ನಮ್ಮ ಸುತ್ತ ಮುತ್ತಲು ಇರುವಂತಹ ಈ ಒಂದು ಹೂವಿನ ಬಗ್ಗೆ ತಿಳಿದರೆ ನೀವು ತುಂಬಾ ಆಶ್ಚರ್ಯ ಪಡುತ್ತೀರ. ಸದಾ ಪುಷ್ಪವು ಒಂದು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದೆ. ತಿಳಿ ಗುಲಾಬಿ ಮಿಶ್ರಿತ ಕೆಂಪು ಬಿಳಿ ಬಣ್ಣದಲ್ಲಿ ನಾವು ಇದನ್ನು ಕಾಣಬಹುದು. ಎಲ್ಲಾ ಋತುವಿನಲ್ಲಿ ಇದು ಹೂವು ಬಿಡುವ ಕಾರಣ ಇದನ್ನ ಸದಾ ಪುಶ್ಪ ಅಥವಾ ನಿತ್ಯ ಪುಷ್ಪ ಎಂದು ಕರೆಯುತ್ತಾರೆ. ಈ ಗಿಡಮೂಲಿಕೆ ನಮ್ಮ ದೇಶದಲ್ಲಿ. ಮೆದಾಗಾಸ್ಕರ್ ಎಂಬ ತವರೂರು ಉದ್ಯಾನವನದಲ್ಲಿ ಅಲಂಕಾರಕ್ಕಾಗಿ ಬಳಸುತ್ತಿದ್ದ ಈ ಪುಷ್ಪಗಳ ಪುಟ್ಟ ಗಿಡ ಈಗ ಇಡೀ ಭಾರತದಲ್ಲಿ ಕಾಣ ಸಿಗುತ್ತವೆ.
ಎಲೆಗಳ ಹಸಿರು ಮತ್ತು ಎದುರಿಗೆ ಕಾಣುವ ತಿಳಿ ಗುಲಾಬಿ ಮತ್ತು ಬಿಳಿ ಬಣ್ಣದ ಹೂವು ಬಿಡುತ್ತದೆ. ಇನ್ನೊಂದು ಬಗೆಯಲ್ಲಿ ಬಿಳಿ ಹೂವುಗಳ ಮಧ್ಯೆ ಗುಲಾಬಿ ಬಣ್ಣ ಇರುತ್ತದೆ. ಆದರೆ ಇವೆಲ್ಲವೂ ಗುಣದಲ್ಲಿ ಒಂದೇ ಆಗಿದ್ದು ವರ್ಷವಿಡೀ ಹೂವು ಬಿಡುತ್ತವೆ. ಹಾಗಾದ್ರೆ ಇದರ ಔಷಧೀಯ ಉಪಯೋಗಗಳು ಏನು ಅನ್ನೋದನ್ನ ನೋಡೋಣ.
ನಿತ್ಯ ಪುಷ್ಪ ಹೂವಿನಲ್ಲಿ ೮೮ ಭಗೆಯ ಕ್ಷರ ಪದಾರ್ಥಗಳು ಇರುತ್ತವೆ. ಈ ಹೂವುಗಳನ್ನು ಸಂಸ್ಕರಿಸಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದರ ಎಲೆಗಳಲ್ಲಿ ದೊರಕುವ ವಿಲ್ಕೃಷ್ಟೆನ್ ಮತ್ತು ವಿಲ್ಲಾಸ್ತೇನೆನ್ ಎಂಬ ಅಂಶವನ್ನು ರಕ್ತದ ಕ್ಯಾನ್ಸರ್ ನಿವಾರಣೆಗೆ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಮಧುಮೇಹ ನಿಯಂತ್ರಣಕ್ಕಾಗಿ ಬಳಸುತ್ತಾರೆ. ಚಿಕ್ಕ ಮಕ್ಕಳಿಗೆ ಹೊಟ್ಟೆ ನೋವಿನ ನಿವಾರಣೆಗಾಗಿ ಇದರ ಎಲೆಯ ರಸವನ್ನು ಬಳಸುತ್ತಾರೆ.
ರಕ್ತದ ಒತ್ತಡದ ಸಮಸ್ಯೆಯಲ್ಲಿ ಸಹ ನಿತ್ಯ ಪುಷ್ಪದ ಕ್ಷರಗಳನ್ನು ಬಳಸುತ್ತಾರೆ. ರಕ್ತದ ಕ್ಯಾನ್ಸರ್ ನಿವಾರಣೆಗೆ ಚಿಕಿತ್ಸೆಯಲ್ಲಿ ಒಂದು ಹಿಡಿ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಅದನ್ನು ಚೂರ್ಣ ಮಾಡಿ ಅರ್ಧ ಟಿ ಸ್ಪೂನ್ ಚೂರ್ಣವನ್ನು ಒಂದು ಚಂಬು ನೀರಿಗೆ ಹಾಕಿ ಕಾಯಿಸಿ ಬೆಳಿಗ್ಗೆ ಮತ್ತು ಸಂಜೆ ಒಂದು ಟಿ ಸ್ಪೂನ್ ಅಷ್ಟು ಕುಡಿಯಬೇಕು. ರಕ್ತದ ಕ್ಯಾನ್ಸರ್ ಅನ್ನು ನಿವಾರಿಸುವ ಸಾಮರ್ಥ್ಯ ಇದಕ್ಕೆ ಇದೆ. ಸಕ್ಕರೆ ಕಾಯಿಲೆಗೆ ನಿತ್ಯ ಪುಷ್ಪ ಗಿಡದ ನಾಲ್ಕೈದು ಹಸಿರು ಎಲೆಗಳನ್ನು ತಂದು ಚೆನ್ನಾಗಿ ತೊಳೆದು ಪ್ರತಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಎಲೆಗಳನ್ನು ಅಗೆದು ತಿನ್ನುವುದು ಅಥವಾ ಹೂವುಗಳನ್ನು ಅಗೆದು ತಿನ್ನಬೇಕು.