ಹಿಂದಿನ ಕಾಲದ ದೇವಾಲಯಗಳು ನಮ್ಮ ಪೂರ್ವಜರು ಕೇವಲ ಪೂಜೆ ಮಾಡುವುದರ ಸಲುವಾಗಿ ಮಾತ್ರ ನಿರ್ಮಿಸಿರಲಿಲ್ಲ ಹಿಂದಿನ ಕಾಲದ ದೇವಾಲಯಗಳು ಸೈನ್ಸ್ ಸೆಂಟರ್ ಕೂಡ ಆಗಿದ್ದವು, ನಮ್ಮ ಇತಿಹಾಸ ಸಂರಕ್ಷಣಾ ಕೇಂದ್ರ, ಧ್ಯಾನ ಸ್ಥಳ ಹಾಗೂ ನಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಜ್ಞಾನಭಂಡಾರ ಸಹ ಆಗಿದ್ದವು.
ತಮಿಳುನಾಡು ಹಾಗೂ ಆಂಧ್ರದ ಗಡಿಭಾಗದಲ್ಲಿರುವ ಗುಡಿಮಲ್ಲ ಎಂಬ ಊರಿನಲ್ಲಿ ಒಂದು ಶಿವ ದೇವಾಲಯವಿದೆ. ಅದು ಹಲವಾರು ನಿಗೂಡ ರಹಸ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ನಲ್ಲಮಲ ಕಾಡಿನಲ್ಲಿ ಇದೆ. ಗುಡಿಮಲ್ಲದಲ್ಲಿರುವ ಶಿವ ದೇವಸ್ಥಾನವನ್ನು ಪರಶುರಾಮೇಶ್ವರ ಎಂದು ಕರೆಯಲಾಗುತ್ತದೆ. ಒಂದು ಮೂಲದ ಪ್ರಕಾರ ಇದು ಭಾರತದ ಮೊಟ್ಟ ಮೊದಲ ಶಿವಾಲಯ ಇದರ ನಿರ್ಮಾಣ ಸುಮಾರು 2,300 ವರ್ಷಗಳ ಹಿಂದೆಯೇ ಆಗಿತ್ತು. ಇದು ಲಿಂಗ ಪರಿಕಲ್ಪನೆಯ ಮೂಲ ಸೃಷ್ಟಿ ರಹಸ್ಯವನ್ನು ಭೇದಿಸುವ ಮೂಲವಾಗಿತ್ತು. ಇಲ್ಲಿ ವಿಗ್ರಹದ ಕೆಳಭಾಗದಲ್ಲಿ ಮನುಷ್ಯನೊಬ್ಬ ಮಂಡಿಯೂರಿ ಕೂತಿದ್ದು ಅವನ ಹೆಗಲ ಮೇಲೆ ನಿಂತು ಮನುಷ್ಯನೊಬ್ಬನ ಕೈಯಲ್ಲಿ ಕುರಿ ಬಲಗೈಯಲ್ಲಿ ಮಡಿಕೆ ಎಡಭುಜದ ಮೇಲೆ ಕೊಡಲಿ ಹಾಗು ಅದಕ್ಕೆ ಕಟ್ಟಲಾದ ದಾರ ಸುಂದರ ಕೇಶ ವಿನ್ಯಾಸ ಹಾಗೂ ಹಲವು ಆಭರಣಗಳನ್ನು ಹೊಂದಿರುವ ಈ ವಿಗ್ರಹ ಆಗಿನ ಕಾಲದ ಪುರುಷಾಕೃತಿ ಮತ್ತು ಅವರ ಬದುಕಿನ ರೀತಿಯನ್ನು ತೋರಿಸುತ್ತದೆ.
