ಹೊಸ ಮನೆಯನ್ನು ಖರೀದಿಸಿದ ಕನ್ನಡದ ಖ್ಯಾತ ಗಾಯಕ ನವೀನ್ ಸಜ್ಜು. ಈ ಐಷಾರಾಮಿ ಮನೆಯ ಬೆಲೆ ಎಷ್ಟು ಗೊತ್ತಾ

ಗಾಯಕನೊಬ್ಬ ಬೆಳೆದ್ರೆ ಹೀಗೆ ಬೆಳಿಬೇಕು ಅಂತ ಜನರ ಬಾಯಲ್ಲಿ ಶಹಬ್ಬಾಸ್ ಗಿಟ್ಟಿಸಿಕೊಂಡ ನವೀನ್ ಸಜ್ಜು, ಇಂದು ಹೊಸ ಮನೆಯ ಪ್ರವೇಶದ ಸಂಭ್ರಮದಲ್ಲಿದ್ದಾರೆ. ಹಿನ್ನೆಲೆ ಗಾಯಕ ನವೀನ್ ಸಜ್ಜು ಅವರ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿದೆ. ಬಿಗ್ ಬಾಸ್ ಸೀಸನ್ 6 ರಲ್ಲಿ ಮೊದಲ ರನ್ನರ್ ಅಪ್ ಆಗಿದ್ದ ನವೀನ್ ಸಜ್ಜು ತಾವು ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನ ಸಾಕಷ್ಟು ಮನರಂಜನೆಯನ್ನು ಕೊಟ್ಟಿದ್ರು. ತಮ್ಮ ಅದ್ಭುತ ಕಂಠ ಸಿರಿಯಿಂದ ಎಲ್ಲರನ್ನೂ ರಂಜಿಸಿದರು.

ನವೀನ್ ಸಜ್ಜು ಕನ್ನಡ ಸಿನಿಮಾಗಳಿಗೆ ಈಗಾಗಲೇ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಇನ್ನೂ ಬಹಳ ವಿಶೇಷವಾಗಿರುವ ಅವರ ಕಂಠ ಸಿರಿ, ಸಿ. ಅಶ್ವಥ್ ಅವರ ಧ್ವನಿಯನ್ನು ಹೊಲುತ್ತೆ ಅಂತ ಹಲವರು ಹೇಳುತ್ತಾರೆ. ನವೀನ್ ಸಜ್ಜು ಅವರು ಜಾನಪದ ಹಾಡುಗಳನ್ನು ಹಾಡುವುದರಲ್ಲಿ ಎತ್ತಿದ ಕೈ. ಇಂದು ಕನ್ನಡ ಚಿತ್ರರಂಗದಲ್ಲಿ ಬೇಸ್ ವಾಯ್ಸ್ ನಲ್ಲಿ ಜಾನಪದ ಹಾಡುಗಳನ್ನು ಹಾಡುವವರ ಇದ್ದಾರೆ ಎಂದರೆ ಅದು ಕೇವಲ ನವೀನ್ ಸಜ್ಜು ಮಾತ್ರ. ಗಾಯಕ, ಸಂಗೀತ ಸಂಯೋಜಕರು ಆಗಿರುವ ನವೀನ್ ಸಜ್ಜು ಮೂಲತಹ ಮೈಸೂರಿನವರು.

ಇದೀಗ ಮೈಸೂರಿನಲ್ಲಿ ತಮ್ಮ ಕನಸಿನ ಮನೆಯೊಂದನ್ನು ಖರೀದಿಸಿದ್ದಾರೆ. ತಮ್ಮ ಮನೆಗೆ ’ಮಾನಸು’ ಎಂದು ಹೆಸರಿಟ್ಟಿರುವ ನವೀನ್ ಸಜ್ಜು ಅದರ ಅರ್ಥವನ್ನು ತಿಳಿಸಿದ್ದಾರೆ. ಮಾ ಅಂದರೆ ಮಾದೇಗೌಡ, ನ ಅಂದರೆ ನವೀನ್ ಹಾಗೂ ಸು ಅಂದ್ರೆ ಸುಮಿತ್ರ. ತನ್ನ ತಂದೆ ತಾಯಿ ಹಾಗೂ ತನ್ನ ಹೆಸರನ್ನು ಸೇರಿಸಿ ಮಾನಸು ಎಂದು ತನ್ನ ಹೊಸ ಮನೆಯ ನಾಮಕರಣ ಮಾಡಿದ್ದಾರೆ. ಇನ್ನು ನವೀನ್ ಸಜ್ಜು ಅವರ ಮನೆ ಪ್ರವೇಶಕ್ಕೆ ಸಾಕಷ್ಟು ಸ್ನೇಹಿತರು, ಕಲಾವಿದರೂ ಕೂಡ ಆಗಮಿಸಿದ್ದರು. ಹೀಗೆ ಬಂದಿದ್ದವರಲ್ಲಿ ನವೀನ್ ಸಜ್ಜು ಅವರ ಜೊತೆ ಬಿಗ್ ಬಾಸ್ ಮನೆಯಲ್ಲಿಯೂ ಸ್ನೇಹಿತರಾಗಿದ್ದ ಅಕ್ಷತಾ ಪಾಂಡವಪುರ ಕೂಡ ಒಬ್ಬರು.

