ಆಯುರ್ವೇದ ಪ್ರಕಾರ ಬೆಳ್ಳುಳ್ಳಿ ತಿಂದ್ರೆ ಹಿಂಗೆಲ್ಲ ಆಗುತ್ತಾ? ಒಳ್ಳೆಯ ವಿಚಾರ

ನಮ್ಮ ಅಡುಗೆ ಮನೆ ಒಂದು ರೀತಿಯಲ್ಲಿ ಮಿನಿ ಔಷಧಾಲಯ ಇದ್ದಂತೆ. ಮೆಣಸು, ಜೀರಿಗೆಯಿಂದ ಹಿಡಿದು ನಾವು ದಿನ ನಿತ್ಯ ಬಳಸುವ ಬೆಳ್ಳುಳ್ಳಿ ಹಾಗೂ ಪ್ರತಿಯೊಂದು ಸಾಂಬಾರ ಪದಾರ್ಥಗಳೂ ಸಹ ಔಷಧೀಯ ಗುಣಗಳನ್ನು ಹೊಂದಿದೆ ಎನ್ನುವುದು ವಿಶೇಷ. ಅದರಲ್ಲೂ ಬೆಳ್ಳುಳ್ಳಿಗೆ ಇನ್ನಿಲ್ಲದ ಮಹತ್ವ ಇದೆ. ಇದು ತಾಮಸಿಕ ಗುಣಗಳನ್ನು ಹೆಚ್ಚಿಸುತ್ತದೆ ಹಾಗಾಗಿ ಕೆಲವರು ಇದನ್ನ ಬಳಸಿಕೆ ಸ್ವಲ್ಪ ಹಿಂದೇಟು ಹಾಕುತ್ತಾರೆ. ಆದರೆ ಅಂತವರು ಕೂಡ ಔಷಧದ ರೂಪದಲ್ಲಿ ಒಮ್ಮೆಯಾದರೂ ಬೆಳ್ಳುಳ್ಳಿಯನ್ನು ಬಳಕೆ ಮಾಡೇ ಮಾಡ್ತಾರೆ. ದಿನನಿತ್ಯ ನಾವು ಬಳಸುವ ಬೆಳ್ಳುಳ್ಳಿಯ ಉಪಯೋಗ ಹಾಗೂ ಅದರ ಚರಿತ್ರೆಯನ್ನು ನೋಡಿದರೆ ಗಾಬರಿ ಆಗುವುದು ಖಂಡಿತ. ಇಷ್ಟಕ್ಕೂ ಈ ಬೆಳ್ಳುಳ್ಳಿಯಲ್ಲಿ ಇರುವ ಆರೋಗ್ಯಕರ ಲಾಭಗಳು ಏನು ಹೇಗೆ ಬಳಸೋದು ಅನ್ನೋದನ್ನ ತಿಳಿಸಿಕೊಡ್ತೀವಿ ನೋಡಿ.

ಆದರೆ ಅದಕ್ಕೂ ಮೊದಲು ಬೆಳ್ಳುಳ್ಳಿಯ ಚರಿತ್ರೆಯನ್ನು ಒಮ್ಮೆ ನೋಡೋಣ. ನಾವಿವತ್ತು ಅಡುಗೆ ಮನೆಯಲ್ಲಿ ಬಳಸುವ ಸಾಂಬಾರು ಪದಾರ್ಥ ಅಥವಾ ತರಕಾರಿಗಳು ಇರಬಹುದು ಇವುಗಳ ಬಳಕೆ ಯಾವಾಗ ಆಯಿತು ಅನ್ನೋದರ ಬಗ್ಗೆ ನಮಗೆ ನಿಖರವಾಗಿ ತಿಳಿದಿಲ್ಲ. ಆದರೆ ಬೆಳ್ಳುಳ್ಳಿ ಕಥೆ ಹಾಗಲ್ಲ. ಇದರ ಹಿಂದೆ ಸುಮಾರು ೫೦೦೦ ವರ್ಷಗಳ ಹಿಂದಿನ ಹಳೆಯ ಕಥೆ ಇದೆ ಅಂದರೆ ನೀವು ನಂಬಲ್ಲ. ಆದರೆ ಸಾವಿರಾರು ವರ್ಷಗಳ ಹಿಂದಿನಿಂದಲೂ ನಮ್ಮ ಹಿರಿಯರು