ಕಿವಿಗೆ ನೋವಿನಿಂದ ತಕ್ಷಣ ರಿಲೀಫ್ ನೀಡುವ ಮನೆಮದ್ದು

ದೇಹದ ಯಾವುದೇ ಭಾಗಗಳಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡರು ನಿರ್ಲಕ್ಷ್ಯ ಮಾಡಬಾರದು, ಪ್ರತಿ ಅಂಗಾಂಗಗಳು ಕೂಡ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಕಿವಿ ನೋವಿಗೆ ಮನೆಯಲ್ಲಿ ಮನೆಮದ್ದು ತಯಾರಿಸಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹದು ಇದರಿಂದ ಯಾವುದೇ ತೊಂದರೆ ಇರೋದಿಲ್ಲ ಅಷ್ಟಕ್ಕೂ ಆ ಮನೆಮದ್ದು ಯಾವುದು ಅನ್ನೋದನ್ನ ಇಲ್ಲಿ ನೋಡೋಣ.

ಕಿವಿ ನೋವಿಗೆ ಈ ಮನೆಮದ್ದು ಪ್ರಯೋಜನಕಾರಿಯಾಗಿದೆ ಒಮ್ಮೆ ಟ್ರೈ ಮಾಡಿ ನೋಡಿ ಇದರಿಂದ ನೋವು ಕಡಿಮೆಯಾಗದಿದ್ದರೆ ನೀವು ನಿರ್ಲಕ್ಷ್ಯ ಮಾಡದೇ ನೇರವಾಗಿ ವೈದ್ಯರನ್ನು ಭೇಟಿಯಾಗುವುದು ಉತ್ತಮ.

ಕಿವಿ ನೋವಿಗೆ ಮನೆಮದ್ದು ತಯಾರಿಸುವ ವಿಧಾನ: ಎರಡು ಚಮಚ ಹಸುವಿನ ತುಪ್ಪ ಹಾಗು ಎರಡರಿಂದ ಮೂರೂ ಬೆಳ್ಳುಳ್ಳಿ ಎಸಳು ಬೇಕಾಗುತ್ತದೆ. ಮೊದಲು ಒಂದು ಬಾಣಲೆಯಲ್ಲಿ ಹಸುವಿನ ತುಪ್ಪ ಹಾಕಿ ನಂತರ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಕೆಂಪಗೆ ಆಗೋವರೆಗೂ ಪ್ರೈ ಮಾಡಬೇಕು. ಇನ್ನು ಅದು ಉಗುರು ಬಿಸಿ ಇದ್ದಾಗ ಬೆಳ್ಳುಳ್ಳಿಯನ್ನು ಹೊರತಗೆದು ಆ ತುಪ್ಪವನ್ನು ೨ ರಿಂದ ೩ ಹನಿಯಷ್ಟು ಕಿವಿಗೆ ಹಾಕಿ ಹತ್ತಿ ಉಂಡೆ ಇಟ್ಟುಕೊಳ್ಳಬೇಕು. ಈ ವಿಧಾನವನ್ನು ದಿನದಲ್ಲಿ ೨ ಬಾರಿ ಮಾಡಿದರೆ ಕಿವಿ ನೋವಿಗೆ ಪರಿಹಾರ ದೊರೆಯುವುದು. ಒಂದು ವೇಳೆ ನಿಮಗೆ ಈ ಕಿವಿನೋವಿನಿಂದ ಯಾವುದೇ ಪರಿಹಾರ ದೊರಕಲಿಲ್ಲ ಅನ್ನೋದಾದರೆ ನೀವು ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸುವದು ಉತ್ತಮ.

Leave a Comment