ಇತ್ತೀಚಿಗೆ ಮಗುವನ್ನು ಪಡೆದ ಸಂತೋಷದಲ್ಲಿರುವ ಅಕ್ಷತಾ ಪಾಂಡವಪುರ ಅವರ ಮನೆಗೂ ನವೀನ್ ಸಜ್ಜು ಭೇಟಿ ನೀಡಿದ್ದರು. ಇದೀಗ ನವೀನ್ ಅವರ ಹೊಸ ಮನೆ ಪ್ರವೇಶಕ್ಕೆ ಅಕ್ಷತಾ ಪಾಂಡವಪುರ ಭೇಟಿ ನೀಡಿದ್ದಾರೆ. ಅಕ್ಷತಾ ಅವರು ನವೀನ್ ಅವರ ಜೊತೆ ಇರುವ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನವೀನ್ ಅವರ ಮನೆಯ ಅಂದದಷ್ಟೇ ಅವರ ಮುಂದಿನ ಜೀವನವು ಇರಲಿ ಅಂತ ವಿಶ್ ಮಾಡಿದ್ದಾರೆ. ಇನ್ನು ನವೀನ್ ಅವರ ಹೊಸ ಮನೆ ಪ್ರವೇಶಕ್ಕೆ ಅವರ ಅಭಿಮಾನಿಗಳು ಕೂಡ ಬೆಸ್ಟ್ ವಿಶಸ್ ತಿಳಿಸಿದ್ದಾರೆ. ನವೀನ್ ಸಜ್ಜು ಅವರ ಹೊಸ ಮನೆಯ ಮೊತ್ತ 90 ರಿಂದ ಒಂದು ಕೋಟಿ ರೂಪಾಯಿ ಗಳು. ಜಮೀನಿನ ಜಾಗ ವನ್ನು ಹಿಡಿದರೆ ಒಂದೂವರೆ ಕೋಟಿ ದಾಟುತ್ತದೆ.

ಗಾಯಕ ನವೀನ್ ಸಜ್ಜು ಇತ್ತೀಚಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುರಿತಾದ ಹಾಡೊಂದನ್ನು ಸಂಯೋಜನೆ ಮಾಡಿದ್ದು ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಈ ಹಾಡನ್ನು ಬರೆದವರು ಜೇಮ್ಸ್ ಸಿನಿಮಾದ ನಿರ್ದೇಶಕ ಚೇತನ್ ಕುಮಾರ್. ದೊಡ್ಮನೆ ದೊರೆಯೇ ಎನ್ನುವ ಈ ಹಾಡು ನವೀನ್ ಸಜ್ಜು ಅವರ ಕಂಠಸಿರಿಯಲ್ಲಿ ಅದ್ಭುತವಾಗಿ ಮೂಡಿಬಂದಿತ್ತು. ಈ ಹಾಡಿನ ವಿಡಿಯೋ ಕಾನ್ಸೆಪ್ಟನ್ನು ಕೂಡ ನವೀನ್ ಸಂಜು ಅವರೇ ಮಾಡಿದ್ದರು. ಒಟ್ಟಿನಲ್ಲಿ ಹೊಸ ಮನೆ ಖರೀದಿಯ ಸಂತೋಷದಲ್ಲಿರುವ ನವೀನ್ ಸಜ್ಜು ಅವರಿಗೆ ನೆಟ್ಟಿಗರು ಕೂಡ ಶುಭಾಶಯವನ್ನು ತಿಳಿಸಿದ್ದಾರೆ. ಗಾಯಕರಾಗಿ ನವೀನ್ ಸಜ್ಜು ಇನ್ನಷ್ಟು ಬೆಳೆಯಲಿ ಅಂತ ಹಾರೈಸಿದ್ದಾರೆ.

Leave a Comment