ಮುತ್ತುಗಳು ಸಮುದ್ರದಾಳದಲ್ಲಿ ಹೇಗೆ ತಯಾರಾಗುತ್ತೆ ಅನ್ನೋ ಇಂಟ್ರೆಸ್ಟಿಂಗ್ ವಿಚಾರ, ಒಮ್ಮೆ ಓದಿ

ಮುತ್ತುಗಳು ಪ್ರಕೃತಿಯ ಅಸಾಧಾರಣ ಹಾಗೂ ಅತ್ಯಮೂಲ್ಯವಾದ ಸೃಷ್ಠಿ. ಅತ್ಯಾಕರ್ಷಕವಾಗಿ ಸುಂದರವಾಗಿ ಹೊಳೆಯುವ ಮುತ್ತುಗಳು ಭೂಮಂಡಲದಲ್ಲಿ ಹೇಗೆ ಉತ್ಪತ್ತಿ ಆಗುತ್ತವೆ ಎನ್ನುವುದು ಪ್ರಕೃತಿಯ ಒಂದು ವಿಸ್ಮಯವೇ ಸರಿ. ಎಲ್ಲ ವಜ್ರ ವೈಢೂರ್ಯಗಳು ಆಭರಣಗಳು ಇವುಗಳೆಲ್ಲ ಹಲವಾರು ಲೋಹದ ಗಣಿಗಳಿಂದ ಸಿಗುತ್ತವೆ ಆದರೆ ಮುತ್ತು ಎಂಬ ಅಪೂರ್ವವಾದ ವಸ್ತುವಿನ ಜನನ ಮಾತ್ರ ಪೃಕೃತಿಯ ಒಂದು ಅದ್ಭುತ ವಿಶಿಷ್ಟ ಸೃಷ್ಠಿ ಅಂತ ಹೇಳಬಹುದು. ಒಂದು ಜೀವಂತ ಜಂತುವಿನಿಂದ ಸಮುದ್ರದ ಚಿಪ್ಪಿನ ಒಳಗೆ ಸಿಗುವ ಈ ಮುತ್ತು ಒಂದು ಜೈವಿಕ ಕ್ರಿಯೆಯಿಂದ ಉತ್ಪತ್ತಿ ಆಗತ್ತೆ ಅಂತ ಹೇಳಬಹುದು.

ವೈಸ್ಟರ್ ಎಂಬ ಸಮುದ್ರ ಜೀವಿಗಳ ಚಿಪ್ಪಿನ ಒಳಗಿನ ಮುತ್ತುಗಳು ಜೈವಿಕ ಕ್ರಿಯೆಯಿಂದ ಮುತ್ತುಗಳು ದೊರೆಯುತ್ತವೆ. ಈ ಒಯೆಸ್ಟರ್ ಕವಚದಿಂದ ಸಿಗುವ ಮುತ್ತುಗಳು ಸಿಗುವಾಗಲೇ ಪರಿಪೂರ್ಣವಾಗಿ ದೊರೆಯುತ್ತವೆ. ಯಾವುದೇ ಕಟಿಂಗ್ ಮಾಡುವುದಾಗಲಿ ಅಥವಾ ಪೊಲೀಶಿಂಗ್ ಮಾಡುವುದು ಇದ್ಯಾವುದೂ ಕೂಡ ಸಮುದ್ರದ ಚಿಪ್ಪಿಗೆ ಬೇಕಾಗುವುದಿಲ್ಲ. ತಯಾರಾಗಿಯೇ ಬರುವ ಈ ಮುತ್ತುಗಳು ನಿಜಕ್ಕೂ ನಿಸರ್ಗದ ಒಂದು ಅದ್ಭುತ ಅಂತಾನೆ ಹೇಳಬಹುದು. ಸಮುದ್ರದಿಂದ ಸಿಗುವ ಮುತ್ತುಗಳು ಹೆಚ್ಚಿನದಾಗಿ ಈ ಒಯೆಸ್ಟರ್ ಜೀವಿಗಳಿಂದನೆ ಸಿಗುತ್ತವೆ. ಇವಲ್ಲದೆ ಇನ್ನು ಹಲವಾರು ಜೀವಿಗಳಿಂದ ಚಿಪ್ಪಿನಲ್ಲಿ ಕೂಡ ಮುತ್ತುಗಳು ಸಿಗುತ್ತವೆ. ಮೊಸಿಲ್ಲಾ, ಕ್ಲಾಮ್ಪ್ಸ್, ಸ್ಕಾಲೋಪ್ಸ್, ಸೀಸ್ ಸ್ನೈಲ್ಸ್ ಮುಂತಾದ ಜೀವಿಗಳ ಚಿಪ್ಪಿನಲ್ಲಿ ಮುತ್ತುಗಳು ಸಿಂಮರು ಬಹಳ ವಿರಳ.

