ಜೀವನದಲ್ಲಿ ಸತತ ಶ್ರಮ ಹಾಗೂ ಶ್ರದ್ಧೆ ಇದ್ದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದಾರೆ ಇವರು ಅವರು ಬೇರೆ ಯಾರು ಅಲ್ಲ ತೆಲುಗು ಮತ್ತು ಕನ್ನಡ ಇಂಡಸ್ಟ್ರಿ ಅಲ್ಲಿ ಚಿರಪರಿಚಿತ ವ್ಯಕ್ತಿ ಆಕುಲ ಬಾಲಾಜಿ ಇವರು ಪತ್ನಿ ಕೂಡ ಕೋಟ್ಯಾಧೀಶ್ವರಿ.
ಇಂದಿನ ಕಾಲದಲ್ಲಿ ಕನ್ನಡ ಮಾತನಾಡುವ ಜನರು ಕನ್ನಡ ಮಾತು ಆಡಲು ಸಾರ್ವಜನಿಕ ಸ್ಥಳಗಳಲ್ಲಿ ಹಮ್ಮು ಬಿಮ್ಮು ತೋರಿಸುತ್ತಾರೆ ಇನ್ನೂ ಬೇರೆ ಕಡೆ ಬಂದವರು ಕನ್ನಡ ಕಲಿಯಲು ಆಸಕ್ತಿ ಇರೋದು ಇಲ್ಲ. ಇನ್ನು ಹಳ್ಳಿಯಿಂದ ಪಟ್ಟಣ ಸೇರಿದವರು ತಮ್ಮ ಗುಂಪಿನ ಜೊತೆ ಅರ್ದಂಬರ್ದ ಇಂಗ್ಲಿಷ್ ಮಾತ್ತಾಡುತ್ತಾರೆ ಹಾಗೆಯೇ ಕೆಲವೊಬ್ಬರು ಕನ್ನಡ ಬಂದರು ಕೂಡ ಮಾತು ಆಡಲು ಏನೋ ಒಂದು ತರಹ ದುರಹಂಕಾರ ತೋರುತ್ತಾರೆ ಆದರೆ ಎಲ್ಲರಿಗೂ ಒಂದು ವಿಷಯ ಹೇಳಲೇ ಬೇಕು ಕನ್ನಡ ಭಾಷೆಯೇ ಒಂದು ಸುಂದರ ಅದು ಒಂದು ಭಾವನೆ ಮತ್ತು ಅನ್ನ ಕೊಟ್ಟ ದೇವರು .
ಅಕುಲ ಬಾಲಾಜಿ ಅವರು ಹುಟ್ಟು ಕನ್ನಡಿಗರಲ್ಲ ಕನ್ನಡ ಕಲಿಯಲು ಸುಮಾರು ವರ್ಷಗಳೇ ಬೇಕಾಗಿದ್ದು ಇಂದು ಕನ್ನಡವನ್ನು ಅರುಳು ಹುರಿದಂತೆ ಮಾತು ಆಡುತ್ತಾರೆ ಅಕುಲ್ ಅವರು ಆಂಧ್ರ ಪ್ರದೇಶ ಕೂದುರ ಎನ್ನುವ ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿದ್ದು ಆಗರ್ಭ ಶ್ರೀಮಂತ ಅಲ್ಲ ಇವರು ಆದರೆ ಮದ್ಯಮ ವರ್ಗದ ೧೯೭೯ ಅಲ್ಲಿ ಜನಿಸುತ್ತಾರೆ ಇವತ್ತು ಅವರ ೪೩_೪೪ ಆಸುಪಾಸಿನ ವಯಸ್ಸಿನ ವ್ಯಕ್ತಿ ಆಗಿರುತ್ತಾರೆ.
ಆರಂಭದ ದಿನ ಆಂದ್ರಪ್ರದೇಶ ದಲ್ಲಿ ತೆಲುಗು ಅಲ್ಲಿ ತಮ್ಮ ವಿದ್ಯಭ್ಯಾಸವನ್ನು ಮುಗಿಸಿ ಸುಮಾರು ೧೬ ವರ್ಷದ ಅವಧಿಯಲ್ಲಿ ಅಕುಲ್ ಅವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನ ಒಲವನ್ನು ತೋರಿಸುತ್ತಾರೆ ಹಾಗಾಗಿ ಕರ್ನಾಟಕಕ್ಕೆ ಬರುತ್ತಾರೆ ಆವಾಗ ಅವರಿಗೆ ಕನ್ನಡದ ಬಗ್ಗೆ ಸ್ವಲ್ಪನೂ ಗಂಧ ಗಾಳಿ ಗೊತ್ತಿರುವುದಿಲ್ಲ. ಅಕುಲ್ ಅವರು ಒಬ್ಬ ಅದ್ಭುತ ಭರತನಾಟ್ಯ ಪ್ರತಿಭೆ ಹಾಗೂ ಕಥಕ ಕೂಡ ಚೆನ್ನಾಗಿ ಬಲ್ಲ ನಿಪುಣರು ಹೀಗೆ ಕಲಿತ ವಿದ್ಯೆಯ ಜೊತೆಗೆ ಕನ್ನಡವನ್ನು ಕೂಡ ಕಲಿಯಲು ಆಸಕ್ತಿ ತೋರುತ್ತಾರೆ ಹಾಗೂ ನಟನೆಯಲ್ಲಿ ಕೂಡ ಸಾಕಷ್ಟು ಆಸಕ್ತಿ ಹೊಂದಿ ನೃತ್ಯ ಹಾಗೂ ನಟನೆಯಲ್ಲಿ ತನ್ನನ್ನು ಪಳಗಿಸಿ ತದನಂತರ ಆಘಾತ ,ಗುಪ್ತಗಾಮಿನಿ ಯಾವ ಜನ್ಮದ ಮೈತ್ರಿ, ಜಗಳಗಂಟಿ ಮುಂತಾದ ಧಾರಾವಾಹಿ ಅಲ್ಲಿ ಸಣ್ಣ ಪುಟ್ಟ ಪಾತ್ರಗಳ ಅಭಿನಯ ಮಾಡುತ್ತಾರೆ ನೋಡಲು ಸುಂದರವಾಗಿ ಇರುವ ಅಕುಲ್ ಅವರಿಗೆ ೨೦೦೭ ಅಲ್ಲಿ ಕುಣಿಯೋಣ ಬಾರ ಎನ್ನುವ ರಿಯಲಿಟಿ ಶೋ ಒಂದರಲ್ಲಿ ನಿರೂಪಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಾರೆ.
ಮೊದಲು ಸಣ್ಣ ಶೋ ಅಲ್ಲಿ ನಿರೂಪಣೆ ಮಾಡಿದರೂ ಇದರಷ್ಟು ಮನ್ನಣೆ ಸಿಗಲಿಲ್ಲ ನಂತರ ಕಾಮಿಡಿ ಕಿಲಾಡಿಗಳು ಅಲ್ಲಿ ನಿರೂಪಣೆ ಮಾಡಿದರೂ ಆದರೆ ತಮ್ಮ ಜೀವನ ಅಲ್ಲಿ ಪ್ರತಿಯೊಬ್ಬನಿಗೂ ದೊಡ್ಡ ಟರ್ನಿಂಗ್ ಪಾಯಿಂಟ್ ಅಂತ ಇದ್ದೆ ಇರುವುದು ಹಾಗೆಯೇ ಅಕುಲ್ ಅವರಿಗೆ ಪ್ಯಾಟೆ ಹುಡ್ಗೀರು ಹಳ್ಳಿ ಲೈಫು ಎನ್ನುವ ರಿಯಾಲಿಟಿ ಶೋ ಅಕುಲ್ ಅವರ ಜೀವನದ ಪಥವನ್ನು ಬದಲಾಯಿಸಿದ ಶೋ ಎಂದೇ ಹೇಳಬಹುದು .ಹಳ್ಳಿ ಹೈದ ಪ್ಯಾಟೆಗೆ ಬಂದ, ಸೈ, ತಕಧಿಮಿತ ,ಡಾನ್ಸಿಂಗ್ ಸ್ಟಾರ್ , ಕಿಕ್ ,ಡಾನ್ಸಿಂಗ್ ಚಾಂಪಿಯನ್ ಅಲ್ಲಿ ನಿರೂಪಕ ಆಗಿದ್ದಾರೆ .ನಟ ಸುದೀಪ ಅವರ ಯಾವುದೇ ನಿರೂಪಣೆ ಇದ್ದಲ್ಲಿ ಅಕುಲ್ ಅವರೇ ಅದನ್ನು ನಡೆಸಿಕೊಡುತ್ತಾರೆ ಅಕುಲ್ ಬಾಲಾಜಿ ಮತ್ತು ಅನುಶ್ರೀ ಅವರ ಜೊತೆ ನಿರುಪಕತೆ ಅಲ್ಲಿ ಪೈಪೋಟಿ ಇದ್ದೆ ಇದೆ ಒಮ್ಮೆ ಅಕುಲ್ ಅವರು ಕನ್ನಡ ಭಾಷೆ ನನಗೆ ಅನ್ನ ಕೊಟ್ಟ ದೇವರು ಎಂದು ಯಾವುದೇ ಹಮ್ಮು ಬಿಮ್ಮು ಇಲ್ಲದೆ ಹೇಳಿದಾರೆ ತನ್ನ ಭಾಷಾಭಿಮಾನವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಕಲ್ಲರಳಿ ಹೂವಾಗಿ ಸಿನಿಮಾ ಅಲ್ಲಿ ೨೦೦೬ ಅಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ಆತ್ಮೀಯ ಎಂಬ ಸಿನಿಮಾ ಅಲ್ಲಿ ಸಂಪೂರ್ಣ ಮಟ್ಟಿಗೆ ನಾಯಕ ನಟ ಆಗಿ ಅಭಿನಯಿಸಿದ್ದಾರೆ ಪರಮೇಶ ಪಾನವಾಲ್, ಬನ್ನಿ , ಕ್ರೇಜಿ ಸ್ಟಾರ್ , ಲೂಸ್ ಗಳು ಹೀಗೆ ಹಲವಾರು ಸಿನಿಮಾ ಅಲ್ಲಿ ನಟಿಸಿದ್ದಾರೆ ಅಲ್ಲಿಯೂ ಕೂಡ ತನ್ನ ಪ್ರತಿಭೆಯನ್ನು ತೋರಿಸಿಕೊಂಡಿದ್ದಾರೆ .ತೆಲುಗಿನಲ್ಲಿ ಪೆಲ್ಲಿನಟಿ ಪ್ರೆಮಳು ಎನ್ನುವ ತೆಲುಗಿನ ಧಾರಾವಾಹಿಯಲ್ಲಿ ನಟನೆ ಮಾಡಿದ್ದು ಇತ್ತ ಕನ್ನಡ ಅಲ್ಲಿಯೂ ಕೂಡ ಕೆಲವೊಂದು ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ ನಿರೂಪಣೆ ಹಾಗೂ ನಟನೆ ಎರಡಕ್ಕೂ ತನ್ನನು ತೊಡಗಿಸಿಕೊಂಡಿದ್ದಾರೆ.
