ಹಾಲು ಮಾರುತ್ತಿದ್ದ ಹುಡುಗ ದೊಡ್ಡ ಸ್ಟಾರ್ ನಟನಾಗಿ ಬೆಳೆದಿದ್ದು ಹೇಗೆ ಗೊತ್ತಾ? ಇಲ್ಲಿದೆ ರೋಚಕ ಕತೆ

ಈ ಜೀವನ ಅನ್ನೋದು ಯಾವಾಗ ಹೇಗೆ ತಿರುವುಗಳನ್ನು ಪಡೆದುಕೊಳ್ಳುತ್ತೆ ಅನ್ನೋದು ಹೇಳೋಕೆ ಸಾಧ್ಯ ಆಗಲ್ಲ. ಅದರಲ್ಲೂ ಬಣ್ಣದ ಲೋಕದಲ್ಲಿ ಅತಿ ಎತ್ತರಕ್ಕೆ ಏರಬೇಕು ಅಂದರೆ ಅದೃಷ್ಟದ ಜೊತೆ ಪರಿಶ್ರಮ ಕೂಡಾ ಬೇಕು. ತಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೆ ಇಂದು ಯಶಸ್ಸಿನ ಉತ್ತುಂಗದಲ್ಲಿರುವ ಈ ಸಿನಿ ನಟನ ಬದುಕೇ ನಮಗೆಲ್ಲಾ ಸ್ಪೂರ್ತಿ. ಸಿನಿಮಾ ಕ್ಷೇತ್ರ ಎಂದರೆ ಎಷ್ಟೋ ಜನ ಕಲಾವಿದರು ಬರುತ್ತಾರೆ ಹೋಗುತ್ತಾರೆ.

ಆದರೆ ನಿಜವಾದ ಪ್ರತಿಭೆಯಿದ್ದವರು ಮಾತ್ರ ಉಳಿದುಕೊಳ್ಳುತ್ತಾರೆ. ಅಂತವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಕರ್ನಾಟಕದಲ್ಲಿ ಡಿ ಬಾಸ್ ನ್ನು ಇಷ್ಟಪಡದೇ ಇರುವ ಜನರೇ ಇಲ್ಲ. ನಟ ದರ್ಶನ್ ಅವರ ತಂದೆ ಕನ್ನಡದ ಖ್ಯಾತ ಕಲಾವಿದ ತೂಗುದೀಪ್ ಶ್ರೀನಿವಾಸ್. ಇವರು ಕನ್ನಡ ಚಿತ್ರರಂಗದಲ್ಲಿ ಅತ್ಯದ್ಭುತ ಅಭಿನಯಕ್ಕೆ ಹೆಸರಾದವರು. ಆದರೆ ಇಂದು ಡಿ ಬಾಸ್ ನ ಗೆಲುವಿಗೆ ಇದು ಕಾರಣವಲ್ಲ. ತಮ್ಮ ಸ್ವಂತ ಪರಿಶ್ರಮ ಹಾಗೂ ಪ್ರತಿಭೆಯಿಂದ ಮೇಲೆ ಬಂದವರು ಚಾಲೆಂಜಿಂಗ್ ಸ್ಟಾರ್ ದರ್ಶನ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಜನಪ್ರಿಯ ನಟ. ಖಳನಟನ ಮಗನೂ ಕೂಡಾ ಹೀರೋ ಆಗಬಹುದು ಅಂತ ತೋರಿಸಿಕೊಟ್ಟವರು ಇವರು. ಅಭಿಮಾನಿಗಳು ಪ್ರೀತಿಯಿಂದ ದಾಸ ಅಂತಲೇ ಕರೆಯೋದು. ದರ್ಶನ್ ಈ ಮಟ್ಟಕ್ಕೆ ಬೆಳೆದಿದ್ದಾರೆ ಎಂದರೆ ಅದರ ಹಿಂದೆ ಇರುವ ಪರಿಶ್ರಮವನ್ನು ನಾವು ಅಲ್ಲಗಳೆಯುವಂತಿಲ್ಲ. ಅದೆಷ್ಟೋ ಸಮಸ್ಯೆಗಳನ್ನ ಎದುರಿಸಿ, ಇಂದು ಇತರರ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಮಟ್ಟಿಗೆ ದರ್ಶನ್ ತಲೆ ಎತ್ತಿ ನಿಂತಿದ್ದಾರೆ.

