ನಿಮ್ಮ ಮುಖ ಚಹರೆ ನೋಡಿ ನೀವು ಆರೋಗ್ಯವಂತರೇ ಅನ್ನೋದನ್ನ ತಿಳಿಯಿರಿ

ಭಾರತ ದೇಶದ ಪುರಾತನ ಕಾಲದ ಪದ್ಧತಿ ಅಂದ್ರೆ ಅದು ಆಯುರ್ವೇದ. ನಮಗೆಲ್ಲ ತಿಳಿದರುವ ಹಾಗೇ ಈ ಆಯುರ್ವೇದ ಪದ್ಧತಿಯಲ್ಲಿ ಯಾವುದೇ ರೀತಿಯ ಇಂಗ್ಲಿಷ್ ಔಷಧೀಯ ಗುಣಗಳು ಇರಲ್ಲ. ನಮ್ಮ ಪೂರ್ವಜರು ಹಿಂದಿನ ಕಾಲದಲ್ಲಿ ಕೇವಲ ನೈಸರ್ಗಿಕವಾಗಿ ಸಿಗುವ ಸೊಪ್ಪು ಗಿಡ ಮೂಲಿಕೆಗಳು, ಮರದ ಬೇರು ತೊಗಟೆ ಇವುಗಳನ್ನು ಬಳಸಿಕೊಂಡು ಎಲ್ಲ ಸಮಸ್ಯೆಗಳಿಗು ಔಷಧಿಯನ್ನು ಕಂಡುಹಿಡಿದು ಕೊಡುತ್ತಿದ್ದರು. ಅಂದಹಾಗೆ ಅವರಿಗೆ ರೋಗಗಳನ್ನು ತಿಳಿದುಕೊಳ್ಳಲು ಈಗಿನ ಕಾಲದ ಹಾಗೇ ಯಾವುದೇ ಆಧುನಿಕ ವೈದ್ಯಕೀಯ ಉಪಕರಣಗಳು ಇರಲಿಲ್ಲ ಕೇವಲ ಅವರ ಜ್ಞಾನ ಉಪಯೋಗಿಸಿ ರೋಗಿಗಳ ಮುಖವನ್ನು ಪರೀಕ್ಷಿಸಿಯೋ ಅಥವಾ ಕೈಗಳನ್ನು ನೀಡುವುದರಿಂದಲೂ ಔಷಧಿಗಳನ್ನು ಕೊಡ್ತಾ ಇದ್ರು. ಅದೇ ರೀತಿ ಈಗಲೂ ಸಹ ಅಂತಹ ವಿಧಾನದಲ್ಲಿ ಕೆಲವೊಂದು ಆಯುರ್ವೇದ ಆಸ್ಪತ್ರೆಗಳಲ್ಲೂ ರೋಗಗಳನ್ನು ಪತ್ತೆ ಹಚ್ಚಲಾಗುತ್ತದೆ ಅದು ಹೇಗೆ ಅಂತ ನೋಡೋಣ ಬನ್ನಿ.

ಆಯುರ್ವೇದದಲ್ಲಿ ರೋಗಿ ಪರೀಕ್ಷಣಾ ವಿಧಿ ಅನ್ನೋ ಒಂದು ಪದ್ಧತಿ ಇದೆ ಇದರಲ್ಲಿ ರೋಗಿಗಳನ್ನು ಮುಟ್ಟದೆ ಯಾವುದೇ ರೀತಿಯ ಪರೀಕ್ಷೆಗೆ ಒಳಪಡಿಸದೆ ಕೇವಲ ಮುಖದ ಭಾವನೆಗಳನ್ನು ನೋಡಿ ಯಾವ ನ್ಯೂನತೆ ಇದೆ ಎಂದು ಹೇಳುತ್ತಾರೆ ಅದರ ಜೊತೆಗೆ ನಾಡಿ ಬಡಿತ ಹಾಗು ದೇಹದ ಸಮತೋಲನ ಕೂಡ ಪರಿಗಣಿಸಿ ರೋಗವನ್ನು ಪತ್ತೆ ಹಚ್ಚಲಾಗುತ್ತದೆ. ಹಾಗೆ ಅದರ ಜೊತೆಗೇ ವ್ಯಕ್ತಿಯು ಸೇವಿಸುವ ಆಹಾರ, ವಾಸಿಸುವ ಜಾಗ, ಮಲ ಮೂತ್ರ ದ ಬಣ್ಣ ಇವುಗಳ ಆಧಾರದ ಮೇಲೆ ಸಹ ಯಾವ ಕಾಯಿಲೆ ಇದೆ ಎಂದು ತಿಳಿಯುತ್ತಿದ್ದರು.

