ಕನ್ನಡ ಬಿಗ್‌ಬಾಸ್ ಸೀಸನ್​-8 ಆರಂಭಕ್ಕೆ ಡೇಟ್ ಅನೌನ್ಸ್

ಕನ್ನಡ ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕುರಿತು ಎಕ್ಸ್ ಕ್ಲೂಸಿವ್ ಮಾಹಿತಿ ಈಗಾಗಲೇ ಮಾಧ್ಯಮಗಳಿಗೆ ದೊರಕಿದೆ. ಈಗಾಗಲೇ ತೆಲುಗಿನಲ್ಲಿ ಬಿಗ್ ಬಾಸ್ ಸೀಸನ್ 4 ಆರಂಭವಾಗಿದೆ. ಹಿಂದಿಯಲ್ಲಿ ಹೊಸ ಆವೃತ್ತಿಗೆ ಎಲ್ಲ ತಯಾರಿ ನಡೆಯುತ್ತಿದ್ದು, ಅಕ್ಟೋಬರ್‌ನಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಕನ್ನಡದಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಕರೆಯಲ್ಪಡುವ ಬಿಗ್‌ಬಾಸ್‌ ಮತ್ತೆ ಶುರುವಾಗ್ತಿದೆ. ಹೌದು ಸ್ವಾಮಿ ಅಸಲಿ ಆಟ ಈಗ ಶುರು ಅಂತಿದ್ದಾರೆ ಕಲರ್ಸ್​ ಕನ್ನಡ ಹೆಡ್​ ಪರಮೇಶ್ವರ್​ ಗುಂಡ್ಕಲ್.

ಕೊರೋನಾ ವೈರಸ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಕನ್ನಡ ಬಿಗ್​ ಬಾಸ್​ ಸೀಸನ್​ 8 ಆರಂಭಕ್ಕೆ ಇದೀಗ ಮುಹೂರ್ತ ಕೂಡಿಬಂದಿದ್ದು, ಬಹಳ ನಿರೀಕ್ಷೆ ಹುಟ್ಟುಹಾಕಿರುವ ಬಿಗ್‌ಬಾಸ್‌ ಸೀಸನ್‌ 8 ಮುಂದಿನ ತಿಂಗಳು ಅಂದ್ರೆ ಇದೇ ಫೆಬ್ರವರಿಯಿಂದ ಬಿಗ್​ ಬಾಸ್​ ಸೀಸನ್​ 8 ಆರಂಭಗೊಳ್ಳಲಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ತಿಂಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8 ಆರಂಭವಾಗಬೇಕಿತ್ತು. ಕೊರೊನಾ ವೈರಸ್‌ ಕಾರಣದಿಂದ ಈ ಹಿಂದಿನ ಎಲ್ಲ ಯೋಜನೆಗಳು ತಲೆಕೆಳಗಾದವು. ಸದ್ಯದ ಸಿನಿಮಾ ಶೂಟಿಂಗ್, ಧಾರಾವಾಹಿ ಚಿತ್ರೀಕರಣ, ರಿಯಾಲಿಟಿ ಶೋ ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿದೆ. ಅದೇ ರೀತಿ, ಬಿಗ್ ಬಾಸ್ ಸಹ ಆರಂಭ ಆಗಲಿದೆ.

ಈ ಬಗ್ಗೆ ಶುಕ್ರವಾರ ಅಧಿಕೃತ ಘೋಷಣೆ ಆಗಿದೆ. ಕಲರ್ಸ್​ ಕನ್ನಡ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಈ ಬಗ್ಗೆ ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.
ಕೊನೆಗೂ ಬಿಗ್ ಬಾಸ್-8 ಪ್ರಾರಂಭ ಮಾಡುವುದಾಗಿ ಅಪ್ ಡೇಟ್ ನೀಡುವ ಮೂಲಕ ಕಿರುತೆರೆ ಪ್ರೇಕ್ಷಕರ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಿಸಿದ್ದಾರೆ. ಆದ್ರೆ, ಈ ಬಾರಿ ಬಿಗ್​ ಬಾಸ್ ಸೀಸನ್​ 8ರಲ್ಲಿ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಎನ್ನುವ ಕುತೂಹಲ

Leave a Comment