ಕರುನಾಡ ಕರ್ಣ ದರ್ಶನ್ ಅವರನ್ನು ಪ್ರೀತಿಸದೆ ಇರುವವರೇ ಇಲ್ಲ. ಅದೆಷ್ಟು ಜನ ಇಂದಿಗೂ ದರ್ಶನ್ ಅವರ ಚಿತ್ರ ಬರುವುದನ್ನೇ ಕಾಯುತ್ತಿರುತ್ತಾರೆ. ಫಸ್ಟ್ ಡೇ ಫಸ್ಟ್ ಶೋ ನೋಡುವುದಕ್ಕಾಗಿ ಕಾತುರರಾಗಿರುತ್ತಾರೆ. ಹೀಗೆ ತಮ್ಮ ಅಭಿಮಾನಿಗಳಿಗೆ ರಸದೌತಣವನ್ನು ನೀಡುವುದಕ್ಕಾಗಿ ಕ್ರಾಂತಿಯ ಮೂಲಕ ಬರಲಿದ್ದಾರೆ ದರ್ಶನ್. ಅವರು ಕನ್ನಡ ಚಿತ್ರರಂಗದಲ್ಲಿ ‘ಬಾಕ್ಸಾಫೀಸ್ ಸುಲ್ತಾನ್’ ಎಂದು ಪ್ರಸಿದ್ಧರಾಗಿದ್ದಾರೆ. ಪ್ರಮುಖ ಪಾತ್ರವಾಗಿ ಅವರ ಮೊದಲ ಪ್ರಗತಿಯು ಮೆಜೆಸ್ಟಿಕ್ ಚಲನಚಿತ್ರವಾಗಿದೆ, ಇದು ಅಗಾಧ ಯಶಸ್ಸನ್ನು ಕಂಡಿತು.

ದರ್ಶನ್ 1990 ರ ದಶಕದ ಮಧ್ಯಭಾಗದಲ್ಲಿ ಕಿರುಚಿತ್ರಗಳಲ್ಲಿ ಕಿರುತೆರೆ ನಟ ಮತ್ತು ಪೋಷಕ ನಟನಾಗಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ನಮ್ಮ ಪ್ರೀತಿಯ ರಾಮು, ಕಲಾಸಿಪಾಳ್ಯ, ಗಜ ಮತ್ತು ಸಂಗೊಳ್ಳಿ ರಾಯಣ್ಣ ದರ್ಶನ್ ಅವರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಯಶಸ್ವಿ ಚಿತ್ರಗಳು. ಸಂಗೋಳಿ ರಾಯಣ್ಣ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ನಟ ಮತ್ತು 19 ನೇ ಶತಮಾನದ ಯೋಧ ಸಂಗೋಳಿ ರಾಯಣ್ಣನ ಪಾತ್ರಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು. ಅವರ ಯಜಮಾನ ಚಿತ್ರವು ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವೀ ಅವಾರ್ಡ್ಸ್ 2021 ರಲ್ಲಿ ಎಂಟು ಪ್ರಶಸ್ತಿಗಳನ್ನು ಗೆದ್ದಿದೆ.

ದರ್ಶನ್ ಅವರ ಪ್ರಯಾಣವು ಭಾರೀ ಏರಿಳಿತಗಳನ್ನು ಕಂಡಿದೆ. ತಮ್ಮ ಜೀವನದಲ್ಲಿ ಅನೇಕ ರೀತಿಯ ಏಳು ಬೀಳುಗಳನ್ನು ಕಂಡು ಇಂದು ಚಾಲೆಂಜಿಂಗ್ ಸ್ಟಾರ್ ಆಗಿದ್ದಾರೆ. ಅವರ ನಟನಾ ವೃತ್ತಿಯು ನಿಸ್ಸಂದೇಹವಾಗಿ ನಟನಾ ಕ್ಷೇತ್ರದಲ್ಲಿ ಹೊಸ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ. ದರ್ಶನ್ ಹುಟ್ಟು ನಟ. ಇವರು ಕನ್ನಡ ಇಂಡಸ್ಟ್ರಿಯ ಸುವರ್ಣ ಯುಗದ ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಅವರ ಪುತ್ರ. ಆದರೆ, ಅವರ ತಂದೆಯ ಹೆಸರಿನಿಂದ ಅವರು ನಟನಾಗಿಲ್ಲ. ತಮ್ಮ ಸ್ವಂತ ಪರಿಶ್ರಮದಿಂದ ಇಂದು ಈ ಮಟ್ಟಕ್ಕೆ ಏರಿದ್ದಾರೆ. ದರ್ಶನ್ ಕೇವಲ ಯಶಸ್ವಿ ನಟ ಮತ್ರರಲ್ಲ. ತೂಗುದೀಪ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಅವರು ತಮ್ಮ ಸಹೋದರನೊಂದಿಗೆ ನಿರ್ಮಾಪಕರಾಗಿಯೂ ಹೊರಹೊಮ್ಮಿದ್ದಾರೆ.