ಒಂದು ಕಥೆಯ ಪ್ರಕಾರ ಪರಶುರಾಮರು ಹಿಂದೆ ಈ ಜಾಗದಲ್ಲಿ ಒಂದು ಶಿವಲಿಂಗವನ್ನು ಸೃಷ್ಟಿಸಿ ಪಕ್ಕದಲ್ಲಿದ್ದ ಕಲ್ಯಾಣಿ ಇಂದ ನೀರು ತಂದು ಪೂಜಿಸುತ್ತಿದ್ದರಂತೆ. ಅವರ ನಿತ್ಯ ಪೂಜೆಗಾಗಿ ಅಲ್ಲಿ ಒಂದು ಕಮಲದ ಹೂವು ಅರಳುತ್ತಿದ್ದು, ಪರಶುರಾಮರು ಅದನ್ನು ಶಿವ ಪೂಜೆಗಾಗಿ ಬಳಸುತ್ತಿದ್ದರಂತೆ. ಆ ಕಮಲದ ಹೂವಿನ ಕಾವಲಿಗಾಗಿ ಒಂದು ಯಕ್ಷನನ್ನು ನೇಮಿಸಿದ್ದರಂತೆ. ಯಕ್ಷ ಪ್ರತಿದಿನದ ಕಾವಲಿಗಾಗಿ ಒಂದು ಮಡಿಕೆ ಎಷ್ಟು ಹೆಂಡ ಹಾಗೂ ಒಂದು ಪ್ರಾಣಿಯನ್ನು ಕೂಲಿಯಾಗಿ ನೀಡಬೇಕು ಎಂದು ಕೇಳಿದನಂತೆ ಅದಕ್ಕೆ ಪರುಷರ ಅವರು ಒಪ್ಪಿಕೊಂಡ ನಂತರ ಯಕ್ಷ ಕಾವಲು ಕಾಯಲು ಸಿದ್ಧನಾಗಿ ನಿಂತಿದ್ದ. ಹೀಗೆ ದಿನಗಳು ಕಳೆದ ಒಂದು ದಿನ ಪರಶುರಾಮರ ಬಂದು ಕೊಳದಲ್ಲಿ ಕಮಲದ ಹೂವನ್ನು ನೋಡಿದಾಗ ಹೂವು ಅಲ್ಲಿರಲಿಲ್ಲ ಇದರಿಂದ ಸಿಟ್ಟಿಗೆದ್ದ ಪರಶುರಾಮರು ಯಕ್ಷನನ್ನು ದಂಡಿಸಲು ಸಿದ್ಧರಾದಾಗ ಅವರಿಬ್ಬರಿಗೂ ಘನ ಘೋರವಾದ ಯುದ್ಧ ನಡೆಯುತ್ತದೆ. ಆಗ ಸಾಕ್ಷಾತ ಶಿವನೆ ಪ್ರತ್ಯಕ್ಷನಾಗಿ ಅವರಿಬ್ಬರ ಜಗಳವನ್ನು ಬಿಡಿಸಿದ್ದರಂತೆ. ಅಲ್ಲಿ ಕೊಳದ ಕಾವಲಿಗಾಗಿ ನಿಂತ ಯಕ್ಷ ಶಾಪಗ್ರಸ್ತ ಬ್ರಹ್ಮನಾಗಿದ್ದು, ಪರಶುರಾಮರು ವಿಷ್ಣುವಿನ ಅವತಾರ ಹೀಗಾಗಿ ಆ ಸ್ಥಳದಲ್ಲಿ ತ್ರಿಮೂರ್ತಿಗಳ ಆದಂತಹ ಬ್ರಹ್ಮ ವಿಷ್ಣು ಮಹೇಶ್ವರ ಇವರ ದೇವಾಲಯ ನಿರ್ಮಾಣವಾಯಿತು ಎಂದು ಹೇಳುತ್ತಾರೆ ಇದು ಅಲ್ಲಿನ ಸ್ಥಳಪುರಾಣ.
ಆದರೆ, ಅವತ್ತಿಗೆ ಇಲ್ಲಿ ನಾಗಾರ್ಜುನ ಎಂಬ ರಸ ಸಿದ್ದಿ ಪ್ರವೀಣ ರೊಬ್ಬರು ವಾಸವಾಗಿದ್ದರಂತೆ. ಈ ನಾಗಾರ್ಜುನ ಪಂಡಿತ ಹಲವಾರು ಸಿದ್ಧಿಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ ಮಹಾ ಪಂಡಿತರಾಗಿದ್ದರು. ನಲ್ಲಮಲ ಪ್ರದೇಶದಲ್ಲಿ ಅಪಾರವಾದ ಔಷಧೀಯ ಸಸ್ಯಗಳನ್ನು ನಾಗಾರ್ಜುನ ಪಂಡಿತರು ಅಲ್ಲಿ ರಸ ವಿದ್ಯೆಗಳನ್ನು ಪ್ರಯೋಗಿಸುತ್ತಿದ್ದರೆ ಅಂತೆ. ಅದನ್ನು ಪುಷ್ಟೀಕರಿಸುವ ಹಾಗೆ ನಲ್ಲಮಲ ಪ್ರದೇಶದಲ್ಲಿ ಬರುವ ಬಾಲಬ್ರಹ್ಮ ದೇವಾಲಯ ನವಪಾಷಾಣ ದ ವಿಗ್ರಹವಾಗಿದ್ದು ಅದನ್ನು ನಿರ್ಮಿಸಿದವರು ನಾಗಾರ್ಜುನ ಪಂಡಿತರು. ರಸ ವಿಜ್ಞಾನ ಎಂಬ ಪ್ರಾಚೀನ ಗ್ರಂಥದಲ್ಲಿ ನಾಗಾರ್ಜುನ ಪಂಡಿತರ ಹೆಸರು ಉಲ್ಲೇಖವಾಗಿದೆ.
