ನಾವು ದಿನನಿತ್ಯ ನೋಡುವ ಕೆಲವು ವಿಷಯಗಳು ವಿಚಿತ್ರವಾಗಿರುತ್ತದೆ ಆದರೆ ಅವುಗಳ ಬಗ್ಗೆ ನಾವು ಎಂದಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ಉದಾಹರಣೆಗೆ ಸರೋವರದಲ್ಲಿ ಇಳಿದರೆ ಜೀವಿಗಳು ಕಲ್ಲಾಗುವುದು ಏಕೆ, ಲಾರಿಗಳ ಕೆಳಗೆ ಎರಡು ಚಕ್ರಗಳನ್ನು ಲಿಫ್ಟ್ ಮಾಡಿ ಇಡಲು ಕಾರಣ, ಪ್ರಾಣಿಗಳು ಬ್ರಷ್ ಮಾಡದಿದ್ದರೂ ಅವರ ಹಲ್ಲುಗಳು ಏಕೆ ಹಳದಿ ಆಗುವುದಿಲ್ಲ ಈ ರೀತಿಯ ಹಲವು ವಿಷಯಗಳ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಒಂದು ಸರೋವರವಿದೆ ಅದರಲ್ಲಿ ಮನುಷ್ಯ, ಪ್ರಾಣಿ ಹೀಗೆ ಯಾವುದೇ ಜೀವಿ ಇಳಿದರೆ ಕಲ್ಲಾಗಿ ಹೋಗುತ್ತಾರೆ ಅದರ ಹೆಸರು ನಟ್ರಾನ ಲೇಕ್. ಇದರಲ್ಲಿ ಇಳಿದರೆ ಕಲ್ಲಾಗಲು ಕಾರಣ ಸೋಡಿಯಂ ಮತ್ತು ಸೋಡಾ ಪ್ರಮಾಣ ಜಾಸ್ತಿ ಇರುತ್ತದೆ ಆದ್ದರಿಂದ ಯಾವುದೇ ಜೀವಿ ಈ ಸರೋವರದಲ್ಲಿ ಇಳಿದರೆ ಕ್ಯಾಲ್ಶಿಫೈಡ್ ಆಗಿ ಪರಿವರ್ತನೆಯಾಗುತ್ತಾರೆ. ಮನುಷ್ಯರು ಈ ಸರೋವರದಲ್ಲಿ ಇಳಿಯುವುದಿಲ್ಲ ಆದರೆ ಪ್ರಾಣಿ,ಪಕ್ಷಿಗಳು ಈ ಸರೋವರದಲ್ಲಿ ಇಳಿಯಲು ಹೋಗಿ ಕಲ್ಲಾಗಿ ಸತ್ತು ಹೋಗುತ್ತವೆ.
ಗಂಡು ಜಕಾನ ಬರ್ಡ್ ಎಂಬ ಪಕ್ಷಿ ತನ್ನ ಮರಿಗಳಿಗೆ ಯಾವುದಾದರೂ ಪ್ರಾಣಿಗಳಿಂದ ಆಪತ್ತು ಇದೆ ಎಂದು ತಿಳಿದರೆ ಮರಿಗಳನ್ನು ಕಾಪಾಡಲು ತನ್ನ ದೇಹದಲ್ಲಿ ಬಚ್ಚಿಟ್ಟುಕೊಳ್ಳುತ್ತದೆ ಆಗ ಮರಿಗಳ ಕಾಲುಗಳು ಹೊರಗೆ ಕಾಣುತ್ತದೆ. ನಂತರ ಮರಿಗಳಿಗೆ ಆಪತ್ತು ಇಲ್ಲ ಎಂದು ಗೊತ್ತಾದಾಗ ಮರಿಗಳು ಹೊರಗೆ ಬರುತ್ತದೆ. ಜಪಾನ್ ನಲ್ಲಿರುವ ಡೋನಟ್ ರೊಬೋಟಿಕ್ ಕಂಪನಿ ಒಂದು ಮಾಸ್ಕ್ ತಯಾರಿಸುತ್ತದೆ ಇದರ ಹೆಸರು ಸಿ ಮಾಸ್ಕ್ ಈ ಮಾಸ್ಕ್ ಫೋನ್ ಬ್ಲ್ಯೂಟೂತ್ ಗೆ ಕನೆಕ್ಟ್ ಆಗಿರುತ್ತದೆ ಇದರಿಂದ ಇಂಗ್ಲಿಷ್, ಸ್ಪ್ಯಾನಿಷ್, ಚೈನೀಸ್ ಮುಂತಾದ ಭಾಷೆಗಳನ್ನು ಕಲಿತುಕೊಳ್ಳಬಹುದು. ನಾವು ಮಾತನಾಡಿದ ಭಾಷೆ ಮೊಬೈಲ್ ನಲ್ಲಿ ಟೆಕ್ಸ್ಟ್ ರೂಪದಲ್ಲಿ ಆಯ್ಕೆ ಮಾಡಿದ ಭಾಷೆಗೆ ಪರಿವರ್ತನೆಯಾಗುತ್ತದೆ. ಇದರ ಬೆಲೆ 40 ಡಾಲರ್ ಇಂಡಿಯನ್ ರೂಪಾಯಿಯಲ್ಲಿ 3,000 ರೂಪಾಯಿ ಆಗುತ್ತದೆ.