ಬೆಳ್ಳುಳ್ಳಿ ಬಳಕೆ ಮಾಡುತ್ತಿದ್ದರು ಅನ್ನೋದು ಇದರಿಂದ ತಿಳಿಯುತ್ತೆ. ಆಯುರ್ವೇದ ಸಾಹಿತಿಗಳಲ್ಲಿ ಇದರ ಬಗ್ಗೆ ಅನೇಕ ಅಧ್ಯಾಯಗಳಷ್ಟು ಮಾಹಿತಿ ಇದೆ. ನಮಗೆ ಅನೇಕ ಆರೋಗ್ಯ ಸೂತ್ರಗಳನ್ನು ನೀಡಿರುವ ಅಷ್ಟಾಂಗ ಹೃದಯ ಮತ್ತು ಅಷ್ಟಾಂಗ ಸಂಗ್ರಹ ಎಂಬ ಗ್ರಂತಗಳಿಂದ ಹಿಡಿದು ಕಶ್ಯಪ ಮಹರ್ಷಿ ಬರೆದಿರುವ ಕಶ್ಯಪ ಸಂಹಿತ ಅನ್ನೋ ಆಯುರ್ವೇದದ ಗ್ರಂಥದ ವರೆಗೆ ಅನೇಕ ಪ್ರಾಚೀನ ಗ್ರಂಥಗಳಲ್ಲಿ ಈ ಬೆಳ್ಳುಳ್ಳಿಯ ಔಷಧೀಯ ಗುಣಗಳನ್ನು ವರ್ಣಿಸಲಾಗಿದೆ. ಕಶ್ಯಪ ಸಂಹಿತಯಲ್ಲಿ ಬೆಳ್ಳುಳ್ಳಿಯ ಉಪಯೋಗಗಳ ಬಗ್ಗೆ ಬ್ರಹತ್ ಅಧ್ಯಾಯವೆ ಇದೆ. ಕಶ್ಯಪ ಮಹರ್ಷಿ ಅಂತೂ ಬೆಳ್ಳುಳ್ಳಿಯನ್ನು ಮಹೌಶದ ಎಂದೇ ಕರೆದಿದ್ದಾರೆ. ಬಹುಶಃ ಕಶ್ಯಪ ಸಂಹಿತೆಯಲ್ಲಿ ಬರುವ ಬೆಳ್ಳುಳ್ಳಿಯ ಬಹುಪಯೋಗದ ಕುರಿತು ಓದಿದರೆ ಇವತ್ತು ಬೆಳ್ಳುಳ್ಳಿ ಕಂಡರೆ ಆಗದೆ ಮೂಗು ಮುರಿಯುವವರೇ ತಮ್ಮ ನಿಲುವನ್ನು ಬದಲಾಯಿಸಿದರು ಅನುಮಾನವಿಲ್ಲ. ಅನೇಕ ಆಯುರ್ವೇದ ಗ್ರಂಥಗಳು ಬೆಳ್ಳುಳ್ಳಿಯನ್ನು ಅಮೃತಕ್ಕೆ ಸಮಾನ ಎಂದಿವೆ.

ಇಷ್ಟಕ್ಕೂ ಮಹಾ ಔಷದ ಅಂತ ಕರೆಸಿಕೊಳ್ಳುವ ಬೆಳ್ಳುಳ್ಳಿ ಹೇಗೆ ಹುಟ್ಟಿಕೊಂಡಿತು ಅನ್ನೋದಕ್ಕು ಒಂದು ಕಥೆ ಇದೆ. ನಮ್ಮೆಲ್ಲರಿಗೂ ದೇವ ದಾನವರು ನಡೆಸಿದ ಸಮುದ್ರ ಮಥನದ ಕುರಿತು ಗೊತ್ತೇ ಇರತ್ತೆ. ಕ್ಷೀರ ಸಾಗರದಿಂದ ಬಂದ ಅಮೃತವನ್ನು ಮಹಾ ವಿಷ್ಣು ದೇವತೆಗಳಿಗೆ ಹಂಚೋಕೆ ಶುರು ಮಾಡುತ್ತಾನೆ. ಆಗ ತಾನೂ ಕೂಡ ಅಮೃತ ಸೇವಿಸುವ ಆಸೆಯಿಂದ ರಾಹು ವೇಷ ಮರೆಸಿಕೊಂಡು ದೇವತೆಗಳ ಸಾಲಿನಲ್ಲಿ ಕೂರುತ್ತಾನೆ. ಅಮೃತದ ಒಂದು ಹನಿಯನ್ನೂ ಪಡೆದೂ ಕುಡಿಯುತ್ತಾನೆ. ತಕ್ಷಣ ಈ ವಿಚಾರ ತಿಳಿದ ಮಹಾ ವಿಷ್ಣು ತನ್ನ ಚಕ್ರದಿಂದ ರಾಹುವಿನ ತಲೆಯನ್ನ ಕತ್ತರಿಸುತ್ತಾನೆ. ಅದಾಗಲೇ ರಾಹುವಿನ ಗಂಟಲು ಇಳಿದ ಅಮೃತದ ಬಿಂದು ಶಿರಚೆದನ ಆದಾಗ ನೆಲಕ್ಕೆ ಬೀಳುತ್ತದೆ. ಹೀಗೆ ರಾಹುವಿನ ಶರೀರದಿಂದ ಹೊರಬಿದ್ದ ಅಮೃತದ ಹನಿಯಿಂದ ಬೆಳ್ಳುಳ್ಳಿ ಸೃಷ್ಟಿ ಆಯಿತು ಅನ್ನಾತ್ತೆ ಕಶ್ಯಪ ಸಂಹಿತೆಯಲ್ಲಿ ಬರುವ ಕಥೆ. ಈ ಕಥೆಯ ಮೂಲಕ ಬೆಳ್ಳುಳ್ಳಿಯ ಮಹತ್ವ ಎಷ್ಟು ಅನ್ನೋದನ್ನ ತಿಳಿದುಕೊಳ್ಳಬಹುದು ಅಷ್ಟೇ.

ಬೆಳ್ಳುಳ್ಳಿ ಅಮೃತಕ್ಕೆ ಸಮಾನ. ಮನುಷ್ಯನ ಆರೋಗ್ಯಕ್ಕೆ ಸಂಜೀವಿನಿ ಅಂತೆ ಕೆಲಸ ಮಾಡುತ್ತೆ ಅನ್ನೋದನ್ನ ಈ ಕಥೆಯ ಮೂಲಕ ಹೇಳಿರಬಹುದು. ಬೆಳ್ಳುಳ್ಳಿಯ ಔಷಧೀಯ ಉಪಯೋಗಗಳು ಎಷ್ಟು ಅಂತ ನೋಡಿದ್ರೆ, ಆಯುರ್ವೇದದಲ್ಲಿ ಯಾಕಿಷ್ಟು ಮಹತ್ವ ಸಿಕ್ಕಿದೆ ಅನ್ನೋದು ನಮಗೆ ಅರ್ಥ ಆಗತ್ತೆ. ಆಯುರ್ವೇದದಲ್ಲಿ ಬೆಳ್ಳುಳ್ಳಿಯನ್ನು ಮಹಾರಸ ಅಂತ ಕರೀತಾರೆ. ಸಾಮಾನ್ಯವಾಗಿ ನಾಲಿಗೆಯ ರುಚಿ ಗಮನಿಸೋಕೆ ೬ ರಸಗಳಿವೆ. ಸಿಹಿ, ಹುಳಿ, ಕಹಿ, ಕಟು, ಒಗರು ಇವುಗಳನ್ನ ಶಡ್ ರಸಗಳು ಅಂದಿದ್ದಾರೆ. ವಿಶೇಷ ಅಂದರೆ ಬೆಳ್ಳುಳ್ಳಿ ಒಂದರಲ್ಲೇ ಐದು ರಸಗಳು ಇದೆಯಂತೆ. ಬೆಳ್ಳುಳ್ಳಿಯ ಈ ವಿಶೇಷ ಗುಣದಿಂದ ಅದನ್ನ ಮಹಾರಸ ಎಂದಿದ್ದು. ಇಷ್ಟೆಲ್ಲಾ ವಿಶೇಷ ಹೊಂದಿರುವ ಬೆಳ್ಳುಳ್ಳಿಯಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ ಇದೆ ಅನ್ನೋದನ್ನ ನೋಡೋಣ.