ಗುಡಿಮಲ್ಲ ದೇವಸ್ಥಾನದಲ್ಲಿ ಇನ್ನೊಂದು ರಹಸ್ಯವಿದೆ. ಅದು ನಮ್ಮ ವಾಸ್ತು-ವಿಜ್ಞಾನ ಹಾಗೂ ಭೂಗರ್ಭ ವಿಜ್ಞಾನಕ್ಕೆ ಹಿಡಿದ ಕನ್ನಡಿಯಂತಿದೆ. ಈ ದೇವಾಲಯದ ವಿಶೇಷತೆ ಏನಪ್ಪಾ ಅಂದ್ರೆ ಈ ದೇವಾಲಯದ ಗೋಪುರ ಗಜಪೃಷ್ಠ ಆಕಾರದಲ್ಲಿದ್ದು, ಮೂರನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂಬ ಊಹೆ ಇದೆ.ಇದನ್ನು ಶಾತವಾಹನರ ಅರಸರ ಕಾಲದಲ್ಲಿ ಕಟ್ಟಿಸಿರಬಹುದು ಎಂಬ ಪುರಾತತ್ವ ಅಧಿಕಾರಿಗಳು ತಿಳಿಸುತ್ತಾರೆ. ಈ ದೇವಾಲಯದಲ್ಲಿನ ಅಂಗಳದ ಶಾಸನಗಳಲ್ಲಿ ಕ್ರಿಸ್ತಶಕ 800ರಿಂದ ಹಿಡಿದು ಕ್ರಿಸ್ತಶಕ 1346 ರವರೆಗೆ ಯಾವೆಲ್ಲ ರಾಜರ ಆಳ್ವಿಕೆ ನಡೆಸಿ ಈ ದೇವಾಲಯಕ್ಕೆ ಜೀರ್ಣೋದ್ಧಾರ ಮಾಡಿದರು ಎಂಬುದರ ಕುರಿತು ಉಲ್ಲೇಖವಿದೆ. ಪಲ್ಲವರ ರಾಜ ಮೂರನೇ ನಂದಿವರ್ಮ ಮಧುರೈನ ನಾಯಕರು ಹಾಗು ವಿಜಯನಗರದ ಅರಸರೂ ಈ ಗುಡಿಮಲ್ಲಂ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದಾರೆ.
ಇಲ್ಲಿನ ಶಾಸನಗಳಲ್ಲಿ ಎಲ್ಲೂ ಈ ದೇವಾಲಯದ ಹೆಸರು ಗುಡಿಮಲ್ಲಂ ಎಂದು ಕಾಣುವುದಿಲ್ಲ ಶಾಸನಗಳ ಉಲ್ಲೇಖದ ಪ್ರಕಾರ ಇದು ವಿಪ್ರ ಪೀಠ ಅಂದರೆ ಇದೊಂದು ಬ್ರಾಹ್ಮಣರ ಅಗ್ರಹಾರವಾಗಿತ್ತು ಇಂದು ಉಲ್ಲೇಖಿಸುತ್ತಾರೆ. ಇಲ್ಲಿನ ವಾಸ್ತು ವಿಶೇಷ ಎಂದರೆ ಸೂರ್ಯ ತನ್ನ ಪಥ ಬದಲಿಸಿದಾಗ ಇಲ್ಲೊಂದು ಖಗೋಳ ವಿಸ್ಮಯ ನಡೆಯುತ್ತದೆ. ಏನಪ್ಪಾ ಅಂದ್ರೆ ಡಿಸೆಂಬರ್ ನಲ್ಲಿ ಮುಂಜಾನೆಯ ಸೂರ್ಯರಶ್ಮಿ ಗಳು ಅಲ್ಲಿರುವ ವಿಪ್ರ ಪೀಠದ ಶಿವನಪಾದ ಸ್ಪರ್ಶಿಸುತ್ತವೆ. ಈ ಮಂದಿರದ ಪ್ರವೇಶ ದ್ವಾರ ಪೂರ್ವದಿಕ್ಕಿಗೆ ಇದ್ದರೂ ಇಲ್ಲಿನ ವಿಗ್ರಹ ಮುಖಮಾಡಿ ನಿಂತಿರುವುದು ದಕ್ಷಿಣ ದಿಕ್ಕಿಗೆ. ಇಲ್ಲಿ ಕಿಟಕಿಯ ಮೂಲಕ ಸೂರ್ಯ ರಶ್ಮಿಗಳು ಶಿವನ ಪಾದವನ್ನು ಸ್ಪರ್ಶಿಸುತ್ತವೆ ಸಾವಿರಾರು ವರ್ಷಗಳ ಹಿಂದೆಯೇ ಗಣಿತ-ವಿಜ್ಞಾನ ಗಳನ್ನು ತಿಳಿದು ಇಂತಹ ವಿಸ್ಮಯವನ್ನು ನಮ್ಮ ಪೂರ್ವಜರು ಸೃಷ್ಟಿಸಿದ್ದಾರೆ. ಅದಕ್ಕಾಗಿ ಹೇಳುವುದು ಹಿಂದಿನ ದೇವಾಲಯಗಳು ಕೇವಲ ಪೂಜಾ ಕೇಂದ್ರವಲ್ಲ ವಿಜ್ಞಾನ ಕೇಂದ್ರಗಳು ಆಗಿದ್ದವು ಎಂದು.
ಇಲ್ಲಿನ ಇನ್ನೊಂದು ವಿಸ್ಮಯ ಎಂದರೆ ದೇವಾಲಯದಲ್ಲಿ ಒಂದು ಆಯತಾಕಾರದ ತೊಟ್ಟಿದ್ದು ಅದು ಪ್ರತಿ 60 ವರ್ಷಗಳಿಗೊಮ್ಮೆ ಪೂರ್ತಿ ಜಲಾವೃತ ಗೊಳ್ಳುತ್ತದೆ. ಆಯತಾಕಾರದ ತೊಟ್ಟಿಯಲ್ಲಿ ಸಣ್ಣ ರಂಧ್ರದ ಮೂಲಕ ಗಂಗೆ ಗರ್ಭಗುಡಿಯ ಒಳಗೆ ಪ್ರವೇಶ ಶಿವನ ಪಾದ ಸ್ಪರ್ಶಿಸಿ ಹೋಗುತ್ತಾಳೆ. ಅಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಗಂಗೆ 1945, 2005 ರಲ್ಲಿ ಮತ್ತು ಇನ್ನು ಮುಂದೆ 2065 ನೇ ಇಸವಿಯಲ್ಲಿ ಗರ್ಭಗುಡಿಯಲ್ಲಿ ಪೂರ್ತಿ ಜಲಾವೃತವಾಗಿ ತುಂಬಿ ಹರಿಯುತ್ತಾಳೆ.
ಗುಡಿಮಲ್ಲ ದ ಸೈನ್ಸ್ ಸೆಂಟರ್ ಬಗ್ಗೆ ಅಷ್ಟೊಂದು ಯಾರಿಗೂ ತಿಳಿದಿಲ್ಲ. ಹಾಗಾಗಿ ಇಲ್ಲಿ ಬರುವ ಜನರ ಸಂಖ್ಯೆ ಕಡಿಮೆ ಭೇಟಿನೀಡಿ ಸೃಷ್ಟಿ ರಹಸ್ಯ, ಲಿಂಗದ ಮೂಲರೂಪ, ವಾಸ್ತು ಹಾಗೂ ಖಗೋಳ ಶಾಸ್ತ್ರ ಹೀಗೆ ಹತ್ತು ಹಲವಾರು ವಿಷಯಗಳನ್ನು ತನ್ನಲ್ಲಿ ಅಡಕವಾಗಿ ಸುಟ್ಟುಕೊಂಡಿರುವ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿದರೆ ನಮ್ಮ ಪೂರ್ವಜರ ವೈಜ್ಞಾನಿಕ ಜ್ಞಾನದ ಕುರಿತು ನಮಗೆ ಮನವರಿಕೆ ಉಂಟಾಗುತ್ತದೆ.