ಸಂತೋಷದ ಜೀವನಕ್ಕಾಗಿ 4 ಸರಳ ಅಭ್ಯಾಸಗಳು ಅಳವಡಿಸಿಕೊಳ್ಳಿ

ಜೀವನದಲ್ಲಿ ಖುಷಿಯಾಗಿರಬೇಕಾದರೆ ಪಾಲಿಸುವ ಕೆಲವು ಸೂತ್ರಗಳ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಬ್ರಹ್ಮಕುಮಾರಿ ಅವರು ಜೀವನದಲ್ಲಿ ಪಾಲಿಸಬೇಕಾದ ಸೂತ್ರಗಳನ್ನು ಹೇಳಿದ್ದಾರೆ. ಬೇಗ ಎದ್ದೇಳಿ ಬೇಗ ಮಲಗಬೇಕು ಬೆಳಗಿನ ಸಮಯ ವೈಬ್ರೇಷನ್ ಹೈಯೆಸ್ಟ್ ಇರುತ್ತದೆ. ಧ್ಯಾನ ಮಾಡಲು ಬೆಳಗ್ಗೆ 4 ಗಂಟೆಗೆ ಎದ್ದರೆ ನಮಗೆ ನಾವು ಶುಭಾಶಯ ಹೇಳಿಕೊಳ್ಳಬೇಕು ಇದು ನಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ರಾತ್ರಿ ಬೇಗ ಮಲಗುವುದರಿಂದ ಬೆಳಗ್ಗೆ ಬೇಗ ಏಳಲು ಸಾಧ್ಯ ಮಲಗುವ ಸಮಯ ಮತ್ತು ಏಳುವ ಸಮಯ ಸಾತ್ವಿಕವಾಗಿರಬೇಕು. ಬೆಳಗ್ಗೆ ಬೇಗ ಎದ್ದಾಗ ಮನಸ್ಸು ಶಾಂತವಾಗಿರುತ್ತದೆ. ನಂತರ ಬೇಗ ಏಳುವುದು ಅಭ್ಯಾಸವಾಗುತ್ತದೆ. ಬಾಬಾನಿಗೆ ಹೇಳಬೇಕು ಬೆಳಗ್ಗೆ 4 ಗಂಟೆಗೆ ಎಬ್ಬಿಸಲು ಆಗ 4 ಗಂಟೆ ನಂತರ ನಮಗೆ ನಿದ್ರೆಯೇ ಬರುವುದಿಲ್ಲ. ಬೆಳಗ್ಗೆ ಪ್ರತಿ 1 ಗಂಟೆಯ ನಂತರ ರಾತ್ರಿ ಮಲಗುವ ಮೊದಲು ಹಾಗೂ ಊಟಕ್ಕಿಂತ ಮೊದಲು ನೀರು ಕುಡಿಯುವ ಮೊದಲು ಆ ಆಹಾರದಲ್ಲಿ, ನೀರಿನಲ್ಲಿ ಸಂಕಲ್ಪ ಹಾಕಿದರೆ ಅದು ಮನಸಿನೊಂದಿಗೆ ಸೇರಿ ಮುಂದಿನ 2 ಗಂಟೆಗಳ ಕಾಲ ಸೇವೆ ಮಾಡುತ್ತದೆ. ನೀರು ಕುಡಿಯುವ ಮೊದಲು 30 ಸೆಕೆಂಡ್ಸ್ ಒಳ್ಳೆ ರೀತಿಯ ಸಂಕಲ್ಪ ಮಾಡಿ ನಂತರ ನೀರನ್ನು ಕುಡಿಯಬೇಕು. ಎಂತಹ ನೀರು ಅಂತಹ ನುಡಿ.

ಬೆಳಗ್ಗೆಯನ್ನು ಜ್ಞಾನದಿಂದ ಆರಂಭಿಸೋಣ ಅಲ್ಲಿರುವವರ ವೈಬ್ರೇಷನ್ ಹೈ ಇರುತ್ತದೆ. ತಪ್ಪು ಕೆಲಸ ಮಾಡಿದವರ ಸಂಘದಲ್ಲಿ ಇದ್ದರೆ ಅದರ ಬಣ್ಣ ಹತ್ತಿಕೊಂಡುಬಿಡುತ್ತದೆ. ನಾವು ಸತ್ಯುಗಿ ಆತ್ಮ ಆಗಿದ್ದೇನೆ ಯಾವುದೇ ಕಾರ್ಯ ಬಿಸಿನೆಸ್ ಸಹ ಸತ್ಯುಗಿ ವಿಧಾನದಲ್ಲಿ ನಡೆಯಬೇಕು ಬಿಸಿನೆಸ್ ಕೂಡ ಸೇವೆಯೇ ಆಗಿದೆ. ಜಗತ್ತಿನಲ್ಲಿ ಈಗ ಧರ್ಮ ಬೇರೆ ಕರ್ಮ ಬೇರೆ ಆಗಿದೆ. ಪ್ರತಿಯೊಂದು ಕರ್ಮ ಧರ್ಮದ ಆಧಾರ ಇಟ್ಟುಕೊಂಡು ನಡೆಯುತ್ತಿರಬೇಕು. ಪವಿತ್ರತೆ, ಜ್ಞಾನ, ಶಾಂತಿ, ಪ್ರೇಮ, ಶಕ್ತಿ ಈ ಗುಣಗಳನ್ನು ಧರ್ಮ ಒಳಗೊಂಡಿದೆ. ಅವು ನಾವು ಮಾಡುವ ಕರ್ಮದಲ್ಲಿ ಬಂದಾಗ ಆ ಕರ್ಮ ಯೋಗ್ಯವೆನಿಸುತ್ತದೆ. ಸತ್ಯುಗಿ ಆತ್ಮವಾದಾಗ 24 ಗಂಟೆ ಸೇವೆ ನಡೆಯುತ್ತಿರುತ್ತದೆ ಇದರಿಂದ ನಾವು ಮಲಗಿದಾಗಲೂ ಶಕ್ತಿ ಹೊರಹೋಗುತ್ತದೆ. ಯಾರು ಸೇವೆ ಮಾಡುತ್ತಾರೋ ಅವರು ಪುಣ್ಯ ಸಂಪಾದಿಸುತ್ತಾರೆ ಇದರಿಂದ ಅವರು ಖುಷಿಯಾಗಿರುತ್ತಾರೆ. ಅಲ್ಲದೇ ಅವರ ಕುಟುಂಬದವರು ಮತ್ತು ಸಹಚರರು ಖುಷಿಯಾಗಿರುತ್ತಾರೆ.

Leave a Comment