ಯಾವುದೇ ಪರೀಕ್ಷೆ ಬರೆಯಲು ನಮ್ಮ ತಯಾರಿ ಹೇಗಿರಬೇಕು ಓದಿ.

ಬಹಳಷ್ಟು ವಿದ್ಯಾರ್ಥಿಗಳು ಪರೀಕ್ಷೆ ಎಂದರೆ ಭಯಪಡುತ್ತಾರೆ. ಹೇಗೆ ಪರೀಕ್ಷೆಗೆ ಓದಬೇಕು, ಹೆಚ್ಚಿನ ಮಾರ್ಕ್ಸ್ ಪಡೆಯುವುದು ಹೇಗೆ ಎನ್ನುವ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಪರೀಕ್ಷೆಗಳು ಹತ್ತಿರ ಬಂದಂತೆ ವಿದ್ಯಾರ್ಥಿಗಳ ಹೃದಯ ಬಡಿತ ಹೆಚ್ಚಾಗುತ್ತದೆ, ಟೆನ್ಷನ್ ಆಗುವುದರಿಂದ ಅವರು ಓದಿರುವುದನ್ನು ಮರೆತು ಹೋಗುತ್ತಾರೆ. ಕೆಲವು ವಿದ್ಯಾರ್ಥಿಗಳು ಹಾರ್ಡ್ ವರ್ಕ್ ಮಾಡುತ್ತಾರೆ ಆದರೆ ರಿಸಲ್ಟ್ ಕಡಿಮೆ ಇದರಿಂದ ನಿರಾಶೆಗೊಳ್ಳುತ್ತಾರೆ, ಪ್ರತಿ ವಿದ್ಯಾರ್ಥಿಯ ಆಸೆ ಉತ್ತಮ ಮಾರ್ಕ್ಸ್ ಪಡೆಯಬೇಕು ಅಂತ ಅದಕ್ಕಾಗಿ ಪ್ರಯತ್ನಿಸುತ್ತಾರೆ ಆದರೆ ಒಳ್ಳೆಯ ಮಾರ್ಕ್ಸ್ ಬರುವುದಿಲ್ಲ. ಅವನಿಗೆ ಸ್ಟಡಿ ಟೆಕ್ನಿಕ್ಸ್ ಗೊತ್ತಿರುವುದಿಲ್ಲ. ಯಾವ ವಿದ್ಯಾರ್ಥಿ ಟೋಪರ್ ಆಗಿರುತ್ತಾನೆ ಅವನು ಮೊದಲಿನಿಂದಲೂ ಬುದ್ಧಿವಂತ ಆಗಿರುತ್ತಾನೆ ಅಂತಲ್ಲ ಅವನು ಓದುವ ಟೆಕ್ನಿಕ್ಸ್ ಬೇರೆ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿರುತ್ತದೆ. ನಿಯಮಿತವಾಗಿ ಓದಬೇಕು ಪ್ರತಿದಿನ ಓದಬೇಕು. ಕೆಲವು ವಿದ್ಯಾರ್ಥಿಗಳು ಪರೀಕ್ಷೆ ಹತ್ತಿರ ಬಂದಾಗ ಹಗಲು, ರಾತ್ರಿ ಓದುತ್ತಾರೆ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಸರಿಯಾಗಿ ಪ್ಲಾನ್ ಮಾಡಬೇಕು. ಪರೀಕ್ಷೆಗೆ ಹೇಗೆ ತಯಾರಿ ಮಾಡಬೇಕು ಎಂದು ಪ್ಲಾನ್ ಮಾಡಬೇಕು. ಒಂದು ಟೈಮ್ ಟೇಬಲ್ ಮಾಡಿಕೊಂಡು ಅದರಂತೆ ತಪ್ಪದೆ ಓದಬೇಕು. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಓದಿ ಇದರಿಂದ ಮುಖ್ಯ ಪ್ರಶ್ನೆಗಳು, ಎಕ್ಸಾಮ್ ಪ್ಯಾಟರ್ನ್ ಗೊತ್ತಾಗುತ್ತದೆ. ಮುಂಜಾನೆ ಬೇಗ ಎದ್ದು ಅಧ್ಯಯನ ಮಾಡಿ. ಬೆಳಗಿನ ಸಮಯ ಓದಲು ಉತ್ತಮ ಸಮಯವಾಗಿದೆ ಈ ಸಮಯದಲ್ಲಿ ಸುತ್ತ ಮುತ್ತಲಿನ ವಾತಾವರಣ ಶಾಂತವಾಗಿರುತ್ತದೆ. ಮುಂಜಾನೆ ಎದ್ದು ಓದುವುದರಿಂದ ಬೇಗ ಅರ್ಥವಾಗುತ್ತದೆ ಮತ್ತು ನೆನಪಿನಲ್ಲಿ ಇರುತ್ತದೆ. ಪರೀಕ್ಷಾ ಸಮಯದಲ್ಲಿ ಟೆನ್ಷನ್ ತೆಗೆದುಕೊಳ್ಳಬಾರದು. ಬಹಳಷ್ಟು ವಿದ್ಯಾರ್ಥಿಗಳು ಚೆನ್ನಾಗಿ ಓದಿರುತ್ತಾರೆ ಆದರೆ ಟೆನ್ಷನ್ ಮಾಡಿಕೊಳ್ಳುತ್ತಾರೆ, ಅನಾವಶ್ಯಕ ಭಯ ಪಡುತ್ತಾರೆ ಇದರಿಂದ ಅವರಿಗೆ ಓದಿರುವುದು ಮರೆತುಹೋಗುತ್ತದೆ. ನೀವು ಓದಿದ್ದರೆ ಭಯಪಡುವ ಅಗತ್ಯ ಇಲ್ಲ. ಈ ಮಾಹಿತಿಯನ್ನು ಎಲ್ಲ ವಿದ್ಯಾರ್ಥಿಗಳಿಗೆ ತಿಳಿಸಿ.

Leave a Comment