ತಮಗಿಂತ ಚಿಕ್ಕ ವಯಸ್ಸಿನ ನಟರನ್ನು ಮದುವೆಯಾದ ನಟಿಯರು ಯಾರು ನೋಡಿ

ಪುರಾತನ ಕಾಲದಿಂದಲೂ ಹುಡುಗಿಯರು ಹುಡುಗರಿಗಿಂತ ದೊಡ್ಡವರಾಗಿದ್ದರೆ ಕುಟುಂಬದ ಹಿರಿಯರೂ ಮದುವೆ ಮಾಡಲು ಒಪ್ಪುತ್ತಿರಲಿಲ್ಲ. ಆದರೆ ಕ್ರಮೇಣವಾಗಿ ಕಾಲ ಕಳೆದಂತೆ ಸಂಪ್ರದಾಯ ಆಚಾರ ವಿಚಾರಗಳು ಬದಲಾಗುತ್ತಿವೆ. ಆದರೆ ಹಳ್ಳಿಗಳಲ್ಲಿ ಇಂದಿಗೂ ಕೂಡ ಇದನ್ನು ಪಾಲಿಸುತ್ತಿದ್ದಾರೆ. ಪಟ್ಟಣ ಪ್ರದೇಶದಲ್ಲಿ ಮತ್ತು ಸಿನಿಮಾ ನಟ ನಟಿಯರ ವಿಷಯದಲ್ಲಿ ಈಗ ವಯಸ್ಸಿನ ಅಂತರ ದೊಡ್ಡ ವಿಷಯವೇ ಅಲ್ಲ. ಯಾವ ನಟಿಯರು ತಮಗಿಂತ ಕಡಿಮೆ ವಯಸ್ಸಿನ ಹುಡುಗರನ್ನು ಮದುವೆಯಾಗಿದ್ದಾರೆ ಎಂಬುದನ್ನು ನಾವು ಇಲ್ಲಿ ತಿಳಿಸಿ ಕೊಡುತ್ತೆವೆ. ಕೆಲವು ಹುಡುಗಿಯರು ಹುಡುಗನಿಗಿಂತ ದೊಡ್ಡವರಾಗಿರುತ್ತಾರೆ. ಹಳ್ಳಿ ಕಡೆ ಇಂದಿಗೂ ಸಹ ಹಡುಗಿಯ ವಯಸ್ಸು ಹುಡುಗನಿಗಿಂತ ಕಡಿಮೆ ಇರುವುದನ್ನು ನೋಡಿಕೊಂಡೆ ಮದುವೆ ಮಾಡುತ್ತಾರೆ. ಆದರೆ ನಗರ ಪ್ರದೇಶಗಳಲ್ಲಿ ಹಾಗೂ ಸೆಲೆಬ್ರಿಟಿಗಳ ಜೀವನದಲ್ಲಿ ವಯಸ್ಸನ್ನು ಹೆಚ್ಚಾಗಿ ಪರಿಗಣಿಸಿಲ್ಲ.

ಹಲವಾರು ಹೀರೋಯಿನ್ ಗಳು ವಯಸ್ಸಲ್ಲಿ ತಮಗಿಂತ ಚಿಕ್ಕವರನ್ನು ಮದುವೆಯಾಗಿ ಸಂತೋಷವಾಗಿದ್ದಾರೆ. ಯಾರೆಲ್ಲಾ ಕನ್ನಡದ ಹೀರೋಯಿನ್ ಗಳು ವಯಸ್ಸಿನಲ್ಲಿ ಚಿಕ್ಕವರನ್ನು ಮದುವೆಯಾಗಿದ್ದಾರೆ ಗೊತ್ತಾ? ಹುಡುಗಿಯ ವಯಸ್ಸು ಹುಡುಗನಿಗಿಂತ ಕಡಿಮೆ ಇರಬೇಕು ಎಂಬ ಮಾತು ನಮ್ಮ ದೇಶದಲ್ಲಿ ಅನಾದಿಕಾಲದಿಂದಲೂ ರೂಢಿಯಲ್ಲಿದೆ. ಆದರೆ ಪ್ರೀತಿ ಪ್ರೇಮಕ್ಕೆ ಯಾವ ವಯಸ್ಸು? ಇಂದಿನ ಪೀಳಿಗೆಯ ಪ್ರಜ್ಞಾವಂತ ಮಂದಿ ತಮ್ಮ ಮದುವೆ ವಿಚಾರದಲ್ಲಿ ಇಂತಹ ವಯಸ್ಸಿನ ಏರುಪೇರಾಗುವ ವಿಚಾರದ ಬಗ್ಗೆ ತಲೆಯೇ ಕೆಡಿಸಿಕೊಳ್ಳುವುದಿಲ್ಲ.

