ಕನ್ನಡದ ಗೊಂಬೆ ಎಂದು ಖ್ಯಾತರಾಗಿರುವ ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಅವರು ಈ ಸ್ಪರ್ಧೆಗೆ ಹೇಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನ ಅಭಿಮಾನಿಗಳ ಜೊತೆ ಆಗಾಗ ಹಂಚಿಕೊಳ್ಳುತ್ತಿದ್ದರು. ಇದೀಗ ಅವರು ಸಂತಸದ ಸುದ್ದಿಯೊಂದು ಹಂಚಿಕೊಂಡಿದ್ದಾರೆ. ಅದೇನು ಅಂದ್ರೆ, ಈ ಸ್ಪರ್ಧೆಯಲ್ಲಿ ಒಂದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಗೆ ಎಂಟ್ರಿ ಕೊಟ್ಟಾಗಿನಿಂದ, ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ನಿವೇದಿತಾ ಗೌಡ ಈ ಸ್ಪರ್ಧೆಯಲ್ಲಿ ವಿಜೇತರಾಗಲಿ ಎಂದು ಅಭಿಮಾನಿಗಳು ಶುಭಕೋರುತ್ತಿದ್ದರು.
ಅಂತೆಯೇ ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ‘ವಿನ್ನರ್ ಆಫ್ ಪೀಪಲ್ಸ್ ಚಾಯ್ಸ್ 2022 ಆಫ್ Mrs.ಇಂಡಿಯಾ.’ ಎನ್ನುವ ಬಿರುದನ್ನು ನಿವೇದಿತಾ ಮುಡಿಗೇರಿಸಿಕೊಂಡಿದ್ದು, ಜನರ ಆಯ್ಕೆಯ ವಿಭಾಗದಲ್ಲಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮಿಸೆಸ್ ಇಂಡಿಯಾ ಆಗುವುದು ಸುಲಭದ ಮಾತಲ್ಲ. ಅದಕ್ಕೆ ಹಲವು ತಯಾರಿಯ ಅಗತ್ಯವಿದೆ. ನಿವೇದಿತಾ ಗೌಡ ಸಹ ಈ ಸ್ಪರ್ಧೆಗೆ ಅಗತ್ಯವಾದ ತಯಾರಿ ಮಾಡಿಕೊಂಡಿದ್ದಾರೆ. ಈಗ ಅದಕ್ಕೆ ಪ್ರತಿಫಲ ಸಿಕ್ಕಿದೆ. ಮಿಸೆಸ್ ಇಂಡಿಯಾ ಇಂಕ್‍ನ ಪೀಪಲ್ಸ್ ಚಾಯ್ಸ್ 2022ರ ವಿಜೇತರಾಗಿ ನಿವೇದಿತಾ ಗೌಡ ಹೊರಹೊಮ್ಮಿದ್ದಾರೆ.
ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿರುವ ಸಂಸ್ಥೆ, ಕೊನೆಗೂ ಜನರ ಹೃದಯವನ್ನು ಗೆದ್ದು ಅವರಿಗೆ ಇಷ್ಟವಾಗುವಂತೆ ಮಾಡುವುದು ನಿಜವಾದ ಸಾಧನೆ , ಅದನ್ನು ನಿವೇದಿತಾ ಮಾಡಿದ್ದಾರೆ. ಮಿಸೆಸ್ ಇಂಡಿಯಾ ಇಂಕ್‍ನ ಪೀಪಲ್ಸ್ ಚಾಯ್ಸ್ 2022 ರ ವಿಜೇತರಾದ ಶ್ರೀಮತಿ ನಿವೇದಿತಾ ಗೌಡ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ ಎಂದು ಬರೆದುಕೊಂಡಿದೆ. ಎಲ್ಲರಿಗೂ ಗೊತ್ತಿರುವಂತೆ ನಿವೇದಿತಾ ಗೌಡ ಒಂದು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ.
ಅದರಲ್ಲಿ ಅವರು ಹೋಮ್ ಟೂರ್, ಬಟ್ಟೆ ಕಲೆಕ್ಷನ್ ಹಾಗೂ ಬ್ಯಾಗ್ ಕಲೆಕ್ಷನ್ ಸೇರಿದಂತೆ ಹಲವಾರು ರೀತಿಯ ವಿಡಿಯೋಗಳನ್ನು ಮಾಡಿ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಬಾರಿ ಮಿಸೆಸ್ ಇಂಡಿಯಾಗೆ ಅವರು ಹೇಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಅವರ ಡಯೆಟ್ ಏನು ಎಂಬ ಬಗ್ಗೆ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಅಲ್ಲದೇ, ಈ ವಿಡಿಯೋದಲ್ಲಿ ಅವರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಏನು ಮಾಡುತ್ತಾರೆ ಎಂಬುದನ್ನ ಸಹ ತೋರಿಸಿದ್ದಾರೆ.
