ಭಾರತ ದೇಶಕ್ಕೆ ತಾಕತ್ತು ಇಲ್ಲ ಎಂದು ಹೇಳಿದ್ದ ಈ ಯುವಕನ ಪಾಡು ಈಗ ಹೇಗಾಗಿದೆ ಗೊತ್ತಾ

ಉಕ್ರೇನ್ ಮತ್ತು ರಷ್ಯಾ ದೇಶಗಳ ನಡುವೆ ಮಹಾಯುದ್ಧ ನಡೆಯುತ್ತಿದೆ ಇಂತಹ ಸಂದರ್ಭದಲ್ಲಿ ಉಕ್ರೇನ್ ದೇಶದ ವಾತಾವರಣ ತುಂಬ ಹದಗೆಟ್ಟಿರುವುದು ನಮಗೆಲ್ಲಾ ಗೊತ್ತೇ ಇದೆ. ಇಂತಹ ಸಮಯದಲ್ಲಿ ಉಕ್ರೇನ್ ದೇಶದಲ್ಲಿರುವ ವಿದೇಶಿಗರು ತಮ್ಮ ಜೀವವನ್ನು ಕಾಪಾಡಿ ಕೊಂಡರೆ ಸಾಕು ಎಂದು ತಮ್ಮ ತಮ್ಮ ದೇಶಗಳಿಗೆ ಪರಾರಿಯಾಗುತ್ತಿದ್ದಾರೆ. ಉಕ್ರೇನ್ ದೇಶದಲ್ಲಿ ಇಪ್ಪತ್ತು ಸಾವಿರ ಭಾರತೀಯರು ವಾಸ ಮಾಡುತ್ತಿದ್ದಾರೆ.

ಉಕ್ರೇನ್ ದೇಶದಲ್ಲಿ ವಾಸ ಮಾಡುತ್ತಿರುವ ಇಪ್ಪತ್ತು ಸಾವಿರ ಭಾರತೀಯರಲ್ಲಿ ಸುಮಾರು ಹದಿನಾಲ್ಕು ಸಾವಿರ ಭಾರತೀಯರು ವಿದ್ಯಾರ್ಥಿಗಳೇ ಆಗಿದ್ದಾರೆ. ಅದರಲ್ಲೂ ವಿಶೇಷವಾಗಿ ವೈದ್ಯಕೀಯ ಶಿಕ್ಷಣ ಪಡೆಯಲು ಭಾರತೀಯರು ಹೆಚ್ಚಾಗಿ ಉಕ್ರೇನ್ ಗೆ ಹೋಗಿದ್ದಾರೆ. ಓದಿ ವಿದ್ಯಾವಂತ ರಾಗಬೇಕು ಎಂಬ ಕನಸನ್ನು ಸಾಕಾರಗೊಳಿಸಲು ನಮ್ಮ ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗಿ ರುವ ವಿದ್ಯಾರ್ಥಿಗಳಿಗೆ ಇದೀಗ ದೊಡ್ಡ ಸಂಕಟ ಎದುರಾಗಿದೆ. ಉಕ್ರೇನ್ ದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ಹಿಂತಿರುಗಿ ಬರಲು ಹರಸಾಹಸಪಡುತ್ತಿದ್ದಾರೆ.

ಸುಮಾರು 17 ಸಾವಿರ ಭಾರತೀಯರು ಈಗಾಗಲೇ ಭಾರತಕ್ಕೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ. ಕರ್ನಾಟಕ ಮೂಲದ ಅನೀಶ್ ಎಂಬ ಯುವಕ ಕೂಡ ಉಕ್ರೇನ್ ನಿಂದ ಸುರಕ್ಷಿತವಾಗಿ ಹಿಂತಿರುಗಿದ್ದಾನೆ. ಈತ ಕಳೆದ 2 ವರ್ಷಗಳಿಂದ ಉಕ್ರೇನ್ ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಪಡೆಯುತ್ತಿದ್ದ. ಈತ ಬೆಂಗಳೂರಿನ ಏರ್ ಪೋರ್ಟ್ ನಲ್ಲಿ ಇಳಿದ ತಕ್ಷಣವೇ ಕೊಟ್ಟ ಹೇಳಿಕೆ ಕೇಳಿ ಭಾರತೀಯರಿಗೆಲ್ಲ ಆಶ್ಚರ್ಯ ವಾಗಿತ್ತು. ಅನೀಶ್ ಎಂಬ ಯುವಕ ಉಕ್ರೇನ್ ದೇಶದಿಂದ ಸುರಕ್ಷಿತವಾಗಿ ಭಾರತಕ್ಕೆ ತಲುಪಿದರು ಕೂಡ ಭಾರತ ದೇಶಕ್ಕೆ ತಾಕತ್ತು ಇಲ್ಲ ಎಂದು ಸವಾಲು ಹಾಕಿದ್ದಾನೆ.

ಉಕ್ರೇನ್ ದೇಶದಲ್ಲಿರುವ ವಿದ್ಯಾರ್ಥಿಗಳು ಬಾರ್ಡರ್ ತಲುಪಿದರೆ ಮಾತ್ರ ಭಾರತ ಸರ್ಕಾರವು ಕಾಳಜಿ ವಹಿಸುತ್ತಿದೆ ಆದರೆ ಉಕ್ರೇನ್ ದೇಶದ ಒಳಗಡೆ ಇರುವ ವಿದ್ಯಾರ್ಥಿಗಳ ಮಿನಿ ಭಾರತ ಸರ್ಕಾರವು ಸ್ವಲ್ಪ ಕೂಡ ಕಾಳಜಿ ವಹಿಸುತ್ತಿಲ್ಲ. ಯುದ್ಧ ನಡೆಯುತ್ತಿರುವ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ಸು ಕರೆದುಕೊಂಡು ಹೋಗುವಷ್ಟು ಶಕ್ತಿ ನಮ್ಮ ದೇಶಕ್ಕಿಲ್ಲ ಅಂತೆಲ್ಲಾ ನಮ್ಮ ದೇಶದ ಬಗ್ಗೆ ಕೇವಲವಾಗಿ ಮಾತನಾಡಿದ್ದ. ಆದ್ರೆ ಈ ಯುವಕನ ಪರಿಸ್ಥಿತಿ ಇಂದು ಹೇಗಾಗಿದೆ ಗೊತ್ತಾ..

ಅನೀಶ್ ಎಂಬ ಯುವಕ ಭಾರತ ದೇಶದ ಬಗ್ಗೆ ಬೇಕಾಬಿಟ್ಟಿ ಮಾತಾಡಿದಕ್ಕೆ ಇವನಿಗೆ ನೆಟ್ಟಿಗರು ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಇವನ ಹಳೆ ವಿಡಿಯೋಗಳನ್ನು ಕೆದಕಿ ಅವನಿಗೆ ತಕ್ಕ ಉತ್ತರ ನೀಡಿದ್ದಾರೆ. ಒಂದೆರಡು ವಾರಗಳ ಹಿಂದೆ ಈತ ಉಕ್ರೇನ್ ದೇಶದಲ್ಲಿದ್ದಾಗ, ಭಾರತ ದೇಶದ ಬಗ್ಗೆ ಈ ರೀತಿಯಾಗಿ ಕೇವಲವಾಗಿ ಮಾತನಾಡಲಿಲ್ಲ ಮತ್ತು ಭಾರತ ದೇಶದ ಬಗ್ಗೆ ಇವನೇ ಹೊಗಳಿದ್ದ. ಭಾರತದ ರಾಯಭಾರಿಗಳು ನಮಗೆ ಸಹಾಯ ಮಾಡುತ್ತಿದ್ದಾರೆ ಎಂದೆಲ್ಲಾ ಪ್ರವಚನ ಹೇಳಿದ್ದ.

ಭಾರತ ದೇಶದ ರಾಯಭಾರಿಗಳು ನಮಗೆ ಯುದ್ದದ ಸಂದೇಶವನ್ನು ಮುಂಚಿತವಾಗಿ ತಿಳಿಸಿದ್ದರು ಮತ್ತು ಭಾರತದ ವಿದ್ಯಾರ್ಥಿಗಳನ್ನೆಲ್ಲ ಉಕ್ರೇನ್ ನಲ್ಲಿ ಸುರಕ್ಷಿತವಾಗಿ ಹಾಸ್ಟೆಲ್ ನಲ್ಲಿ ಕಾದಿರಿಸಿದ್ದರು ಎಂಬ ವಿಷಯವನ್ನು ಸ್ವತಃ ಅನೀಶ್ ಕೆಲವು ದಿನಗಳ ಹಿಂದೆ ಕನ್ನಡ ನ್ಯೂಸ್ ಚಾನೆಲ್ ಗಳ ಮುಂದೆ ಕೂತುಕೊಂಡು ಬಾಯ್ಬಿಟ್ಟಿದ್ದ. ಭಾರತಕ್ಕೂ ಬರುವುದಕ್ಕಿಂತ ಮುಂಚೆ ಭಾರತದ ರಾಯಭಾರಿ ಹಾಗೂ ಭಾರತ ಸರ್ಕಾರದ ಬಗ್ಗೆ ಹೊಗಳಿದ್ದ ಯುವಕ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ತನ್ನ ಬಾಲವನ್ನು ಬಿಚ್ಚಿದ್ದೇಕೆ ಎಂದು ನೆಟ್ಟಿಗರು ಪ್ರಶ್ನೆ ಹಾಕಿದ್ದಾರೆ. ಭಾರತ ದೇಶದ ಬಗ್ಗೆ ಕೇವಲವಾಗಿ ಮಾತನಾಡಿದ ಈ ಯುವಕ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ. ಜನ್ಮಕೊಟ್ಟ ದೇಶದ ಬಗ್ಗೆ ಇದೀಗ ಇವನು ಮಾತನಾಡುತ್ತಿರುವ ಮಾತುಗಳನ್ನು ಕೇಳಿದರೆ ನಿಜಕ್ಕೂ ಭಾರತೀಯರಿಗೆ ಸರ್ಪ್ರೈಸ್ ಆಗುತ್ತದೆ.

Leave a Comment