ಇಂದಿನ ದಿನಮಾನದಲ್ಲಿ ಪ್ರತಿಯೊಂದು ವಸ್ತು ಅಡುಗೆ ಬೇಕಾಗ ದಿನಸಿ ಪದಾರ್ಥ ಹಾಗೆಯೇ ಎಲ್ಲ ವಸ್ತುಗಳ ಬೆಲೆ ಬಹು ದುಬಾರಿಯಾಗಿದೆ ಬೆಲೆ ಏರಿಕೆಯಿಂದ ಪ್ರತಿಯೊಂದು ಸಹ ಉಳಿತಾಯ ಮಾಡುವುದು ಅನಿವಾರ್ಯವಾಗಿದೆ ಅದರಲ್ಲಿ ಗ್ಯಾಸ್ ಬೆಲೆ ಗಗನಕ್ಕೆ ಏರಿದೆ ಹಾಗಿರುವಾಗ ಪ್ರತಿಯೊಂದು ಮನೆಯಲ್ಲೂ ಸಹ ಗ್ಯಾಸ್ ಉಳಿತಾಯ ಮಾಡಲು ಯೋಚಿಸುತ್ತ ಇರುತ್ತಾರೆ.
ಗ್ಯಾಸ್ ನ್ನು ಉಳಿತಾಯ ಮಾಡಲು ನಿಯಮಿತವಾಗಿ ಬರ್ನರ್ ನ್ನು ಶುಚಿ ಮಾಡುತ್ತಲಿರಬೇಕು ಹಾಗೆಯೇ ಒಮ್ಮೆ ಪಾತ್ರೆಯು ಬಿಸಿಯಾದ ಬಳಿಕ ಗ್ಯಾಸ್ ಬೆಂಕಿ ಕಡಿಮೆ ಮಾಡಬೇಕು ಹಾಗೆಯೇ ಕೆಲವರು ತುಂಬಾ ಸಣ್ಣ ಪಾತ್ರೆಗಳನ್ನು ಗ್ಯಾಸ್ ನಲ್ಲಿ ಇಡುತ್ತಾರೆ ಇದರಿಂದ ಗ್ಯಾಸ್ ಹೊರಭಾಗಕ್ಕೆ ಬರುತ್ತದೆ ಗ್ಯಾಸ್ ನಲ್ಲಿ ಅಗಲವಾದ ಪಾತ್ರೆಗಳನ್ನು ಇಡಬೇಕು ಇದರಿಂದ ಗ್ಯಾಸ್ ಹೊರಗೆ ಬರುವುದು ತಪ್ಪುವುದು ಹಾಗೂ ಗ್ಯಾಸ್ ನ ಉಳಿತಾಯ ಕೂಡ ಆಗುತ್ತದೆ ನಾವು ಈ ಲೇಖನದ ಮೂಲಕ ಗ್ಯಾಸ್ ಉಳಿತಾಯ ಮಾಡುವ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.
ಎಲ್ಲರ ಮನೆಗೆಳ ಸಾಮಾನ್ಯ ಸಮಸ್ಯೆಯಲ್ಲಿ ಗ್ಯಾಸ್ ಬಹು ಬೇಗನೆ ಖಾಲಿಯಾಗುವ ಸಮಸ್ಯೆಯೂ ಒಂದು ಗ್ಯಾಸ್ ಉಳಿತಾಯ ಮಾಡಲು ಕಡಿಮೆ ಎತ್ತರದ ಹಾಗೂ ಅಗಲವಾದ ಪಾತ್ರೆಯನ್ನು ಬಳಸಬೇಕು ಹೀಗೆ ಮಾಡುವ ಮೂಲಕ ಗ್ಯಾಸ ಖರ್ಚು ಆಗುವುದಿಲ್ಲ ಕೊಪರ್ ಬಾಟಮ್ ಪಾತ್ರೆಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕು ಕಾರಣವೇನೆಂದರೆ ಈ ಥರ ಪಾತ್ರೆ ಒಮ್ಮೆ ಬಿಸಿಯಾದರೆ ಹಾಗೆ ಇರುತ್ತದೆ ಎಲ್ಲ ಕಡೆ ಸರಿಯಾಗಿ ಪಾತ್ರೆ ಬಿಸಿ ಆಗುತ್ತದೆ
ಇದರಿಂದ ಅಡುಗೆ ಬಹು ಬೇಗನೆ ಮುಗಿಯುತ್ತದೆ. ಎಲ್ಲರ ಮನೆಗಳಲ್ಲಿ ಗ್ಯಾಸ್ ಒಲೆಗಳಲ್ಲಿ ದೊಡ್ಡ ಒಲೆಗಳನ್ನು ಹೆಚ್ಚಾಗಿ ಬಳಸುತ್ತಾರೆ ಆದಷ್ಟು ಚಿಕ್ಕ ಒಲೆಗಳಲ್ಲಿ ಅಡುಗೆ ಮಾಡುವುದರಿಂದಶೇಕಡಾ ಹತ್ತು ಗ್ಯಾಸ್ ಉಳಿತಾಯ ಮಾಡಬಹುದು ತಡವಾದರೂ ಸಹ ಗ್ಯಾಸ್ ಕಡಿಮೆ ಖಾಲಿ ಆಗುತ್ತದೆ ಗ್ಯಾಸ್ ಒಲೆಗಳನ್ನು ಲೋ ಪ್ಲೇಮ್ ಅಲ್ಲಿ ಅಥವಾ ಮಿಡಿಯಂ ಪ್ಲೇಮ್ಅಲ್ಲಿ ಅಡುಗೆ ಮಾಡಬೇಕು ಹೈ ಪ್ಲೇಮ್ ಅಲ್ಲಿ ಇಟ್ಟು ಅಡುಗೆ ಮಾಡುವುದರಿಂದ ಗ್ಯಾಸ್ ತುಂಬಾ ವೆಸ್ಟ್ ಆಗುತ್ತದೆ .ಬರ್ನರ್ ಮತ್ತು ಪೈಪ್ ಮತ್ತು ರೆಗ್ಯೂಲೇಟರ್ ನಲ್ಲಿ ಗ್ಯಾಸ್ ಲೀಕ್ ಆಗುತ್ತಿದೆಯಾ ಎಂದು ನೋಡುತ್ತಿರಬೇಕು.
