ಕೋವಿಡ್-19 ಸಾಂಕ್ರಾಮಿಕ ನಡುವೆ ಅದಾನಿ ಗ್ರೂಪ್ ಅಧ್ಯಕ್ಷ ಉದ್ಯಮಿ ಗೌತಮ್ ಅದಾನಿ ಮೈಲಿಗಲ್ಲು ಸಾಧಿಸಿದ್ದು, ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದಲ್ಲಿ ವಿಶ್ವದಲ್ಲಿ ಅತ್ಯಧಿಕ ಸಂಪತ್ತಿನ ವ್ಯಕ್ತಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. 2021ರ ಇಲ್ಲಿಯವರೆಗೆ ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದಲ್ಲಿ ಅದಾನಿಯವರು 16.2 ಬಿಲಿಯನ್ ಡಾಲರ್ ಗಳಿಸುವ ಮೂಲಕ ಅವರ ಒಟ್ಟು ಆಸ್ತಿಮೌಲ್ಯ 50 ಬಿಲಿಯನ್ ಡಾಲರ್ ಆಗಿದೆ. ಈ ಮೂಲಕ ಅದಾನಿಯವರು ಇದೀಗ ವಿಶ್ವದ 26ನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಗೌತಮ್ ಅದಾನಿ ಶ್ರೀಮಂತ ಪಟ್ಟಕ್ಕೇರಿದ ಅಂದಕೂಡಲೆ ಎಲ್ಲರೂ ಬೆರಳು ಮಾಡುವುದು ನರೇಂದ್ರ ಮೋದಿ ಕಡೆಗೆ. ಅಂಬಾನಿಯಾಗಲಿ ಅದಾನಿಯಾಗಲಿ ಟಾಟಾ ಆಗಲಿ ಯಾರೇ ಉದ್ಯಮಿ ಆಗಲಿ ಆಯಾ ಕಾಲಕ್ಕೆ ಯಾವ ಸರ್ಕಾರವಿರುತ್ತೊ ಅದರ ದೋಸ್ತಿ ಮಾಡುವುದು ಸಾಮಾನ್ಯ. ಹಿಂದೆ ದೀರೂಭಾಯಿ ಅಂಬಾನಿ ಕೂಡ ಆಗಿನ ಪ್ರದಾನಮಂತ್ರಿ ಇಂದಿರಾ ಗಾಂಧಿಯವರ ಜೊತೆ ಚೆನ್ನಾಗಿದ್ದಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಅಂಬಾನಿ – ಅದಾನಿ – ಮೋದಿ ದೋಸ್ತಿ ಮಾತ್ರ ತುಂಬಾ ಜನರಿಗೆ ಕಣ್ಣು ಕುಕ್ಕುತ್ತಿದೆ. ಅದೇನೇ ಇರಲಿ ಅದಾನಿ ನಂಬರ್ ಒನ್ ಶ್ರೀಮಂತ ಆಗಲು ಕಾರಣ ಯಾವುದೋ ಸರಕಾರವಲ್ಲ ಅವರ ಯಶಸ್ಸಿನ ಹಿಂದೆ ದಶಕಗಟ್ಟಲೆ ಪಟ್ಟ ಶ್ರಮ ಇದೆ. ಅವರು ವಿಶ್ವದ ಮತ್ತಿಬ್ಬರು ಆಗರ್ಭ ಶ್ರೀಮಂತರಾದ ಜೆಫ್ ಬೆಝೊಸ್ ಮತ್ತು ಎಲೊನ್ ಮಸ್ಕ್ ಅವರನ್ನು ಈ ವರ್ಷ ಹಿಂದಿಕ್ಕಿದ್ದಾರೆ. ಮಸ್ಕ್ ಅವರ ಒಟ್ಟು ಆಸ್ತಿಮೌಲ್ಯ 10.3 ಬಿಲಿಯನ್ ಡಾಲರ್ ಆಗಿದ್ದರೆ, ಬೆಝೊಸ್ ಅವರ ಆಸ್ತಿ ಮೌಲ್ಯ 7.59 ಬಿಲಿಯನ್ ಕುಸಿದಿದೆ.
ಗೌತಮ್ ಅದಾನಿ ಕೈ ಹಾಕದ ಉದ್ಯಮವೇ ಇಲ್ಲ. ಕಲ್ಲಿದ್ದಲು, ಡೆಟಾ ಸೆಂಟರ್, ವಿದ್ಯುತ್, ವಿಮಾನ ನಿಲ್ದಾಣ, ಬಂದರು ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ಅದಾನಿ ಪ್ರಾಬಲ್ಯವಿದೆ. ಕೈ ಹಾಕಿದ ಕೆಲಸದಲ್ಲಿ ಯಶಸ್ಸು ಸಾಧಿಸುವುದು ಅವರಿಗೆ ಚಟವಾಗಿಬಿಟ್ಟಿದೆ. ಈ ಎಲ್ಲದರ ಫಲವಾಗಿ ಇವತ್ತು ವಿಶ್ವದ ನಂಬರ್ ಒನ್ ಶ್ರೀಮಂತರಾಗಿದ್ದಾರೆ. ಇತ್ತೀಚೆಗೆ ಅದಾನಿ ಗ್ರೂಪ್ ವಿಮಾನ ನಿಲ್ದಾಣ ಉದ್ಯಮ ಮತ್ತು ಅಂಕಿಅಂಶ ಕೇಂದ್ರಗಳಲ್ಲಿ ವ್ಯವಹಾರ ಮತ್ತು ತಮ್ಮ ಛಾಪನ್ನು ಒತ್ತುತ್ತಿರುವ ಸಂದರ್ಭದಲ್ಲಿ, ಉದ್ಯಮವನ್ನು ವಿಸ್ತರಿಸುವ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ. ವಾರ್‌ಬರ್ಗ್ ಪಿನ್‌ಕಸ್‌ನ ಒಂದು ಘಟಕವಾದ ವಿಂಡಿ ಲೇಕ್‌ಸೈಡ್ ಇನ್ವೆಸ್ಟ್‌ಮೆಂಟ್ ಲಿಮಿಟೆಡ್ ಕಂಪನಿಯ ಶೇ 0.49 ರಷ್ಟು ಅಂದರೆ 800 ಕೋಟಿ ರೂಪಾಯಿಗಳನ್ನು ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡುತ್ತಿದೆ.
2021 ರ ಆರ್ಥಿಕ ವರ್ಷದಲ್ಲಿ ಅತಿ ಹೆಚ್ಚು ಸಂಪತ್ತು ಗಳಿಸಿದವರ ಪಟ್ಟಿಯಲ್ಲಿ ಗೌತಮ್ ಅದಾನಿ ಮೊದಲ ಸ್ಥಾನಕ್ಕೆ ಏರಿದ್ದಾರೆ. ಈ ವರ್ಷದ ಆರಂಭದಲ್ಲಿ 1620 ಕೋಟಿ ಅಮೇರಿಕನ್ ಡಾಲರ್ ಇದ್ದ ಅವರ ಸಂಪತ್ತು ಈಗ 5000 ಕೋಟಿ ಅಮೆರಿಕನ್ ಡಾಲರ್ ದಾಟಿದೆ. ಅಚ್ಚರಿಯ ಸಂಗತಿಯೇನೆಂದರೆ ಅದಾನಿಯ ಹತ್ತಿರ ಕೂಡ ಯಾವುದೇ ಶ್ರೀಮಂತ ತಲುಪಲು ಸಾಧ್ಯವಾಗಿಲ್ಲ. ಅವರು ಹಿಂದೆ ಹಾಕಿದ್ದು ಅಂತಿಂಥವರನ್ನಲ್ಲ, ಅಮೆಜಾನ್ ಕಂಪನಿಯ ಜೆಫ್ ಬೆಜೋಸ್, ಟೆಸ್ಲಾ ಕಂಪನಿಯ ಸಿಇಓ ಎಲನ್ ಮಸ್ಕ್ ರಂಥ ಘಟಾನುಘಟಿಗಳನ್ನೇ ಹಿಂದಿಕ್ಕಿ ಈಗ ಅಗ್ರಸ್ಥಾನಕ್ಕೆ ಏರಿದ್ದಾರೆ. ಗೂಗಲ್ ಸಹ-ಸಂಸ್ಥಾಪಕ ಲ್ಯಾರಿ ಪೇಜ್ 14.3 ಬಿಲಿಯನ್ ಬೆಳವಣಿಗೆಯೊಂದಿಗೆ ಸಂಪತ್ತಿನ ಅತ್ಯಧಿಕ ಲಾಭದ ದೃಷ್ಟಿಯಿಂದ ಎರಡನೇ ಸ್ಥಾನದಲ್ಲಿದ್ದಾರೆ. ಅಮೆಜಾನ್ ಇಂಕ್ ಸಂಸ್ಥಾಪಕ ಜೆಫ್ ಬೆಜೋಸ್ 3 183 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿರುವ ಅತ್ಯಂತ ಶ್ರೀಮಂತ ವ್ಯಕ್ತಿ, ಮತ್ತು ಎಲೋನ್ ಮಸ್ಕ್ ನಂತರ 180 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದೆ.