ಈಗ ಕೆಲವು ತಿಂಗಳುಗಳ ಹಿಂದೆ ಚಿರಂಜೀವಿ ಸರ್ಜಾ ಅವರು ತೀರಿ ಹೋದರು. ಆಗ ಮೇಘನಾ ರಾಜ್ ಅವರು 6ತಿಂಗಳ ಪ್ರಗ್ನೆಂಟ್ ಇದ್ದರು. ಈಗ ಅವರಿಗೆ ಗಂಡು ಮಗು ಹುಟ್ಟಿದೆ. ಚಿರಂಜೀವಿ ಸರ್ಜಾ ಅವರೇ ವಾಪಸ್ ಬಂದಂತೆ ಆಗಿದೆ. ಆದರೆ ಈಗ ಅವರಿಗೆ ಇನ್ನೊಂದು ಗಂಡಾಂತರ ಬಂದಿದೆ. ನಾವು ಇಲ್ಲಿ ಮೇಘನಾ ರಾಜ್ ಅವರಿಗೆ ಬಂದ ಗಂಡಾಂತರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮೇಘನಾ ರಾಜ್ ಅವರು “ನನಗೆ ಈಗ ಗಂಡು ಮಗು ಹುಟ್ಟಿದೆ. ತಾನು ಇಷ್ಟು ದಿನಗಳ ಕಾಲ ನಿಮ್ಮ ಬಳಿ ಮಾತನಾಡಿರಲಿಲ್ಲ. ತೊಟ್ಟಿಲು ಶಾಸ್ತ್ರ ಮುಗಿದಿದೆ. ನನ್ನ ಮಗ ನನ್ನ ಮನೆಗೆ ಬಂದಿದ್ದಾನೆ. ಬಹಳ ಖುಷಿಯಾಗುತ್ತಿದೆ. ತೊಟ್ಟಿಲು ಶಾಸ್ತ್ರವನ್ನು ತವರ ಮನೆಯ ಕಡೆಯಿಂದ ಮಾಡಲಾಗುತ್ತದೆ. ಪ್ರತಿಯೊಬ್ಬರೂ ನನ್ನನ್ನು ಮತ್ತು ಚಿರುವನ್ನು ಅವರ ಕುಟುಂಬ ಎಂದು ಪ್ರೀತಿ ಮಾಡುತ್ತಾ ಬಂದಿದ್ದಾರೆ. ವನಿತಾ ಅವರು ದೊಡ್ಡ ಮತ್ತು ಮುದ್ದಾದ ಒಂದು ತೊಟ್ಟಿಲನ್ನು ನನಗೆ ಉಡುಗೊರೆಯಾಗಿ ನೀಡಿದ್ದಾರೆ. ಅದು ಬಹಳ ಚೆನ್ನಾಗಿದೆ ” ಎಂದು ಮಾಧ್ಯಮಗಳಿಗೆ ಸ್ವಲ್ಪ ದಿನಗಳ ಹಿಂದೆ ಹೇಳಿದ್ದರು.
ಆದರೆ ಈಗ ಮೇಘನಾ ರಾಜ್ ಅವರಿಗೆ ಕೊರೊನಾ ಬಂದಿದೆ. ಹಾಗೆಯೇ ಅವರ ಜೊತೆ ಮೇಘನಾ ರಾಜ್ ಅವರ ತಂದೆ ಮತ್ತು ತಾಯಿ ಮತ್ತು ಮಗುವಿಗೂ ಕೂಡ ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ ಸದ್ಯದಲ್ಲೇ ಎಲ್ಲರೂ ಗುಣಮುಖರಾಗುವ ಸಾಧ್ಯತೆ ಇದೆ. ಮಗು ಕೂಡ ಗುಣಮುಖ ಆಗುತ್ತಿದೆ. ಇನ್ಸ್ಟಾಗ್ರಾಮ್ ನಲ್ಲಿ ಮೇಘನಾ ರಾಜ್ ಅವರು ತನ್ನ ಜೊತೆ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಕೊಳ್ಳಿ ಎಂದು ಸಂದೇಶವನ್ನು ನೀಡಿದ್ದಾರೆ.
ಚಿರಂಜೀವಿ ಸರ್ಜಾ ಅವರು ನಿಧಾನರಾಗಿ ಇಡೀ ಕುಟುಂಬಕ್ಕೆ ಒಂದು ಮುತ್ತನ್ನು ಕಳೆದುಕೊಂಡಂತೆ ಆಗಿತ್ತು. ನಂತರ ಮಗು ಹುಟ್ಟಿ ಒಂದು ಸಂತೋಷ ಮನೆಗೆ ಬಂದಿತ್ತು. ಆದರೆ ಈಗ ಕೊರೊನಾ ಬಂದಿರುವುದರಿಂದ ಮತ್ತೆ ಸಂಕಟ ಎದುರಾದಂತೆ ಆಗಿದೆ. ಕೊರೊನಾ ಸುಮಾರು ನಟ ನಟಿಯರಿಗೆ ಬಂದಿದೆ. ಹೆಚ್ಚಾಗಿ ಎಲ್ಲರೂ ಗುಣಮುಖರಾಗಿದ್ದಾರೆ. ಹಾಗೆಯೇ ಮೇಘನಾ ರಾಜ್ ಮತ್ತು ಅವರ ಕುಟುಂಬ ಕೂಡ ಶೀಘ್ರದಲ್ಲಿ ಗುಣಮುಖರಾಗಲಿ ಎಂದು ನಾವೆಲ್ಲರೂ ಹಾರೈಸೋಣ.