ಕಣ್ಣ ಮುಂದೆಯೆ ಹೃದಯಘಾತದಿಂದ ತಂದೆಯ ಸಾವು, ನೋವಿನಲ್ಲೂ ದೊಡ್ಡ ಅನಾಹುತ ತಪ್ಪಿಸಿದ ಮಗ

ಕಣ್ಣ ಮುಂದೆ ತಂದೆಯ ಸಾವು ಆದರೂ ಇನ್ನೊಂದು ಅನಾಹುತವನ್ನು ತಪ್ಪಿಸಿದ ಬಾಲಕನ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ.

ತಂದೆಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ರೂ ಮಗ ಸಮಯಪ್ರಜ್ಞೆಯಿಂದ ಮತ್ತೊಂದು ಅನಾಹುತ ತಪ್ಪಿಸಿದ್ದಾನೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಎ.ಪಿಎಂ.ಸಿ ಮುಂಭಾಗ ಘಟನೆ ನಡೆದಿದೆ. ಟಾಟಾ ಏಸ್​ ವಾಹನ ಚಲಾಯಿಸುತ್ತಿದ್ದಾಗಲೇ ಶಿವಕುಮಾರ್​​​ಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ. ಈ ವೇಳೆ 8 ವರ್ಷದ ಮಗ ವಾಹನವನ್ನು ರಸ್ತೆ ಪಕ್ಕದ ದಿಣ್ಣೆ ಕಡೆಗೆ ತಿರುಗಿಸಿ ಆಗಬಹುದಾದ ದುರಂತವೊಂದನ್ನು ತಪ್ಪಿಸಿದ್ದಾನೆ.

ಟಾಟಾ ಏಸ್​​ನಲ್ಲಿ ಮಿಕ್ಸಿಗಳು ತುಂಬಿರುವುದರಿಂದ ಮಾರಾಟಕ್ಕೆ ತಂದಿರಬಹುದು ಅಂತ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಬಾಲಕನ ಬಳಿ ವಿಳಾಸ ಕೇಳಿದರೆ ಮಲ್ಲಸಂದ್ರದ ವಿಳಾಸ ಹೇಳುತ್ತಿದ್ದು, ಘಟನೆ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ಪುತ್ರನ ರೋಧನೆ ಕಂಡ ಸಾರ್ವಜನಿಕರು ಕೂಡ ಕಂಬನಿ ಮಿಡಿದಿದ್ದಾರೆ. ಕಣ್ಣೆದುರು ತಂದೆಯ ಸಾವನ್ನು ನೋಡಿದ ಮಗನು ಧೈರ್ಯ ಕಳೆದುಕೊಳ್ಳದೆ ಆಗಬಹುದಾದ ಇನ್ನೊಂದು ಅನಾಹುತವನ್ನು ತಪ್ಪಿಸಿರುವುದು ಶ್ಲಾಘನೀಯ.

Leave a Comment