ಹೋಟೆಲ್ ನಲ್ಲಿ ಗ್ರಾಹಕ ಕೊಟ್ಟ ಟಿಪ್ಸ್ ಹಣದಿಂದ ಈ ವ್ಯಕ್ತಿ ಏನ್ ಮಾಡಿದ್ದಾನೆ ಗೊತ್ತಾ? ಒಂದು ಕ್ಷಣ ಬೆರಗಾಗ್ತೀರಾ

ಜೀವನದಲ್ಲಿ ಹೆತ್ತ ತಾಯಿ ತಂದೆಯರು ತನ್ನ ಮಕ್ಕಳು ಇಂದು ಒಳ್ಳೆಯ ಸ್ಥಾನದಲ್ಲಿ ಇರಬೇಕು ಎಂಬ ಆಸೆ ಇದೆ ಇರುವುದು ಹಾಗೆಯೇ ಅವರು ತಮ್ಮ ಕಷ್ಟವನ್ನು ಮಕ್ಕಳ ಎದುರು ತೋರಿಸದೆ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುತ್ತಾರೆ. ನಾವು ಹೋಟೆಲ್ ಅಲ್ಲಿ ಊಟವಾದ ಬಳಿಕ ಸಪೈಯರ್ ಗೆ ಟಿಪ್ಸ್ ಮೂಲಕ ಆತನ ಉಪಾಚರವನ್ನು ಇಷ್ಟ ಆಗಿದೆ ಎನ್ನುವ ರೀತಿ ಹಣವನ್ನು ನೀಡಿ ಹೊರಗೆ ಹೋಗುತ್ತೇವೆ. ಅದರಿಂದ ಅವರಿಗೆ ಎಷ್ಟೆಲ್ಲ ಉಪಯೋಗ ಇದೆ ಎನ್ನುವುದು ಇಂದಿನ ಈ ಲೇಖನದಲ್ಲಿ ನಮಗೆ ತಿಳಿದು ಬರುವುದು.

ಆಂದ್ರಪ್ರದೇಶ ದ ಒಂದು ಹೋಟೆಲ್ ಅಲ್ಲಿ ಮರಿಸ್ವಾಮಿ ಎನ್ನುವ ಸಪಲೈಯರ್ ಕೆಲಸ ಮಾಡುತ ಇರುತ್ತಾರೆ ಅವರು ತಮ್ಮ 30 ವರ್ಷ ವಯಸ್ಸಿನ ವ್ಯಕ್ತಿ ಆಗಿದ್ದಾಗ ಅದೇ ಹೋಟೆಲ್ ಕೆಲ್ಸಕ್ಕೆ ಸೇರಿ ಕೊಳ್ಳುತ್ತಾರೆ ಅವತ್ತಿಂದ ಇವತ್ತಿನವರೆವಿಗೂ ಅದೇ ಕೆಲಸವನ್ನು ಮಾಡುತ್ತ ಇದ್ದು ಹೋಟೆಲ್ ಅಲ್ಲಿ ಎಲ್ಲಾ ಕೆಲಸ ಅನುಭವ ಉಳ್ಳ ಹಿರಿಯ ವ್ಯಕ್ತಿ ಆಗಿದ್ದರು. ತನ್ನ ಪೂರೈಕೆದಾರ ಕೆಲಸವನ್ನು ಬಿಡಲಿಲ್ಲ ಅವರ ಅನುಭವಕ್ಕೆ ಅವರೊಬ್ಬರು ಸೂಪರ್ವೈಸರ್ ಆಗಲು ಸಾಧ್ಯ ಇತ್ತು ಸ್ವತಃ ಹೋಟೆಲ್ ಮಾಲೀಕರು ಹೇಳಿದರು ಕೂಡ ಒಪ್ಪಲಿಲ್ಲ ಇದಕ್ಕೆ ಕಾರಣ ಕೊನೆಯಲ್ಲಿ ನಿಮ್ಗೆ ತಿಳುವುದು.

