“““ವಾತಾವರಣ ಬದಲಾದಂತೆ ಮನುಷ್ಯರಲ್ಲಿ ಶೀತ ಕೆಮ್ಮು ನೆಗಡಿ ಜ್ವರ ಕಾಣಿಸಿ ಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ ಹಾಗೆಯೇ ಎಲ್ಲ ಸಮಯದಲ್ಲಿ ಸಹ ವೈದ್ಯರ ಬಳಿ ಹೋಗಲು ಆಗುವುದಿಲ್ಲ ಬದಲಾಗಿ ಮನೆಯಲ್ಲಿಯೆ ಮನೆಮದ್ದನ್ನು ಮಾಡಿಕೊಳ್ಳುವ ಮೂಲಕ ಶೀತ ಕೆಮ್ಮು ಜ್ವರದಿಂದ ನಿವಾರಣೆ ಹೊಂದಬಹುದು ಅವು ಯಾವವೂ ಎಂದರೆ ಶುಂಠಿ ಲವಂಗ ಕಾಳು ಮೆಣಸು ಹಾಗೂ ಜೇನುತುಪ್ಪ ಇವೆಲ್ಲ ಪದಾರ್ಥಗಳು ಹೆಚ್ಚು ಔಷಧೀಯ ಗುಣವನ್ನು ಹೊಂದಿದೆ ಅಷ್ಟೇ ಅಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ.
ನಮ್ಮ ಮನೆಯಲ್ಲಿ ಇರುವ ಪದಾರ್ಥ ಗಳಿಂದ ಶೀತ ಕೆಮ್ಮು ನೆಗಡಿಯಿಂದ ಗುಣಮುಖರಾಗಬಹುದು ಪ್ರಾಥಮಿಕ ಹಂತದಲ್ಲಿಯೇ ಮನೆ ಮದ್ದನ್ನು ಮಾಡಿ ಸೇವನೆ ಮಾಡುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಶೀತ ಕೆಮ್ಮು ಜ್ವರದಿಂದ ನಿವಾರಣೆ ಹೊಂದಬಹುದು ನಾವು ಈ ಲೇಖನದ ಮೂಲಕ ಜ್ವರ ಶೀತ ಕೆಮ್ಮು ನೆಗಡಿ ಶ್ವಾಸ ಸಂಭಂದಿಸಿದ ಖಾಯಿಲೆಯ ನಿವಾರಣೆಗೆ ಮನೆಮದ್ದು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.
ಕೆಲವರು ಶೀತ ಕೆಮ್ಮು ಜ್ವರ ಕಾಣಿಸಿಕೊಂಡಾಗ ಅತಂಕಪಟ್ಟುಕೊಳ್ಳುತ್ತಾರೆ ಆರಂಭಿಕ ಹಂತದಲ್ಲಿಯೇ
ನೆಗಡಿ ಕೆಮ್ಮು ಜ್ವರ ಬಂದಾಗ ಮನೆಯಲ್ಲಿಯೆ ಮನೆ ಮದ್ದನ್ನು ಮಾಡಿಕೊಳ್ಳಬಹುದು ಮೊದಲು ಶುಂಠಿ ತೆಗೆದುಕೊಳ್ಳಬೇಕು ಶುಂಠಿಯಲ್ಲಿ ಹಲವಾರು ಔಷಧೀಯ ಗುಣವನ್ನು ಹೊಂದಿದೆ ಹಾಗೆಯೇ ಲವಂಗ ಹಾಗೂ ಕಾಳು ಮೆಣಸನ್ನು ತೆಗೆದುಕೊಳ್ಳಬೇಕು ಹಾಗೆಯೇ ಜೇನು ತುಪ್ಪವನ್ನು ತೆಗೆದುಕೊಳ್ಳಬೇಕು ಮನೆಯಲ್ಲಿಯೆ ಇರುವ ಪದಾರ್ಥ ಗಳಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ಶುಂಠಿಯಲ್ಲಿ ನೆಗಡಿ ಜ್ವರವನ್ನು ನಿವಾರಣೆ ಮಾಡುವ ಗುಣ ಇರುತ್ತದೆ ಶುಂಠಿಯಲ್ಲಿ ಹೇರಳವಾದ ಆಂಟಿ ಆಕ್ಸಿಡೆಂಟ್ ಗಳು ಇರುತ್ತದೆ ಹಾಗೆಯೇ ಶ್ವಾಸ ಸಂಬಂಧಿ ಖಾಯಿಲೆಗೆ ತುಂಬಾ ಒಳ್ಳೆಯದು ಹಾಗೆಯೇ ಕ್ಯಾನ್ಸರ್ ಕಾರಕ ಜೀವಕೋಶಗಳ ವಿರುದ್ದ ಹೊರಡುತ್ತದೆ ಕಾಳುಮೆಣಸನ್ನು ಸಂಬಾರುಗಳ ರಾಜ ಎಂದು ಕರೆಯುತ್ತಾರೆ. ಕಾಳು ಮೆಣಸಿನಕಾಯಿ ಕಫ ಕರಗಿಸುವ ಗುಣ ಇರುತ್ತದೆ ಹಾಗೆಯೇ ಲವಂಗದಲ್ಲಿ ಹೇರಳವಾಗಿ ಪೈಬರ್ ವಿಟಮಿನ್ಸ್ ಮಿನರಲ್ಸ್ ಗಳು ಇರುತ್ತದೆ ಹಾಗಾಗಿ ಮೂಳೆಗಳಿಗೆ ತುಂಬಾ ಸಹಾಯವನ್ನು ಮಾಡುತ್ತದೆ ಉಸಿರಾಟದಲ್ಲಿ ತೊಂದರೆ ಕಂಡು ಬಂದರೆ ಲವಂಗವನ್ನು ಸೇವಿಸುವ ಮೂಲಕ ಸಮಸ್ಯೆ ಪರಿಹಾರ ಆಗುತ್ತದೆ.
ಮೊದಲು ಒಂದು ತವಾದಲ್ಲಿ ಲವಂಗ ಹಾಗೂ ಕಾಳು ಮೆಣಸನ್ನು ಫ್ರೈ ಮಾಡಿಕೊಳ್ಳಬೇಕು ನಂತರ ಶುಂಠಿಯನ್ನು ಫ್ರೈ ಮಾಡಿಕೊಳ್ಳಬೇಕು ಹಸಿ ವಾಸನೆ ಹೋಗುವ ವರೆಗೆ ಫ್ರೈ ಮಾಡಿಕೊಳ್ಳಬೇಕು ಫ್ರೈ ಆದ ನಂತರ ಮಿಕ್ಸರ್ ಜಾರ್ ಹಾಕಿ ಪುಡಿ ಮಾಡಿಕೊಳ್ಳಬೇಕು ಪುಡಿಯಾದ ಮಿಶ್ರಣವನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಸೇರಿಸಬೇಕು ಈ ಔಷಧವನ್ನು ಬೆಳಗ್ಗಿನ ಸಮಯದಲ್ಲಿ ಮತ್ತು ರಾತ್ರಿಯ ಸಮಯದಲ್ಲಿ ಸೇವಿಸಬೇಕು ಶೀತ ನೆಗಡಿ ಜ್ವರ ಕಂಡುಬಂದಾಗ ದಿನಕ್ಕೆ ಎರಡು ಬಾರಿ ಸೇವಿಸಬೇಕು
ಮಕ್ಕಳಿಗೆ ಕಡಿಮೆ ಪ್ರಮಾಣದಲ್ಲಿ ಜೇನುತುಪ್ಪವನ್ನು ಸೇರಿಸಬೇಕು .ಪ್ರಾಥಮಿಕ ಹಂತದಲ್ಲಿಯೇ ಶೀತ ಜ್ವರ ಕೆಮ್ಮು ನೆಗಡಿಯಿಂದ ಮುಕ್ತಿಯನ್ನು ಹೊಂದಬಹುದು ಶೀತ ಕೆಮ್ಮು ಜ್ವರ ಪ್ರಾಥಮಿಕ ಹಂತದಲ್ಲಿ ಇದ್ದಾಗಲೇ ಮನೆಯಲ್ಲಿ ಇರುವ ಪದಾರ್ಥಗಳನ್ನು ಬಳಸಿ ಜ್ವರ ಶೀತ ಕೆಮ್ಮು ನಿಂದ ನಿವಾರಣೆ ಮಾಡಿಕೊಳ್ಳುವ ಮೂಲಕ ವೈದ್ಯರ ಬಳಿ ಹೋಗುವುದನ್ನು ತಪ್ಪಿಸಬಹುದು ಹಾಗೆಯೇ ಮನೆಯಲ್ಲಿಯೆ ಆರೋಗ್ಯ ಸುಧಾರಣೆ ಮಾಡಿಕೊಳ್ಳಬಹುದು.