ಸ್ತ್ರೀಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಅದೇ ರೀತಿ ಕ್ರಿಕೆಟ್ ಪ್ರಪಂಚದಲ್ಲಿ ಸಾಧನೆ ಮಾಡಿದ ಮಹಿಳೆ ಸ್ಮೃತಿ ಮಂದಣ್ಣ ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಸ್ತ್ರೀಯರು ಪುರುಷರಿಗೆ ಸರಿಸಮಾನವಾಗಿ ಎಲ್ಲಾ ರಂಗದಲ್ಲೂ ಮುಂದೆ ಇದ್ದಾರೆ. ಭಾರತೀಯ ಮಹಿಳಾ ಕ್ರಿಕೆಟರ್ ಸ್ಮೃತಿ ಮಂದಣ್ಣ ಇವರು ಕ್ರಿಕೆಟ್ ಪ್ರಪಂಚದಲ್ಲಿ ಬಹಳ ಫೇಮಸ್ ಆಗಿದ್ದಾರೆ, ಭಾರತವನ್ನು ಪ್ರತಿನಿಧಿಸಿ ಇವರು ಕ್ರಿಕೆಟ್ ಆಡುತ್ತಾರೆ. ಇವರು ಬ್ಯಾಟ್ಸ್ ಮನ್ ಆಗಿದ್ದಾರೆ, ಇವರು ಕ್ರಿಕೆಟ್ ನಲ್ಲಿ ಸಾಧನೆ ಮಾಡಿದ್ದಾರೆ. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲುವು ಪಡೆದಿದ್ದಾರೆ.
ಇವರು 55 ಕೆ.ಜಿ ತೂಕವನ್ನು ಹೊಂದಿದ್ದಾರೆ, 5.4 ಎತ್ತರವಿದ್ದರೆ ಇವರು 18 ಜುಲೈ 1996 ರಲ್ಲಿ ಮುಂಬೈನಲ್ಲಿ ಹುಟ್ಟಿದ್ದಾರೆ, ಇವರು ಹಿಂದೂ ಧರ್ಮದವರಾಗಿದ್ದಾರೆ. ಇವರ ಹವ್ಯಾಸ ಸಂಗೀತ ಕೇಳುವುದು. ಇವರ ತಂದೆಯ ಹೆಸರು ಶ್ರೀನಿವಾಸ ಮಂದಣ್ಣ ತಾಯಿ ಸ್ಮಿತಾ ಮಂದಣ್ಣ. ಇವರಿಗೆ ಒಬ್ಬ ಸಹೋದರನಿದ್ದು ಅವನ ಹೆಸರು ಶ್ರವಣ್ ಮಂದಣ್ಣ. ಇವರು ವಿವಾಹವಾಗಿಲ್ಲ ಅಲ್ಲದೇ ಇವರಿಗೆ ಬಾಯ್ ಫ್ರೆಂಡ್ ಇರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಇವರಿಗೆ ಒಂದು ವರ್ಷಕ್ಕೆ 15 ಲಕ್ಷ ಆದಾಯ ಬರುತ್ತದೆ. ಇವರ ಸಾಧನೆ ಭಾರತದ ಎಲ್ಲಾ ಹೆಣ್ಣುಮಕ್ಕಳಿಗೆ ಮಾದರಿಯಾಗಿದೆ. ಇವರ ಮುಂದಿನ ಜೀವನ ಸುಖಮಯವಾಗಿರಲಿ ಹಾಗೂ ಕ್ರಿಕೆಟ್ ನಲ್ಲಿ ಮುಂದುವರೆಯಲಿ ಎಂದು ಆಶಿಸೋಣ.