ಜಲ್ಲಿ ಫಿಶ್ ಗಳು ಸುಮಾರು 500 ಮಿಲಿಯನ್ ವರ್ಷಗಳಿಂದ ಭೂಮಿಯ ಮೇಲಿವೆ. ಇವುಗಳಿಗೆ ಬ್ರೇನ್, ಹಾರ್ಟ್, ಲಂಗ್ಸ್ ಇರುವುದಿಲ್ಲ ಅವು ಅವುಗಳ ಚರ್ಮದಿಂದಲೆ ಆಮ್ಲಜನಕವನ್ನು ತೆಗೆದುಕೊಳ್ಳುತ್ತದೆ. ಇವುಗಳ ದೇಹದಲ್ಲಿ ರಕ್ತ ಇರುವುದಿಲ್ಲ ಇದರಿಂದ ಅವುಗಳಿಗೆ ಹೃದಯದ ಅವಶ್ಯಕತೆ ಇರುವುದಿಲ್ಲ. ಇವು ನರ್ವಸಗಳಿಂದ ಹೊರಗಡೆ ಆಗುವ ಬದಲಾವಣೆಗಳಿಗೆ ಪ್ರತಿಕ್ರಿಯೆ ನೀಡುತ್ತದೆ. ಇವುಗಳಿಗೆ ಸಾವಿಲ್ಲ ಯಾರಾದರೂ ಸಾಯಿಸಿದರೆ ಮಾತ್ರ ಸಾವು.
ಬೆಕ್ಕು ಪ್ರಪಂಚವನ್ನು ಬ್ಲ್ಯೂ, ಯೆಲ್ಲೋ, ಬ್ರೌನ್ ಶೇಡ್ಸನಲ್ಲಿ ನೋಡುತ್ತದೆ. ನಾವು ಒಂದು ವಸ್ತುವನ್ನು ನೋಡುತ್ತಿದ್ದರೆ ಅದರ ಮೇಲೆ ಮಾತ್ರ ಫೋಕಸ್ ಮಾಡಬಹುದು ಸೈಡ್ ಏನಿದೆ ಎಂದು ನೋಡಲು ಸಾಧ್ಯವಿಲ್ಲ ಆದರೆ ಬೆಕ್ಕು ಸೈಡ್ ಕೂಡ ನೋಡುತ್ತದೆ. ನಮಗಿಂತ ಬೆಕ್ಕುಗಳಿಗೆ ನೈಟ್ ವಿಷನ್ 6 ಪಟ್ಟು ಜಾಸ್ತಿ ಇರುತ್ತದೆ. ನಾವು ಸರಿಯಾಗಿ ಹಲ್ಲು ತಿಕ್ಕದೇ ಇದ್ದರೆ ಹಲ್ಲು ಹಳದಿಯಾಗುತ್ತದೆ ಆದರೆ ಪ್ರಾಣಿಗಳು ಹಲ್ಲು ತಿಕ್ಕದೇ ಇದ್ದರೂ ಹಲ್ಲು ಹಳದಿಯಾಗುವುದಿಲ್ಲ ಕಾರಣ ನಾವು ಬೇಯಿಸಿದ ಆಹಾರವನ್ನು ಸೇವಿಸುತ್ತೇವೆ ಅದರಲ್ಲಿ ಕಾರ್ಬೋಹೈಡ್ರೇಟ್ ಮತ್ತು ಶುಗರ್ ಕಂಟೆಂಟ್ ಇರುತ್ತದೆ. ಪ್ರಾಣಿಗಳು ಬೇಯಿಸದೆ ಇರುವ ಆಹಾರವನ್ನು ತಿನ್ನುತ್ತವೆ.
ನಾವು ಕೊಲ್ಡ್ರಿಂಕ್ಸ ಕುಡಿಯುತ್ತೇವೆ ಪ್ರಾಣಿಗಳು ಕೇವಲ ನೀರನ್ನು ಕುಡಿಯುತ್ತವೆ ಮತ್ತು ಪ್ರಾಣಿಗಳಿಗೆ ಹಲ್ಲಿನ ಸಮಸ್ಯೆ ಬರುವುದರೊಳಗೆ ಅವು ಸತ್ತು ಹೋಗುತ್ತವೆ ಮತ್ತು ಕೆಲವು ಪ್ರಾಣಿಗಳು ಸಸ್ಯಗಳನ್ನು ತಿನ್ನುವುದರಿಂದ ಅವುಗಳ ಹಲ್ಲು ಕ್ಲೀನ್ ಆಗುತ್ತದೆ. ನಾಯಿ ಒಂದು ಕಾಲನ್ನು ಎತ್ತಿ ಮರಗಳಿಗೆ, ಕಾರಿಗೆ ಸುಸ್ಸು ಮಾಡುತ್ತದೆ ಏಕೆಂದರೆ ನಾಯಿಗಳು ಇದು ತನ್ನ ಜಾಗ ಎಂದು ಬೇರೆ ನಾಯಿಗಳಿಗೆ ತಿಳಿಸಲು ಒಂದು ಕಾಲನ್ನು ಎತ್ತಿ ಸುಸ್ಸು ಮಾಡುತ್ತದೆ. ಲಾರಿಗಳಲ್ಲಿ ಎರಡು ಚಕ್ರಗಳನ್ನು ಲಿಫ್ಟ್ ಮಾಡುವುದರಿಂದ ಇಂಧನ ಉಳಿತಾಯವಾಗುತ್ತದೆ ಹಾಗೂ ಟ್ಯೈರ್ ಜಾಸ್ತಿ ದಿನ ಬಾಳಿಕೆ ಬರುತ್ತದೆ.