ಉಪ್ಪು ನೀರಿನಲ್ಲಿ ಹಾಗೂ ಸಮುದ್ರದ ನಿರುಗಳಲ್ಲಿ ಮುತ್ತುಗಳು ಹೆಚ್ಚಾಗಿ ತಯಾರಿ ಆಗುತ್ತವೇ. ಈ ಒಯೆಸ್ಟರ್ ಜೀವಿಗಳಲ್ಲಿ ದೇಹ ಚಿಪ್ಪಿನಿಂದ ಕುಡಿರತ್ತೆ. ಈ ಜೀವಿಗಳು ಬೆಳೆದು ದೊಡ್ಡವರಾಗುತ್ತಿದ್ದಂತೆ ಅವುಗಳ ಚಿಪ್ಪು ಕೂಡ ದೊಡ್ಡದಾಗುತ್ತ ಹೋಗುತ್ತದೆ. ಈ ಒಯೆಸ್ಟರ್ ಜೀವಿಗಳಲ್ಲಿ ಇರುವ ಮಂಟಲ್ ಎಂಬ ಅಂಗ ಮುತ್ತುಗಳು ಬೆಳೆಯಲು ಸಹಾಯ ಮಾಡುತ್ತವೆ. ಆಹಾರದಲ್ಲಿರುವ ಖನಿಜ ಅಂಶಗಳನ್ನು ಬಳಸಿಕೊಂಡು ಮಾಂಟಲ್ ಚಿಪ್ಪುಗಳನ್ನ ತಯಾರಿಸುತ್ತದೆ. ಇದರಿಂದ ಉತ್ಪಾದಿಸಲ್ಪಡುವ ಚಿಪ್ಪಿಗೆ ಲೇಕರ್ ಅಂತ ಕರೆಯುತ್ತಾರೆ. ಈ ಚಿಪ್ಪುಗಳ ಒಳ ಮೈ ಪದರ ಲೇಕರ್ ಗಲ್8ನದ ಕುಡಿರತ್ತೆ. ಒಯೆಸ್ಟರ್ ಗಳ ದೇಹದ ಅಂಗದಲ್ಲಿ ಮಾಂಟೆಲ್ ಮತ್ತು ಚಿಪ್ಪಿನ ಒಳಗಡೆ ಬಾಹ್ಯ ವಸ್ತುಗಳು ಪ್ರವೇಶ ಮಾಡಿದಾಗ ತನ್ನನ್ನು ತಾನು ರಕ್ಷಿಸಿಮೊಳ್ಳುವ ಸಲುವಾಗಿ ಈ ಮಾಂಟೆಲ್ ಲೇಕರ್ ಪದರಗಳನ್ನ ಆಗ ಬಾಹ್ಯ ವಸ್ತುಗಳ ಸುತ್ತಲೂ ಕಟ್ಟಲು ಶುರು ಮಾಡಿತ್ತದೆ.

ಕ್ರಮೇಣವಾಗಿ ಇದೆ ಮುತ್ತುಗಳಾಗಿ ಮಾರ್ಪಾಡು ಹೊಂದುತ್ತವೆ. ಹೀಗೆ ಹೊರ ಪದಾರ್ಥವನ್ನು ಮುತ್ತಾಗಿ ಪರಿವರ್ತಿಸುವುದರಿಂದ ಸಿಂಪಿಗೆ ಆದ ಕಿರಿ ಕಿರಿ ಕಡಿಮೆ ಆಗತ್ತೆ. ಇಸು ಐಎಂಪಿಗಳು ಮುತ್ತನ್ನ ತಯಾರಿಸುವ ಒಂದು ಅದ್ಭುತವಾದ ಪ್ರಕ್ರಿಯೆ. ೧೯ ನೇ ಶತಮಾನದ ಆರಂಭದ ಕಾಲದಲ್ಲಿ ಮುತ್ತುಗಳು ಸಮುದ್ರದಿಂದಲೇ ದೊರೆಯುತ್ತ ಇತ್ತು. ಸಮುದ್ರದ ಆಳದಿಂದಲೇ ಅಲ್ಲಿಗೆ ಹೋಗಿ ಮುತ್ತುಗಳನ್ನ ತರುತ್ತ ಇದ್ದರು. ಹೀಗೆ ಪ್ರಕೃತಿ ಸ್ವಭಾವದಿಂದ ತಾನಾಗಿ ತಾನೇ ತಯಾರಾದ ಮುತ್ತುಗಳು ಬಹಳ ದುಬಾರಿ ಬೆಲೆಯನ್ನು ಹೊಂದಿರುವ ಮುತ್ತುಗಳು. ಆದರೆ ಇವತ್ತು ಆಭರಣಗಳಲ್ಲಿ ಹೆಚ್ಚಾಗಿ ಕಾಣಸಿಗುವ ಹೆಚ್ಚಿನ ಮುತ್ತುಗಳು ಪರ್ಲ್ ಫಾರ್ಮಿಂಗ್ ಅಂದರೆ ಮುತ್ತಿನ ವ್ಯವಸಾಯದಿಂದಾಗಿ ತಯಾರಾದ ಮುತ್ತುಗಳು. ಹೀಗೆ ಹೊರಗಿನ ಧೂಳಿನ ಕಣಗಳು, ಮರಳಿನ ಕಣಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕೆ ಮತ್ತೆ ಅದರಿಂದ ಉಂಟಾಗುವ ಕಿರಿ ಕಿರಿಯನ್ನ ತಪ್ಪಿಸಿಕೊಳ್ಳಲು ಮುತ್ತುಗಳು ರಚಿಸಲ್ಪಡುತ್ತವೆ.

Leave a Comment