ಅಲೋವೆರಾ ಸುಮಾರು ಎಲ್ಲರ ಮನೆಯಲ್ಲೂ ಇರುತ್ತದೆ. ಆದರೆ ಅವು ದಷ್ಟಪುಷ್ಟವಾಗಿ ಬೆಳೆದಿರುವುದಿಲ್ಲ. ಏಕೆಂದರೆ ಅವುಗಳನ್ನು ಬೆಳೆಯಲು ಸ್ವಲ್ಪ ಹೆಚ್ಚಿನ ಕಾಳಜಿ ವಹಿಸಬೇಕು. ನಾವು ಇಲ್ಲಿ ಅಲೋವೆರಾ ಬೆಳೆಯುವ ಬಗ್ಗೆ ಟಿಪ್ಸ್ ಗಳನ್ನು ನೋಡೋಣ.
ಅಲೋವೆರಾ ಬಗ್ಗೆ ಸುಮಾರು ಎಲ್ಲರಿಗೂ ತಿಳಿದಿರುತ್ತದೆ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಇದನ್ನು ಕಟ್ ಮಾಡಿ ತಲೆಗೆ ಹಚ್ಚುವುದರಿಂದ ಕೂದಲು ಕಾಂತಿಯುತವಾಗಿ ಇರುತ್ತದೆ. ಹೊಟ್ಟೆಯೊಳಗಾದ ಹುಣ್ಣನ್ನು ಇದು ವಾಸಿ ಮಾಡುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ. ಕಲೆಗಳನ್ನು ನಿವಾರಣೆ ಮಾಡುತ್ತದೆ. ಹಾಗೇ ಬಿಸಿಲಿನಿಂದ ಆದ ಹುಗುಳುಗಳಿಗೆ ಇದರ ಜೆಲ್ ತೆಗೆದು ಹಚ್ಚುವುದರಿಂದ ವಾಸಿಮಾಡಿಕೊಳ್ಳಬಹುದು.
ಇದು ಮನೆಯ ಒಳಗೆ ಮತ್ತು ಹೊರಗೆ ಬೆಳೆಯಬಹುದಾದ ಸಸ್ಯ. ಇದು ದೀರ್ಘಕಾಲದವರೆಗೆ ಇರುತ್ತದೆ. ಈಗಿನ ದಿನಗಳಲ್ಲಿ ಇದನ್ನು ಜ್ಯೂಸ್, ಸೋಪ್, ಪ್ರೊಡಕ್ಟ್ ಗಳಿಗೆ ಬಳಸಲಾಗುತ್ತಿದೆ. ಹಾಗೆಯೇ ಅಲೋವೆರಾದಲ್ಲಿ ಬಹಳ ವಿಧಗಳಿವೆ. ಇದು ಸುತ್ತಲೂ ಹರಡಿಕೊಳ್ಳುತ್ತದೆ. ಇದು ಎತ್ತರವಾಗಿ ಬೆಳೆಯುವುದಿಲ್ಲ. ಇದು 100ಸೆಂಟಿಮೀಟರ್ ನಷ್ಟು ಎತ್ತರ ಮಾತ್ರ ಬೆಳೆಯುತ್ತದೆ. ಇದಕ್ಕೆ ತುಂಬಾ ವರ್ಷಗಳ ನಂತರ ಹೂವು ಬಿಡುತ್ತದೆ. ಇದಕ್ಕೆ ಕಾಯಿ ಸಹ ಬಿಡುತ್ತದೆ. ಕಾಯಿಯನ್ನು ಒಣಗಿಸಿ ನೆಟ್ಟರೆ ತುಂಬಾ ಚೆನ್ನಾಗಿ ಬೆಳೆಯುತ್ತದೆ.
ಇದಕ್ಕೆ ನೀರು, ಸೂರ್ಯನ ಬೆಳಕು ಮತ್ತು ಒಳ್ಳೆಯ ಮಣ್ಣು ಬಹಳ ಮುಖ್ಯ. ಬೇಸಿಗೆಯಲ್ಲಿ ಸ್ವಲ್ಪ ಹೆಚ್ಚಿನ ನೀರು ಇದಕ್ಕೆ ಬೇಕಾಗುತ್ತದೆ. ಚಳಿಗಾಲದಲ್ಲಿ ಅಷ್ಟೊಂದು ನೀರು ಬೇಕಾಗುವುದಿಲ್ಲ. ಹಾಗೆಯೇ ಅತಿಯಾಗಿ ನೀರನ್ನು ಕೂಡ ಹಾಕಬಾರದು. ಏಕೆಂದರೆ ಇದರ ಬೇರು ಕೊಳೆತುಹೋಗುತ್ತದೆ. ಇದರ ಎಲೆಯು ನೀರನ್ನು ಸಂಗ್ರಹ ಮಾಡಿಟ್ಟುಕೊಳ್ಳುತ್ತದೆ. ಮಣ್ಣಿನ ತೇವಾಂಶ ಇಲ್ಲದಿರುವಾಗ ನೀರನ್ನು ಹಾಕಬೇಕು. ಹಾಗೆಯೇ ಜೇಡಿಮಣ್ಣು ಆಗಬಾರದು. ಅಲೋವೆರಾ ನೆಡುವ ಕುಂಭಕ್ಕೆ ತೂತುಗಳು ಇರಬೇಕು.
ಅಲೋವೆರಾ ನೆಡುವ ಮುನ್ನ ಮೊದಲು ಒಂದು ಕುಂಭಕ್ಕೆ 4 ಕಲ್ಲುಗಳನ್ನು ಹಾಕಿ ಸ್ವಲ್ಪ ಕಾಯಿಸಿಪ್ಪೆಯ ಒಳಗಿನ ಚೂರುಗಳನ್ನು ಹಾಕಬೇಕು. ನಂತರ ಅದಕ್ಕೆ ತರಗೆಲೆಗಳನ್ನು ಹಾಕಬೇಕು. ನಂತರ ಮಣ್ಣು ಹಾಕಬೇಕು. ನಂತರ ಇರುವ ಗೊಬ್ಬರಗಳನ್ನು ಹಾಕಬೇಕು. ನಂತರ ಸಣ್ಣ ಅಲೋವೆರಾ ಬುಡವನ್ನು ಕಿತ್ತು ನೆಡಬೇಕು.