ಗ್ಯಾಸ್ ಬೆಂಕಿ ನೀಲಿ ಬಣ್ಣದಲ್ಲಿ ಬರುತ್ತದೆ ಕೆಲವೊಮ್ಮೆ ಕೇಸರಿ ಬಣ್ಣ ಬರುತ್ತಿರುತ್ತದೆ ಆಗ ಬರ್ನರ್ ಸರಿ ಇದೆಯಾ ಎಂದು ಚೆಕ್ ಮಾಡಿಕೊಳ್ಳಬೇಕು ಇಡ್ಲಿ ಕುಕ್ಕರ್ ನಲ್ಲಿ ಕೊನೆಗೆ ಉಳಿದ ನೀರು ತುಂಬಾ ಬಿಸಿಯಾಗಿ ಇರುತ್ತದೆ ಆ ನೀರಿನಿಂದ ಸಂಬಾರ ಅನ್ನು ಸರಳವಾಗಿ ಬಿಸಿ ಮಾಡಿಕೊಳ್ಳಬಹುದು ಕೆಲವೊಮ್ಮೆ ಫ್ರಿಜ್ ಅಲ್ಲಿ ಇಟ್ಟ ಪದಾರ್ಥಗಳನ್ನು ಡೈರೆಕ್ಟ್ ಆಗಿ ಬಿಸಿ ಮಾಡಬಾರದು ಸ್ವಲ್ಪ ರೂಂ ಉಷ್ಣಾಂಶ ಕ್ಕೆ ಬಂದ ನಂತರ ಬಿಸಿ ಮಾಡಬೇಕು ಸ್ಟೌ ಮೇಲೆ ಪಾತ್ರೆ ಇಡುವ ಮೊದಲು ಪಾತ್ರೆಯಲ್ಲಿ ನೀರು ಇದೆಯಾ ಎಂದು ಚೆಕ್ ಮಾಡಿ ಇಡಬೇಕು ನೀರು ಇದ್ದರೆ ಬಟ್ಟೆಯಿಂದ ಒರೆಸಿ ಇಡಬೇಕು.
ಹೀಗೆ ಸರಳ ಮಾರ್ಗಗಳ ಮೂಲಕ ಗ್ಯಾಸ್ ಅನ್ನು ಉಳಿತಾಯ ಮಾಡಬಹುದು ಅಡುಗೆ ಮಾಡಲು ಬೇಕಾಗಿರುವಂತಹ ಸಾಮಗ್ರಿಗಳನ್ನು ಮೊದಲೇ ತಯಾರು ಮಾಡಿಟ್ಟುಕೊಂಡು ಇದರ ಬಳಿಕ ಗ್ಯಾಸ್ ಉರಿಸಬೇಕು ಇಂದಿನ ದಿನದಲ್ಲಿ ಗ್ಯಾಸ್ ಬೆಲೆ ತುಂಬಾ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಮನೆಯಲ್ಲಿ ಸಹ ಉಳಿತಾಯ ಮಾಡುವುದು ಸರ್ವೇ ಸಾಮಾನ್ಯ ಹಾಗೆಯೇ ಅನಿವಾರ್ಯವೂ ಆಗಿದೆ ಹೀಗೆ ಈ ಮೇಲಿನ ಕ್ರಮಗಳನ್ನು ಅನುಸರಿಸುವ ಮೂಲಕ ತಿಂಗಳಲ್ಲಿ ಗ್ಯಾ ಸ ಉಳಿತಾಯದೊಂದಿಗೆ ಹಣವನ್ನು ಉಳಿತಾಯ ಮಾಡಬಹುದು.