ತಲೆಯ ಕೂದಲಿನಲ್ಲಿ ಹೊಟ್ಟು ಆಗುವುದು ಸರ್ವೇಸಾಮಾನ್ಯವಾಗಿದೆ. ಇದಕ್ಕೆ ಹಲವಾರು ಕಾರಣಗಳಿವೆ. ತಲೆಯಲ್ಲಿ ಹೊಟ್ಟು ಇದ್ದರೆ ಬಹಳ ಕಿರಿಕಿರಿ ಎನಿಸುತ್ತದೆ. ಹಾಗೆಯೇ ತಲೆಯು ಬಹಳ ತುರಿಕೆ ಉಂಟಾಗುತ್ತದೆ. ಇದರಿಂದ ಕೂದಲು ಉದುರುವಿಕೆ ಸಹ ಆಗುತ್ತದೆ. ಆದ್ದರಿಂದ ತಲೆಯಲ್ಲಿ ಹೊಟ್ಟು ಇರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಇಲ್ಲಿ ತಲೆಯಲ್ಲಿ ಇರುವ ಹೊಟ್ಟುಗಳನ್ನು ಹೋಗಲಾಡಿಸಿಕೊಳ್ಳಲು ಒಂದು ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಧೂಳಿನಲ್ಲಿ ಕೆಲಸ ಮಾಡುವುದರಿಂದ ತಲೆಯಲ್ಲಿ ಹೊಟ್ಟು ಉಂಟಾಗಬಹುದು. ಹಾಗೆಯೇ ತಲೆ ಸ್ನಾನವನ್ನು ಬಹಳ ದಿನಗಳ ಕಾಲ ಬಿಟ್ಟು ಮಾಡುವುದರಿಂದ ಆಗಬಹುದು. ತಲೆಗೆ ಎಣ್ಣೆಯನ್ನು ಹಾಕಿ ಸ್ವಚ್ಛವಾಗಿ ಸ್ನಾನವನ್ನು ಮಾಡದೇ ಇರುವುದರಿಂದ ಹೊಟ್ಟು ತಲೆಯಲ್ಲಿ ಆಗಬಹುದು. ಹಾಗೆಯೇ ಎಣ್ಣೆಯನ್ನು ಹಾಕದೆ ಇದ್ದರೂ ಕೂಡ ಕೊಟ್ಟು ಆಗುವ ಸಾಧ್ಯತೆ ಇದೆ. ಆದ್ದರಿಂದ ತಲೆಗೆ ಯಾವುದೇ ರೀತಿಯ ಧೂಳುಗಳು ಹೋಗದಂತೆ ನೋಡಿಕೊಳ್ಳಬೇಕು. ಹೊರಗೆ ಹೋಗುವಾಗ ತಲೆಯಮೇಲೆ ಧರಿಸುವುದು ಒಳ್ಳೆಯದು.
ನಿಂಬೆಹಣ್ಣು ಇದು ಎಲ್ಲರ ಮನೆಯಲ್ಲೂ ಇರುತ್ತದೆ. ಮನೆಯಲ್ಲಿ ಗಿಡ ಇಲ್ಲವೆಂದರೂ ಮಾರುಕಟ್ಟೆಯಿಂದ ಇದನ್ನು ಎಲ್ಲರೂ ತೆಗೆದುಕೊಂಡು ಬರುತ್ತಾರೆ. ಏಕೆಂದರೆ ಇದನ್ನು ಅಡುಗೆಗೆ ಕೂಡ ಬಳಸುತ್ತಾರೆ. ಹಾಗೆಯೇ ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಸಿ ಕೂಡ ಇದೆ. ಇದನ್ನು ತಲೆಗೆ ಹಾಕುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಹಾಗೆಯೇ ಮೊಡವೆಗಳು ಉಂಟಾದಾಗ ನಿಂಬೆಹಣ್ಣಿನ ರಸವನ್ನು ಹಾಕಿ ತಿಕ್ಕಿದರೆ ಕಲೆಗಳು ಮಾಯವಾಗುತ್ತದೆ.
ನಿಂಬೆ ಹಣ್ಣನ್ನು ಎರಡು ಹೋಳಾಗಿ ಚೆನ್ನಾಗಿ ಕತ್ತರಿಸಿಕೊಳ್ಳಬೇಕು. ನಂತರ ಅದನ್ನು ತಲೆಗೆ ಹಚ್ಚುತ್ತಾ ಬರಬೇಕು. ಚೆನ್ನಾಗಿ ರಸ ಇದ್ದರೆ ಒಂದೇ ನಿಂಬೆಹಣ್ಣು ಸಾಕಾಗುತ್ತದೆ. ಇಲ್ಲವಾದಲ್ಲಿ ಎರಡು ಹಣ್ಣುಗಳು ಬೇಕು. ಕೂದಲನ್ನು ಸ್ವಲ್ಪಭಾಗ ಭಾಗವಾಗಿ ಮಾಡಿಕೊಳ್ಳುತ್ತಾ ಹಚ್ಚುತ್ತಾ ಹೋಗಬೇಕು. ತಲೆಗೆ ಎಣ್ಣೆಯನ್ನು ಹಾಕದೆ ಲಿಂಬೆರಸವನ್ನು ಹಚ್ಚಬಾರದು. ಏಕೆಂದರೆ ಕೂದಲನ್ನು ಇದು ಒಣವಾಗಿಸುತ್ತದೆ. ರಾತ್ರಿ ಕೂದಲಿಗೆ ಎಣ್ಣೆಯನ್ನು ಹಚ್ಚಿ ಬೆಳಿಗ್ಗೆ ನಿಂಬೆಯ ರಸವನ್ನು ಹಚ್ಚಬೇಕು. ಇದರಿಂದ ಸುಲಭವಾಗಿ ತಲೆಯಲ್ಲಿ ಇರುವ ಹೊಟ್ಟನ್ನು ಹೋಗಲಾಡಿಸಿಕೊಳ್ಳಬಹುದು.