ದಿನ ಅದೇ ಹೋಟೆಲ್ ಗೆ ಕೇಶವ ರೆಡ್ಡಿ ಎನ್ನುವ ಚಿನ್ನದ ಅಂಗಡಿ ಮಾಲಿಕರು ಊಟಕ್ಕೆ ಬರುತ್ತಿದ್ದರು ಹಾಗೂ ಆತನು ಒಬ್ಬ ದುರಹಂಕಾರಿ ಮನುಷ್ಯನಾಗಿದ್ದನು ಆತನಿಗೆ ದಿನವೂ ಮರಿಸ್ವಾಮಿ ಅವರೇ ಆಹಾರವನ್ನು ಪೂರೈಕೆ ಮಾಡಬೇಕಾಗಿತ್ತು. ಆಹಾರ ತಿಂದ ಬಳಿಕ ದಿನಾಲು 200 ರೂಪಾಯಿ ಟಿಪ್ಸ್ ಅನ್ನು ನೀಡುತ್ತಿದ್ದನು ಅದು ಕೂಡ ಎಸೆದು ಕೊಡುವ ಹಾಗೆ ಕೊಡುತ್ತಿದ್ದನು ಇದನ್ನು ಮರಿಸ್ವಾಮಿ ಅವರು ಯಾವುದೇ ಮುಲಾಜಿಲ್ಲದೆ ತೆಗೆದುಕೊಂಡು ತನ್ನ ಪರ್ಸಿನಲ್ಲಿ ಜೋಪಾನವಾಗಿ ಇಟ್ಟುಕೊಳ್ಳುತ್ತಿದ್ದರು.

ಇದನ್ನು ನೋಡಿದ ಅವರ ಸಹೋದ್ಯೋಗಿಗಳು ಅವರನ್ನು ಗೇಲಿ ಮಾಡಿ ನಗುತ್ತಿದ್ದರು ಮಾಲೀಕರು ಮರಿಸ್ವಾಮಿ ಅವರನ್ನು ಕರೆದು ಅವರು ಅಷ್ಟೆಲ್ಲ ಅವಮಾನ ಮಾಡಿದರು ನೀವು ಯಾಕೆ ಅವರಿಗೆ ಏನು ಹೇಳುವುದಿಲ್ಲ ದಯವಿಟ್ಟು ನೀವು ಈ ಕೆಲಸವನ್ನು ಬಿಟ್ಟು ಅಡುಗೆಮನೆಯಲ್ಲಿ ಸೂಪರ್ವೈಸರ್ ಕೆಲಸವನ್ನು ಮಾಡಬಹುದಲ್ಲವೇ ಎಂದು ಮನವಿಯನ್ನು ಮಾಡುತ್ತಾರೆ. ಆದರೆ ಮರಿಸ್ವಾಮಿಯವರು ಅದಕ್ಕೆ ಸುತಾರಾಂ ಒಪ್ಪುವುದಿಲ್ಲ ಅವರ ಸಹೋದ್ಯೋಗಿಗಳು ಅವರನ್ನು ದುಡ್ಡಿಗೋಸ್ಕರ ಏನನ್ನು ಬೇಕಾದರೂ ಸಹಿಸಿಕೊಳ್ಳುತ್ತಾನೆ ದುಡ್ಡಿಗೋಸ್ಕರ ಮಾನ ಮರ್ಯಾದೆ ಇಲ್ಲದ ಮನುಷ್ಯ ಎಂದು ಅವರನ್ನು ಗೇಲಿ ಮಾಡುತ್ತಾರೆ.

