ನೀವು ಉದ್ದವಾಗಿ ಬೆಳೆಯಬೇಕಾ ಹಾಗಿದ್ದರೆ ಈ ಟಿಪ್ಸ್ ಗಳನ್ನ ತಿಳಿಯಿರಿ

ಸಾಮಾನ್ಯವಾಗಿ 20 ವರ್ಷ ಮೇಲ್ಪಟ್ಟವರು ಎತ್ತರವಾಗಿ ಬೆಳೆಯುವುದು ತೀರಾ ಕಡಿಮೆ. ವಯಸ್ಸಾದಂತೆ ನಮ್ಮ ದೇಹದಲ್ಲಿನ ಹ್ಯುಮನ್ ಪವರ್ ಕಡಿಮೆಯಾಗುತ್ತಾ ಹೋಗುತ್ತದೆ. ಕಾಲವು ಬದಲಾದಂತೆ ನೈಸರ್ಗಿಕ ಪ್ರಕ್ರೀಯೆಯಲ್ಲಿ ಕೆಲವೊಂದು ಬದಲಾವಣೆಗಳಾಗತೊಡಗಿದವು. ಈ ಬದಲಾವಣೆಗಳು ಮನುಷ್ಯನ ದೈಹಿಕ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಾರಂಭಿಸಿತು. ಇದರಿಂದ ಶರೀರದ ಬೆಳೆವಣಿಗೆಯು ಕುಂಠಿತಗೊಳ್ಳುತ್ತಿದೆ. ಎತ್ತರವಾಗಿ ಬೆಳಬೇಕೆಂದು ಎಲ್ಲರೂ ಬಯಸುತ್ತಾರೆ ಅದರಂತೆಯೇ ಕೆಲವೊಂದು ಟಿಪ್ಸ್ ಫಾಲೋ ಮಾಡಿ ಎತ್ತರದ ದೇಹ ನಿಮ್ಮದಾಗಿಸಿಕೊಳ್ಳಿ.

ಯೋಗಾಸನ ಮಾಡಿ : ಯೋಗಾಸನ ಮಾಡುವುದರಿಂದ ದೇಹವು ಫೀಟ್ ಆಗಿ ಹಾಗೂ ಎತ್ತರವಾಗಿ ಬೆಳಯಲು ಸಹಾಯಕ. ಕೆಲವು ಆಸನಗಳು ಉದ್ದವಾಗಿ ಬೆಳೆಯಲು ಪೂರಕವಾಗಿದೆ. ಪ್ರಮುಖವಾಗಿ ತಾಡಾಸನ, ತ್ರಿಕೋನಾಸನ, ಭುಜಂಗಾಸನ, ಚಕ್ರಾಸನದ ಜೊತೆಗೆ ಸೂರ್ಯ ನಮಸ್ಕಾರದಂತಹ ಯೋಗಾಸನಗಳನ್ನು ಪ್ರತಿನಿತ್ಯ ಮಾಡುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಉದ್ದವಾಗಿ ಬೆಳೆಯಬಹುದು.

ಸ್ವೀಮಿಂಗ್ ಮಾಡುವುದು (ಈಜುವಿಕೆ) : ಈಜುವುದು ಒಂದು ಕಲೆ ಅದರಂತೆಯೇ ಇದರಿಂದ ಹಲವಾರು ಪ್ರಯೋಜನಗಳಿವೆ. ನಿಮ್ಮ ದೇಹದ ಸ್ನಾಯುಗಳು ಬಲಗೊಳ್ಳಲು ಈಜುವಿಕೆ ಉತ್ತಮ ಮಾರ್ಗ ವಾಗಿದ್ದು, ನೀವು ಸ್ವೀಮಿಂಗ್ ಮಾಡುವುದರಿಂದ ಅತೀ ವೇಗವಾಗಿ ನಿಮ್ಮ ಹೈಟ್ ಹೆಚ್ಚಿಸಿಕೊಳ್ಳಬಹುದು.

ಸ್ಕೀಪಿಂಗ್ ಮಾಡುವುದು: ಸ್ಕೀಪಿಂಗ್ ಒಂದು ಬಗೆಯ ಆಟ ಹಾಗೂ ವ್ಯಾಯಾಮವಾಗಿದ್ದು, ಪ್ರತಿದಿನ ನಿಯಮಿತವಾಗಿ ಸ್ಕೀಪಿಂಗ್ ಮಾಡುವುದರಿಂದ ನಿಮ್ಮ ಶರೀರವು ಎತ್ತರವಾಗಿ ಬೆಳೆಯಲು ಉಪಯುಕ್ತವಾಗಿದೆ.

ಅಶ್ವಗಂಧ ಪುಡಿ ಮಿಶ್ರಿತ ಹಾಲು ಕುಡಿಯಿರಿ : ಪೋಷಕಾಂಶಯುಕ್ತ ಅಶ್ವಗಂಧಯು ದೇಹಕ್ಕೆ ಆರೋಗ್ಯಕರವಾಗಿದ್ದು, ಇದರ ಪುಡಿಯು ಶರೀರಕ್ಕೆ ಹೊಸ ಚೈತನ್ಯವನ್ನ ನೀಡುತ್ತದೆ. ಅಶ್ವಗಂಧ ಪುಡಿಯು ಎಲ್ಲಾ ಆಯುರ್ವೇದಿಕ್ ಔಷಧಾಲಯಗಳಲ್ಲಿ ಸಿಗುತ್ತಿದ್ದು. ಒಂದು ಲೋಟ ಹಾಲಿನೊಂದಿಗೆ ಅಶ್ವಗಂಧ ಪುಡಿಯನ್ನು ಬೆರಸಿ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಕುಡಿದರೆ ಒಂದು ತಿಂಗಳೊಳಗೆ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ. ಈ ರೀತಿಯ ಹಲವಾರು ಆರೋಗ್ಯಕರ ಟಿಪ್ಸ್ ಗಳು ನಿಮ್ಮ ಶರೀರವನ್ನು ಎತ್ತರವಾಗಿಸಲು ತುಂಬಾ ಸಹಾಯಕವಾಗುತ್ತವೆ.

Leave a Comment