ಹೇಗೆ ಗಂಡಸರು ತಮಗಿಂತ ಚಿಕ್ಕ ವಯಸ್ಸಿನ ಹುಡುಗಿಯರನ್ನು ತಮ್ಮತ್ತ ಸೆಳೆದುಕೊಳ್ಳುತ್ತಾರೋ ಹಾಗೆಯೆ ಸ್ತ್ರೀಯರು ಕೂಡ ತಮಗಿಂತ ಚಿಕ್ಕ ಹುಡುಗರನ್ನು ಪ್ರೀತಿಯಲ್ಲಿ ಬೀಳಿಸಿಕೊಳ್ಳುತ್ತಾಳೆ. ಇವತ್ತು ತಮಗಿಂತ ದೊಡ್ಡ ವಯಸ್ಸಿನ ಹೆಣ್ಣುಮಕ್ಕಳನ್ನು ಮದುವೆಯಾಗಿರುವ ಗಂಡಸರ ಸಂಖ್ಯೆಗೇನೂ ಕಮ್ಮಿಯಿಲ್ಲ.

ಅದರಲ್ಲೂ ಸಿನಿಮಾ ರಂಗದಲ್ಲಿ ಈ ರೀತಿ ನಿದರ್ಶನಗಳು ಸಾಕಷ್ಟು ಸಿಗುತ್ತವೆ. ಹಾಗಾದರೆ ತಮಗಿಂತ ಚಿಕ್ಕ ವಯಸ್ಸಿನವರನ್ನು ಮದುವೆಯಾಗಿರುವ ಸ್ಟಾರ್ ನಟಿಯರು ಯಾರೂ ಅಂತ ಇಲ್ಲಿ ನೋಡೋಣ ಬನ್ನಿ.
ಗೊಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಗಣೇಶ್ 2008 ರಲ್ಲಿ ಮದುವೆಯಾದ ಈ ಜೋಡಿ, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಕೆಲವು ಮೂಲಗಳ ಪ್ರಕಾರ ಶಿಲ್ಪಾ ಅವರು ತಮ್ಮ ಪತಿ ಗಣೇಶ್ ಅವರಿಗಿಂತ ವಯಸ್ಸಿನಲ್ಲಿ ದೊಡ್ಡವರಂತೇ.

ಆದರೆ ಅಂತರ ಎಷ್ಟು ಎಂದು ಗೊತ್ತಿಲ್ಲ. ರಾಧಿಕಾ ಪಂಡಿತ್ 1984 ಮಾರ್ಚ್ 7 ರಂದು ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದರು. ಕಿರುತೆರೆಯಲ್ಲಿ ನಂದಗೋಕುಲ, ಸುಮಂಗಲಿ, ಎಂಬ ಧಾರಾವಾಹಿಗಳಲ್ಲಿ ನಟಿಸಿ ಆ ನಂತರ ಬೆಳ್ಳಿತೆರೆಗೆ ಮೊಗ್ಗಿನ ಮನಸ್ಸು ಎಂಬ ಚಿತ್ರದ ಮೂಲಕ ಪ್ರವೇಶ ಮಾಡಿದರು. ಕನ್ನಡದ ರಾಕಿಂಗ್ ಜೋಡಿ ಎಂದರೆ ಅದು ಯಶ್ ಮತ್ತು ರಾಧಿಕಾ ಪಂಡಿತ್. ರಾಧಿಕಾ ಪಂಡಿತ್ ಯಶ್ ಅವರಿಗಿಂತ ಎರಡು ವರ್ಷ ದೊಡ್ಡವರು.