ಮುಖ ನೋಡಿ ಕಾಯಿಲೆ ಪತ್ತೆ ಹಚ್ಚಿ ಅದಕ್ಕೆ ಹೇಗೆ ಔಷಧಿ ಕೊಡ್ತಾ ಇದ್ರು ಅಂತ ಆಶ್ಚರ್ಯ ಆಗಬಹುದು. ಮುಖ ನಮ್ಮ ಮನಸ್ಸಿನ ಕನ್ನಡಿ ಅನ್ನೋ ಮಾತು ಕೆಳಿರುತ್ತಿವಿ ಅಲ್ವಾ, ಹಾಗೆ ನಮ್ಮ ದೇಹದ ಬದಲಾವಣೆಯನ್ನು ಸಹ ತಿಳಿಸುತ್ತದೆ. ನಮ್ಮ ಆರೋಗ್ಯ ಹೇಗಿರತ್ತೋ ಮುಖವೂ ಹಾಗೆ ಇರತ್ತೆ ನಾವು ಆರೋಗ್ಯವಾಗಿ ಇದ್ದರೆ ಮುಖದಲ್ಲಿ ಕಳೆ ಇರುತ್ತದೆ ಆರೋಗ್ಯವಾಗಿ ಇಲ್ಲವಾದರೆ ಬಾಡಿದ ಮುಖ ಆಗಿರುತ್ತೆ.

