ಬಾಯಿ ಹುಣ್ಣು ಸೇರಿದಂತೆ ಮುಟ್ಟಿನ ಸಮಸ್ಯೆ ನಿವಾರಿಸುವ ಗುಲಗಂಜಿ

ನೈಸರ್ಗಿಕವಾಗಿ ನಮಗೆ ಹೇರಳವಾಗಿ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳು ಅದರ ಬೇರು, ಎಲೆ, ಕಾಂಡ, ಬೀಜಗಳು ದೊರೆಯುತ್ತವೆ. ಇವುಗಳಲ್ಲಿ ಕೆಲವು ವಿಷಕಾರಿ ಗುಣಗಳನ್ನು ಹೊಂದಿರುತ್ತವೆ ಅದನ್ನು ತೆಗೆದುಕೊಳ್ಳುವ ಪ್ರಮಾಣ ಹೇಗೆ ಅನ್ನೋದು ನಮಗೆ ತಿಳಿದರೆ ವಿಷವನ್ನು ಕೂಡಾ ಅಮೃತವಾಗಿ ಬದಲಾಯಿಸಿಕೊಳ್ಳಬಹುದು. ಇಂದು ನಾವು ಅದೇ ರೀತಿಯ ಒಂದು ಬೀಜ “ಗುಲಗಂಜಿ”ಯ ಬಗ್ಗೆ ಹಾಗೂ ಗುಲಗಂಜಿಯ 5 ಚಮತ್ಕಾರಿ ವಿಷಯದ ಬಗ್ಗೆ ತಿಳಿದುಕೊಳ್ಳೋಣ.

ಗುಲಗಂಜಿಯನ್ನ ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೇವೆ. ಇದು ಕಾಡಿನಲ್ಲಿ ಹೆಚ್ಚಾಗಿ ಬೆಳೆಯುವ ಒಂದು ರೀತಿಯ ಬೀಜ. ಇದು ಕೆಂಪು ಅಥವಾ ಕಪ್ಪು ಬಣ್ಣದಲ್ಲಿ ಇರತ್ತೆ. ಇದು ನಮ್ಮ ದೇಹಕ್ಕೆ ಬೇಕಾದ ಔಷಧೀಯ ಗುಣಗಳನ್ನು ಹೊಂದಿದೆ. ಈ ಗುಲಗಂಜಿ ಚಿಕ್ಕದಾದರೂ ಸಹ ಇದರ ಗಿಡದ ಬೇರು ಎಲೆ ಎಲ್ಲವೂ ಸಹ ಅಪಾರವಾದ ಔಷಧೀಯ ಗುಣಗಳನ್ನು ಹೊಂದಿವೆ. ಗುಲಗಂಜಿ ಬೀಜ ಬಹಳಷ್ಟು ವಿಷಕಾರಿ. ಆದರೂ ಸಹ ತುಂಬಾ ಔಷಧೀಯ ಗುಣಗಳನ್ನು ಹೊಂದಿದೆ. ಆದರೆ ಇದನ್ನು ಉಪಯೋಗಿಸುವ ಮೊದಲು ತಜ್ಞ ವೈದ್ಯರ ಬಳಿ ಸಲಹೆ ತೆಗೆದುಕೊಳ್ಳುವುದು ಸೂಕ್ತ. ಯಾಕೆ ಅಂದ್ರೆ ಒಬ್ಬರ ದೇಹಕ್ಕಿಂತ ಇನ್ನೊಬ್ಬರ ದೇಹ ಪ್ರಕೃತಿಯಲ್ಲಿ ಭಿನ್ನವಾಗಿ ಇರತ್ತೆ ಹಾಗಾಗಿ ಗುಲಗಂಜಿ ಒಬ್ಬರಿಗೆ ಒಗ್ಗಿದರೆ ಇನ್ನೊಬ್ಬರಿಗೆ ಒಗ್ಗುವುದಿಲ್ಲ.

ಗುಲಗಂಜಿಯ ಎಲೆಗಳನ್ನು ಒಂದೆರಡು ದಿನ ಬಾಯಿಯಲ್ಲಿ ಅಗೆದರೆ ಬಾಯಿಯ ಹುಣ್ಣು ಮತ್ತು ಬಾಯಿ ವಾಸನೆ ದೂರವಾಗುತ್ತದೆ. ಹೆಣ್ಣುಮಕ್ಕಳಿಗೆ ತಿಂಗಳು ಮುಟ್ಟಿನ ಸಮಸ್ಯೆ ಇದ್ದರೆ ಐದು ಗ್ರಾಂ ಗುಲಗಂಜಿ ಎಲೆಯ ಪುಡಿಯನ್ನು 150 ಗ್ರಾಂ ನೀರಿನಲ್ಲಿ ಬೆರೆಸಿ ಅದನ್ನು ಕಾಲು ಭಾಗ ಕುದಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಈ ಸಮಸ್ಯೆ ದೂರ ಆಗುತ್ತದೆ.

ಗುಲಗಂಜಿ ಮರದ ಬೇರಿನ ಪುಡಿಯನ್ನು ನೀರಿಗೆ ಸೇರಿಸಿ ಕುದಿಸಿ ಕಷಾಯ ಮಾಡಿ ಕುಡಿದರೆ ಕೆಮ್ಮು ನಿವಾರಣೆ ಆಗುತ್ತದೆ. ಇನ್ನೂ ಕಾಲು ನೋವು, ಸೊಂಟ ನೋವು ಹಾಗೂ ಇನ್ಯಾವುದೇ ಮೂಳೆ ನೋವು ಇದ್ದರೂ ಸಹ ಗುಲಗಂಜಿಯ ಪುಡಿಯನ್ನು ಬಿಸಿ ನೀರಿನಲ್ಲಿ ಕಲಸಿ ಲೇಪಿಸಿದರೆ ನೋವು ಮತ್ತು ಊತ ಕಡಿಮೆಯಾಗುತ್ತದೆ. ಇವು ಗುಲಗಂಜಿ ಇಂದ ನಮಗೆ ಆಗುವ ಪ್ರಯೋಜನಗಳು.

Leave a Comment