ಹೇಗೆ ನೈಸರ್ಗಿಕವಾಗಿ ಮುಖದ ಅಂದವನ್ನು ಹೆಚ್ಚು ಮಾಡಿಕೊಳ್ಳಬಹುದು ಎಂಬುದನ್ನ ತೋರಿಸಿದ್ದರು,. ಫೇಸ್ ಮಸಾಜ್ಗಳನ್ನು ಹೇಳಿಕೊಟ್ಟಿದ್ದು, ಯಾವುದರಿಂದ ಏನು ಲಾಭ ಎಂಬುದನ್ನ ಸಹ ತಿಳಿಸಿಕೊಟ್ಟಿದ್ದಾರೆ. ಇನ್ನು ಅವರು ವಿಡಿಯೋದಲ್ಲಿ ಬೆಳಗ್ಗೆ ತಿಂಡಿಗೆ ಎರಡು ಬ್ರೌನ್ ಬ್ರೆಡ್, ಡ್ರೈ ಫ್ರೂಟ್ಸ್, ಹಣ್ಣು, ಪೀನಟ್ ಬಟರ್ ತಿನ್ನುತ್ತೀನಿ ಎಂಬುದನ್ನ ಹೇಳಿದ್ದಾರೆ. ಬ್ರೆಡ್ ಅನ್ನು ರೋಸ್ಟ್ ಮಾಡಿಕೊಂಡು ಅದಕ್ಕೆ ಪೀನಟ್ ಬಟರ್ ಹಾಕಿ ತಿನ್ನುತ್ತಾರಂತೆ. ಅಲ್ಲದೇ, ತಿಂಡಿಯ ನಂತರ ಬಿಸಿ ನೀರಿಗೆ ನಿಂಬೆ ಹಣ್ಣಿನ ರಸ ಮತ್ತು ಹಸಿ ಶುಠಿ ಹಾಕಿ ಮಿಶ್ರಣ ಮಾಡಿ ಅದರ ಜ್ಯೂಸ್ ಕುಡಿಯುತ್ತಾರಂತೆ. ಈ ಮೊದಲು ಮಿಸೆಸ್ ಇಂಡಿಯಾ ತಯಾರಿ ಬಗ್ಗೆ ಮಾತನಾಡಿದ್ದ ನಿವೇದಿತಾ, ಮಿಸೆಸ್ ಇಂಡಿಯಾ ಆಗಬೇಕು ಎನ್ನುವುದು ಪ್ರತಿಯೊಬ್ಬರ ಕನಸು.
ಇದೀಗ ಅಂಥದ್ದೇ ಕನಸು ಕಂಡಿದ್ದೆ. ಸ್ಪರ್ಧೆಗೆ ನಾನ್ ಸ್ಟಾಪ್ ತಯಾರಿ ಮಾಡಿಕೊಂಡಿದ್ದರು. ಅಲ್ಲದೇ ರೋಲ್ ಮಾಡಲ್ ಬಾಲಿವುಡ್ ನಟಿ ಐಶ್ವರ್ಯ ರೈ ಎಂದು ಹೇಳಿಕೊಂಡಿದ್ದರು. ಕಳೆದ ಬಾರಿ ಸಹ ನಿವೇದಿತಾ ಕ್ಯಾಟ್ ವಾಕ್ ಹೇಗೆ ಮಾಡುವುದು ಎನ್ನುವುದರ ಕುರಿತು ಟ್ರೈನಿಂಗ್ ಪಡೆಯುತ್ತಿರುವ, ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಮಿಸೆಸ್ ಇಂಡಿಯಾ ಆಗಲು ಏನೆಲ್ಲ ತಯಾರಿ ಬೇಕು, ಹೇಗಿರಬೇಕು? ಯಾವೆಲ್ಲ ತರಬೇತಿ ಪಡೆಯಬೇಕು ಎನ್ನುವುದರ ಕುರಿತು ನುರಿತ ತರಬೇತಿದಾರರಿಂದ ಟ್ರೈನಿಂಗ್ ಪಡೆದಿದ್ದರು.