ಕೊಹ್ಲಿ ಬಳಿಕ ಭಾರತ ಕ್ರಿಕೆಟ್ ತಂಡದ ನಾಯಕ ಆಗುವ ಎಲ್ಲ ಲಕ್ಷಣಗಳು ಈ 5 ಜನರಲ್ಲಿದೆ

ನಮಗೆಲ್ಲರಿಗೂ ತಿಳಿದಿರುವಂತೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ರವರು ವಿಶ್ವ ಕಂಡ ಶ್ರೇಷ್ಠ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಲವಾರು ದಿಗ್ಗಜರು ಮಾಡದಿರುವ ಸಾಧನೆಗಳನ್ನು ವಿರಾಟ್ ಕೊಹ್ಲಿ ರವರು ಈಗಾಗಲೇ ಮಾಡಿ ಮುಗಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಯಾರು ಮೀರಿಸಲಾಗದು ಅಂತಹ ದಾಖಲೆಗಳನ್ನು ಸೃಷ್ಟಿ ಮಾಡಲು ಸಿದ್ಧರಿದ್ದಾರೆ. ಇಂದಿನ ಕಾಲದ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ಗಳು ಕೂಡ ನಾವು ವಿರಾಟ್ ಕೊಹ್ಲಿ ರವರಂತೆ ಬ್ಯಾಟಿಂಗ್ ಮಾಡಬೇಕು ಎಂಬ ಆಸೆ ಹೊರಹಾಕುತ್ತಾರೆ. ವಿರಾಟ್ ಕೊಹ್ಲಿ ರವರು ಮುಂದಿನ ವಿಶ್ವಕಪ್ ಬಳಿಕ ಬಹುತೇಕ ನಾಯಕ ಸ್ಥಾನದಿಂದ ದೂರವುಳಿಯುತ್ತಾರೆ. ಒಂದು ವೇಳೆ ಅವರು ಇರುವ ಫಿಟ್ನೆಸ್ ಗೆ ಕ್ರಿಕೆಟ್ ಆಡಿದರೂ ಕೂಡ ತದ ನಂತರದ ವರ್ಲ್ಡ್ ಕಪ್ ವೇಳೆಗೆ ಉತ್ತಮ ನಾಯಕ ರೂಪಗೊಳ್ಳಬೇಕು ಎಂಬ ಲೆಕ್ಕಾಚಾರದಿಂದ ಖಂಡಿತವಾಗಲೂ ನಾಯಕತ್ವ ಸ್ಥಾನದಿಂದ ಕೆಳಗಿಳಿಯುತ್ತಾರೆ. ಹಾಗಿದ್ದರೇ ವಿರಾಟ್ ಕೊಹ್ಲಿ ನಾಯಕ ಸ್ಥಾನದಿಂದ ಕೆಳಗಿಳಿದ ಬಳಿಕ ಭಾರತ ಕ್ರಿಕೆಟ್ ತಂಡವನ್ನು ಸಮರ್ಥವಾಗಿ ಮುನ್ನಡೆಸುವ ಆಟಗಾರ ಯಾರು ಎಂಬುದನ್ನು ನೋಡುವುದಾದರೆ ಆ 5 ಆಟಗಾರರ ಕುರಿತು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಹಾಗಿದ್ದರೇ ವಿರಾಟ್ ಕೊಹ್ಲಿ ರವರ ದಾಖಲೆಗಳನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಆದರೆ ವಿರಾಟ್ ಕೊಹ್ಲಿ ನಿರಾಯಾಸವಾಗಿ ಮೀರಿಸುವ ಕಲೆಯನ್ನು ಭಾರತದ ಯುವ ಆಟಗಾರನೊಬ್ಬ ಪಡೆದುಕೊಂಡಿದ್ದಾನೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಯಾರು ಮೀರಿಸಬಹುದು ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವರ್ಷಗಳಿಂದ ಸದ್ದು ಮಾಡುತ್ತಿದ್ದು ಇದೀಗ ನೆಟ್ಟಿಗರು ಹೊಸ ಉತ್ತರವನ್ನು ಹುಡುಕಿಕೊಂಡಿದ್ದಾರೆ. ಐದನೇ ಸ್ಥಾನದಲ್ಲಿ ವಿಕೆಟ್ ಕೀಪರ್ ಆಗಿ ಇದೀಗ ಭಾರತ ತಂಡದಲ್ಲಿ ಕಾಯಂ ಸ್ಥಾನಕ್ಕಾಗಿ ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸಿರುವ ರಿಷಬ್ ಪಂತ್ ರವರು ಕಾಣಿಸಿಕೊಳ್ಳುತ್ತಾರೆ. ರಿಷಬ್ ಪಂತ್ ಈ ಮುನ್ನ ಯಾವುದೇ ತಂಡವನ್ನು ಸಂಪೂರ್ಣವಾಗಿ ಮುನ್ನೆಡೆಸುವ ಅನುಭವವನ್ನು ಹೊಂದಿರದೆ ಇದ್ದರೂ ಕೂಡ ವಿಕೆಟ್ ಕೀಪರ್ ಆಗಿರುವ ಕಾರಣ ತಂಡದಲ್ಲಿ ಕಾಯಂ ಸ್ಥಾನ ಪಡೆದುಕೊಂಡ ಬಳಿಕ ನಾಯಕ ಸ್ಥಾನ ಸಿಕ್ಕರೂ ಕೂಡ ಅಚ್ಚರಿಪಡಬೇಕಾಗಿಲ್ಲ.

ಇನ್ನು ನಾಲ್ಕನೇ ಸ್ಥಾನದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ಬಾರಿ ಹೆಸರುಗಳಿಸಿರುವ ಶ್ರೇಷ್ಠ ಆಲ್-ರೌಂಡರುಗಳಲ್ಲಿ ಒಬ್ಬರಾದ ಹಾರ್ದಿಕ್ ಪಾಂಡ್ಯ ರವರು ಕಾಣಿಸುತ್ತಾರೆ, ಇವರು ಒಂದು ವೇಳೆ ಫಿಟ್ನೆಸ್ ಕುರಿತು ಗಮನ ಹರಿಸಿ ತಂಡದಲ್ಲಿ ಕಾಯಂ ಸ್ಥಾನ ಪಡೆದುಕೊಂಡು ಆಯ್ಕೆದಾರರ ಗಮನಸೆಳೆದ ಲ್ಲಿ ಖಂಡಿತ ವಿರಾಟ್ ಕೊಹ್ಲಿ ರವರ ನಂತರ ನಾಯಕನಾಗುವ ಎಲ್ಲಾ ಸಾಧ್ಯತೆಗಳು ಇವೆ. ಇನ್ನು ಮೂರನೇ ಸ್ಥಾನದಲ್ಲಿ ಈಗಾಗಲೇ ಉಪನಾಯಕನ ಪಟ್ಟ ಪಡೆದುಕೊಂಡು ನಾಯಕನಾಗುವ ಎಲ್ಲ ಅರ್ಹತೆ ಯನ್ನು ಪಡೆದುಕೊಂಡಿರುವ ಕನ್ನಡಿಗ ಕೆಎಲ್ ರಾಹುಲ್ ರವರು ಕಂಡುಬರುತ್ತಾರೆ. ಆದರೆ ಇನ್ನೆರಡು ವರ್ಷಗಳ ನಡೆಯುವ ವರ್ಲ್ಡ್ ಕಪ್ ಗೆ ಕೊಹ್ಲಿ ಕ್ಯಾಪ್ಟನ್ ಆಗಿರುವ ಕಾರಣ 2027 ರ ವೇಳೆಗೆ ಇವರು ಫಿಟ್ ಆಗಿ ಇದ್ದು, ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆಗಳಿವೆಯೇ ಎಂಬ ಲೆಕ್ಕಾಚಾರದೊಂದಿಗೆ ಇವರನ್ನು ನಾಯಕನಾಗಿ ಮಾಡಬೇಕೋ ಅಥವಾ ಬೇಡವೋ ಎಂಬುದು ಇನ್ನು ಪ್ರಶ್ನೆಯಾಗಿ ಉಳಿದಿದೆ. ಯಾಕೆಂದರೆ 2027 ರ ವೇಳೆಗೆ ಕೆ ಎಲ್ ರಾಹುಲ್ ರವರು ಸಮರ್ಥವಾಗಿ ನಾಯಕನಾಗಬಹುದಾ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಇನ್ನು ಎರಡನೇ ಸ್ಥಾನದಲ್ಲಿ ಕೆಎಲ್ ರಾಹುಲ್ ರವರಂತೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿರುವ ಭಾರತ ಕ್ರಿಕೆಟ್ ತಂಡದ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅವರು ಕಾಣಿಸಿಕೊಳ್ಳುತ್ತಾರೆ. ಖಂಡಿತವಾಗಲೂ ಮುಂದಿನ ವಿಶ್ವಕಪ್ ವೇಳೆಗೆ ಇವರು ಉತ್ತಮ ಆಟಗಾರನ ಆಗಿರುತ್ತಾರೆ ಆದರೆ, ಕನಿಷ್ಠ ಇಂದಿನಿಂದ 7 ವರ್ಷಗಳ ಕಾಲ ಸಮರ್ಥ ಆಟಗಾರ ಎಂಬ ಭರವಸೆ ಮೂಡಿಸಿದರೇ ಮಾತ್ರ ಇವರು ವಿರಾಟ್ ಕೊಹ್ಲಿ ರವರ ನಂತರ ಕ್ಯಾಪ್ಟನ್ ಆಗಬಹುದು.

ಇನ್ನು ಮೊದಲೇ ಸ್ಥಾನದಲ್ಲಿ ಅಚ್ಚರಿ ಎಂದರು ಸತ್ಯ ಆಟಗಾರ ಮತ್ಯಾರು ಅಲ್ಲ ಆಸ್ಟ್ರೇಲಿಯಾ ದೇಶದಲ್ಲಿ ಇಂದಿನ ಕ್ರಿಕೆಟ್ನ ವಿಶ್ವಶ್ರೇಷ್ಠ ಬೌಲರ್ಗಳನ್ನು ನಿರಾಯಸವಾಗಿ ಎದುರಿಸಿ ಅವರಲ್ಲಿ ಅವರ ನೆಲದಲ್ಲಿಯೇ ಮಣ್ಣು ಮುಗಿಸುವುದರಲ್ಲಿ ಯಶಸ್ವಿಯಾಗಿರುವ ಈ ಶುಭಾಂ ಗಿಲ್ ಹೆಸರು ಕೇಳಿಬರುತ್ತಿದೆ, ಆಡಿದ್ದು ಬೆರಳೆಣಿಕೆಯ ಪಂದ್ಯ ಇನ್ನು ಬಿಸಿಸಿಐ ಕಡೆಯಿಂದ ಅಧಿಕೃತವಾದ ಒಪ್ಪಂದ ಕೂಡ ಪಡೆದಿಲ್ಲ ಹೀಗಿರುವಾಗ ನಾಯಕ ಎಂದರೆ ನಿಮಗೆ ಆಶ್ಚರ್ಯವಾಗಬಹುದು ಆದರೆ ಇನ್ನೆರಡು ವರ್ಷಗಳ ಕಾಲ ಅವರು ಉತ್ತಮ ಪ್ರದರ್ಶನ ತೋರಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲ ತುಂಬಿದರೆ ಖಂಡಿತವಾಗಲೂ ಯುವಕ ಹಾಗೂ 2027 ರವೇಳೆಗೆ ತಂಡದಲ್ಲಿ ಇರುವ ಎಲ್ಲಾ ಸಾಧ್ಯತೆ ಇರುವುದರಿಂದ ಇವರಿಗೆ ನಾಯಕ ಸ್ಥಾನ ನೀಡಿದರು ಯಾವುದೇ ಅಚ್ಚರಿಪಡಬೇಕಾಗಿಲ್ಲ. ಶುಭ್ಮನ್ ಗಿಲ್ ರವರು ಖಂಡಿತ ಮುಂದೊಂದು ದಿನ ವಿರಾಟ್ ಕೊಹ್ಲಿ ರವರ ದಾಖಲೆಗಳನ್ನು ಮೀರಿಸುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬ ಅಭಿಪ್ರಾಯ ಕೇಳಿಬಂದಿದೆ

Leave a Comment