ಅನು ಪ್ರಭಾಕರ್ ನವೆಂಬರ್ 9 1980 ರಂದು ಜನಿಸಿದರು. 1999 ರಲ್ಲಿ ಶಿವರಾಜ್ ಕುಮಾರ್ ಅಭಿನಯದ ಹೃದಯ ಹೃದಯ ಎಂಬ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಪ್ರವೇಶಿಸಿದರು. ಅನು ಪ್ರಭಾಕರ್ ತನ್ನ ಮೊದಲನೇ ಮದುವೆಯಿಂದ ವಿಚ್ಛೇದನವನ್ನು ಪಡೆದ ನಂತರ ತನಗಿಂತ ಒಂದು ವರ್ಷ ಚಿಕ್ಕವರಾದ ರಘು ಮುಖರ್ಜಿ ಅವರನ್ನು ಮದುವೆಯಾಗಿದ್ದಾರೆ. ಶಿಲ್ಪಾ ಶೆಟ್ಟಿ ಬಾಲಿವುಡ್ ಚಿತ್ರರಂಗದಲ್ಲಿ ಇಂದು ಬಹು ಬೇಡಿಕೆಯ ನಟಿ. ಬಾಜಿಗರ್ ಸಿನಿಮಾದ ಮೂಲಕ ಬಾಲಿವುಡ್ ಚಿತ್ರರಂಗವನ್ನು ಪ್ರವೇಶ ಮಾಡಿದರು. ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ ರವರು 1975 ಜೂನ್ 8 ರಂದು ಜನಿಸಿದರು. ಉದ್ಯಮಿ ರಾಜ್ ಕುಂದ್ರಾ ಅವರನ್ನು ಮದುವೆಯಾಗಿದ್ದಾರೆ. ಶಿಲ್ಪಾ ಶೆಟ್ಟಿ ಗಿಂತ ರಾಜ್ ಕುಂದ್ರಾ ಅವರು ಎರಡು ವರ್ಷ ಚಿಕ್ಕವರು.

ಮಂಗಳೂರಿನ ಕುವರಿ ಐಶ್ವರ್ಯ ರೈ 1973 ನವೆಂಬರ್ 1 ರಲ್ಲಿ ಜನಿಸಿದರು. ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆಯೂ ಕೂಡ ವಯಸ್ಸಿನ ಅಂತರದಲ್ಲಿ ವ್ಯತ್ಯಾಸವಿದೆ. ಐಶ್ವರ್ಯ ರೈ ರವರಿಗೆ 46 ವರ್ಷ, ಅಭಿಷೇಕ್ ಬಚ್ಚನ್ ರವರೆಗೆ 43 ವರ್ಷ. ಅಭಿಷೇಕ್ ಬಚ್ಚನ್ ಐಶ್ವರ್ಯ ರೈ ರವರಿಗಿಂತ ಮೂರು ವರ್ಷ ಚಿಕ್ಕವರು. ಸ್ನೇಹಾ ಅವರು 1981 ಅಕ್ಟೋಬರ್ 12 ರಲ್ಲಿ ಮುಂಬೈನಲ್ಲಿ ಜನಿಸಿದರು. ಇವರು ಮಲಯಾಳಂನಲ್ಲಿ ಮೊದಲು ಸಿನಿಮಾದಲ್ಲಿ ಅಭಿನಯಿಸಿದರು. ಆ ನಂತರ ಕನ್ನಡ ತೆಲುಗು ತಮಿಳು ಮುಂತಾದ ಸಿನಿಮಾಗಳಲ್ಲಿ ಕೂಡ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿ ಕುರುಕ್ಷೇತ್ರ ಚಿತ್ರದಲ್ಲಿ ದ್ರೌಪದಿ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡ ನಟಿ ಸ್ನೇಹಾ. ಈ ನಟಿ ಪ್ರಸನ್ನ ಎಂಬುವರನ್ನು ಮದುವೆಯಾಗಿದ್ದಾರೆ. ಪ್ರಸನ್ನ ಅವರು ಸ್ನೇಹ ಅವರಿಗಿಂತ ಒಂದು ವರ್ಷ ಚಿಕ್ಕವರು. ದಕ್ಷಿಣ ಭಾರತದ ಮತ್ತೊಬ್ಬ ಖ್ಯಾತ ನಟಿ ನಮ್ರತಾ ಶಿರೋಡ್ಕರ್. ಕನ್ನಡದಲ್ಲಿ ಚೋರ ಚಿತ್ತ ಚೋರ ಸಿನಿಮಾದಲ್ಲಿ ನಟಿಸಿದರು, ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ನಮ್ರತ ರವರ ನಡುವೆ ಕೂಡ ವಯಸ್ಸಿನ ಅಂತರದಲ್ಲಿ ವ್ಯತ್ಯಾಸವಿದೆ.