ಜೊತೆ ಜೊತೆಯಲಿ 2006 ರಲ್ಲಿ ತೂಗುದೀಪ ಸಹೋದರರು ನಿರ್ಮಿಸಿದ ಮೊದಲ ಚಿತ್ರವಾಗಿದೆ. ದರ್ಶನ್ ಅವರ ತಂದೆ 1995 ರಲ್ಲಿ ನಿಧನರಾದ ಸಮಯದಲ್ಲಿ, ಅವರ ತಂದೆಯ ಚಿಕಿತ್ಸೆಯ ನಂತರ ಅವರ ಕುಟುಂಬಕ್ಕೆ ಯಾವುದೇ ರೀತಿಯ ಉಳಿತಾಯವಿರಲಿಲ್ಲ. ಆ ಸಮಯದಲ್ಲಿ ದರ್ಶನ್ ಜೀವನ ನಿರ್ವಹಣೆಗಾಗಿ ಮನೆ ಮನೆಗೆ ಹಾಲು ಮಾರಾಟ ಮಾಡಲು ಪ್ರಾರಂಭಿಸಿದರು ಮತ್ತು ಹೋಟೆಲ್‌ನಲ್ಲಿ ಕೆಲಸ ಮಾಡಿದರು. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೊದಲು, ನಟ ದರ್ಶನ್ ಕನ್ನಡ ಚಿತ್ರರಂಗದಲ್ಲಿ ಪ್ರೊಜೆಕ್ಷನಿಸ್ಟ್ ಮತ್ತು ಲೈಟ್‌ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಾಕಷ್ಟು ಶ್ರಮಪಟ್ಟು ಇಂದು ಕರ್ನಾಟಕದ ಜನತೆ ಗುರುತಿಸುವ ಮಟ್ಟಿಗೆ ಬೆಳೆದು ನಿಂತಿದ್ದಾರೆ ಎಂದರೆ ಅದು ಅವರ ಪರಿಶ್ರಮದ ಫಲ. ಸಾವಿರದಿಂದ ಲಕ್ಷ, ಲಕ್ಷದಿಂದ ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿರುವುದು ನಿಜವಾಗಿಯೂ ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಸರಿ.
ಚಿತ್ರರಂಗದ ಅನೇಕ ಯುವ ಕಲಾವಿದರು, ನಿರ್ದೇಶಕರು, ತಂತ್ರಜ್ಞರಿಗೆ ದರ್ಶನ್ ಪ್ರೋತ್ಸಾಹ ನೀಡುತ್ತಾರೆ, ಅವರ ಕೈಲಾದಷ್ಟು ಸಹಾಯ ಕೂಡ ಮಾಡುತ್ತಾರೆ.

ಇಂದು ಚಿತ್ರರಂಗದ ಬಹುತೇಕರು ದರ್ಶನ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಡಿ ಬಾಸ್, ಚಾಲೆಂಜಿಂಗ್ ಸ್ಟಾರ್, ಅಭಿಮಾನಿಗಳ ಆರಾಧ್ಯ ದೈವ ಮುಂತಾದ ಹೆಸರುಗಳಿಂದ ದರ್ಶನ್ ಇಂದು ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದಾರೆ. ನೀವು ಈಗಾಗಲೇ ಅವರ ಅಭಿಮಾನಿಗಳ ಸಂಘಗಳನ್ನು ಕರ್ನಾಟಕದಾದ್ಯಂತ ನೋಡಿರಬೇಕು. ಇಂದು ಇಷ್ಟು ದೊಡ್ಡ ಸ್ಟಾರ್ ನಟನಾಗಿ ಬೆಳೆದರೂ ಕೂಡ ದರ್ಶನ್ ಅವರು ಬೆಳೆದು ಬಂದ ಹಾದಿಯನ್ನು ಮರೆತಿಲ್ಲ. ಇವರ ಸರಳತೆ ಚಿತ್ರರಂಗದ ಬಹುತೇಕರಿಗೆ ಇಷ್ಟವಾಗುತ್ತದೆ.

Leave a Comment