ಸಾಮಾನ್ಯವಾಗಿ ಮನೆಗಳಲ್ಲಿ ಜೀರಳೆ, ಹಲ್ಲಿ, ಇರುವೆಯಂತಹ ಕ್ರೀಮಿಕೀಟ ಗಳದ್ದೆ ಕಾರುಬಾರು. ಅಡುಗೆ ಮಾಡುವ ಗೃಹಿಣಿಯರಿಗೆ ಈ ಕ್ರೀಮಿಕೀಟಗಳಿಂದ ಸಮಸ್ಯೆ ತಪ್ಪಿದ್ದಲ್ಲ. ಅಪಾಯಕಾರಿ ಯಾಗಿರುವ ಈ ಕ್ರೀಮಿ ಕೀಟಗಳು ಮನೆಯ ಸದಸ್ಯರಿಗೆ ಇನ್ನಿಲ್ಲದ ಕೀರಿಕೀರಿ ನೀಡುತ್ತವೆ. ಇದರ ಪರಿಹಾರಕ್ಕೆ ರಾಸಾಯನಿಕ ಕೀಟನಾಶಕ ಬಳಸಿದರು ಯಾವುದೇ ಪ್ರಯೋಜನವಾಗುವುದಿಲ್ಲ. ಇದಕ್ಕೆ ಮನೆಯಲ್ಲಿನ ಸರಳ ಉಪಾಯದಿಂದ ಕ್ರೀಮಿಕೀಟಗಳನ್ನು ನಿಯಂತ್ರಿಸಬಹುದು.
ಮೊಟ್ಟೆಯ ಸಿಪ್ಪೆ: ಎಲ್ಲರ ಮನೆಯಲ್ಲೂ ಹಲ್ಲಿ ಇದ್ದೆ ಇರುತ್ತದೆ ಆದರೆ ಅದರ ನಿಯಂತ್ರಣ ಅಷ್ಟು ಸುಲಭವಲ್ಲ ಅದಕ್ಕೆ ಹೀಗೆ ಮಾಡಿಮೊಟ್ಟೆಯನ್ನು ಬಳಸಿದ ನಂತರ ಅದರ ಸಿಪ್ಪೆಯನ್ನ ಬಿಸಾಡದೆ ಅದನ್ನ ಎಲ್ಲ ಮುಖ್ಯ ಸ್ಥಳದಲ್ಲಿ ಇಡಿ. ಮೊಟ್ಟೆಯ ವಾಸನೆಯಿಂದ ಹಲ್ಲಿ ಹತ್ತಿರವು ಸುಳಿಯೋದಿಲ್ಲ. ಈ ರೀತಿ ಹಲ್ಲಿಯನ್ನ ನಿಯಂತ್ರಿಸಬಹುದು.
ಬೆಳ್ಳುಳ್ಳಿ: ಹಲ್ಲಿಒಡಿಸಲು ಇನ್ನೊಂದು ಉಪಾಯವಿದೆ ಬೆಳ್ಳುಳ್ಳಿಯ ಕಟ್ಪನ್ನ ಮನೆಯ ದ್ವಾರ ,ಕಿಟಕಿ, ಅಡುಗೆ ಮನೆಯಲ್ಲಿ ನೇತುಹಾಕಿ ಅಥವಾ ಬೆಳ್ಳುಳ್ಳಿ ರಸವನ್ನ ಆಯಾ ಸ್ಧಳಗಳಲ್ಲಿ ಇಟ್ಟರೆ ಅದರ ವಾಸನೆಗೆ ಹಲ್ಲಿಗಳು ಮಾಯವಾಗಿ ಬಿಡುತ್ತವೆ.
ಕಾಫಿ ಬೀಜಗಳು ಹಾಗೂ ತಂಬಾಕು: ಕಾಫಿ ಬೀಜದ ಪುಡಿ ಮತ್ತು ತಂಬಾಕು ಪುಡಿಯನ್ನು ಮಿಶ್ರಿಸಿ ಉಂಡೆ ಮಾಡಿಕೊಂಡು ಟೂತ್ ಪೀಕ್ ನಲ್ಲಿ ಹಾಕಿ ಹಲ್ಲಿಗಳಿರುವ ಸ್ಥಳದಲ್ಲಿ ನೇತು ಹಾಕುವುದರ ಮೂಲಕ ಹಲ್ಲಿಗಳನ್ನು ನಿಯಂತ್ರಿಸಬಹುದು.
ಈರುಳ್ಳಿ :ಹಲ್ಲಿಗಳನ್ನು ನಿಯಂತ್ರಿಸಲು ಈರುಳ್ಳಿ ಗಳ ಬಳಕೆಯೂ ಒಂದು ವಿಧಾನವಾಗಿದ್ದು , ಈರುಳ್ಳಿ ರಸವನ್ನು ಹಲ್ಲಿಗಳಿರುವ ಸ್ಥಳಗಳಿಗೆ ಸ್ಪ್ರೇ ಮಾಡಿದರೆ ಹಲ್ಲಿಗಳು ನಾಶವಾಗುತ್ತದೆ. ಜೀರಳೆಗಳ ನಿಯಂತ್ರಣ ಕಾಫಿ ಬೀಜ: ನಿಮ್ಮ ಮನೆಯಿಂದ ಜೀರಳೆಗಳನ್ನು ಹೊರಹಾಕಲು ಕಾಫಿ ಬೀಜದ ಬಳಕೆ ಪರಿಣಾಮಕಾರಿ. ಕಾಫಿ ಬೀಜಗಳನ್ನು ಸಣ್ಣ ಪಾತ್ರಗಳಲ್ಲಿ ಮನೆಯ ಮುಖ್ಯ ಸ್ಥಳದಲ್ಲಿ ಇಟ್ಟರೆ ಜೀರಳೆಗಳು ಮನೆಯಿಂದ ಹೊರಹೋಗಲು ಸಾದ್ಯ.
ಬೋರ್ಯಕ್ ಪೌಡರ್ ಮತ್ತು ಸಕ್ಕರೆ: ಬೋರ್ಯಕ್ ಪೌಡರ್ ಮತ್ತು ಸಕ್ಕರೆಯ ಮಿಶ್ರಣವನ್ನ ಜೀರಳೆಗಳು ಇರುವ ಜಾಗದಲ್ಲಿ ಸ್ಪ್ರೇ ಮಾಡಿದರೆ ಜೀರಳೆಗಳು ನಾಶವಾಗುತ್ತದೆ. ಅಷ್ಟೇ ಅಲ್ಲದೆ
ಸ್ನಾನ ಮಾಡಿದ ನಂತರ ಉಳಿದ ಸೋಪ್ ದ್ರವಣವನ್ನ ನೇರವಾಗಿ ಜೀರಳೆಗಳಿರುವ ಸ್ಥಳಗಳಲ್ಲಿ ಸಿಂಪಡಿಸಿದರೆ ಅದರ ವಾಸನೆಗೆ ಅಲ್ಲೇ ಜೀರಳೆಗಳು ನಾಶವಾಗುತ್ತವೆ.