ಇದೀಗ ಮಾವಿನ ಹಣ್ಣಿನ ದರ್ಬಾರ್ ಶುರುವಾಗಿದೆ. ಹಣ್ಣುಗಳ ರಾಜ ಎಂದೇ ಕರೆಯುವ ಮಾವಿನ ಹಣ್ಣು ತನ್ನ ಸಿಹಿಯನ್ನು ಈ ವರ್ಷ ಹೆಚ್ಚಿಸಿಕೊಂಡಿದೆ. ಯಾಕಂದ್ರೆ ಈ ಸಲ ಮಾವಿನ ಬೆಳೆ ಕಳೆದ ವರ್ಷಕ್ಕಿಂತ ದುಪ್ಪಟ್ಟು ಹೆಚ್ಚಾಗಿದೆ. ಮಾವಿನ ಹಣ್ಣು ತಿನ್ನುವುದಕ್ಕೆ ಎಷ್ಟು ಸಿಹಿ ಅಂತ ಎಲ್ಲರಿಗೂ ಗೊತ್ತು. ಸಾಕಷ್ಟು ವೆರೈಟಿ ಇರುವ ಮಾವಿನ ಹಣ್ಣು ಬಾಯಿ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಕೂಡ ಅಷ್ಟೇ ಮುಖ್ಯ.
ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಮಾವಿನಹಣ್ಣನ್ನು ತಿಂದು ವಾಟೆಯನ್ನು ಬಿಸಾಡುತ್ತಾರೆ. ಆದರೆ ಮಾವಿನಹಣ್ಣಿನ ಗೊರಟೆಯಲ್ಲಿಯೂ ಅದೆಷ್ಟು ಆರೋಗ್ಯಕರ ಪ್ರಯೋಜನಗಳು ಇವೆ ಅಂತ ಹಲವರಿಗೆ ಗೊತ್ತಿಲ್ಲ. ನಾವು ಹೇಳುವ ಈ ವಿಷಯವನ್ನು ನೀವು ತಿಳಿದರೆ ಇನ್ನು ಮುಂದೆ ಮಾವಿನ ಗೊರತೆ ವನ್ನು ಖಂಡಿತವಾಗಿಯೂ ಬಿಸಾಡುವುದಿಲ್ಲ. ಬನ್ನಿ ಈ ಬಗ್ಗೆ ನಾವು ಇನ್ನಷ್ಟು ಸಲಹೆಗಳನ್ನು ಕೊಡುತ್ತೇವೆ.
ಹೊಟ್ಟೆಯ ಬೇನೆ; ಬೇಸಿಗೆಯಲ್ಲಿ ಸಾಮಾನ್ಯವಾಗಿ ನೀರು ದೇಹಕ್ಕೆ ಹೆಚ್ಚಾಗಿ ಬೇಕು ಆದರೂ ಕೆಲವೊಮ್ಮೆ ನೀರನ್ನ ಕುಡಿಯದೆ ಹೊಟ್ಟೆಯಲ್ಲಿ ನೋವು ಅಥವಾ ಉರಿ ಮೊದಲಾದ ಸಮಸ್ಯೆಗಳು ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ನೀವು ಔಷಧೀಯ ಮೊರೆ ಹೋಗುವ ಬದಲು, ಮನೆಯಲ್ಲಿಯೇ ಮಾವಿನ ಹೋರಾಟಗಳನ್ನ ಒಣಗಿಸಿ ಪುಡಿಮಾಡಿಟ್ಟುಕೊಂಡು ಅದನ್ನು ನೀರಿಗೆ ಬೆರೆಸಿ ಕುಡಿಯಬಹುದು. ಹೀಗೆ ಮಾವಿನ ಗೊರಟೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ ಸಾಕಷ್ಟು ಸಮಯ ನೀವು ಬಳಸಬಹುದು. ಇದು ಹೊಟ್ಟೆ ನೋವು ಮಾತ್ರವಲ್ಲದೆ ಅತಿಸಾರವನ್ನು ಕೂಡ ತಡೆಯುತ್ತದೆ.
ಹಲ್ಲು ನೋವು; ಹಲ್ಲು ನೋವು ಯಾವಾಗ ಎಷ್ಟೊತ್ತಿಗೆ ನಮ್ಮನ್ನು ಕಾಡುತ್ತೆ ಅಂತ ಹೇಳೋಕೆ ಆಗಲ್ಲ. ಇನ್ನು ಹಲ್ಲಿನಲ್ಲಿ ರಕ್ತಸ್ರಾವದ ಸಮಸ್ಯೆಯು ಇರುತ್ತೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಮಾವಿನ ವಾಟೆಯಲ್ಲಿರುವ ಒಳಗಿನ ತಿರುಳಿನಿಂದ ತಯಾರಿಸಿಕೊಂಡ ಪುಡಿಯನ್ನು ಟೂತ್ ಪೇಸ್ಟ್ ನಂತೆ ಬಳಸಿ ಹಲ್ಲು ಉಜ್ಜಿದರೆ ಹಲ್ಲು ನೋವು ಹಾಗೂ ಹಲ್ಲಿನಲ್ಲಿ ಕಾಣುವ ರಕ್ತಸ್ರಾವದ ಸಮಸ್ಯೆಯಿಂದ ದೂರ ಉಳಿಯಬಹುದು.
