ಕೂದಲು ಉದುರುವಿಕೆಗೆ ಮನೆಯಲ್ಲೇ ತಯಾರಿಸಿ ಸುಲಭ ಮನೆಮದ್ದು

ಸಾಮಾನ್ಯವಾಗಿ ಮಹಿಳೆಯರಲ್ಲಿ ಹೆಚ್ಚಾಗಿ ಕೂದಲು ಉದುರುವಿಕೆಯನ್ನು ನಾವು ಕಾಣಬಹುದು ಅಲ್ಲದೇ ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿಯೂ ಕೂಡ ಕೂದಲು ಉದುರುವುದು ತಲೆ ಹೊಟ್ಟಿನ ಸಮಸ್ಯೆಯಂತೂ ಸರ್ವೇ ಸಾಮಾನ್ಯವಾಗಿದೆ, ಮನುಷ್ಯನ ದೇಹದಲ್ಲಿ ಕೂದಲುಗಳು ಅವಿಭಾಜ್ಯ ಅಂಗ ಯಾಕಂದ್ರೆ ಕೂದಲುಗಳು ಮನುಷ್ಯನ ಅಂದವನ್ನು ಹೆಚ್ಚಿಸುತ್ತವೆ ಅಷ್ಟೇ ಅಲ್ಲದೇ ಮಹಿಳೆಯರಿಗಂತೂ ಕೂದಲೇ ಅಲಂಕಾರ ಯಾಕಂದ್ರೆ ಕೂದಲೇ ಇಲ್ಲದ ಹೆಣ್ಣಿನ ಶೃಂಗಾರ ಯಾರಿಗೂ ಇಷ್ಟವಾಗುವುದಿಲ್ಲ ಆದ್ದರಿಂದ ತಮ್ಮ ಕೂದಲಿನ ಸರಿಯಾದ ಆರೈಕೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ.

ಯಾವುದೇ ಕಾರಣಕ್ಕೂ ನಾವು ಕೂದಲನ್ನು ಹಾಳಾಗಲು ಬಿಡಬಾರದು ತಲೆಹೊಟ್ಟು ಬಾರದಂತೆ ನೋಡಿಕೊಳ್ಳಬೇಕು ಕೂದಲು ಉದುರದಂತೆ ನೋಡಿಕೊಳ್ಳಬೇಕು, ನಾವು ನಮ್ಮ ದೇಹದಲ್ಲಿನ ವಿವಿಧ ಅಂಗಗಳಿಗೆ ಎಷ್ಟು ಮಹತ್ವವನ್ನು ನೀಡುತ್ತೇವೆಯೋ ಅಷ್ಟೇ ಮಹತ್ವವನ್ನು ಕೂದಲುಗಳಿಗೂ ಸಹ ನೀಡಬೇಕು.

ಜನರನ್ನು ಬಾದಿಸುವಂತಹ ಕೂದಲು ಉದುರುವಿಕೆಯ ಸಮಸ್ಯೆ ಮತ್ತು ತಲೆ ಹೊಟ್ಟಿನ ಸಮಸ್ಯೆಗಳಿಗೆ ನಾವು ಎದೆಗುಂದದೆ ಮನೆಯಲ್ಲಿಯೇ ಇರುವ ಪದಾರ್ಥಗಳಿಂದ ಮನೆ ಮದ್ಧನ್ನು ಮಾಡಿ ಪರಿಹಾರ ಕಂಡುಕೊಳ್ಳಬಹುದು ಮತ್ತು ಅತಿ ಸುಲಭವಾದ ಕ್ರಮದಿಂದ ನಿಮ್ಮ ಈ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು, ಹಾಗಾದ್ರೆ ಬನ್ನಿ ನಿಮ್ಮ ಇಂತಹ ಸಮಸ್ಯೆಗಳಿಗೆ ಮನೆ ಮದ್ಧನ್ನು ತಯಾರಿಸುವ ವಿಧಾನಗಳ ಬೆಗ್ಗೆ ಮತ್ತು ಆ ಮನೆ ಮದ್ಧನ್ನು ಉಪಯೋಗಿಸುವ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ.

ಮೊದಲಿಗೆ ಒಂದು ಬಾಣಲೆಯಲ್ಲಿ 250 ಎಮ್ ಎಲ್ ನಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಂಡು ಸ್ವಲ್ಪವೇ ಉರಿಯಲ್ಲಿ ಚೆನ್ನಾಗಿ ಕಾಯಿಸಿಕೊಳ್ಳಬೇಕು ನಂತರ ಕಾದಿರುವ ಆ ಎಣ್ಣೆಗೆ ಅರ್ಧ ಹೋಳು ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಅವುಗಳನ್ನು ಹಾಕಿಕೊಂಡು ಕಡಿಮೆ ಉರಿಯಲ್ಲಿ ಈರುಳ್ಳಿಯ ತುಂಡುಗಳು ಚೆನ್ನಾಗಿ ಬೇಯುವ ತನಕ ಅಂದರೆ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು, ಹೀಗೆ ಬೇಯಿಸಿಕೊಂಡದ್ದಕ್ಕೆ ಐದಾರು ನೆಲ್ಲಿ ಕಾಯಿಗಳನ್ನು ಹಾಕಿ ಹತ್ತು ನಿಮಿಷಗಳ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಬೇಕು ಹೀಗೆ ಬೇಯಿಸಿಕೊಂಡ ನಂತರ ಸ್ವಲ್ಪ ಮೆಂತ್ಯ ವನ್ನು ಅದಕ್ಕೆ ಹಾಕಿ ಅದೇ ರೀತಿ ಹದಿನೈದು ನಿಮಿಷಗಳ ಕಾಲ ಎಣ್ಣೆಯೊಂದಿಗೆ ಚೆನ್ನಾಗಿ ಕಾಯಿಸಿಕೊಳ್ಳಬೇಕು.

ಒಳ್ಳೆಯ ಹದವಾಗಿ ಕಾಯಿಸಿದ ಎಣ್ಣೆಯನ್ನು ಒಂದು ತೆಳುವಾದ ಬಟ್ಟೆಯ ಸಹಾಯದಿಂದ ಸೋರಿಸಿ ಅದನ್ನು ಶೇಖರಿಸಿಕೊಳ್ಳಬೇಕು ಹೀಗೆ ತಯಾರಿಸಿಕೊಂಡ ಆರೋಗ್ಯಕಾರಿ ಎಣ್ಣೆಯನ್ನು ವಾರದಲ್ಲಿ ಎರಡು ಬಾರಿ ರಾತ್ರಿ ಸಮಯದಲ್ಲಿ ತಲೆಗೆ ಹಚ್ಚಿಕೊಂಡು ಬೆಳಿಗ್ಗೆ ಸ್ನಾನ ಮಾಡಬೇಕು, ಹೀಗೆ ಮಾಡುವುದರಿಂದ ನಿಮ್ಮ ತಲೆ ಹೊಟ್ಟು ಮತ್ತು ಕೂದಲು ಉದುರುವಿಕೆಯ ಸಮಸ್ಯೆ ತಕ್ಷಣವೇ ನಿಯಂತ್ರಣಕ್ಕೆ ಬರುವುದಲ್ಲದೆ ಕ್ರಮೇಣ ಸಂಪೂರ್ಣವಾಗಿ ನಿಂತುಹೋಗುತ್ತದೆ.

Leave a Comment