಿಯುವುದು ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಕಾಮನ್ ಆಗಿದೆ. ವಿದ್ಯೆ ಬುದ್ದಿ ಇದ್ರೂ ಯವುದೊ ಒಂದು ಹಂತದಲ್ಲಿ ಜೀವವನ್ನೇ ಕಳೆದುಕೊಳ್ಳುವ ನಿರ್ಧಾರ ಮಾಡಿಬಿಡುತ್ತಾರೆ. ಹೀಗೆ ಸಾಯಲು ಹೊರಟ ಯುವತಿ ಕೇರಳ ಮೂಲದ ಇಡುಕ್ಕಿಯ ಆದಿಮಲಿ ಸಮೀಪದ ಕುತಿರಾಲಂ ಕುಡಿ ನಿವಾಸಿ. ಈಕೆ ಕಾಲಿಗೆ ಚಪ್ಪಲಿಯನ್ನೂ ಹಾಕದೇ ಜೋರಾಗಿ ಅಳುತ್ತಾ ಬೆಟ್ಟದ ತುದಿಗೆ ಹೋಗುತಿರುವುದನ್ನು ದಾರಿಹೋಕರು ನೋಡಿದ್ದಾರೆ. ಇದರಿಂದ ಅನುಮಾನ ಬಂದ ಅವರು ಕೂಡಲೇ ಪೋಲೀಸರಿಗೆ ಕಂಪ್ಲೆಂಟ್ ನೀಡಿದ್ದಾರೆ.

ಕಂಪ್ಲೇಂಟ್ ಬರೆಸಿಕೊಂಡ ಠಾಣಾಧಿಕಾರಿ ಸುಧೀರ್ ಕೂಡಲೇ ಪೋಲಿಸ್ ಇನ್ಸಪೆಕ್ಟರ್ ಸಂತೋಷ್ ಅವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಸಂತೋಷ್ ಅವರು ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿಗಳನ್ನೂ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ. ಅದರೆ ಅದಕ್ಕೂ ಮೊದಲು ಆ ಹುಡುಗಿಯಿದ್ದ ಜಾಗಕ್ಕೆ ತಾವೇ ಧಾವಿಸಿದ್ದಾರೆ. ಇಪ್ಪತ್ತು ವರ್ಷದ ಆ ಹುಡುಗಿ ಬೆಟ್ಟದ ತುದಿಯನ್ನ ಏರಿದ್ದಳು. ಅಕೆಯ ಹಿಂದೆಯೇ ಹೋದ ಸಂತೋಷ್ ನಿಲ್ಲುವಂತೆ ಹುಡುಗಿಯನ್ನು ಕೂಗಿದ್ದಾರೆ. ತನ್ನನು ರಕ್ಷಣೆ ಮಾಡಬಹುದು ಎನ್ನುವ ಕಾರಣಕ್ಕೆ ಹುಡುಗಿ ಇನ್ನಷ್ಟು ವೇಗವಾಗಿ ಮೇಲೆ ಹತ್ತಿದ್ದಾಳೆ. ಆದರೆ ಕೊನೆಗೆ ಸಂತೋಷ್ ಅವರ ಒಂದು ಮಾತು ಅವಳು ಒಂದು ಹೆಜ್ಜೆಯನ್ನೂ ಮುಂದೆ ಇಡದಂತೆ ಕಟ್ಟಿಹಾಕಿತ್ತು!

ಹೌದು ಪೋಲಿಸ್ ಅಧಿಕಾರಿ ಕೊನೆಗೂ ಆಕೆಯ ಮನಃ ಪರಿವರ್ತನೆ ಮಾಡುವಲ್ಲಿ ಸಕ್ಸೆಸ್ ಆಗಿದ್ದಾರೆ. ’ತಾನೂ ಎರಡು ಹೆಣ್ಣುವಕ್ಕಳ ತಂದೆ. ಅವರು ಏನಾದರೂ ಮಾಡಿಕೊಂಡರೆ ಅವರ ಅಪ್ಪನಾದ ನನ್ನ ಸ್ಥಿತಿ ಹೇಗಿರಬಹುದು ಊಹಿಸು. ಹಗೆಯೇ ನಿನಗೆ ಏನಾದರೂ ಆದರೆ ನಿನ್ನ ತಂದೆ ತಾಯಿಯ ಗತಿಯೇನು. ಜೀವನದಲ್ಲಿ ಸಮಸ್ಯೆಗೆ ಒಂದಲ್ಲಾಒಂದು ಪರಿಹರ ಇದ್ದೇ ಇರುತ್ತದೆ. ನಾನು ನನ್ನ ಮಕ್ಕಳಿಗೂ ಇದನ್ನೇ ಹೇಳಿಕೊಟ್ಟಿದ್ದೇನೆ. ನೀನು ಸತ್ತರೆ ಯಾರಿಗೆ ಏನು ಪ್ರಯೋಜನ? ನಿನಗೆ ಮೋಸ ಮಾಡಿದವರು ಸುಖವಾಗಿ ಇರುತ್ತಾರೆ, ಇದರಿಂದ ಅವರು ಗೆಲ್ಲುತ್ತಾರೆ, ನೀನು ಸೋಲುತ್ತಿ’ ಎಂದು ಬುದ್ಧಿವಾದ ಹೇಳಿದ್ದಾರೆ ಪೋಲಿಸ್ ಇನ್ಪೆಕ್ಟರ್!

ಇಷ್ಟು ವರ್ಷ ಪ್ರೀತಿಸಿದ ಹುಡುಗ ತನಗೆ ಮೋಸ ಮಾಡಿದ ಎನ್ನುವ ಕಾರಣಕ್ಕೆ ಆ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಕೊನೆಗೂ ಆಕೆ ಸಂತೋಷ್ ಅವರ ಮಾತಿಗೆ ಬೆಲೆ ಕೊಟ್ಟು ಸಾಯದೇ ಬದುಕುವ ನಿರ್ಧಾರ ಮಾಡಿದ್ದಾಳೆ. ಒಬ್ಬ ಹುಡುಗಿಯ ಪ್ರಾಣವನ್ನು ಕೇವಲ ಮಾತಿನಿಂದಲೇ ಅವಳನ್ನು ಪರಿವರ್ತಿಸಿ ಕರೆದುಕೊಂಡು ಬಂದ ಇನ್ಸೆಕ್ಟರ್ ಬಗ್ಗೆ ಕೇರಳ ತುಂಬೆಲ್ಲಾ ಪ್ರಶಂಸೆಯ ಮಾತುಗಳನ್ನಾಡುತ್ತಿದ್ದಾರೆ. ರಾಜ್ಯಾದ್ಯಂತ ಇವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಲೇಖನಗಳನ್ನೂ ಪ್ರಕಟಿಸಲಾಗಿದೆ. ಪೋಲಿಸರಲ್ಲಿಯೂ ಸಹೃದಯಿಗಳು ಇರುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ!

Leave a Comment