ಮೆದುಳಿನ ಕಾರ್ಯ ಕ್ಷಮತೆ ಹೆಚ್ಚಿಸುವ ಜೊತೆಗೆ ಹತ್ತಾರು ಲಾಭ ನೀಡುವ ಗೇರುಹಣ್ಣು

ಗೇರು ಹಣ್ಣು ಸಾಮಾನ್ಯವಾಗಿ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಚಿರಪರಿಚಿತವಾಗಿರುತ್ತದೆ, ಈ ಹಣ್ಣು ಉತ್ತಮವಾದ ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ, ಅಷ್ಟೇ ಅಲ್ಲದೆ ಗೇರು ಬೀಜವು ಕೂಡ ಕ್ಯಾಲೋರಿ ಹೊಂದಿದೆ, ಅಂದರೆ ಆರು ಕ್ಯಾಲೋರಿಗಳಷ್ಟು ಆಹಾರಾಂಶ ಒಂದು ಗ್ರಾಂ ಗೋಡಂಬಿಯಲ್ಲಿದೆ.

ಆಯುರ್ವೇದವು ಇದನ್ನು ಮೇಧ್ಯ ದ್ರವ ಎನ್ನುತ್ತದೆ ಅಂದರೆ ಇದು ಮಿದುಳಿಗೆ ಒಳ್ಳೆಯದು, ಗೇರು ಬೀಜವು ಶೆತ್. ೭೦ ರಷ್ಟು ಕೊಬ್ಬಿನ ಅಂಶ ಹೊಂದಿದೆ. ಇನ್ನು ಗೇರು ಹಣ್ಣು ಯಾವೆಲ್ಲ ಔಷಧಿಯ ಗುಣಗಳನ್ನು ಹೊಂದಿದೆ ಅನ್ನೋದನ್ನ ನೋಡುವುದಾದರೆ, ನಿತ್ಯ ರಾತ್ರಿ ಹಾಲಿನ ಜತೆ ಒಂದೆರಡು ಗೇರು ಬೀಜಗಳನ್ನು ಸೇವಿಸಿದರೆ ಮಿದುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ.

ಗೋಡಂಬಿಯನ್ನು ತುಪ್ಪ ಅಥವಾ ಎಣ್ಣೆಯಲ್ಲಿ ಕರಿದು ಸೇವಿಸಿದರೆ ದೇಹದ ತೂಕ ಹೆಚ್ಚುತ್ತದೆ, ಇನ್ನು ಗೇರು ಬೀಜವನ್ನು ತುಪ್ಪ ಮತ್ತು ಸಕ್ಕರೆಯೊಂದಿಗೆ ಅರೆದು ನಿತ್ಯವೂ ಸೇವಿಸಿದರೆ ಶೀಘ್ರ ಸ್ಖಲನ ಶಮನವಾಗುದು. ಇದನ್ನು ಮೂರೂ ನಾಲ್ಕು ವಾರ ಸೇವನೆ ಮಾಡುವದು ಉತ್ತಮ.

ಇನ್ನು ಈ ಗೇರುಹಣ್ಣು ಶೀತ ಆಗಿರುವಂತ ಸಂದರ್ಭದಲ್ಲಿ ಸೇವನೆ ಮಾಡುವದು ಉತ್ತಮ ಯಾಕೆಂದರೆ ಈ ಹಣ್ಣು ಶೀತ ಅಂದರೆ ಉಷ್ಣ ಅಂಶವನ್ನು ಹೊಂದಿರುವುದರಿಂದ ಶೀತ ನಿವಾರಿಸಲು ಸಹಕಾರಿಯಾಗುತ್ತದೆ.
ಅಷ್ಟೇ ಅಲ್ಲದೆ ಕಾಲಿನಲ್ಲಿ ಆಗುವಂತ ಆಣೆಯನ್ನು ನಿವಾರಿಸಲು ಗೇರು ಉಪಯೋಗಕಾರಿ, ಹೌದು ತೆಂಗಿನ ಚಿಪ್ಪನ್ನು ಸುತ್ತು ಕರಕು ಮಾಡಿಟ್ಟುಕೊಳ್ಳಿ ಗೇರುಬೀಜವನ್ನು ಚೂರು ಮಾಡಿ ಎಳ್ಳೆಣ್ಣೆಯಲ್ಲಿ ಕಾಯಿಸಿ ಅದಕ್ಕೆ ತೆಂಗಿನ ಚಿಪ್ಪನ ಕಾರಕನ್ನು ಸೇರಿಸಿ. ಈ ಎಣ್ಣೆಯನ್ನು ನಿತ್ಯ ಬೆಳಗ್ಗೆ ರಾತ್ರಿ ಹಚ್ಚಿದರೆ ಕಾಲಿನ ಾನೆ ಗುಣವಾಗುತ್ತದೆ.

Leave a Comment