ಹುರುಳಿಕಾಳು ಸೇವನೆಯಿಂದ ಶರೀರಕ್ಕೆ ಎಷ್ಟೆಲ್ಲ ಲಾಭವಿದೆ ಗೊತ್ತೇ

ಹುರುಳಿಕಾಳು ಅನ್ನೋದು ಸಾಮಾನ್ಯವಾಗಿ ಎಲ್ಲರಿಗು ಚಿರಪರಿಚಿತವಾಗಿರುತ್ತದೆ, ಇದನ್ನು ಅಡುಗೆಗೆಳಲ್ಲಿ ಹಾಗೂ ಕೆಲವೊಂದಷ್ಟು ಮನೆಮದ್ದುಗಳಲ್ಲಿ ಇದನ್ನು ಬಳಸಲಾಗುತ್ತದೆ. ಹುರುಳಿಕಾಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಶಕ್ತಿವರ್ದಕವಾಗಿ ಪಡೆಯಬಹುದು ಇನ್ನು ದೇಹಕ್ಕೆ ಹತ್ತಾರು ಲಾಭಗಳನ್ನು ಹುರುಳಿಕೆಲಿನಿಂದ ಪಡೆಯಬಹುದಾಗಿದೆ.

ಹುರುಳಿಕಾಳನ್ನು ಮೊಳಕೆ ಮಾಡಿ ತಿನ್ನುವುದರಿಂದ ದೇಹದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತದೆ ಇನ್ನು ಮೊಳಕೆಕಾಳು ಅನ್ನೋದು ಆರೋಗ್ಯದ ನಿಧಿ ಎಂಬುದಾಗಿ ಹೇಳಬಹುದಾಗಿದೆ,
ಹುರುಳಿ ಕಾಳುಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಈ ಕಾಳಿನ ಬಗ್ಗೆ ಯಾವೆಲ್ಲ ಕಾಯಿಲೆಗಳು ಗುಣವಾಗುತ್ತದೆ ಎಂದು ತಿಳಿಯೋಣ. ಇದರಲ್ಲಿ ಸಮೃದ್ಧವಾಗಿ ಕಬ್ಬಿಣ, ನಾರು, ವಿಟಮಿನ್ ಪೌಷ್ಟಿಕತೆಯನ್ನು ಹೆಚ್ಚಿಸುತ್ತದೆ.

ಇದು ಉಷ್ಣ ಪದಾರ್ಥ. ಇದರ ಸೇವನೆಯಿಂದ ದೇಹದ ಉಷ್ಣಾಂಶ ಹೆಚ್ಚುತ್ತದೆ. ಸಾಮಾನ್ಯ ನೆಗಡಿ, ಕೆಮ್ಮು, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಆಸ್ತಮಾವನ್ನೂ ಸಹ ಗುಣ ಪಡಿಸುತ್ತದೆ.ದೇಹದ ತೂಕವನ್ನು ನಿಯಂತ್ರಣ ಮಾಡಲು ಹುರುಳಿ ಪುಡಿಯನ್ನು ಜೀರಿಗೆಯೊಂದಿಗೆ ಒಂದು ಲೋಟ ನೀರಿಗೆ ಬೆರೆಸಿ ದಿನಾಲೂ ಬೆಳಿಗ್ಗೆ ಕುಡಿಯಬೇಕು. ಹಾಗೆಯೆ ಒಂದು ಕಪ್ ಹುರುಳಿಯನ್ನು ರಾತ್ರಿ ನೆನೆಸಿ ಬೆಳಿಗ್ಗೆ ತಿನ್ನುವುದರಿಂದ ಮೂಲವ್ಯಾಧಿ ಕಡಿಮೆಯಾಗುತ್ತದೆ. ಹಾಗಯೇ ಮೂತ್ರಕೋಶದ್ಲಲಿನ ಕಿಡ್ನಿಯಲ್ಲಿನ ಕಲ್ಲುಗಳನ್ನು ಸಹ ಇದು ಕರಗಿಸುತ್ತದೆ. ಹಾಗಾಗಿ ಹುರುಳಿಯನ್ನು ದಿನಾಲೂ ಸೇವಿಸಿ ಇದರ ಪ್ರಯೋಜನವನ್ನು ಪಡೆಯಿರಿ. ನಿಮ್ಮ ದೇಹ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

Leave a Comment