ಸಾಮಾನ್ಯವಾಗಿ ಕೆಲವು ಹಣ್ಣುಗಳು ನಮ್ಮ ಆರೋಗ್ಯ ಕ್ಕೆ ತುಂಬಾ ಉಪಯೋಗಕಾರಿ. ಹಳ್ಳಿಗಳಲ್ಲಿ ನೈಸರ್ಗಿಕವಾಗಿ ಬೆಳೆದ ಹಣ್ಣುಗಳು ರುಚಿಯ ಜೊತೆಗೆ ಒಳ್ಳೆಯ ಪೋಷಕಾಂಶಗಳನ್ನು ಹೊಂದಿರುತ್ತವೆ.
ಅದೇ ಈ ನೇರಳೆ ಹಣ್ಣುನಿಂದ ಹಲವಾರು ಉಪಯುಕ್ತಕಾರಿ ಅಂಶಗಳಿರುತ್ತವೆ.ಈ ಹಣ್ಣಿನಲ್ಲಿ ಪ್ರೋಟಿನ್ , ಫೈಬರ್ , ಆರ್ಗೆನಿಕ್ ಅಂಶಗಳು ಅಧಿಕ ವಾಗಿರುತ್ತದೆ.ಹಾಗಾಗಿ ನೇರಳೆ ಹಣ್ಣಿನಿಂದ ಆಗುವ ಲಾಭಗಳೇನು?
ನೇರಳೆ ಹಣ್ಣಿನಲ್ಲಿ ಕಬ್ಬಿಣಾಂಶ ಹೆಚ್ಚಾಗಿರುತ್ತದೆ. ಇದರಿಂದ ಹಿಮೋಗ್ಲೋಬಿನ್ ಮತ್ತು ಆಮ್ಲಜನಕದಿಂದ ಕೂಡಿದ ರಕ್ತ ದೇಹದಲ್ಲಿ ಸಂಚರಿಸುತ್ತದೆ ಹಾಗೂ ರಕ್ತ ಶುದ್ಥಿಕರಿಸಿ ಮುಖದಲ್ಲಿನ ಕಾಂತಿ ಹೆಚ್ಚಾಗುತ್ತದೆ. ನೇರಳೆ ಹಣ್ಣಿನ ಬೀಜಗಳನ್ನು ರುಬ್ಬಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಕಡಿಮೆ ಆಗುತ್ತದೆ. ಅರ್ಜೀಣ ಹಾಗೂ ಹೊಟ್ಟೆ ನೋವು ಸಂಬಂಧಿತ ಸಮಸ್ಯೆಗಳಿರುವವರು ನೇರಳೆ ಹಣ್ಣಿನ ಸೇವನೆ ಮಾಡುವುದು ಒಳಿತು. ಜೊತೆಗೆ ಇದರ ಜ್ಯೂಸ್ ಕುಡಿದರೆ ಲಾಲಾ ರಸ ಉತ್ಪತ್ತಿಯಾಗಿ ರ್ಜೀಣ ಕ್ರಿಯೆ ಸರಾಗವಾಗಿ ಆಗುತ್ತದೆ.
ಈ ಹಣ್ಣು ದೇಹದಲ್ಲಿರುವ ಸಕ್ಕರೆ ಪ್ರಮಾಣದ ಯಾವುದೇ ಪರಿಣಾಮ ಬೀರದೆಇರುವುದರಿಂದ ಸಕ್ಕರೆ ಕಾಯಿಲೆ ಇರುವವರಿಗೆ ಈ ಹಣ್ಣು ಉತ್ತಮ. ಅಲ್ಲದೆ ಸಕ್ಕರೆ ಕಾಯಿಲೆ ಲಕ್ಷಣಗಳಾದ ಬಾಯಾರಿಕೆ ಪದೇ ಪದೇ ಮೂತ್ರ ವಿಸರ್ಜನೆ ಮಾಡುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ನೇರಳೆ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶಗಳು ದೇಹದಲ್ಲಿನ ಬ್ಯಾಕ್ಟೀರಿಯಾ ಗಳನ್ನು ಹೋಗಲಾಡಿಸುತ್ತದೆ. ಒಟ್ಟಾರೆ ಹಳ್ಳಿಗಳಲ್ಲಿ ಹೆಚ್ಚಾಗಿ ಸಿಗುವ ನೇರಳೆ ಹಣ್ಣನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಈಗಿನ ಶೈಲಿಯಲ್ಲಿನ ಆಹಾರ ತಿನ್ನುವುದು ಸರಿಯಲ್ಲ. ನೈಸರ್ಗಿಕ ಸಿಗುವ ಈ ರೀತಿಯ ಹಣ್ಣುಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.