ನವದೆಹಲಿಯ ಕರ್ನಾಟಕ ಭವನದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಸಿ ಮತ್ತು ಗ್ರೂಪ್ ಡಿ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಉಳಿಕೆ ಮೂಲ ವೃಂದದ 25 ಮತ್ತು ಹೈದೆರಾಬಾದ್ ಕರ್ನಾಟಕ ವೃಂದದ 7 ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಗಳನ್ನು ಆಹ್ವಾನಿಸಲಾಗಿದ್ದು ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಹೇಗೆ ಅರ್ಜಿ ಸಲ್ಲಿಸಬೇಕು , ಅಭ್ಯರ್ಥಿಗಳಿಗೆ ಏನೆಲ್ಲಾ ಅರ್ಹತೆಗಳು ಇರಬೇಕು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಮೊದಲಿಗೆ ಹುದ್ದೆಗಳ ವಿವರ ಈ ರೀತಿಯಾಗಿದೆ. ಸಹಾಯಕ ವ್ಯವಸ್ಥಾಪಕರು ಇಲ್ಲಿ 2 ಹುದ್ದೆಗಳು
ಸ್ವಾಗತಕಾರರು / ದೂರವಾಣಿ ಪ್ರವರ್ಧಕರು ಇಲಾಖೆಯಲ್ಲಿ 3 ಹುದ್ದೆಗಳು , ಕಿಚನ್ ಮೇಟ್ ಇಲ್ಲಿ 9 ಹುದ್ದೆಗಳು , ಪ್ಯೂನ್ ಕಮ್ ವಾಚ್‌ಮೆನ್ 6 ಹುದ್ದೆಗಳು , ಗಾರ್ಡನರ್ ಕಮ್ ಸ್ವೀಪರ್ 2 ಹುದ್ದೆಗಳು , ರೂಮ್ ಬಾಯ್ / ಬೇರರ್ 10 ಹುದ್ದೆಗಳು ಖಾಲಿ ಇದ್ದು ಒಟ್ಟು 32 ಹುದ್ದೆಗಳು ಖಾಲಿ ಇವೆ ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸದರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಭವನ, ನವದೆಹಲಿ ಇಲ್ಲಿಯೆ ಕಾರ್ಯ ನಿರ್ವಹಿಸಬೇಕಾಗಿರುತ್ತದೆ. ಪಿಂಚಣಿ ಸೌಲಭ್ಯವು ಇರಲಿದೆ.
ಇನ್ನೂ ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ಪ್ರಮುಖ ದಿನಾಂಕಗಳು ಯಾವವು ಅಂತಾ ನೋಡುವುದಾದರೆ , ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಆರಂಭದ ದಿನಾಂಕ 22/02/2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 31/03/2021 ಹಾಗೂ ಅರ್ಜಿ ಸಲ್ಲಿಕೆಯ ಶುಲ್ಕ ಪಾವತಿಸಲು ಕೊನೆ ದಿನಾಂಕ 07/04/2021. ಉದ್ಯೋಗದ ವಿಧ Full Time ಉದ್ಯೋಗ ಇರುವುದು ಹಾಗೂ ಉದ್ಯೋಗ ಕ್ಷೇತ್ರ ಸರ್ಕಾರಿ ಉದ್ಯೋಗ. ಇನ್ನು ಈ ಉದ್ಯೋಗಗಳಿಗೆ ನೀಡುವ ವೇತನದ ವಿವರ ಪ್ರತೀ ತಿಂಗಳಿಗೆ 17,000 ಇಂದ 52,000 ರೂಪಾಯಿಯವರೆಗೆ ನೀಡಲಾಗುವುದು. ಪ್ರಾವಿಣ್ಯತೆ ಪರೀಕ್ಷೆ / ದಾಖಲಾತಿ ಪರಿಶೀಲನೆ ದಿನಾಂಕ ನಂತರ ತಿಳಿಸಲಾಗುವುದು.
ಇನ್ನೂ ಅರ್ಜಿ ಸಲ್ಲಿಸಲು ಭರಿಸಬೇಕಾದ ಶುಲ್ಕ ಎಷ್ಟು ಎಂದು ನೋಡುವುದಾದರೆ ಸಾಮಾನ್ಯ ವರ್ಗ, ಇತರೆ ಹಿಂದುಳಿದ ವರ್ಗಗಳಿಗೆ 200 ರೂಪಾಯಿ, ಎಸ್‌ಸಿ, ಎಸ್‌ಟಿ, ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸಿದಲ್ಲಿ, ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಶುಲ್ಕವನ್ನು ಪಾವತಿಸಬೇಕು. ಇನ್ನೂ ಹೇಗೆ ಅರ್ಜಿ ಸಲ್ಲಿಸುವುದು ಎಂದು ನೋಡುವುದಾದರೆ , ನವದೆಹಲಿಯ ಕರ್ನಾಟಕ ಭವನದ ವೆಬ್ಸೈಟ್ ಗೆ ಭೇಟಿ ನೀಡಿ ಅಪ್ಲಿಕೇಶನ್ ಹಾಕಬಹುದು.
http://www.karnatakabhavana.karnataka.gov.in/ ಈ ವೆಬ್ಸೈಟ್ ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಯಾವ್ಯಾವ ಹುದ್ದೆಗೆ ಏನು ವಿದ್ಯಾರ್ಹತೆ, ಆಯ್ಕೆಪ್ರಕ್ರಿಯೆ ಹೇಗೆ ಎಂದು ತಿಳಿಯಲು ಮತ್ತು ಇತರೆ ಹೆಚ್ಚಿನ ಮಾಹಿತಿಗಾಗಿ ಅಫೀಶಿಯಲ್ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಿನ ನೋಟಿಫಿಕೇಶನ್ ಓದಿರಿ.
http://www.karnatakabhavan.karnataka.gov.in/kn/RECRUITMENT
http://nemaka.kar.nic.in/karnatakabhavan_recruit/
ಕೌಶಲ ಮತ್ತು ಶೈಕ್ಷಣಿಕ ಅರ್ಹತೆ ನೋಡುವುದಾದರೆ ಕೌಶಲ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ /ಪಿಯುಸಿ / ಪದವಿ ಆಗಿರಬೇಕು ಹಾಗೂ ಕಾರ್ಯಾನುಭವ ಯಾವುದೂ ಇಲ್ಲದೆ ಇದ್ದರೂ ತೊಂದರೆ ಇಲ್ಲ.
ನೇಮಕಾತಿ ಸಂಸ್ಥೆ ಹೆಸರು ಸಂಸ್ಥೆಯ ಹೆಸರು ನವದೆಹಲಿಯ ಕರ್ನಾಟಕ ಭವನ
ವೆಬ್‌ಸೈಟ್ ವಿಳಾಸ http://www.karnatakabhavan.karnataka.gov.in/kn
ಉದ್ಯೋಗ ಸ್ಥಳದ ವಿಳಾಸ :- ದೆಹಲಿ
ಸ್ಥಳ :-ದೆಹಲಿ ಕರ್ನಾಟಕ ಭವನ
ಪ್ರದೇಶ ನವದೆಹಲಿ , ಅಂಚೆ ಸಂಖ್ಯೆ 110021 ದೇಶ ಭಾರತ.