ಅಕುಲ್ ಮತ್ತು ಜ್ಯೋತಿ ಅವರು ಆಂಧ್ರ ಪ್ರದೇಶ ಅಲ್ಲಿ ೨೦೦೭ ಅಲ್ಲಿ ಪರಿಚಯ ಆಗಿತ್ತು.ಆಗ ಅವರು ಅಷ್ಟೊಂದು ಹೆಸರುವಾಸಿ ಆಗಿರಲಿಲ್ಲ ಇಬ್ಬರ ನಡುವೆ ಸ್ನೇಹ ಪ್ರೀತಿಯಾಗಿ ಬದಲಾಗುವುದು .ಜ್ಯೋತಿ ಇವರು ಕೋಟ್ಯಾಧೀಶ್ವರ ಮಗಳು ಮಹೇಶ ಬಾಬು ಅವರ ತಂದೆ ಕೃಷ್ಣ ಅವರ ಎರಡನೇ ಪತ್ನಿ ವಿಜಯ ನಿರ್ಮಲ ಅವರ ಸೊಸೆ ಜ್ಯೋತಿ ಅವರೇ ಅಕುಲ್ ಬಾಲಾಜಿ ಅವರ ಪತ್ನಿ ಹಾಗಾಗಿ ಇವರ ಮದುವೆ ಗೆ ಮಹೇಶ್ ಬಾಬು ಅವರ ಕುಟುಂಬ ಬಂದಿದ್ದು ಹಾಗಾಗಿ ಮಹೇಶ್ ಬಾಬು ಅವರಿಗೆ ದೂರದ ಸಂಬಂಧಿ ಅಕುಲ್ ಅವ್ರು ತಮ್ಮ ಪತ್ನಿಗೆ ಜ್ಯೋ ಎಂದು ಕರೆಯುತ್ತಾರೆ .
ಇವರಿಬ್ಬರದ್ದೂ ಸುಂದರ ಸಂಸಾರ ಇವರ ನಡುವೆ ಸಾಮರಸ್ಯ ಜೀವನ ಸಾಗಿಸುತ್ತಾ ಇದ್ದು ಯಾವುದೇ ಗಾಸಿಪ್ ಹಾಗೂ ಯಾವುದೇ ಕಿರಿಕ್ ಇಲ್ಲದೆ ಸುಂದರವಾದ ಅನೋನ್ಯ ಜೀವನ ಸಾಗಿಸುತ್ತಾ ಇದ್ದಾರೆ ಹಾಗೂ ಅಕುಲ್ ಅವರ ಹಣಕಾಸಿನ ವಿಚಾರ ಅಥವಾ ಅವರ ಫಿಟ್ನೆಸ್ ಅನ್ನು ಅವರ ಪತ್ನಿಯೇ ನಿಭಾಯಿಸುತ್ತಾರೆ ಹಾಗೂ ತನ್ನ ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವೊಂದು ಫಿಟ್ನೆಸ್ ಟಿಪ್ಸ್ ಅನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇವರ ಸಂಸಾರ ಹೀಗೆ ಸುದೀರ್ಘ ಆಗಿ ಯಾರ ಕಣ್ಣೂ ಬೀಳದೆ ಸಾಗಲಿ ಹಾಗೇಯೇ ಅಕುಲ್ ಬಾಲಾಜಿ ಅವರಿಗೆ ಇನ್ನೂ ಒಳ್ಳೆ ಒಳ್ಳೆ ಅವಕಾಶ ಸಿಗಲಿ ಎಂದು ಹಾರೈಸೋಣ.