ಅಗ್ನಿ ದುರಂತಗಳು, ನೀರಿನಿಂದ ಉಂಟಾಗುವ ಸಮಸ್ಯೆಗಳು ಇಂತಹ ಸಮಸ್ಯೆಗಳ ನಿವಾರಣೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಮ್ಮ ಜೀವನವನ್ನು ಲೆಕ್ಕಿಸದೆ ಜನಸಾಮಾನ್ಯರ ಪ್ರಾಣವನ್ನು ಉಳಿಸುವ ಕೆಲಸವನ್ನು ಮಾಡುತ್ತಾರೆ. ದಿನದ 24 ಗಂಟೆಯಲ್ಲಿ ಇವರು ತಮ್ಮ ಸೇವೆಯನ್ನು ನೀಡುತ್ತಾರೆ. ತಮ್ಮ ಸಂಸಾರ ಯೋಜನೆಯನ್ನು ಬಿಟ್ಟು ಜನಸೇವೆಯಲ್ಲಿ ತೊಡಗುತ್ತಾರೆ. ಆದ್ದರಿಂದ ಇದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಅಗ್ನಿಶಾಮಕ ದಳ ಅಂದರೆ ಫೈಯರ್ ಮ್ಯಾನ್ ವರ್ಕ್. ಇದೊಂದು ಜೀವದ ಹಂಗು ತೊರೆದು ಜನ ಜನಸಾಮಾನ್ಯರಿಗೆ ನೆರವು ನೀಡುವಂತಹ ಅದ್ಭುತವಾದಂತಹ ಸೇವೆಯಾಗಿದೆ. ಕೆಲವೊಂದು ಸಂಸ್ಥೆಗಳು ತಮಗೆ ಅಭ್ಯರ್ಥಿಗಳು ಬೇಕಾದಾಗ ಅಧಿಸೂಚನೆಯನ್ನು ಹೊರಡಿಸುತ್ತವೆ. ಆದರೆ ಎಲ್ಲಾ ಸಂಸ್ಥೆಗಳು ಅಧಿಸೂಚನೆ ಹೊರಡಿಸುವುದಿಲ್ಲ. ಏಕೆಂದರೆ ಅವುಗಳು ಅವರಿಗೆ ಬೇಕಾದಂತೆ ಅಭ್ಯರ್ಥಿಗಳನ್ನು ತುಂಬಿಸಿಕೊಳ್ಳುತ್ತಾರೆ. ಹಾಗೆಯೇ ಫೈರ್ ಮ್ಯಾನ್ ನೇಮಕಾತಿಯನ್ನು ಕರೆದಿದ್ದಾರೆ. ಇದರ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಫೈರ್‌ಮ್ಯಾನ್ ನೇಮಕಾತಿ ಹುದ್ದೆಗಳ ನೇಮಕಾತಿಗಾಗಿ ಕೆಎಸ್‌ಪಿ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ನಿಗದಿತ ಪ್ರೊಫಾರ್ಮಾದಲ್ಲಿ ಮಾತ್ರ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಮೋಡ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಕೇವಲ ಪುರುಷರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದನ್ನು ಹತ್ತನೇ ತರಗತಿಯ ಮೇಲೆ ಕರೆಯಲಾಗಿದೆ. ಅಮೃತಗಳಿಗೆ ಫಿಸಿಕಲ್ ಟೆಸ್ಟ್ ಮತ್ತು ಇಂಡರೆನ್ಸ್ ಟೆಸ್ಟ್ ನ್ನು ನಡೆಸಲಾಗುತ್ತದೆ. ಎಲ್ಲಾ ಪರೀಕ್ಷೆಗಳಿಗೂ ಟೆಸ್ಟ್ ಗಳನ್ನು ನಡೆಸುವುದಿಲ್ಲ. ನೇರವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ.
ಆದರೆ ಇಲ್ಲಿ ಮಾತ್ರ ಎರಡು ಟೆಸ್ಟುಗಳನ್ನು ನಡೆಸಲಾಗುತ್ತದೆ. ಫಿಸಿಕಲ್ ಟೆಸ್ಟ್ ಮತ್ತು ಇಂಡರೆನ್ಸ್ ಟೆಸ್ಟ್. ಅದರ ದಿನಾಂಕವನ್ನು ನಿಗದಿ ಪಡಿಸಲಾಗಿದೆ. ಟೆಸ್ಟುಗಳು ಫೆಬ್ರುವರಿ 15 2021 ಶುರುವಾಗುತ್ತದೆ. ಇದಕ್ಕೆ ಅರ್ಜಿಯನ್ನು ಮುಂಚೆ ಸಲ್ಲಿಸಿದ್ದರೆ ಫೆಬ್ರುವರಿ 7 ಅಥವಾ 6ನೇ ತಾರೀಖಿನಂದು ಅಡ್ಮಿಟ್ ಕಾರ್ಡ್ ನ್ನು ನೀಡಲಾಗುತ್ತದೆ. ಈ ಸೇವೆಯಲ್ಲಿ ಕಾರ್ಯ ನಿರ್ವಹಿಸುವವರು ಬುದ್ಧಿ ಸಾಮರ್ಥ್ಯ ಜೊತೆಗೆ ದೈಹಿಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಆಗಿರುತ್ತದೆ. ಅದಕ್ಕಾಗಿ ಈ ಕೆಲಸದ ಆಯ್ಕೆಗೆ ಫಿಸಿಕಲ್ ಟೆಸ್ಟ್ ಮತ್ತು ಎಂಟ್ರೆನ್ಸ್ ಟೆಸ್ಟ್ ಎರಡನ್ನೂ ಮಾಡುತ್ತಾರೆ. ಹೀಗಾಗಿ ಫೈಯರ್ ಮ್ಯಾನ್ ಕೆಲಸ ನಿರ್ವಹಿಸುವವರು ಎಂಟ್ರೆನ್ಸ್ ಟೆಸ್ಟ್ ಜೊತೆಗೆ ಫಿಸಿಕಲ್ ಟೆಸ್ಟ್ ಗು ತಯಾರಾಗಬೇಕಾಗುತ್ತದೆ.