ಒಡೆದ ಹಿಮ್ಮಡಿ ಸಮಸ್ಯೆ ಕೆಲವರಲ್ಲಿ ಕಾಡುವಂತ ಸಾಮಾನ್ಯ ಸಮಸ್ಯೆ ಆಗಿದೆ ಇದಕ್ಕೆ ಹಲವು ಪರಿಹಾರ ಮಾರ್ಗಗಳಿವೆ, ಆದ್ರೆ ಇದರಲ್ಲಿ ಒಂದಿಷ್ಟು ಸೂಕ್ತ ಮನೆಮದ್ದುಗಳನ್ನು ಈ ಮೂಲಕ ತಿಳಿದುಕೊಳ್ಳೋಣ. ನಿಂಬೆ ಹಣ್ಣು ಅಡುಗೆಗೆ ಹಾಗು ದೈವಿಕ ಕಾರ್ಯಗಳಿಗೆ ಅಷ್ಟೇ ಅಲ್ಲದೆ ದೇಹದ ಹಲವು ಸಮಸ್ಯೆಗಳ ನಿವಾರಣೆಗೆ ಉಪಯೋಗಕಾರಿಯಾಗಿ ಕೆಲಸ ಮಾಡುತ್ತದೆ. ಅದೇ ನಿಟ್ಟಿನಲ್ಲಿ ನಿಂಬೆ ಹೇಗೆಲ್ಲ ಪ್ರಯೋಜನಕಾರಿ ಹಾಗು ಒಡೆದ ಹಿಮ್ಮಡಿಗೆ ಹೇಗೆ ಪರಿಹಾರ ನೀಡುತ್ತದೆ ಅನ್ನೋದನ್ನ ನೋಡುವುದಾದರೆ
ಮೊದಲನೆಯದಾಗಿ ಒಡೆದ ಪಾದಗಳಿಗೆ ನಿಂಬೆಯ ಸಿಪ್ಪೆಯನ್ನು 10 ರಿಂದ 20 ನಿಮಿಷಗಳ ಕಾಲ ತಿಕ್ಕಿ ಅನಂತರ ಉಗುರು ಬೆಚ್ಚಿನ ನೀರಿನಲ್ಲಿ ಕಾಲನ್ನು ಅದ್ದಿ ಇಟ್ಟುಕೊಳ್ಳಿ. ಬಳಿಕ ಅರಿಶಿನ ಬೆರಸಿದ ಕೊಬ್ಬರಿ ಎಣ್ಣೆಯನ್ನು ಲೇಪಿಸಿದರೆ ಬಿರುಕು ಬಿಟ್ಟ ಪಾದಗಳು ಸರಿಹೋಗುತ್ತದೆ. ಅಷ್ಟೇ ಅಲ್ಲದೆ ಚರ್ಮವು ಕೂಡ ಮೃದುವಾಗುತ್ತದೆ.
ಇನ್ನು ನಿಂಬೆ ರಸವನ್ನು ತಲೆಕೂದಲ ಬುಡಕ್ಕೆ ಹಚ್ಚಿ ಎರಡು ಅಥವಾ ಮೂರೂ ಗಂಟೆಯ ಬಳಿಕ ಸ್ನಾನ ಮಾಡಿದರೆ ಕೂದಲು ಕಾಂತಿಯುತವಾಗಿ ತಲೆ ಹೊಟ್ಟು ಕೂಡ ನಿವಾರಣೆಯಾಗುತ್ತದೆ. ನಿಂಬೆ ರಸವನ್ನು ಕಡಲೆ ಹಿಟ್ಟಿನ ಜತೆಗೆ ಮುಖಕ್ಕೆ ಲೇಪಿಸಿ ಮೃದುವಾಗಿ ಪುರ್ಲಕಾರದಲ್ಲಿ ತಿಕ್ಕಿ. ಅರ್ಧ ಗಂಟೆಯ ಬಳಿಕ ಮುಖ ತೊಳೆದರೆ ಚರ್ಮ ಲಕ ಲಕ ಹೊಳೆಯುತ್ತದೆ. (ಎಂದರೆ ಚರ್ಮದಲ್ಲಿ ಬ್ಲೀಚಿಂಗ್ ಪರಿಣಾಮ ಉಂಟಾಗುತ್ತದೆ.)
ಮೊಡವೆ ನಿವಾರಣೆಗೆ ಮದ್ದು: ಆಗತಾನೆ ಎದ್ದ ಮೊಡವೆಗಳಿಗೆ ನಿಂಬೆರಸದಲ್ಲಿ ಕರಿಮೆಣಸಿನ ಕಾಳುಗಳನ್ನು ತೇಯ್ದು ಹಚ್ಚಿದರೆ ಮೊಡವೆಗಳು ಬೇಗನೆ ಮಾಯವಾಗುತ್ತದೆ. ಅಷ್ಟೇ ಅಲ್ಲದೆ ವಿಟಮಿನ್ ಸೇವನೆ ದೇಹಕ್ಕೆ ರೋಗ ನಿರೋಧಕವನ್ನು ಹೆಚ್ಚಿಸುತ್ತದೆ. ಆಗಾಗಿ ನಿಂಬೆಯಲ್ಲಿ ವಿಟಮಿನ್ ಸಿ ಇರುವುದರಿಂದ ವೈರ ಫೀವರ್ ಜ್ವರ ನೆಗಡಿ ಕೆಮ್ಮು ಗಂಟಲುನೋವುಗಳಿಗೆ ಆಯಾ ಔಷದಿಯ ಜೊತೆಗೆ ನಿಂಬೆ ಪಾನಕ ಸೇವನೆ ಮಾಡುವುದರಿಂದ ಪರಿಹಾರವಿದೆ.