ಮತ್ತೊಂದು ದಿನ ಕೇಶವರೆಡ್ಡಿ ತಮ್ಮ ಸ್ನೇಹಿತರ ಜೊತೆಗೂಡಿ ಅದೇ ಹೋಟೆಲ್ಗೆ ಊಟವನ್ನು ಮಾಡಲು ಬರುತ್ತಾರೆ ಆವಾಗ ಕೇಶವರೆಡ್ಡಿ ದುರಹಂಕಾರದಿಂದ ಮರಿಸ್ವಾಮಿ ನಿನಗೆ ಚೆನ್ನಾಗಿ ಫಾಸ್ಟ್ ಆಗಿ ಆಹಾರವನ್ನು ಪೂರೈಕೆ ಮಾಡಲು ಬರುವುದಿಲ್ಲ ನಿಧಾನವಾಗಿ ಬರುತ್ತಿದೀಯ ಎಂದು ಗೇಲಿ ಮಾಡುತ್ತಾರೆ. ಆಗ ಅವರ ಸ್ನೇಹಿತರು ಕೂಡ ಮರಿಸ್ವಾಮಿಯನ್ನು ನೋಡಿ ಗಹಗಹಿಸಿ ನಗುತ್ತಾರೆ. ಊಟವೆಲ್ಲಾ ಆದ ಬಳಿಕ ಕೇಶವರೆಡ್ಡಿ ಅವರು ಮರಿಸ್ವಾಮಿಯನ್ನು ಹತ್ತಿರ ಕರೆದು ಐನೂರರ ನೋಟನ್ನು ಅವರಿಗೆ ಕೊಟ್ಟು ಅಲ್ಲಿಂದ ಎದ್ದು ಹೋಗಲು ಹವಣಿಸುತ್ತಾರೆ ಆವಾಗ ಮರಿಸ್ವಾಮಿ ಬುದ್ಧಿ ದಯವಿಟ್ಟು ಒಂದು ನಿಮಿಷ ಕಾಯಿರಿ ಎಂದು ಅಲ್ಲೇ ಇದ್ದ ಒಬ್ಬ ಯುವಕನನ್ನು ಕರೆದು ಅವರ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೋ ಎಂದನ್ನು. ಅದರಂತೆ ಆ ಹುಡುಗ ಕೂಡ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ.

ಇದನ್ನು ನೋಡಿದ ಕೇಶವರೆಡ್ಡಿ ಯಾರು ಈ ಹುಡುಗ ನೋಡಲು ವಿದ್ಯಾವಂತೆ ಕಾಣಿಸುತ್ತಾನೆ ಎಂದು ಪ್ರಶ್ನಿಸುತ್ತಾರೆ ಆವಾಗ ಮರಿಸ್ವಾಮಿಯವರು ಇವನು ನನ್ನ ಮಗ ಹಾಗೂ ನಾನು ದುಡಿದ ಸಂಬಳ ಮತ್ತು ನೀವು ಕೊಟ್ಟ ಟಿಪ್ಸ್ ಇಂದ ನನ್ನ ಮಗ ಇಂದು ಡಾಕ್ಟ ರ್ ಆಗಿದ್ದಾನೆ ಇದಕ್ಕೆಲ್ಲ ನಿಮ್ಮ ಸಹಕಾರವೇ ಕಾರಣ ಎಂದು ವಿನಯದಿಂದ ಹೇಳುತ್ತಾರೆ ಇದನ್ನು ಕೇಳಿದ ಹೋಟೆಲ್ ಮಾಲೀಕರು ಮತ್ತು ಅವರ ಸಹೋದ್ಯೋಗಿಗಳು ಕೂಡ ಆಶ್ಚರ್ಯ ಚಕಿತರಾಗುತ್ತಾರೆ. ನಿಜ ಅಲ್ವಾ ಇಂದಿನ ಹಲವಾರು ಪತ್ರಿಕೆಗಳಲ್ಲಿ ನಾವು ಇಂತಹ ಸಂದರ್ಭವನ್ನು ನೋಡಲು ಕಾಣಸಿಗುತ್ತದೆ. ಕೂಲಿ-ನಾಲಿ ಮಾಡುವವರ ಮಕ್ಕಳು ಇಂದು ಒಳ್ಳೆಯ ಸ್ಥಾನದಲ್ಲಿ ಇದ್ದು ಒಳ್ಳೆಯ ಕೆಲಸವನ್ನು ತಮ್ಮದಾಗಿಸಿಕೊಂಡಿದ್ದಾರೆ ಇದಕ್ಕೆಲ್ಲ ಅವರ ಪರಿಶ್ರಮ ಹಾಗೂ ಗುರಿ ಎಂದೇ ಹೇಳಬಹುದು.

Leave a Comment