ಋತು ಚಕ್ರದ ಸಮಯದಲ್ಲಿನ ನೋವು; ಸಾಕಷ್ಟು ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಎರಡರಿಂದ ಮೂರು ದಿವಸ ಏನು ತಪ್ಪಿದ್ದಲ್ಲ. ಆದರೆ ನೀವು ಮಾವಿನ ಹಣ್ಣಿನ ತಿರುಳಿನಿಂದ ತಯಾರಿಸಿದ ಪುಡಿಯನ್ನು ಮನೆಯಲ್ಲಿಟ್ಟುಕೊಂಡರೆ ಋತುಚಕ್ರದ ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಹೌದು ಮಾವಿನ ಗೊರಟೆಯಿಂದ ತಯಾರಿಸಿದ ಒಂದು ಚಮಚ ಪುಡಿಯನ್ನು ಮೊಸರು ಹಾಗೂ ಉಪ್ಪಿನೊಂದಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನ ಋತುಚಕ್ರದ ಸಮಯದಲ್ಲಿ ಸೇವಿಸಿದರೆ ಋತುಚಕ್ರದ ಸಮಯದ ಹೊಟ್ಟೆ ನೋವು ಕಡಿಮೆಯಾಗುವುದು ಮಾತ್ರವಲ್ಲದೆ ಅತಿಯಾದ ರಕ್ತಸ್ರಾವವು ನಿಯಂತ್ರಣಕ್ಕೆ ಬರುತ್ತದೆ.
ಕೂದಲು ಉದುರುವಿಕೆ ತಡೆಗಟ್ಟುವುದು; ಇತ್ತೀಚಿಗೆ ಜನರನ್ನು ಹೆಚ್ಚು ಕಾಡುತ್ತಿರುವ ಸಮಸ್ಯೆಗಳಲ್ಲಿ ಕೂದಲು ದೊರುವಿಕೆ ಕೂಡ ಒಂದು. ನಮ್ಮ ಜೀವನಶೈಲಿಗೆ ತಕ್ಕ ಹಾಗೆ ಹಾಗೂ ನಮ್ಮ ಮಾನಸಿಕ ಒತ್ತಡಗಳಿಂದ ಕೂದಲು ದುರುವಿಕೆ ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕಾಗಿ ಜನರು ರಾಸಾಯನಿಕ ಉತ್ಪನ್ನಗಳ ಮೊರೆ ಹೋಗುವುದು ಸಹಜ. ಅದಕ್ಕಿಂತ ಮಾವಿನ ಗೊರಟೆಯ ತಿರುಳಿನಿಂದ ತಯಾರಿಸಿದ ಪುಡಿಯನ್ನು ಒಮ್ಮೆ ಸೇವಿಸಿ ನೋಡಿ. ಈ ಪುಡಿಯನ್ನು ನೀರಿಗೆ ಸೇರಿಸಿಕೊಂಡು ಕುಡಿಯುತ್ತಾ ಬಂದರೆ ನಿಮ್ಮ ಕೂದಲುದುರುವಿಕೆಯ ಸಮಸ್ಯೆ ಕಡಿಮೆಯಾಗುತ್ತಾ ಬರುತ್ತದೆ.
ಮಾವಿನ ಗೊರಟೆಪುಡಿ ಸೇವಿಸಿ ತೂಕ ಇಳಿಸಿಕೊಳ್ಳಿ; ಅತಿಯಾದ ತೂಕ ಇದ್ದರೆ ಅದು ಖಂಡಿತವಾಗಿಯೂ ಆರೋಗ್ಯಕರ ಲಕ್ಷಣವಲ್ಲ. ದೇಹದಲ್ಲಿ ಬೊಜ್ಜು ಹೆಚ್ಚಾಗುತ್ತಾ ಹೋದಂತೆ ಇತರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇದಕ್ಕಾಗಿ ನೀವು ಮಾವಿನ ತಿರುಳಿನ ಪುಡಿಯನ್ನು ಬಳಸಿದರೆ ತೂಕ ಇಳಿಸಿಕೊಳ್ಳಲು ಸಾಧ್ಯ. ಹೌದು ಮಾವಿನ ತಿರುಳಿನ ಪುಡಿಯಲ್ಲಿ ಪ್ರೋಟೀನ್ ಉತ್ಕರ್ಷಣ ನಿರೋಧಕಗಳು ಫೈಬರ್ ಮೊದಲಾದ ಪೋಷಕಾಂಶಗಳು ಹೇರಳವಾಗಿರುತ್ತದೆ. ಹಾಗಾಗಿ ಈ ಪುಡಿಯನ್ನು ನೀವು ಸೇವಿಸುತ್ತಾ ಬಂದರೆ ನಿಮಗೆ ದೀರ್ಘಕಾಲ ಹಸಿವು ಆಗುವುದಿಲ್ಲ. ಇದರಿಂದ ಆಹಾರ ಸೇವನೆಯ ಪ್ರಮಾಣವು ಕಡಿಮೆಯಾಗಿ ತೂಕ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ.
ಸ್ನೇಹಿತರೆ ನೀವು ಉಪಯೋಗಕ್ಕೆ ಬರುವುದಿಲ್ಲ ಎಂದು ತಿಂದು ಬಿಸಾಡಿದ ಮಾವಿನಹಣ್ಣಿನ ಗೊರಟೆ ಅಥವಾ ಬೀಜದಿಂದ ಎಷ್ಟೆಲ್ಲಾ ಪ್ರಯೋಜನವಿದೆ ತಿಳಿದುಕೊಂಡ್ರಲ್ಲ. ಹಾಗಾದರೆ ಇನ್ನು ಮುಂದೆ ಮಾವಿನ ಗೊರಟೆಯನ್ನು ಬಿಸಾಡುವುದಕ್ಕೂ ಮೊದಲು ಒಮ್ಮೆ ಯೋಚಿಸಿ.