ಮನೆಯ ಹೊಸ್ತಿಲ ಪೂಜೆಗೆ ಈ ಹೂವು ಇಟ್ರೆ ಇಂತಹ ಸಮಸ್ಯೆ ಕಾಡೋದಿಲ್ಲ!

ಹೊಸ್ತಿಲು ಅಂದರೆ ಸಾಕ್ಷಾತ್ ಮಹಾಲಕ್ಷ್ಮಿಯ ಸ್ವರೂಪ. ಬೆಳಿಗ್ಗೆ ಎದ್ದ ನಂತರ ಶುದ್ಧಿಯಾಗಿ ಶುಚಿಯಾಗಿ ನಾವೆಲ್ಲರೂ ವಿಶೇಷವಾದ ಆ ಹೊಸ್ತಿಲಿಗೆ ನೀರು ಹಾಕಿ ಸ್ವಚ್ಛಗೊಳಿಸಿ ರಂಗೋಲಿ ಇಟ್ಟು ಹೂವು ಇಡುವ ಪದ್ಧತಿಯನ್ನು ನಾವು ಆಗಿನ ಕಾಲದಿಂದಲೂ ರೂಢಿಯಲ್ಲಿ ಇಟ್ಟುಕೊಂಡು ಬಂದಿದ್ದಿವಿ. ಅದೇ ರೀತಿ ಯಾವ ಬಣ್ಣದ ಹೂವನ್ನು ಹೊಸ್ತಿಲಿನ ಮೇಲೆ ಇಟ್ಟರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ ಆಗತ್ತೆ, ಮನೆಯಲ್ಲಿನ ದಾರಿದ್ರ್ಯ ದೂರ ಆಗತ್ತೆ ಅನ್ನೋದನ್ನ ಈ ಲೇಖನದಲ್ಲಿ ನೋಡೋಣ.

ಎಲ್ಲರೂ ಪ್ರತೀ ದಿನ ಬೆಳಿಗ್ಗೆ ಎದ್ದು ಶುಚಿಯಾಗಿ, ಮನೆಯ ಅಂಗಳ ಸ್ವಚ್ಛಗೊಳಿಸಿ ಬಾಗಿಲಿಗೆ ಅಂದರೆ ಹೊಸ್ತಿಲು ತೊಳೆದು ಅರಿಶಿನ ಕುಂಕುಮ ಹಾಗು ಹೂವು ಇಟ್ಟು ಪೂಜೆ ಮಾಡುತ್ತೇವೆ. ಆದರೆ ಇದರ ಜೊತೆಗೆ ನಿಮ್ಮ ಪೂಜೆಯಲ್ಲಿ ಒಂದು ಸಣ್ಣ ಬದಲಾವಣೆಯನ್ನು ಮಾಡಿಕೊಂಡರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಅನುಗ್ರಹ ಪಡೆಯುವುದು ಖಚಿತ. ಪ್ರತೀ ನಿತ್ಯ ಹೂವು ಖರೀದಿಸಿ ದೇವರಿಗೆ ವಿಶೇಷ ಅಲಂಕಾರ ಮಾಡುತ್ತೀರಾ ಅದರ ಜೊತೆಗೆ ಹೊಸ್ತಿಲಿಗೆ ಕೂಡಾ ಹೂವು ಇಡುತ್ತೀರ. ಪ್ರತೀ ದಿನ ಆಗದೆ ಇದ್ದರೂ ವಾರದಲ್ಲಿ ಒಂದು ದಿನ ಶುಕ್ರವಾರ ಒಂದು ದಿನ ಆದ್ರೂ ಮನೆಯ ಮುಖ್ಯ ಬಾಗಿಲಿನ ಹೊಸ್ತಿಲಿಗೆ ಹೂವುಗಳನ್ನು ಇಡಬೇಕು. ಬಿಳಿ ಬಣ್ಣದ ಹೂವುಗಳನ್ನು ನೀವು ಪೂಜೆ ಮಾಡುವುದಕ್ಕೂ ಮೊದಲು ಹೊಸ್ತಿಲಿನ ಮೇಲೆ ಎರಡೂ ಪಕ್ಕಕ್ಕೆ ಇಡಬೇಕು. ಬಿಳಿ ಬಣ್ಣದ ಯಾವುದೇ ಹೂವುಗಳನ್ನು ಇಡಬಹುದು.

ಶುಕ್ರವಾರದ ದಿನ ಹೀಗೆ ಹೊಸ್ತಿಲಿಗೆ ಬಿಳಿ ಹೂವನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ಹಲವಾರು ಬದಲಾವಣೆಗಳು ಗೋಚರಿಸುತ್ತವೆ. ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ಅದೇ ದಿನವೇ ನಿಮ್ಮ ಮನೆಗೆ ಪ್ರವೇಶಿಸುತ್ತಾಳೆ. ಮಹಾಲಕ್ಷ್ಮಿ ದೇವಿಯು ಮನೆಯ ಒಳಗೆ ಬಂದರೆ ಅಂದಿನಿಂದ ನಿಮ್ಮ ಮನೆಯ ಎಲ್ಲಾ ಕಷ್ಟಗಳೂ ದೂರ ಆಗತ್ತೆ. ಮನೆಯ ಹೊಸ್ತಿಲು ಅಂದರೆ ಸಾಕ್ಷಾತ್ ಮಹಾಲಕ್ಷ್ಮಿ ಸ್ವರೂಪ ಹಾಗಾಗಿ ಆ ಹೊಸ್ತಿಲಿನ ಮೇಲೆ ಯಾರು ನಿಲ್ಲಬಾರದು, ಹೊಸ್ತಿಲನ್ನು ಓದೆಯಬಾರದು. ಇದು ಎಲ್ಲರಿಗೂ ತಿಳಿದ ವಿಷಯವೇ. ಮಹಾಲಕ್ಷ್ಮಿ ಸ್ವರೂಪ ಆದ ಹೊಸ್ತಿಲನ್ನು ಪೂಜಿಸಲು ಬಿಳಿ ಬಣ್ಣದ ಹೂವುಗಳನ್ನು ಪ್ರತೀ ಶುಕ್ರವಾರ ಹೊಸ್ತಿಲಿಗೆ ಇಡುತ್ತಾ ಬಂದರೆ ಮನೆಯಲ್ಲಿ ಆಗುವ ಬದಲಾವಣೆಯನ್ನು ನೀವು ನಂಬಲ್ಲ. ಮನೆಯಲ್ಲಿ ಶಾಂತಿ, ನೆಮ್ಮದಿ ಇಲ್ಲ ಕಲಹ ಆಗ್ತಾನೇ ಇರತ್ತೆ ಅಂತ ಇರುವವರು ಪ್ರತೀ ಶುಕ್ರವಾರ ಹೀಗೆ ಹೂವನ್ನು ಇಡುತ್ತಾ ಬಂದರೆ ನಿಧಾನವಾಗಿ ಮನೆಯಲ್ಲಿ ಶಾಂತಿ ನೆಮ್ಮದಿ ನೇಳೆಸತ್ತೆ ಕಷ್ಟ, ಕಲಹಗಳು ದೂರ ಆಗುತ್ತವೆ.

Leave a Comment