ಒಡೆದ ಹಿಮ್ಮಡಿಗೆ ತಕ್ಷಣವೇ ಪರಿಹಾರ ನೀಡುವ ಕೊಬ್ಬರಿ ಎಣ್ಣೆ

ಸಾಮಾನ್ಯವಾಗಿ ಚಳಿಗಾಲ ಬಂತೆಂದರೆ ಸಾಕು ನಾವು ನಮ್ಮ ತ್ವಚೆಯನ್ನು ರಕ್ಷಣೆ ಮಾಡಿಕೊಳ್ಳುವುದೇ ಒಂದು ದೊಡ್ಡ ಕೆಲಸವಾಗಿಬಿಡುತ್ತದೆ ಯಾಕಂದ್ರೆ ಚಳಿಗಾಲವೇ ಹಾಗೆ ಮನುಷ್ಯ ಜೀವಿಗಳನ್ನು ಕಂಗಾಲಗಿಸಿಬಿಡುತ್ತದೆ ಬೆಳಿಗ್ಗೆ ಬೇಗನೆ ಏಳುವಂತಿಲ್ಲ ಎದ್ದರೂ ಸಹ ಹೊರಗಡೆ ಹೋಗುವಂತಿಲ್ಲ, ಯಾಕಂದ್ರೆ ಚಳಿಯ ಛಾಯೆ ಅಷ್ಟಿರುತ್ತದೆ ಆದ್ದರಿಂದ ಚಳಿಗಾಲದಿಂದ ನಾವು ನಮ್ಮನ್ನು ಮತ್ತು ನಮ್ಮ ತ್ವಚೆಯನ್ನು ರಕ್ಷಣೆ ಮಾಡಿಕೊಳ್ಳಲು ಹರಸಾಹಸವನ್ನೇ ಪಡಬೇಕಾಗುತ್ತದೆ ಅದರಲ್ಲಿಯೂ ನಮ್ಮ ತುಟಿಗಳು ಒಡೆಯುವುದು ಮುಖ ಒಡೆಯುವುದು ಎಲ್ಲಕ್ಕಿಂತ ಹೆಚ್ಚಾಗಿ ಇಮ್ಮಡಿ ಒಡೆಯುವುದು ಚಳಿಗಾಲದಲ್ಲಂತೂ ಸರ್ವೇ ಸಾಮಾನ್ಯವಾಗಿರುತ್ತದೆ.

ಇಮ್ಮಡಿ ಒಡೆದಿರುವುದನ್ನು ಅದರಲ್ಲಿರುವ ಬಿರುಕುಗಳನ್ನು ವಾಸಿ ಮಾಡಿಕೊಳ್ಳಲು ನಾವಿಂದು ಒಂದು ಚಿಕ್ಕ ಉಪಾಯವನ್ನು ತಿಳಿಸಿಕೊಡುತ್ತಿದ್ದೇವೆ ಹೌದು ಈ ಔಷಧಿಯನ್ನು ನೀವು ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ಯಾವುದೇ ಪ್ರತ್ಯೇಕ ಖರ್ಚುಗಳನ್ನು ಬರಿಸದ ಹಾಗೆ ಮನೆಯಲ್ಲಿಯೇ ಮಾಡಿ ನಿಮ್ಮ ಇಮ್ಮಡಿಗಳಿಗೆ ಹಚ್ಚಿಕೊಳ್ಳುವುದರಿಂದ ನಿಮ್ಮ ಇಮ್ಮಡಿಯಲ್ಲಿನ ಬಿರುಕುಗಳು ವ್ಯತಿರಿಕ್ತವಾಗಿ ಕಡಿಮೆಯಾಗುವುದರಲ್ಲಿ ಎರಡು ಮಾತಿಲ್ಲ ಹಾಗಾದ್ರೆ ಆ ಸುಲಭ ಮನೆ ಮದ್ಧನ್ನು ಮಾಡುವ ಮತ್ತು ಉಪಯೋಗಿಸುವ ವಿಧಾನಗಳ ಬಗ್ಗೆ ಒಮ್ಮೆ ಕಣ್ಣಾಯಿಸೋಣ ಬನ್ನಿ

ಮೊದಲಿಗೆ ಒಂದು ಚಿಕ್ಕ ಬೌಲ್ ನ ಒಳಗೆ ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಬೇಕು ನಂತರ ಅದೇ ಬೌಲ್ ಗೆ ಸಮ ಪ್ರಮಾಣದಲ್ಲಿ ಎಂಬಂತೆ ಒಂದು ಚಮಚ ವ್ಯಾಸಲೀನ್ ಅನ್ನು ಹಾಕಿಕೊಂಡು ಈ ಎರಡರ ಮಿಶ್ರಣಕ್ಕೆ ಅರ್ಧ ಹೋಳು ನಿಂಬೆ ಹಣ್ಣಿನ ಹುಳಿಯನ್ನು ಹಾಕಿ ಚೆನ್ನಾಗಿ ಕಲಸಿದರೆ ಸಾಕು ನೀವು ಮಾಡಿಕೊಳ್ಳಬೇಕಾದ ಮನೆ ಮದ್ಧು ಸಿದ್ಧವಾದಂತೆ

ಹೀಗೆ ತಯಾರಿಸಿಕೊಂಡ ಮನೆ ಮದ್ಧನ್ನು ನಿಮ್ಮ ಇಮ್ಮಡಿಗಳು ಒಡೆದಿರುವ ಅಂದರೆ ಬಿರುಕು ಬಿಟ್ಟಂತೆ ಆಗಿರುವ ಇಮ್ಮಡಿಯ ಭಾಗಕ್ಕೆ ಹಚ್ಚಿ ಚೆನ್ನಾಗಿ ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಬೇಕು ಹೀಗೆ ಮಸಾಜ್ ಮಾಡಿಕೊಂಡ ನಂತರ ನಿಮ್ಮ ಕಾಲುಗಾಳಿಗೆ ಸಾಕ್ಸ್ ಗಳನ್ನು ಹಾಕಿಕೊಂಡು ರಾತ್ರಿ ಇಡೀ ಹಾಗೇ ಬಿಟ್ಟುಕೊಂಡು ಮಲಗಬೇಕು ನಂತರ ಬೆಳಿಗ್ಗೆ ಎದ್ದು ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು ಹೀಗೆ ಮಾಡುವುದರಿಂದ ನಿಮ್ಮ ಕಾಲುಗಳಲ್ಲಿನ ಬಿರುಕುಗಳು ಮೊದಲ ದಿನದಿಂದಲೇ ವಾಸಿಯಾಗಲು ಶುರುಮಾಡುತ್ತವೆ ಪ್ರತೀ ದಿನ ನೀವು ಈ ಕ್ರಮವನ್ನು ಅನುಸರಿಸುವುದರಿಂದ ನಿಮ್ಮ ಕಾಲುಗಳಲ್ಲಿನ ಬಿರುಕುಗಳು ಸಂಪೂರ್ಣ ಮಾಯವಾಗುವುದರಲ್ಲಿ ಯಾವುದೇ ಸಂಶವಿಲ್ಲ

Leave a Comment