ಇದಕ್ಕೆ ಉದಾಹರಣೆ ನಮ್ಮ ಅಂದ್ರೆ ಕಣ್ಣಿನ ಕೆಳಗೆ ಕಪ್ಪು ಕಲೆಗಳು ಇದ್ರೆ, ಹಿಮೋಗ್ಲಬಿನ್ ಕಡಿಮೆ ಇರಬಹುದು ಎಂದು ಊಹೆ, ಹಣೆಯ ಮೇಲೆ ಸುಕ್ಕುಗಳು ಇದ್ದರೆ ಮಾನಸಿಕ ಖಿನ್ನತೆಗೆ ಒಳಗಾಗಿ ಇರಬಹುದು ಎಂದು ಊಹೆ ಹಾಗಂತ ಖಂಡಿತವಾಗಿ ಇದೆ ಅಂತ ಅಲ್ಲ ಇರಬಹುದು ಎಂಬ ಊಹೆ. ಮುಂದೆ ಹಣೆಯ ಭಾಗದಲ್ಲಿ ಕಪ್ಪಗೆ ಕಂಡರೆ, ನಿದ್ರಾ ಹೀನತೆ ಇರಬಹುದು ಎಂದು. ತುಟಿಗಳು ಒಣಗ್ತಾ ಇದ್ರೆ ದೇಹದಲ್ಲಿ ಡಿ ಹೈಡ್ರೇಶನ್ ಆಗ್ತಾ ಇದೆ ಅಂತ ಅರ್ಥ. ಇನ್ನೂ ಕೆನ್ನೆ ಒಳಗೆ ಹೋಗ್ತಾ ಇದ್ರೆ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಇದೆ ಎಂದು. ಮಕ್ಕಳಿಗೆ ಮುಖದಲ್ಲಿ ಬಿಳಿ ಕಲೆಗಳು ಕಂಡರೆ, ಹೊಟ್ಟೆಯಲ್ಲಿ ಜಂತು ಹುಳಗಳು ಇರಬಹುದು ಎಂದು ಊಹೆ. ಆದರೆ ಕೇವಲ ಹೀಗೆ ಊಹೆ ಮಾಡಿ ಔಷಧಿ ಕೊಡಲ್ಲ ಯಾವ ಖಾಯಿಲೆ ಇದೆ ಎಂದು ಇನ್ನೊಮ್ಮೆ ಪರೀಕ್ಷಿಸಿ ಖಾತರಿಪಡಿಸಿಕೊಂಡು ಔಷಧಿ ನೀಡಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಹಲವಾರು ಜನ ಆಯುರ್ವೇದ ಡಾಕ್ಟರ್ ಬಳಿ ಆನ್ಲೈನ್ ನಲ್ಲಿ ತಮ್ಮ ಸಮಸ್ಯೆಗಳನ್ನ ಹೇಳಿಕೊಂಡು ವಾಟ್ಸಪ್ ಮೂಲಕ ರಿಪೋರ್ಟ್ ಕಲಿಸುತ್ತೇವೆ ಕೊರಿಯರ್ ಮೂಲಕ ಔಷಧಿಗಳನ್ನು ಕಳಿಸಿಕೊಡಿ ಎಂದೆಲ್ಲ ಕೇಳುತ್ತಾರೆ. ಆದರೆ ವೈದ್ಯರಿಗೆ ಮುಖದ ಲಕ್ಷಣಕ್ಕಿಂತ ಹೆಚ್ಚು ನಾಡಿ ಬಡಿತ ಮುಖ್ಯವಾಗಿರುತ್ತದೆ ನಾವು ವಾಟ್ಸಪ್ ವಿಡಿಯೋ ಕಾಲ್ ಮೂಲಕ ಹೇಗೆ ನಾಡಿ ಬಡಿತವನ್ನೆಲ್ಲ ತಿಳಿಸೋಕೆ ಸಾಧ್ಯ ಅನ್ನೋ ಸಾಮಾನ್ಯ ಜ್ಞಾನವನ್ನು ಇಟ್ಟುಕೊಂಡು ಕೇಳಬೇಕಾಗುತ್ತದೆ. ಕೆಲವೊಬ್ಬರು ವೈದ್ಯರಿಗೆ ವಾಟ್ಸಪ್ ಮೂಲಕ ಔಷಧಿ ತಿಳಿಸಲ್ಲ ಅಂತಾದ್ರೆ ಮತ್ಯಾಕ್ ನಂಬರ್ ಕೊಟ್ರಿ ಅಂತೆಲ್ಲಾ ಕೇಳ್ತಾರೆ ಅಲ್ಲಿ ನಂಬರ್ ಕೊಟ್ಟಿರುವುದು ಕೇವಲ ಇಂತಹ ಒಬ್ಬ ಡಾಕ್ಟರ್ ಇದ್ದಾರೆ ಮೊದಲು ಅವರ ಬಳಿ ಮಾತಾಡಿಕೊಂಡು ನಂತರ ಭೇಟಿ ಮಾಡಲು ಹೊರತು ಫೋನ್ ಮೂಲಕ ರೋಗಕ್ಕೆ ಮದ್ದನ್ನು ತಿಳಿಸಿ ಗುಣಪಡಿಸಲು ಸಾಧ್ಯವಿಲ್ಲ. ನಿಮ್ಮ ದೇಹದಲ್ಲಿ ಯಾವುದೇ ರೀತಿಯ ರೋಗ ಲಕ್ಷಣಗಳು ಸಮಸ್ಯೆಗಳು ಕಂಡರೆ ಹತ್ತಿರದ ವೈದಯರನ್ನು ಭೇಟಿ ನೀಡಿ ಸೂಕ್ತ ಪರಿಹಾರ ಕಂಡುಕೊಳ್ಳುವುದು ಉತ್ತಮ.

Leave a Comment