ಮಹೇಶ್ ಬಾಬು ಅವರಿಗಿಂತ ಪತ್ನಿ ನಮ್ರತಾ ನಾಲ್ಕು ವರ್ಷ ದೊಡ್ಡವರು. ಮಹೇಶ್ ಬಾಬು ಅವರಿಗೆ 44 ವರ್ಷ ವಯಸ್ಸು ಹೆಂಡತಿ ನಮ್ರತಾ ಅವರಿಗೆ 48 ವರ್ಷ ವಯಸ್ಸು. ಸೂರ್ಯ ಮತ್ತು ಜ್ಯೋತಿಕಾ 2006 ರಲ್ಲಿ ಮದುವೆಯಾದ ಈ ಜೋಡಿ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ತಮಿಳು ನಟ ಸೂರ್ಯಗಿಂತ ಅವರ ಮಡದಿ ಜ್ಯೋತಿಕಾ ಅವರು ವಯಸ್ಸಿನಲ್ಲಿ 2 ವರ್ಷ ಹಿರಿಯವರಾಗಿದ್ದಾರೆ. ಧನುಷ್ ಮತ್ತು ಐಶ್ವರ್ಯ ಧನುಷ್ 2004 ರಲ್ಲಿ ಮದುವೆಯಾದ ಈ ಜೋಡಿ ಇಬ್ಬರು ಮಕ್ಕಳನ್ನು ಹೊಂದಿರುತ್ತಾರೆ. ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಹಿರಿಯ ಮಗಳಾದ ಐಶ್ವರ್ಯ ಅವರು ತಮ್ಮ ಪತಿ ಧನುಷಗಿಂತ 2 ವರ್ಷ ಹಿರಿಯವರಾಗಿದ್ದಾರೆ. ಬಿಪಾಶ ಬಾಸು ಮತ್ತು ಕರಣ ಸಿಂಗ್ ಗೋವರ್ 2016 ರಲ್ಲಿ ಮದುವೆಯಾದ ಬಿಪಾಶ ಬಾಸು ವಯಸ್ಸು 38 ಆದರೆ ಅವರ ಪತಿ ಕರಣ ಸಿಂಗ 34 ವರ್ಷದವರಾಗಿದ್ದಾರೆ.

ಅಂದರೆ ಇಬ್ಬರ ನಡುವೆ ಬರೊಬ್ಬರಿ 4 ವರ್ಷದ ಅಂತರವಿದೆ. ಬಿಪಾಶ ತಮ್ಮ ಪತಿಗಿಂತ 4 ವರ್ಷ ಹಿರಿಯವರಾಗಿದ್ದಾರೆ. ಫರ್ಹಾ ಖಾನ್ ಮತ್ತು ಶಿರಿಷ್ ಕುಂದರ್ ನಿರ್ಧೇಶಕಿ ಫರ್ಹಾ ಖಾನ್ ತಮ್ಮ ಪತಿ ಶಿರಿಷ್ ಕುಂದರ್ ಗಿಂತ 8 ವರ್ಷ ಹಿರಿಯವರಾಗಿದ್ದಾರೆ. ಮದುವೆಯಾಗುವಾಗ ಸಾಮಾನ್ಯವಾಗಿ ಹುಡುಗ , ಹುಡುಗಿಗಿಂತ ವಯಸ್ಸಿನಲ್ಲಿ ದೊಡ್ಡವನಾಗಿರುತ್ತಾನೆ. ಆದರೆ ಈ ಸಿನಿಮಾ ತಾರೆಯರು ಅದನ್ನು ಪರಿಗಣಿಸದೇ ತಮಗಿಂತ ಕಿರಿಯ ವಯಸ್ಸಿನ ನಟರನ್ನು ಮದುವೆಯಾಗಿದ್ದಾರೆ ಮತ್ತು ಸಂತೊಷದಿಂದ ಜೀವನ ನಡೆಸುತ್ತಿದ್ದಾರೆ.

ವಿಶೇಷವೇನೆಂದರೆ ಈ ಎಲ್ಲಾ ನಟಿಮಣಿಯರು ತಮಗಿಂತ ಚಿಕ್ಕವರಾದವರನ್ನು ಮದುವೆಯಾದವರು. ಯಾವುದೇ ಜಗಳವಿಲ್ಲದೆ ಬಹಳ ಅನ್ಯೋನ್ಯವಾಗಿ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ ಈ ನಟಿಯರು. ವಯಸ್ಸಿನ ಅಂತರ ಪರಿಗಣಿಸದ ಈ ಎಲ್ಲಾ ಜೋಡಿಗಳ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಹಾರೈಸೋಣ.

Leave a Comment