ಮೊದಲನೆಯದಾಗಿ ಬೆಳ್ಳುಳ್ಳಿಗೆ ನಮ್ಮ ಆಯುಷ್ಯವನ್ನು ವೃದ್ಧಿಸುವ ಶಕ್ತಿ ಇದೆ. ಅಜೀರ್ಣ ಸಮಸ್ಯೆ ಇದ್ದವರು ಪ್ರತೀ ದಿನ ಒಂದು ಬೆಳ್ಳುಳ್ಳಿಯನ್ನು ಅಗೆದು ತಿನ್ನುವುದರಿಂದ ಜಠರಾಗ್ನಿ ಉದ್ದೀಪನ ಗೊಂಡು ಅಜೀರ್ಣ ಸಮಸ್ಯೆ ನಿವಾರಣೆ ಆಗುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ರಕ್ತವನ್ನು ಶುದ್ಧೀಕರಿಸುವ ಗುಣ ಬೆಳ್ಳುಳ್ಳಿಗೆ ಇದೆ. ತಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎನ್ನುವವರು ನಿಯಮಿತವಾಗಿ ಬೆಳ್ಳುಳ್ಳಿಯನ್ನು ಸೇವಿಸಬೇಕು. ವಾತ ಹಾಗೂ ಕಫದಿಂದ ಬರುವ ವ್ಯಾಧಿಗಳಿಗೆ ಬೆಳ್ಳುಳ್ಳಿ ರಾಮಬಾಣ. ಇದೆಲ್ಲಕ್ಕಿಂತ ಹೆಚ್ಚಾಗಿ, ಶರೀರದಲ್ಲಿ ಬರಬಹುದಾದ ಕ್ಯಾನ್ಸರ್ ಅಂಶವನ್ನು ನಿವಾರಣೆ ಮಾಡುವ ಗುಣ ಈ ಬೆಳ್ಳುಳ್ಳಿಗೆ ಇದೆ. ಚರಕ ಸಂಹಿತೆ ಹಾಗೂ ವಾಗ್ಬಟ ಸಂಹಿತೆಯಲ್ಲಿ ಕೂಡ ಈ ಬೆಳ್ಳುಳ್ಳಿಯನ್ನು ಯಾವೆಲ್ಲ ರೋಗಗಳಿಗೆ ಬಳಸಬಹುದು ಅನ್ನೋ ವಿವರಣೆ ಇದೆ. ಚರಕ ಸಂಹಿತೆ ಪ್ರಕಾರ ಕುಷ್ಠ ರೋಗದಂತಹ ಕೆಲವು ಚರ್ಮ ರೋಗಗಳನ್ನು ಗುಣಪಡಿಸುವ ಶಕ್ತಿ ಬೆಳ್ಳುಳ್ಳಿಗೆ ಇದೆ. ಅಷ್ಟೇ ಅಲ್ಲ, ನಿಯಮಿತ ಬೆಳ್ಳುಳ್ಳಿ ಸೇವನೆಯಿಂದ ವೀರ್ಯಾಣುಗಳ ವೃದ್ಧಿ ಆಗತ್ತಂತೆ. ಇನ್ನೂ ವಾತ. ಸಂಧಿ, ಕೀಲು ನೋವು ಮುಂತಾದ ವಾತಗಳಿಗೆ ಬೆಳ್ಳುಳ್ಳಿ ದಿವ್ಯೌಷಧ ಆಗಿ ಕೆಲಸ ಮಾಡತ್ತೆ ಎಂದಿದ್ದಾರೆ ವಾಘಬಟ. ಬಾಯಿಯ ವಾಸನೆ ಹಾಗೂ ವಸಡು ನೋವಿಗೂ ಬೆಳ್ಳುಳ್ಳಿಯನ್ನು ಬಳಸಬಹುದು. ಕೆಲವು ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ಅದರಿಂದ ಹಳ್ಳು ಉಜ್ಜಿದರೆ ಹಲ್ಲುನೋವು ಬೇಗ ಶಮನ ಆಗುತ್ತದೆ. ಇನ್ನೂ ಹುಳುಕಡ್ಡಿ ಹಾಗೂ ಬೆರಳ ಮಧ್ಯದ ಸೋಂಕು ನಿವಾರಣೆಗೂ ಬೆಳ್ಳುಳ್ಳಿ ರಾಮಬಾಣದಂತೆ ಕೆಲಸ ಮಾಡುತ್ತೆ. ಸ್ತ್ರೀಯರು ಪ್ರತೀ ದಿನ ಬೆಳ್ಳುಳ್ಳಿ ಸೇವಿಸುವ ಅಭ್ಯಾಸ ಹೊಂದಿದ್ದರೆ ಋತುಚಕ್ರದ ಏರು ಪೇರು ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಬೆಳ್ಳುಳ್ಳಿಯ ಬಹು ಉಪಯೋಗಗಳು ಇನ್ನೂ ಇದೆ ಆದರೆ ಸದ್ಯಕ್ಕೆ ಇಷ್ಟು ಪುಟ್ಟ ಮಾಹಿತಿ ಇರಲಿ.

Leave a Comment